ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ಕೊಡುತ್ತವೆ. ದೇವಸ್ಥಾನಗಳಿಗೆ ಹೋಗಿ ದೇವರಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಹುಂಡಿಗೆ ಹಣವನ್ನು ಹಾಕುವುದರ ಮೂಲಕ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಂಮೃದ್ಧಿ ನೀಡುತ್ತಾನೆಂಬ ನಂಬಿಕೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ.
ಇದು ಕೇವಲ ಒಂದು ಅಥವಾ ಎರಡು ದಿನದಿಂದ ಬಂದಿರುವ ಪದ್ಧತಿಯಲ್ಲ, ಶತಮಾನಗಳಿಂದಲೂ ಈ ನಂಬಿಕೆ ಬೆಳೆದು ಬಂದಿದೆ. ಕೆಲವರು ಹರಕೆ ಹೇಳಿಕೊಂಡು ಹುಂಡಿಗೆ ಹಣವನ್ನು ಹಾಕುತ್ತಾರೆ. ಇನ್ನು ಕೆಲವರು ಮನಸ್ಸಿಗೆ ಬಂದಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತಾರೆ. ಆದರೇ ನಿಜವಾಗಿ ಹುಂಡಿಗೆ ಎಷ್ಟು ಹಣವನ್ನು ಹಾಕಬೇಕು ಮತ್ತು ಯಾವೆಲ್ಲಾ ದೋಷಗಳು ಪರಿಹಾರವಾಗುತ್ತವೆ? ಇದು ಯಾವ ರೀತಿಯ ಫಲಗಳನ್ನು ನೀಡುತ್ತವೆ ಎಂದು ತಿಳಿದುಕೊಂಡಿರಬೇಕು.
ಏಕೆಂದರೆ ಕೆಲವೊಂದು ಸಮಸ್ಯೆಗಳಿಗೆ ಇಂತ್ತಿಷ್ಟೆ ಹಣವನ್ನು ಅರ್ಪಿಸಬೇಕಾಗುತ್ತದೆ. ಎಂತಹ ಕಷ್ಟ ಬಂದಾಗ ಎಷ್ಟು ಹಣವನ್ನು ದೇವರಿಗೆ ನೀಡಬೇಕು ಅದನ್ನು ಸಂಪರ್ಕ ಪೂರಕವಾಗಿ ಹೇಗೆ ಹಣವನ್ನು ಅರ್ಪಿಸಬೇಕೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ದೇವರಲ್ಲಿ ನಮ್ಮ ಸಂಕಷ್ಟಗಳನ್ನು ಪರಿಹಾರ ಮಾಡದೆಂದು ಹುಂಡಿಗೆ ಹಣವನ್ನು ಹಾಕುತ್ತೇವೆ. ಆದರೇ ಕೆಲವೊಂದು ತಿಳಿದುಕೊಳ್ಳುವುದು ಅವಶ್ಯಕ. 21 ನೇ ಸಂಖ್ಯೆ ಮಹಾಗಣಪತಿಯ ಸಂಖ್ಯೆ ಹಾಗಾಗಿ ಗಣೇಶನ ಆಲಯಕ್ಕೆ ಹೋದಾಗ 21 ರೂಪಾಯಿಗಳನ್ನು ಅರ್ಪಿಸಿದರೇ ದುರಾದೃಷ್ಟ ದೂರವಾಗುತ್ತದೆ. ಪ್ರತಿ ಕೆಲಸದಲ್ಲಿಯೂ ವಿಘ್ನ ಬರುವುದು ದೂರವಾಗಿ ಅದೃಷ್ಟ ಪ್ರಾಪ್ತಿಯಾಗುತ್ತದೆ.
ನೀವು 7 ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಿದರೇ ತುಂಬಾ ಒಳ್ಳೆಯದು. ಇದರಿಂದ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. 11 ಚಂದ್ರನಿಗೆ ಪ್ರಿಯವಾದ ಸಂಖ್ಯೆ ಹಾಗಾಗಿ 11 ರೂಪಾಯಿಗಳನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ಬೇಗನೆ ಗುಣಮುಖವಾಗುತ್ತದೆ. ಶತೃ ದೋಷ ಮತ್ತು ಶನಿ ದೋಷ ದೂರವಾಗಲು 9 ರೂಪಾಯಿಯನ್ನು ದೇವರ ಹುಂಡಿಗೆ ಹಾಕಬೇಕು. ನವರಾತ್ರಿಯಲ್ಲಿ ದಿನಗಳು 9. ಈ ಸಂಖ್ಯೆಯ ರೂಪಾಯಿಯನ್ನು ದೇವರ ಹುಂಡಿಗೆ ಹಾಕುವುದರಿಂದ ಶತೃಗಳ ಸಮಸ್ಯೆ ಇದ್ದಲ್ಲಿ ಪರಿಹಾರಗೊಳ್ಳುತ್ತದೆ. ಕುಟುಂಬ ರಕ್ಷಣೆಗೆ ದುರ್ಗಾ ದೇವಸ್ಥಾನಕ್ಕೆ ಹೋದಾಗ ಮರೆಯದೇ
12 ರೂಪಾಯಿಗಳನ್ನು ಹಾಕಿದರೇ ಕುಟುಂಬಕ್ಕೆ ಅಮ್ಮನವರ ರಕ್ಷಣೆ ಪ್ರಾಪ್ತಿಯಾಗುತ್ತದೆ. ಗುರು ಗ್ರಹದ ದೋಷ ಪರಿಹಾರಕ್ಕೆ 54 ರೂಪಾಯಿಗಳನ್ನು ಹುಂಡಿಗೆ ಹಾಕಿ. ಇದರಿಂದ ಧನಲಾಭ ಮತ್ತು ಎಲ್ಲಾ ಕೆಲಸಗಳಲ್ಲಿಯೂ ಜಯ ಪ್ರಾಪ್ತಿಯಾಗುತ್ತದೆ. ಜಾತಕ ದೋಷವಿದ್ದಲ್ಲಿ ದೇವಸ್ಥಾನಕ್ಕೆ ಹೋದಾಗ 108ರೂಪಾಯಿಯನ್ನು ಹುಂಡಿಗೆ ಹಾಕಿ ಬನ್ನಿ ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆಗಳು ಈಡೇರುವುದರ ಜೊತೆಗೆ ದೋಷಗಳಿಂದ ಮುಕ್ತಿ ಸಿಗುತ್ತದೆ. 108 ಶ್ರೀ ಚಕ್ರದ ಸಂಕೇತವೂ ಆಗಿದೆ. ವಿಶ್ವದ ಮೂಲವು ಆಗಿದೆ. ದೇವಸ್ಥಾನದ ಹುಂಡಿಗೆ 108 ರೂಪಾಯಿಯನ್ನು ಅರ್ಪಿಸಿದರೇ ಸಕಲ ಕೋರಿಕೆಗಳು ಈಡೇರುತ್ತದೆ. ಸಕಲ ಸಿದ್ಧಿಗಳು ಪ್ರಾಪ್ತಿಯಾಗುತ್ತದೆ. ಸಪ್ತಜನ್ಮಗಳ ಪಾಪುಗಳು ದೂರವಾಗಲು 116 ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಬೇಕು.