ಆರೋಗ್ಯವಾಗಿರಲು 20 ನಿಯಮಗಳು: ಬೆಳಿಗ್ಗೆ ಬೇಗನೇ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ ನೀವು ಪ್ರತಿದಿನ ಬೆಳಿಗ್ಗೆ ಏಳಬೇಕು. ಬೆಳಗಿನ ವಾತಾವರಣವನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6ರ ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡೂ ಫಿಟ್ ಆಗಿರುತ್ತದೆ. ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಇದು ಅತ್ಯುತ್ತಮ ಸಮಯ.
ನಿದ್ರೆ:- ನಿದ್ರೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಂಭವಿಸುತ್ತವೆ. ನಿದ್ರೆ ಇಲ್ಲದಿದ್ದರೇ ಇಡೀ ದಿನ ವ್ಯರ್ಥವಾಗುತ್ತದೆ. ನೀವು ಕನಿಷ್ಠ 6 ಗಂಟೆಗಳಾದರೂ ನಿದ್ರೆ ತೆಗೆದುಕೊಳ್ಳಬೇಕು ಮತ್ತು 8 ಗಂಟೆಗಳಿಗೂ ಹೆಚ್ಚು ನಿದ್ರೆ ಮಾಡುವುದು ಒಳ್ಳೆಯದಲ್ಲ. ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಚೈತನ್ಯವು ದೇಹವನ್ನು ಸರಿಪಡಿಸುತ್ತದೆ. ದೇಹವು ವಿಶ್ರಾಂತಿ ಪಡೆಯುತ್ತದೆ. ಇದರಿಂದ ನಾವು ಸಂಪೂರ್ಣವಾಗಿ ರೀಚಾರ್ಜ್ ಆಗುತ್ತೇವೆ. ಸಂಪೂರ್ಣ ನಿದ್ರೆಯಾದರೇ ನಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಜೋಶ್ ಬರುತ್ತದೆ. ಇಡೀ ದಿನ ಫುಲ್ ಆಕ್ಟಿವ್ ಆಗಿರುತ್ತೇವೆ. ಆದ್ದರಿಂದ ಕನಿಷ್ಠ 6 ರಿಂದ 8 ನಿರಂತರ ನಿದ್ರೆ ಮಾಡಿ.
ಆರೋಗ್ಯವಾಗಿರಲು ನೀರು ಕುಡಿಯಿರಿ. ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ಗ್ಲಾಸ್ ನೀರು ಕುಡಿಯುವುದು ಅತ್ಯವಶ್ಯಕ. ಅಂದರೆ ಸುಮಾರು 1 ಲೀಟರ್ ಉಗುರು ಬೆಚ್ಚಗಿನ ನೀರು ಕುಡಿದರೆ ಅದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ.
ಪ್ರತಿದಿನ ವ್ಯಾಯಾಮ ಮಾಡಿ. ಪ್ರತಿದಿನ ವ್ಯಾಯಾಮ ಮಾಡುವುದು ಅದು ನಿಮ್ಮನ್ನು ಹೆಚ್ಚು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕನಿಷ್ಠ 20 ನಿಮಿಷಗಳ ಕಾಲ ವ್ಯಾಯಾಮ ಮಾಡಲು ರೂಢಿ ಮಾಡಿಕೊಳ್ಳಿ. ಬೆಳಗಿನ ವ್ಯಾಯಾಮವೂ ನಿಮ್ಮನ್ನೂ ಪೂರ್ಣ ಶಕ್ತಿಯಿಂದ ತುಂಬಿರುತ್ತದೆ ಮತ್ತು ದಿನವಿಡೀ ಸಂತೋಷವನ್ನು ನೀಡುತ್ತದೆ. ಬೆಳಿಗ್ಗೆ ಯಾವಾಗಲು ಆರೋಗ್ಯಕರ ಉಪಹಾರ ಸೇವನೆ ಮಾಡಿ. ನೀವು ತಿನ್ನುವ ಆಹಾರವನ್ನು ನುಂಗುವ ಮುನ್ನ ಕನಿಷ್ಠ 25 ಬಾರಿ ಚೆನ್ನಾಗಿ ಜಗಿದು ತಿನ್ನಿ. ಬೆಳಗಿನ ಆಹಾರವನ್ನು ಸೂರ್ಯ ನೆತ್ತಿ ಕೇಲೆ ಏರೋ ಮುಂಚೆಯೇ ಸೇವಿಸಬೇಕು. ಬ್ರೇಕ್ ಫಾಸ್ಟ್ ಜೊತೆಗೆ ಹಣ್ಣಿನ ಜ್ಯೂಸ್ ಇದ್ದರೆ ಇನ್ನೂ ಒಳ್ಳೆಯದು. ರಾತ್ರಿ ವೇಳೆ ಲೈಟ್ ಆಗಿ ಊಟ ಮಾಡಿ. ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು.
45 ನಿಮಿಷ ನಂತರವೇ ನೀರು ಕುಡಿಯಿರಿ. ಆದಷ್ಟು ಜಂಕ್ಸ್ ಫುಡ್, ಫಿಜಾ, ಬರ್ಗರ್, ಸ್ಯಾಂಡ್ ವಿಚ್ ಇತ್ಯಾದಿಗಳನ್ನು ಅವಾಯ್ಡ್ ಮಾಡಿ, ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಿ, ಪ್ರತಿದಿನ ಆಹಾರ ಸೇವಿಸಿದ ನಂತರ ಒಂದು ಬಾಳೆ ಹಣ್ಣನ್ನು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಐಸ್ ಕ್ರಿಂ, ಚಾಕೋಲೆಟ್, ಕೂಲ್ಡ್ ಡ್ರಿಂಕ್ಸ್ ಅಥವಾ ಸ್ವೀಟ್ಸ್ ಪದಾರ್ಥವನ್ನ ಕಡಿಮೆ ಮಾಡಿ ಏಕೆಂದರೆ ಆ ಕಂಪನಿಯಲ್ಲಿ ಯೂಸ್ ಮಾಡುವ ಪ್ರಿಸೆರ್ವೇಟಿವ್ಸ್ ತುಂಬಾ ಹಾನಿಕಾರಕ. ಸಕ್ಕರೆ ನಮ್ಮ ದೇಹಕ್ಕೆ ಹಾನಿಕಾರಕ. ನಿಮಗೆ ತಕ್ಷಣವೇ ನಿಲ್ಲಿಸಲು ಸಾಧ್ಯವಾಗದಿದ್ದರೇ ಕಡಿಮೆ ಪ್ರಮಾಣದಲ್ಲಿ ಬಳಸಿ. ಇದರ ಬದಲಿಗೆ ಜೇನು, ಬೆಲ್ಲ ಅಥವಾ ಆರ್ಗಾನಿಕ್ ಸಕ್ಕರೆಯನ್ನು ಬಳಸಬಹುದು. ಅಡುಗೆಗೆ ಯಾವಾಗಲೂ ಕಲ್ಲುಪ್ಪು ಬಳಸಿ. ಒಂದೊಟ್ಟುಂಡವ ಯೋಗಿ, ಎರಡೂತ್ತುಂಡವ ಭೋಗಿ, ಮುರೋತ್ತುಂಡವ ಹುತ್ಕೊಂಡೋಗಿ ಎಂಬ ಸರ್ವಜ್ಞರ ಮಾತಿದೆ. ಅದಕ್ಕಾಗಿ ವಾರದಲ್ಲಿ ಒಮ್ಮೆಯಾದರೂ ಉಪವಾಸ ಮಾಡಿ. ಇದರಿಂದ ನಿಮ್ಮ ಆರೋಗ್ಯದ ಜೊತೆಗೆ ಆಯುಷ್ಯವು ಗಟ್ಟಿಯಾಗುತ್ತದೆ. ಹೆಚ್ಚು ಕಾಲ ಬದುಕ ಬಲ್ಲಿರಿ.