ನಾವು ಈ ಲೇಖನದಲ್ಲಿ ಅಡುಗೆ ಮನೆಯಲ್ಲಿ ಇದೆ …! ಹಣ ಆಕರ್ಷಣೆ ಮಾಡುವ ಆ ಚಮತ್ಕಾರಿ ವಸ್ತು ಯಾವುದು ಎಂದು ತಿಳಿಯೋಣ . ಕೈಯಲ್ಲಿ ಹಣ ನಿಲ್ಲಬೇಕು ಅಂದರೆ , ಅಡುಗೆ ಮನೆಗೆ ಹೋಗಿ ಈ ಒಂದು ಸಣ್ಣ ಉಪಾಯವನ್ನು ಮಾಡುವುದರಿಂದ , ಕೈಯಲ್ಲಿ , ಜೇಬಿನಲ್ಲಿ ಕಂತೆ ಕಂತೆ ಹಣ ಇರುತ್ತದೆ. ಅನ್ನೋ ಕುತೂಹಲಕಾರಿ ವಿಷಯವನ್ನು ಇಲ್ಲಿ ತಿಳಿಸಲಾಗಿದೆ. ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸಿದ್ದಾಳೆ , ಅಂದರೆ ಮನೆಯಲ್ಲಿ ಸುಖ, ಶಾಂತಿ , ಮತ್ತು ನೆಮ್ಮದಿ ನೆಲೆಸಿರುತ್ತದೆ ಎಂದರ್ಥ. ವ್ಯಕ್ತಿಯ ಜೀವನದಲ್ಲಿ ಸದಾ ಸಕಾರಾತ್ಮಕತೆಯು ನೆಲೆಸಿರುತ್ತದೆ. ಲಕ್ಷ್ಮಿ ದೇವಿಯು ಯಾವ ಮನೆಯಲ್ಲಿ ವಾಸ ಮಾಡುತ್ತಿರುವುದಿಲ್ಲವೋ ಆ ಮನೆಯಲ್ಲಿ ಬಡತನ ,
ರೋಗ , ದುಃಖ , ಖಾಯಿಲೆಗಳು ಹೀಗೆ ಅನೇಕ ರೀತಿಯ ಸಮಸ್ಯೆಗಳು ತಾಂಡವ ಆಡುತ್ತಿರುತ್ತದೆ. ಬಡತನಕ್ಕಿಂತ ನೋವು ಮತ್ತು ದುಃಖ ಮತ್ತೊಂದಿಲ್ಲಾ . ಕೆಲವು ಚಿಕ್ಕ ಪುಟ್ಟ ಉಪಾಯಗಳಿಂದ ಬಡತನ , ದರಿದ್ರ ವನ್ನು ಓಡಿಸಿ , ನೆಮ್ಮದಿಯಿಂದ ಇರಬಹುದು. ಇಂತಹ ಒಂದು ರಹಸ್ಯವನ್ನು ಇಲ್ಲಿ ತಿಳಿಸಲಾಗಿದೆ. ಮನೆಯಿಂದ ಲಕ್ಷ್ಮಿ ಯಾವ ಕಾರಣಕ್ಕೆ ಹೊರಟು ಹೋಗುತ್ತಾಳೆ ಎಂದು ತಿಳಿಯೋಣ. ಇಲ್ಲಿ 11 ಪ್ರಮುಖ ಕಾರಣಗಳನ್ನು ತಿಳಿಸಲಾಗಿದೆ . ಇಂತಹ ತಪ್ಪುಗಳನ್ನು ನೀವು ಮಾಡುತ್ತಿದ್ದರೆ , ತಕ್ಷಣ ಸರಿಪಡಿಸಿಕೊಳ್ಳಿ ಆಗ ಮಾತ್ರ ಮಾತೆ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಉಳಿಯುತ್ತಾಳೆ .
1 . ಸೂರ್ಯೋದಯ ಆದ ಮೇಲೆ ಯಾವ ವ್ಯಕ್ತಿ ಹಾಸಿಗೆಯಲ್ಲಿ ಮಲಗಿರುತ್ತಾನೋ, ಆ ವ್ಯಕ್ತಿ ಲಕ್ಷ್ಮಿಯ ಆ ಕೃಪೆಗೆ ಒಳಗಾಗುತ್ತಾನೆ. ಲಕ್ಷ್ಮಿ ಅವನ ಮನೆಯಲ್ಲಿ ನೆಲೆಸುವುದಿಲ್ಲ .ಆದ್ದರಿಂದ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಸೂರ್ಯೋದಯ ಆದ ಮೇಲೆ ಹಾಸಿಗೆಯಲ್ಲಿ ಇರಬಾರದು . ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಿ , ದೇವರ ಪೂಜೆ ಮಾಡುವುದರಿಂದ, ಲಕ್ಷ್ಮೀ ದೇವಿಯು ಬಹುಬೇಗ ಒಲಿಯುತ್ತಾಳೆ . ಉದಯಿಸುವ ಸೂರ್ಯನನ್ನು ಸ್ವಾಗತಿಸುವ ವ್ಯಕ್ತಿಗೆ ಲಕ್ಷ್ಮೀದೇವಿಯ ಕೃಪೆ ಸದಾ ಇದ್ದೇ ಇರುತ್ತದೆ .
2 . ಎಲ್ಲರೂ ಹಣವನ್ನು ಪರ್ಸ್ ನಲ್ಲಿ ಅಥವಾ ಬ್ಯಾಗ್ ನಲ್ಲಿ ಇಡುತ್ತಾರೆ .ಕೆಲವರು ಪರ್ಸಿನಲ್ಲಿ ಲಕ್ಷ್ಮೀದೇವಿಯ ಫೋಟೋವನ್ನು ಇಟ್ಟುಕೊಳ್ಳುತ್ತಾರೆ. ಹಣ ಇಡುವ ಪರ್ಸ್ ಯಾವತ್ತಿಗೂ ಹರಿದಿರಬಾರದು . ಯಾವಾಗಲೂ ನೀಟಾಗಿ ಇರಬೇಕು .ಪರ್ಸ್ ನಲ್ಲಿ ಬಿಲ್ಲುಗಳು ಚೀಟಿಗಳು ಇರಬಾರದು . ಪರ್ಸ್ ನಲ್ಲಿ ಕೇವಲ ಹಣ ಮಾತ್ರ ಇರಬೇಕು . ಲಕ್ಷ್ಮೀ ದೇವಿಗೆ ಸ್ವಚ್ಛತೆ ತುಂಬಾ ಇಷ್ಟ .
ದೀಪಾವಳಿ ಹಬ್ಬದ ದಿನ ಮನೆಯನ್ನು ಸ್ವಚ್ಛ ಮಾಡಿ ದೀಪಗಳನ್ನು ಹಚ್ಚಿ ಹೇಗೆ ಲಕ್ಷ್ಮೀ ದೇವಿಯನ್ನು ಸ್ವಾಗತ ಮಾಡುತ್ತೇವೆಯೋ , ಹಾಗೆ ನಮ್ಮ ಪರ್ಸ್ ಕೂಡ ನೀಟಾಗಿ ಇರಬೇಕು .ಹಾಗಾಗಿ ಪ್ರತಿ ದೀಪಾವಳಿಯಲ್ಲಿ ನಿಮ್ಮ ಪರ್ಸನ್ನು ಬದಲಾಯಿಸಿ . ಹೀಗೆ ಮಾಡುವುದರಿಂದ ಲಕ್ಷ್ಮಿಯ ಆಗಮನ ಆಗುತ್ತದೆ ಎಂದು ಹೇಳಲಾಗಿದೆ . ಈ ರೀತಿ ಪರ್ಸ್ ಅನ್ನು ಬದಲಾಯಿಸಿದರೆ , ಹಗಲಿನಲ್ಲಿ ಹಣ ದ್ವಿಗುಣಗೊಳ್ಳುತ್ತದೆ .ಮತ್ತು ರಾತ್ರಿಯಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ .
3 . ಮಂಗಳವಾರದಂದು ಯಾವತ್ತೂ ಸಾಲವನ್ನು ತೆಗೆದುಕೊಳ್ಳಬಾರದು . ಮಂಗಳವಾರದ ದಿನ ಸಾಲ ತೆಗೆದುಕೊಂಡರೆ , ಅದನ್ನು ತೀರಿಸಲು ತುಂಬಾ ಕಷ್ಟ ಆಗುತ್ತದೆ . ಮಂಗಳವಾರದ ದಿನ ಸಾಲ ಮಾಡಿದರೆ , ಸಾಲ , ರೋಗ , .ಶತ್ರುಗಳ ತೊಂದರೆಗಳು ಜೊತೆಯ ಜೊತೆಯಾಗಿ ಬರುತ್ತವೆ .ಆದ್ದರಿಂದ ಮಂಗಳವಾರದಂದು ಸಾಲ ಪಡೆಯಬೇಡಿ . ಮಂಗಳವಾರದಂದು ಪುರುಷರು ಶೇವಿಂಗ್ ಮಾಡಬಾರದು . ಮತ್ತು ಮಹಿಳೆಯರು ಕೂದಲನ್ನು ಕತ್ತರಿಸಬಾರದು . ಮಂಗಳ ಗ್ರಹಕ್ಕೆ ಕೋಪ ಬಂದರೆ ರೋಗ , ಬಡತನ , ಮತ್ತು ಶತ್ರುಗಳ ಕಾಟ ಬರುತ್ತದೆ . ಆದ್ದರಿಂದ ಮಂಗಳವಾರದಂದು ಕೂದಲು ಮತ್ತು ಉಗುರು ಕತ್ತರಿಸಬಾರದು . ಮತ್ತು ತಲೆಯನ್ನು ಕೂಡ ತೊಳೆಯಬಾರದು .
4 . ಮನೆಯಲ್ಲಿ ಅನಗತ್ಯ ವಸ್ತುಗಳನ್ನು ಎಂದಿಗೂ ಸಂಗ್ರಹ ಮಾಡಬಾರದು . ಮನೆಯಲ್ಲಿ ಹಳೆಯ ಅಥವಾ ಉಪಯೋಗವಿಲ್ಲದ ವಸ್ತುಗಳನ್ನು ಮನೆಯಿಂದ ಹೊರಗಡೆ ಹಾಕಬೇಕು . ಮನೆಯಲ್ಲಿ ಹಳೆಯ ಖಾಲಿ ಡಬ್ಬಗಳನ್ನು ಕೂಡ ಹೊರಗಡೆ ಹಾಕಬೇಕು . ಖಾಲಿ ಡಬ್ಬಿಯು ರಾಹುವಿನ ವಾಸಸ್ಥಾನ ವಾಗುತ್ತದೆ . ಮನೆಯಲ್ಲಿರುವ ಹಳೆಯ ಪಾತ್ರೆ ಪಗಡೆಗಳನ್ನು ಹೊರಗಡೆ ಹಾಕುವುದು ಒಳ್ಳೆಯದು . ಒಡೆದ ಅಥವಾ ಮುರಿದು ಹೋದ ಪಾತ್ರೆಗಳನ್ನು ಬಳಸುವುದರಿಂದ , ಮನೆಯಲ್ಲಿ ನಕಾರಾತ್ಮಕ ಶಕ್ತಿ ಆಗಮನ ಆಗುತ್ತದೆ. ಮತ್ತು ಬಡತನವನ್ನು ಬರ ಮಾಡಿಕೊಳ್ಳುತ್ತದೆ .
5 . ಮನೆಗೆ ಬೇಕಾದಷ್ಟು ಮಾತ್ರ ವಿದ್ಯುತ್ ಉಪಕರಣಗಳು ಇರಬೇಕು . ಹಳೆಯದಾದ ಅಥವಾ ಉಪಯೋಗಿಸದೆ ಇರುವ ವಿದ್ಯುತ್ ಉಪಕರಣಗಳು ಮನೆಯಲ್ಲಿ ಇರಬಾರದು . ಮನೆಯಲ್ಲಿ ಕೆಲಸ ಮಾಡದೆ ಕೆಟ್ಟು ನಿಂತಿರುವ ವಿದ್ಯುತ್ ಉಪಕರಣಗಳನ್ನು ಇಟ್ಟುಕೊಳ್ಳುವುದರಿಂದ, ಇದು ಶನಿ ಗ್ರಹವನ್ನು ಹಾಳು ಮಾಡುತ್ತದೆ ..ಮತ್ತು ರಾಹುವಿನಿಂದ ತೊಂದರೆ , ಶುರುವಾಗುತ್ತದೆ .ಶನಿ ಮತ್ತು ರಾಹು ತೊಂದರೆ ಕೊಡಲು ಶುರು ಮಾಡಿದರೆ , ಏನೆಲ್ಲಾ ಆಗುತ್ತದೆ ಎಂದು ನಿಮಗೆ ತಿಳಿದಿರುತ್ತದೆ .
6 . ಮನೆಯಲ್ಲಿ ರಾತ್ರಿಯ ವೇಳೆ ಮುಸರೆ ಪಾತ್ರೆಗಳನ್ನು ತೊಳೆಯದೆ ಇಟ್ಟರೆ, ಅದು ದೋಷವಾಗುತ್ತದೆ .ಈ ರೀತಿ ಮುಸರೆ ಪಾತ್ರೆಗಳನ್ನು ಇಟ್ಟು ಮಲಗುವುದು ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾಗುವುದಿಲ್ಲ .ಯಾಕೆಂದರೆ ಲಕ್ಷ್ಮಿ ದೇವಿಯು ರಾತ್ರಿಯ ವೇಳೆ ಸಂಚಾರ ಮಾಡುತ್ತಿರುತ್ತಾರೆ . ಆದ್ದರಿಂದ ಪಾತ್ರೆಗಳನ್ನು ತೊಳೆದು ಮಲಗಬೇಕು . ಇದರಿಂದ ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ. ಅಡುಗೆ ಮನೆಯು ಅನ್ನಪೂರ್ಣ ದೇವಿಯ ವಾಸಸ್ಥಾನ ಆಗಿರುವುದರಿಂದ , ಅದರ ಸ್ವಚ್ಛತೆಯ ಬಗ್ಗೆ ಗಮನ ಕೊಡಬೇಕಾಗುತ್ತದೆ .
7 . ಮನೆಯಲ್ಲಿ ಕಸ ಗುಡಿಸಿದ ನಂತರ ಆ ಕಸವನ್ನು ಮನೆಯಲ್ಲಿ ದೀರ್ಘಕಾಲ ಇಡಬಾರದು . ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಎಂದು ಹೇಳಲಾಗಿದೆ . ಆದ್ದರಿಂದ ಮನೆಯ ಕಸ ಗುಡಿಸಿದ ತಕ್ಷಣ ಮನೆಯಿಂದ ಕಸವನ್ನು ಹೊರಗಡೆ ಹಾಕಿ .
8 . ಅಮಾವಾಸ್ಯೆಯ ದಿನ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ದಿನ ಆಗಿರುತ್ತದೆ . ಹಾಗೂ ಪಿತೃ ದೋಷ ನಿವಾರಣೆಗೆ ಉತ್ತಮ ದಿನವಾಗಿರುತ್ತದೆ . ದೇವರನ್ನು ಪೂಜೆ ಪುನಸ್ಕಾರಗಳಿಂದ ಬೇಗ ಒಲಿಸಿ ಕೊಳ್ಳಬಹುದು . ಆದರೆ ಪಿತೃ ದೋಷ ಇದ್ದರೆ, ಅದನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಕಷ್ಟ . ಈ ದೋಷ ಕಡಿಮೆ ಮಾಡುವುದಕ್ಕೆ ಒಂದು ಉಪಾಯ ಹೇಳಲಾಗಿದೆ .
ಈ ಉಪಾಯವನ್ನು ಪ್ರತಿ ತಿಂಗಳು ಅಥವಾ ವರ್ಷದಲ್ಲಿ ಎರಡು ಸಲ ಮಾಡಬಹುದು . ಅಮಾವಾಸ್ಯೆ ಯಲ್ಲಿ ಪೂರ್ವಜರಿಗೆ ದರ್ಪಣ ಬಿಡಬೇಕು . ಇದನ್ನು ಮನೆಯಲ್ಲಿ ಹಿರಿಯರು ಮಾಡಿದರೆ ಒಳ್ಳೆಯದು . ಅರಳಿ ಮರಕ್ಕೆ ಅಮಾವಾಸ್ಯೆಯ ದಿನ ನೀರು ಅಥವಾ ಹಸಿ ಹಾಲನ್ನು ಅರ್ಪಿಸಬೇಕು .ಇದು ನಿಮ್ಮ ಪೂರ್ವಜರನ್ನು ಶಾಂತ ಗೊಳಿಸುತ್ತದೆ .ಮತ್ತು ಪಿತೃ ದೋಷವನ್ನು ತಡೆಯುತ್ತದೆ ಪ್ರತಿ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಹೊಸ್ತಿಲು ಗಳನ್ನು ತೊಳೆದು, ಅದರ ಮೇಲೆ ಸ್ವಸ್ತಿಕವನ್ನು ಬರೆದು ಪೂಜಿಸುವುದರಿಂದ , ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ .
10 ಪ್ರತಿದಿನ ಸಂಜೆ ಲಕ್ಷ್ಮಿ ದೇವಿಗೆ ಧೂಪ ಅಥವಾ ಪರಿಮಳಯುಕ್ತ ವಸ್ತುಗಳನ್ನು ಅರ್ಪಿಸಬೇಕು . ಪ್ರತಿದಿನ ಸಾಯಂಕಾಲ ಲಕ್ಷ್ಮಿ ದೇವಿಗೆ ಆ ಧೂಪವನ್ನು ತೋರಿಸಿ ,
ಅದನ್ನು ಇಡೀ ಮನೆಯ ಮೂಲೆ ಮೂಲೆಗೂ , ಮತ್ತು ಮುಖ್ಯ ದ್ವಾರಕ್ಕೆ ತೋರಿಸಿ, ನಂತರ ಪೂಜಾ ಸ್ಥಾನದಲ್ಲಿ ಇಟ್ಟರೆ , ನಂತರ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ . ಈ ಉಪಾಯದಿಂದ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವು ನೋಡಬಹುದು .
11 . ನಿಮ್ಮ ಮನೆಯ ಬಾಗಿಲಿಗೆ ಯಾವುದಾದರೂ ಭಿಕ್ಷುಕ ಬಂದರೆ , ಅವನಿಗೆ ನಿಮ್ಮ ಕೈಲಾದಷ್ಟು ದಾನ ಮಾಡಿ , ಆದರೆ ಬರಿ ಗೈ ಯಲ್ಲಿ ಕಳಿಸಬೇಡಿ .ಏಕೆಂದರೆ ದೇವರು ಯಾವ ರೂಪದಲ್ಲಿ ಬರುತ್ತಾರೆ ಎಂದು ಯಾರಿಗೂ ಗೊತ್ತಿರುವುದಿಲ್ಲ . ಆದ್ದರಿಂದ ಮನೆಯ ಬಾಗಿಲಿಗೆ ಬರುವವರನ್ನು ಹಾಗೆ ಕಳುಹಿಸದೆ ಗೌರವಿಸಿ , ನಮ್ಮ ಕೈಲಾದಷ್ಟು ದಾನ ಮಾಡಿ ಕಳಿಸಬೇಕು .