ದೇವರ ಮನೆಯಲ್ಲಿ ಯಾಕೆ ನೀರು ಇಡಬೇಕು,ಈ ಕಾರಣಕ್ಕಾಗಿ ಕಡ್ಡಾಯವಾಗಿ ನೀರನ್ನು ಇಡಲೇ ಬೇಕು

0

ನಾವು ಈ ಲೇಖನದಲ್ಲಿ ದೇವರ ಮನೆಯಲ್ಲಿ ಯಾಕೆ ನೀರು ಇಡಬೇಕು . ಈ ಕಾರಣಕ್ಕಾಗಿ ಕಡ್ಡಾಯವಾಗಿ ನೀರನ್ನು ಏಕೆ ಇಡಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ಸಾಮಾನ್ಯವಾಗಿ ದೇವರ ಮನೆಯಲ್ಲಿ ಪೂಜೆಗೆ ಬಳಸುವಂತಹ ಪ್ರತಿಯೊಂದು ವಸ್ತುಗಳಿಗೂ ಕೂಡ ಅದರದೇ ಆದ ಮಹತ್ವ ಇರುತ್ತದೆ . ಅದಕ್ಕೆ ಸಂಬಂಧಪಟ್ಟಂತೆ ಕೆಲವು ಕಾರಣಗಳು ಕೂಡ ಇರುತ್ತದೆ .

ದೇವರ ಮನೆಯಲ್ಲಿ ಪೂಜೆಗೆ ಬಳಸುವ ಅನೇಕ ವಸ್ತುಗಳನ್ನು ಇಟ್ಟಿರುತ್ತೇವೆ .ಅದರಲ್ಲಿ ನೀರು ಕೂಡ ಒಂದು ಆಗಿರುತ್ತದೆ . ದೇವರ ಮನೆಯಲ್ಲಿ ನೀರು ಏಕೆ ತುಂಬಿ ಇಡಬೇಕು ಎಂಬ ವಿಚಾರವನ್ನು ಇಲ್ಲಿ ತಿಳಿಯೋಣ . ನಮ್ಮ ಹಿಂದೂ ಧರ್ಮದಲ್ಲಿ ಯಾವಾಗಲೂ ನೀರು ಮಹತ್ವವಾದ ಸ್ಥಾನವನ್ನು ಹೊಂದಿರುತ್ತದೆ . ಪವಿತ್ರ ನದಿಗಳಿಂದ ಹಿಡಿದು ಮನೆಯಲ್ಲಿ ಇಟ್ಟಿರುವ ಸಣ್ಣ ನೀರಿನ ಕುಂಡಗಳವರೆಗೂ ನೀರನ್ನು ಪವಿತ್ರ ಎಂದು ಪರಿಗಣಿಸಲಾಗಿದೆ . ಪ್ರತಿಯೊಂದು ಆಚರಣೆಯಲ್ಲೂ ಕೂಡ ನೀರು ಅತ್ಯವಶ್ಯಕವಾಗಿ ಬೇಕು .

ದೇವರ ಮನೆ ಅಥವಾ ಮನೆಯಲ್ಲಿ ಉತ್ತರ ದಿಕ್ಕು ಅಥವಾ ಈಶಾನ್ಯ ಮೂಲೆಯಲ್ಲಿ ನೀರನ್ನು ಇಡುವುದರಿಂದ, ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ . ಈ ಕಾರಣಕ್ಕಾಗಿ ಮನೆಯಲ್ಲಿ ಅಥವಾ ದೇವರ ಮನೆಯಲ್ಲಿ ನೀರನ್ನು ಇಡಬೇಕು . ಅದರಲ್ಲೂ ತಾಮ್ರದ ಚೆಂಬು ಅಥವಾ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಇಡುವುದರಿಂದ , ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ . ನಾವು ದೇವರ ಮನೆಯಲ್ಲಿ ತಾಮ್ರದ ಬಿಂದಿಗೆಯಲ್ಲಿ ಮಡಿ ನೀರನ್ನು ಇಡುವುದರಿಂದ ,

ಅದು ಯಾವ ಕೆಲಸಕ್ಕೆ ಉಪಯೋಗಕ್ಕೆ ಬರುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ . ನಾವು ದೇವರ ಮನೆಯಲ್ಲಿ ಯಾವುದೇ ಒಂದು ಪೂಜಾ ಸಾಮಗ್ರಿಗಳನ್ನು ಇಡಬೇಕಾದರೆ ನೆಲದ ಮೇಲೆ ಇಡುವುದಿಲ್ಲ . ಆ ಜಾಗಕ್ಕೆ ಸ್ವಲ್ಪ ನೀರನ್ನು ಪ್ರೋಕ್ಷಣೆ ಮಾಡಿ ಶುದ್ದಿಯಾದ ನಂತರ , ಅದರ ಮೇಲೆ ನೈವೇದ್ಯ ಅಥವಾ ಆರತಿ ತಟ್ಟೆಯನ್ನು ಇಡುತ್ತೇವೆ . ಈ ರೀತಿಯಾಗಿ ಶುದ್ಧೀಕರಿಸುವುದಕ್ಕೆ ಈ ನೀರು ಉಪಯೋಗಕ್ಕೆ ಬರುತ್ತದೆ . ಆ ನೀರಿಗೆ ಒಂದೆರಡು ತುಳಸಿ ದಳವನ್ನು ಹಾಕುವುದರಿಂದ ಆ ನೀರು ಶುದ್ಧ ಮತ್ತು ಪವಿತ್ರವಾಗಿ ಇರುತ್ತದೆ . ಅದರಿಂದ ಪೂಜಾ ಸ್ಥಳವನ್ನು ಶುದ್ದಿ ಮಾಡಿದಾಗ ದೇವರು ಪ್ರಸನ್ನನಾಗುತ್ತಾನೆ .

ಇನ್ನು ಕೆಲವರು ಪ್ರತಿದಿನ ವಿಗ್ರಹಗಳನ್ನು ತೊಳೆಯುವುದು , ಅಭಿಷೇಕ ಮಾಡುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ . ಇನ್ನು ಕೆಲವರು ಪ್ರತಿ ವಾರ ಅಭಿಷೇಕ ಮಾಡುತ್ತಾರೆ . ಇನ್ನು ಕೆಲವರು ವಿಶೇಷ ದಿನಗಳಲ್ಲಿ ಅಂದರೆ ಹಬ್ಬ ಹರಿದಿನಗಳಲ್ಲಿ ನೀರಿನಿಂದ ಅಭಿಷೇಕ ಮಾಡುವ ಅಭ್ಯಾಸ ಇರುತ್ತದೆ . ಹಾಗಾಗಿ ನೀರನ್ನು ಮಡಿಯಾಗಿ ಇಡುವುದರಿಂದ , ಈ ರೀತಿಯಾಗಿ ದೇವರ ವಿಗ್ರಹಗಳನ್ನು ತೊಳೆಯುವುದಕ್ಕೆ ಅಥವಾ ಅಭಿಷೇಕ ಮಾಡುವುದಕ್ಕೆ ಉಪಯೋಗಕ್ಕೆ ಬರುತ್ತದೆ . ನಮ್ಮ ಪ್ರಕೃತಿ ಅಥವಾ ನಮ್ಮ ದೇಹ ಆಗಿರಬಹುದು ಪಂಚಭೂತಗಳಿಂದ ಕೂಡಿದೆ,

ಈ ವಿಚಾರ ಪ್ರತಿಯೊಬ್ಬರಿಗೂ ಕೂಡ ತಿಳಿದಿರುತ್ತದೆ . ಅಗ್ನಿ , ವಾಯು , ಜಲ, ಭೂಮಿ , ಆಕಾಶ ಪ್ರತಿಯೊಂದನ್ನೂ ಕೂಡ ನಾವು ದೇವರ ರೂಪದಲ್ಲಿ ಪೂಜೆ ಮಾಡುತ್ತೇವೆ . ಅದರಲ್ಲೂ ಕೂಡ ದೇವರನ್ನು ನಾವು ಕಾಣುತ್ತೇವೆ . ಹಾಗೆಯೇ ನೀರನ್ನು ಕೂಡ ಗಂಗಾ ಮಾತೆಗೆ ಹೋಲಿಸಲಾಗುತ್ತದೆ .ಗಂಗಾ ಮಾತೆಯ ಸ್ವರೂಪವಾಗಿ ಪೂಜೆ ಮಾಡುತ್ತೇವೆ .ಅಷ್ಟೇ ಅಲ್ಲದೆ ನೀರನ್ನು ನಾವು ವರುಣ ದೇವನಿಗೂ ಕೂಡ ಹೋಲಿಸಲಾಗುತ್ತದೆ . ವರುಣ ದೇವರ ರೂಪದಲ್ಲಿ ನಾವು ನೀರನ್ನು ಪೂಜೆ ಮಾಡುತ್ತೇವೆ . ಮಳೆ ಇಲ್ಲದೆ ಜೀವನ ನಡೆಯುವುದಿಲ್ಲ . ಆ ಕಾಲಕ್ಕೆ ತಕ್ಕಂತೆ ಮಳೆ , ಬಿಸಿಲು , ಚಳಿ ಬೇಕಾಗುತ್ತದೆ .

ಈ ಕಾರಣಕ್ಕಾಗಿ ನಾವು ದೇವರ ಮನೆಯಲ್ಲಿ ನೀರನ್ನು ಇಡಬೇಕು . ನಾವು ಪ್ರತಿದಿನ ದೇವರಿಗೆ ಏನಾದರೂ ನೈವೇದ್ಯವನ್ನು ಇಡುತ್ತೇವೆ . ಈ ರೀತಿ ದೇವರಿಗೆ ನೈವೇದ್ಯವನ್ನು ಅರ್ಪಿಸಿದ ನಂತರ ನೀರನ್ನು ಇಡಲೇಬೇಕು . ಈ ಕಾರಣಕ್ಕಾಗಿ ದೇವರ ಮನೆಯಲ್ಲಿ ನೀರನ್ನು ಇಡಬೇಕು . ಇನ್ನು ದೇವರಿಗೆ ಆರತಿ ಮಾಡುವ ಸಂದರ್ಭದಲ್ಲಿ ಕೂಡ ಆರತಿ ತಟ್ಟೆಯ ಬದಿಯಲ್ಲಿ ಸ್ವಲ್ಪ ನೀರನ್ನು ಹಾಕುತ್ತೇವೆ ..ದೇವರಿಗೆ ಆರತಿ ಮಾಡಿದ ನಂತರ ನೀರನ್ನು ಹಾಕಿದ ಮೇಲೆ ಸಂಪೂರ್ಣ ಗೊಳ್ಳುತ್ತದೆ .

ಇದನ್ನು ಆರತಿ ತಟ್ಟೆ ಶಾಂತವಾಗಲಿ ಎಂದು ಈ ರೀತಿ ಮಾಡಲಾಗುತ್ತದೆ . ಅಷ್ಟೇ ಅಲ್ಲದೆ ದೇವರ ಮನೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ಇಟ್ಟಿರುವುದರಿಂದ ಆ ನೀರಿನಲ್ಲಿ ಹೆಚ್ಚಾಗಿ ಧನಾತ್ಮಕ ಗುಣಗಳು ಮತ್ತು ಆರೋಗ್ಯಕರ ಗುಣಗಳು ಇರುತ್ತದೆ ಎಂದು ನಂಬಲಾಗುತ್ತದೆ . ಹಾಗೆಯೇ ನಾನು ದೇವಸ್ಥಾನಗಳಲ್ಲೂ ನೋಡಿರುತ್ತೇವೆ ಎಲ್ಲಾ ಭಕ್ತಾದಿಗಳ ಮೇಲೆ ಪೂಜೆ ಆದ ನಂತರ ನೀರನ್ನು ಪ್ರೋಕ್ಷಣೆ ಮಾಡುತ್ತಾರೆ . ಮನೆಯಲ್ಲೂ ಕೂಡ ಪೂಜೆ ಆದ ನಂತರ ಈ ರೀತಿ ಇಟ್ಟಿರುವ ನೀರಿನಿಂದ ಮನೆಯ ನಾಲ್ಕು ಮೂಲೆಗಳಿಗೆ ಪ್ರೋಕ್ಷಣೆಯನ್ನು ಮಾಡಲಾಗುತ್ತದೆ .

ಇದರಿಂದ ನಕಾರಾತ್ಮಕ ಶಕ್ತಿಗಳು ತುಂಬಾ ಬೇಗ ಕಡಿಮೆಯಾಗಿ ಮನೆಯಲ್ಲಿ ಒಂದು ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ . ನಾವು ಇಟ್ಟಿರುವ ಈ ನೀರನ್ನು ಎಷ್ಟು ದಿನಕ್ಕೆ ಬದಲಾಯಿಸಬೇಕು ಎಂದರೆ , ಪ್ರತಿದಿನ ಬದಲಾಯಿಸಿದರೆ ತುಂಬಾ ಒಳ್ಳೆಯದು . ಸಾಧ್ಯವಾಗುವುದಿಲ್ಲ ಎನ್ನುವವರು ಎರಡು ದಿನ ಮೂರು ದಿನಕ್ಕೆ ಬದಲಾಯಿಸಬೇಕು . ದೇವರು ಮನೆ ಇಲ್ಲದವರು ನೀವು ಎಲ್ಲಿ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಳ್ಳುತ್ತೀರಾ ಅಲ್ಲೇ ನೀರನ್ನು ತುಂಬಿ ಇಡಬಹುದು . ಕಳಶದ ಬಲಭಾಗಕ್ಕೆ ಒಂದು ಪುಟ್ಟ ತಾಮ್ರದ ಚೊಂಬಿನಲ್ಲಿ ನೀರನ್ನು ಇಡಬಹುದು . ಈ ರೀತಿಯ ಅಭ್ಯಾಸವನ್ನು ಮಾಡಿಕೊಳ್ಳಬೇಕು . ಯಾಕೆಂದರೆ ನೀರು ಸಮೃದ್ಧಿಯ ಸಂಕೇತ . ದೇವರ ಮನೆಯಲ್ಲಿ ನಾವು ನೀರು ಇಡುವುದರಿಂದ ಆ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ: ನಿಮಗೆ ಈ ಅಭ್ಯಾಸ ರೂಢಿಸಿಕೊಂಡಿಲ್ಲ ಎಂದರೆ ಈ ಅಭ್ಯಾಸವನ್ನು ಮಾಡಿಕೊಳ್ಳುವುದು ತುಂಬಾ ಉತ್ತಮ ಎಂದು ತಿಳಿಸಲಾಗಿದೆ .

Leave A Reply

Your email address will not be published.