ಸಾಮಾನ್ಯವಾಗಿ ಶನಿವಾರವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರಾದ ಶನಿ ದೇವನಿಗೆ ಅರ್ಪಿಸಲಾದ ದಿನ ಶನಿಯು ಯಾವಾಗಲೂ ಜನರಿಗೆ ಕೆಟ್ಟದ ನ್ನು ಮಾಡುವುದಿಲ್ಲ ಒಳ್ಳೆಯದು ಮಾಡುವವನು. ಇದು ನಾವು ಮಾಡಿದ ಕರ್ಮಗಳ ಮೇಲೆ ಆಧಾರಿತವಾಗಿದೆ. ಒಳ್ಳೆಯದನ್ನು ಮಾಡುವವನಿಗೆ ಶನೀಶ್ವರನು ಸಂಪತ್ತು, ಸಮೃದ್ಧಿ ಹಾಗೂ ಸಂತೋಷವನ್ನು ನೀಡುವುವವನ್ನು.ಶನಿವಾರದಂದು ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡಿದರೆ ಶನೀಶ್ವರನ ಆಶೀರ್ವಾದ ಪಡೆಯಬಹುದು. ಹಾಗಾದರೆ ಆ ಉತ್ತಮ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ.
ಯಾರಾದರೂ ಅಶಕ್ತರು ಶನಿವಾರದಂದು ಬೆಳಗ್ಗೆ ನಿಮ್ಮ ಮನೆ ಬಾಗಿಲಿಗೆ ಬಂದು ಬೇಡಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಭಿಕ್ಷುಕರು ಮನೆ ಬಾಗಿಲಿಗೆ ಬಂದು ಬಿಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಆದಷ್ಟು ನಿಮ್ಮ ಕೈಲಾದಷ್ಟು ಧಾನ ಮಾಡಿ. ಇಂಥವರಿಗೆ ಸಹಾಯ ಮಾಡುವುದರಿಂದ ಶನಿ ದೇವನ ವಿಶೇಷ ಅನುಗ್ರಹವನ್ನು ಪಡೆಯುವಿರಿ.
ಇನ್ನು ಶನಿವಾರ ಕಪ್ಪು ನಾಯಿಯನ್ನು ನೋಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕಪ್ಪು ನಾಯಿಗಳಿಗೆ ಶನಿವಾರ ಆಹಾರವನ್ನು ನೀಡಿ ನಿಮ್ಮ ಮನೆಯಲ್ಲಿ ಆಹಾರ ಇಲ್ಲದಿದ್ದರೆ ಬೇರೆ ಏನಾದರೂ ತಿಂಡಿಯನ್ನು ಸಹ ನೀಡಬಹುದು. ಜೀವನದಲ್ಲಿ ಯಶಸ್ಸು ಪಡೆಯಲು ಕಪ್ಪು ನಾಯಿಗೆ ಆಹಾರ ನೀಡುವುದರ ಜೊತೆಗೆ ಇವುಗಳಿಗೆ ಕಪ್ಪು ಎಳ್ಳು, ಹಕ್ಕಿ ಹಿಟ್ಟು, ಸಕ್ಕರೆಯನ್ನು ಅರ್ಪಿಸಬಹುದು.
ಶನಿವಾರದಂದು ಪಕ್ಷಿಗಳಿಗೆ ಆಹಾರ ನೀಡುವುದರಿಂದಲ್ಲೂ ಶನಿಯ ನಕಾರಾತ್ಮಕ ಪರಿಣಾಮಗಳು ದೂರವಾಗುವುದು.ಇನ್ನು ಶನಿಯ ಸಾಡೆಸಾತಿಯ ದೋಷವನ್ನು ನಿವಾರಿಸಲು ಶನಿವಾರದಂದು ಅಶ್ವತ್ಥ ವೃಕ್ಷವನ್ನು ಪೂಜಿಸಬೇಕು. ಅಶ್ವತ್ಥ ವೃಕ್ಷದ ಸುತ್ತ ಏಳು ಪ್ರದಕ್ಷಿಣೆ ಹಾಕಬೇಕು. ಹೀಗೆ ಪ್ರದಕ್ಷಿಣೆ ಮಾಡುವಾಗ ಓಂ ಶಂ ಶನೀಶ್ವರಾಯ ನಮಂ ಎಂದು ಈ ಮಂತ್ರವನ್ನು ಪಠಿಸಬೇಕು.
ಶನಿವಾರದಂದು ಶನಿಯ ದುಷ್ಪರಿಣಾಮ ದೂರ ಮಾಡಲು ಪ್ರತಿ ಶನಿವಾರ ಹನುಮಾನ್ ಚಾಲಿಸ್ ಪಠಿಸಬೇಕು. ಶನಿವಾರದಂದು ಮುಖ್ಯವಾದ ಕೆಲಸಗಳಿಗೆ ಹೋಗುತ್ತಿದ್ದಲ್ಲಿ ಕಪ್ಪು ಬಟ್ಟೆ ಧರಿಸುವುದು ಒಳ್ಳೆಯದು. ಶನಿ ದೋಷ ಹಾಗೂ ಸಾಡೆಸಾತಿಯ ದೋಷ ನಿವಾರಣೆಗೆ “ಓಂ ಶಂ ಶನೀಶ್ವರಾಯ ನಮಂ” ಎಂದು ಈ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಂತ್ರವನ್ನು ಜಪಿಸುವಾಗ ಶನಿ ದೇವನಿಗೆ ನೀಲಿ ಹೂವುಗಳನ್ನು ಅರ್ಪಿಸಬಹುದು.
ತಾಮ್ರದ ಪಾತ್ರೆಯಲ್ಲಿ ಎಳ್ಳು ಬೆರೆಸಿದ ನೀರನ್ನು ಸಂಗ್ರಹಿಸಿ. ಇದನ್ನು ಶಿವನಿಗೆ ಅರ್ಪಿಸಿದರೆ ಆರೋಗ್ಯ ಸಮಸ್ಯೆ ನಿವಾರಣೆಗೆ ಆಗುವುದು. ಶನಿಯ ಅಶುಭ ಪರಿಣಾಮಗಳಿಂದ ದೂರವಿರಲ್ಲು ಕಪ್ಪು ಬೆಳೆ, ಎಳ್ಳು ಹಾಗೂ ಕಪ್ಪು ವಸ್ತ್ರವನ್ನು ಸಹ ಧಾನ ಮಾಡಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.