ನಾವು ಈ ಲೇಖನದಲ್ಲಿ ಬೆಳಿಗ್ಗೆ ಎದ್ದಾಗ ಈ 3 ಕೆಲಸ ಮಾಡಿದರೆ , ಜೀವನದಲ್ಲಿ ಹೇಗೆ ಸಮಸ್ಯೆಗಳೇ ಇರುವುದಿಲ್ಲ ಎಂದು ತಿಳಿಯೋಣ . ಮುಂಜಾನೆ ಮಂಗಳಕರವಾಗಿ ಇದ್ದರೆ , ನಮ್ಮ ಇಡೀ ದಿನವೂ ಮಂಗಳಕರವಾಗಿ ಇರುತ್ತದೆ . ನಮ್ಮ ಮುಂಜಾನೆ ಉತ್ತಮವಾಗಿ ಇರಬೇಕಾದರೆ , ಈ ಮೂರು ಕೆಲಸಗಳನ್ನು ತಪ್ಪದೇ ನಾವು ಮಾಡಬೇಕು . ಬೆಳಿಗ್ಗೆ ನಾವು ಯಾವ ಮೂರು ಕೆಲಸಗಳನ್ನು ಮಾಡುವುದು ಶುಭ ..? ಈ ಮೂರು ಕೆಲಸಗಳನ್ನು ಮಾಡಿ ನೋಡಬಹುದು.
ನಾವು ಮುಂಜಾನೆ ಎದ್ದ ತಕ್ಷಣ ಇಲ್ಲಿ ಸೂಚಿಸಲಾದ 3 ಕೆಲಸಗಳನ್ನು ಮಾಡಿದರೆ , ನಮ್ಮ ಜೀವನದಲ್ಲಿನ ಪ್ರತಿಯೊಂದು ಬಿಕ್ಕಟ್ಟು , ಅಡೆತಡೆಗಳು ಅಥವಾ ಸಮಸ್ಯೆಗಳು ದೂರಾಗುತ್ತದೆ. ಇದರಿಂದ ನಾವು ಮುಂಜಾನೆಯಿಂದ ಸಂಜೆಯವರೆಗೆ ಯಾವುದೇ ರೀತಿಯಾದ ಹಣದ ಸಮಸ್ಯೆಯನ್ನು ಎದುರಿಸಲು ಸಾಧ್ಯವಿಲ್ಲ. ಮುಂಜಾನೆ ನಾವು ಯಾವ 3 ಕೆಲಸ ಮಾಡಬೇಕು. ಎಂದು ನೋಡೋಣ .
1 . ಇವುಗಳ ದರ್ಶನ ಮಾಡಿ: – ಮುಂಜಾನೆ ಎದ್ದ ತಕ್ಷಣ ಒಮ್ಮೇಲೆ ನಿಮ್ಮ ಕಣ್ಣುಗಳನ್ನು ತೆರೆಯಬೇಡಿ. ನಿಮ್ಮ ಕಣ್ಣುಗಳನ್ನು ನಿಧಾನವಾಗಿ ತೆರೆಯಿರಿ. ಕಣ್ಣುಗಳನ್ನು ತೆರೆಯುತ್ತಿದ್ದಂತೆ ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಚಿತ್ರ , ಅಥವಾ ಫೋಟೋ ಅಥವಾ ವ್ಯಕ್ತಿಯನ್ನು ನೋಡಿರಿ. ಫೋಟೋಗಳನ್ನು ನೋಡುವುದಾದರೆ ನೀವು ರಾಧಾ ಕೃಷ್ಣನ ಚಿತ್ರ ,
ಶ್ರೀರಾಮನ ಅಥವಾ ಶ್ರೀಹರಿ ವಿಷ್ಣುವಿನ ಚಿತ್ರದಂತಹ ದೇವರ ಫೋಟೋಗಳನ್ನು ನೋಡಬಹುದು . ದೇವರ ದರ್ಶನವಾದ ನಂತರ ಮೊದಲು ಅಂಗೈಯನ್ನು ನೋಡಿ ದೇವರ ಧ್ಯಾನ ಮಾಡಿ, ಹೀಗೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ನಮ್ಮ ಅಂಗೈಗಳಲ್ಲಿ ದೈವಿಕ ಶಕ್ತಿಗಳು ನೆಲೆಸಿರುತ್ತದೆ. ಎನ್ನುವ ನಂಬಿಕೆ ಇದೆ. ಬೆಳಗ್ಗೆ ಎದ್ದ ತಕ್ಷಣ ಶ್ರೀರಾಮ , ಹನುಮಾನ್ ಅಥವಾ ಶ್ರೀ ಕೃಷ್ಣನ ಹೆಸರನ್ನು ಸ್ಮರಿಸಿ . ನೀವು ಪೂಜೆ , ಮಂತ್ರ ಅಥವಾ ಸ್ತೋತ್ರದ ಪಠಣವನ್ನು ಮಾಡಿದರೆ ದೈಹಿಕ ಶುದ್ಧತೆಯ ಬಳಿಕವೇ ಮಾಡಬೇಕು .
2 . ಹಣೆಗೆ ಈ ತಿಲಕವನ್ನು ಇಟ್ಟುಕೊಳ್ಳಿ:- ಮುಂಜಾನೆ ನೀವು ಸ್ನಾನ ಮಾಡುವ ಮೂಲಕ ದೈಹಿಕ ಶುದ್ಧತೆಯನ್ನು ಪಡೆದುಕೊಂಡು ದೇವರ ಮುಂದೆ ಕುಳಿತು ಹರಿ ಚಂದನ, ಗೋಪಿ ಚಂದನ, ಬಿಳಿ ಚಂದನ, ಕೆಂಪು ಚಂದನ, ಗೋಮತಿ ಅಥವಾ ಗೋಕುಲ ಚಂದನವನ್ನು ನಿಮ್ಮ ಹಣೆಯ ಮೇಲೆ ತಿಲಕವನ್ನಾಗಿ ಇಟ್ಟುಕೊಳ್ಳಿ. ಇದು ಅತ್ಯಂತ
ಮಂಗಳಕರವಾಗಿದ್ದು ಅದು ನಮ್ಮ ಜೀವನದಿಂದ ಎಲ್ಲಾ ತೊಂದರೆಗಳನ್ನು ತೊಡೆದು ಹಾಕುತ್ತದೆ.
ಮತ್ತು ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ . ಶ್ರೀಗಂಧದ ತಿಲಕವನ್ನು ನಾವು ನಮ್ಮ ಹಣೆಗೆ ಇಟ್ಟುಕೊಳ್ಳುವುದರಿಂದ, ಪಾಪಗಳು ನಾಶವಾಗುತ್ತವೆ. ವ್ಯಕ್ತಿಯು ತೊಂದರೆಗಳಿಂದ ಪಾರಾಗುತ್ತಾನೆ. ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಅವನ ಮೇಲೆ ಇರುತ್ತದೆ. ಇಂದ್ರೀಯಗಳು ನಿಯಂತ್ರಣ ಮತ್ತು ಸಕ್ರಿಯವಾಗಿ ಇರುತ್ತದೆ. ಶ್ರೀಗಂಧದ ತಿಲಕವು ತಾಜಾತನವನ್ನು ತರುತ್ತದೆ. ಮತ್ತು ನರಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.
3 . ಯೋಗ ಅಥವಾ ಮಾರ್ನಿಂಗ್ ವಾಕ್ ಮಾಡಿ :- ಕೆಲವರು ಬೆಳಿಗ್ಗೆ ಎದ್ದ ತಕ್ಷಣ , ಶೌಚಾಲಯಕ್ಕೆ ಹೋಗದೆ ಅಥವಾ ಹಲ್ಲುಜ್ಜದೆ ತಿನ್ನಲು ಪ್ರಾರಂಭಿಸುತ್ತಾರೆ. ಇದನ್ನು ತುಂಬಾ ತಪ್ಪು ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶೌಚಕ್ಕೆ ಹೋಗದೆ, ತಿನ್ನುವುದರಿಂದ ಹೊಟ್ಟೆಯಲ್ಲಿನ ಕೊಳೆಗಳು ಹೊರಗೆ ಬರುವುದಿಲ್ಲ . ಮತ್ತು ಹಲ್ಲುಜ್ಜದೆ ತಿಂದರೆ ರಾತ್ರಿ ಬಾಯಿಯಲ್ಲಿದ್ದ ಕೊಳೆ ಹೊಟ್ಟೆ ಸೇರುತ್ತದೆ. ನೀವು ಎಲ್ಲಾ ಕೆಲಸಗಳಿಂದ ಮುಕ್ತವಾದ ನಂತರ, ಯೋಗ , ಏರೋಬಿಕ್ಸ್ , ವ್ಯಾಯಾಮ , ಸೈಕ್ಲಿಂಗ್ ಅಥವಾ ಬೆಳಗಿನ ನಡಿಗೆಯನ್ನು ಬೆಳಿಗ್ಗೆ ಕನಿಷ್ಠ 15 ನಿಮಿಷಗಳ ಕಾಲ ಮಾಡಿ ನಂತರ ನಿಮ್ಮ ದಿನನಿತ್ಯದ ಕೆಲಸವನ್ನು ಪ್ರಾರಂಭಿಸಿ.
ಮುಂಜಾನೆ ನಾವು ಈ 3 ಕೆಲಸಗಳನ್ನು ಮಾಡುವುದರಿಂದ ಆರೋಗ್ಯವಂತ ದೇಹವನ್ನು ಪಡೆದು ಕೊಳ್ಳುವುದರೊಂದಿಗೆ ಎಲ್ಲಾ ರೀತಿಯ ಸಮಸ್ಯೆಗಳಿಂದಲೂ ಪರಿಹಾರವನ್ನು ಕಂಡುಕೊಳ್ಳಬಹುದು . ಇವುಗಳನ್ನು ನೀವು ಪ್ರತಿನಿತ್ಯ ಮುಂಜಾನೆ ರೂಢಿಸಿಕೊಳ್ಳಿ ಎಂದು ಹೇಳಲಾಗಿದೆ.