ನಾವು ಈ ಲೇಖನದಲ್ಲಿ ಇಂತಹ 5 ಹವ್ಯಾಸಗಳಿಂದ ಬಡತನ ಬರುತ್ತದೆ ಎಂಬುದನ್ನು ನೋಡೋಣ. ಮನುಷ್ಯನ ಈ 5 ಅಭ್ಯಾಸಗಳೇ ಅವನಿಗೆ ಬಡತನ – ದರಿದ್ರತನ ತಂದು ಕೊಡುತ್ತದೆ . ಸನಾತನ ಧರ್ಮದಲ್ಲಿ 18 ಪುರಾಣಗಳಿವೆ . ಆ ಎಲ್ಲಾ ಪುರಾಣಗಳಲ್ಲಿ ಗರುಡ ಪುರಾಣ ತುಂಬಾ ಶ್ರೇಷ್ಠವಾದದ್ದು . ಈ ಗರುಡ ಪುರಾಣದಲ್ಲಿ ಭಗವಂತ ಶ್ರೀ ಕೃಷ್ಣ ಮತ್ತು ಗರುಡ ದೇವ ಇವರಿಬ್ಬರ ನಡುವೆ ಏನೆಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆದಿವೆ ಎಂಬುದನ್ನು ಉಲ್ಲೇಖಿಸಲಾಗಿದೆ .
ಇವುಗಳು ನಮಗೆ ದಾರಿ ದೀಪವಾಗಿದೆ ಎಂದು ಹೇಳಬಹುದು . ಹಿಂದೂ ಧರ್ಮದಲ್ಲಿ ಮನುಷ್ಯನ ಸಾವು , ಪುನರ್ಜನ್ಮ , ಮತ್ತು ಅಂತಿಮ ಸಂಸ್ಕಾರ ಹೀಗೆ ಅನೇಕ ವಿಚಾರಗಳ ಬಗ್ಗೆ ವಿವರವಾಗಿ ಹೇಳಲಾಗಿದೆ . ಇದಷ್ಟೇ ಅಲ್ಲ ನಮ್ಮ ಜೀವನದಲ್ಲಿ ನಾವು ಏನೇ ಮಾಡಿದರು ಸರಿ ದಾರಿಯಲ್ಲಿ ಮಾಡಬೇಕು . ಕೆಟ್ಟ ದಾರಿಯನ್ನು ಹಿಡಿಯಬಾರದು ಅನ್ನುವುದರ ಬಗ್ಗೆ ಕೂಡ ಹೇಳಲಾಗಿದೆ .
ಈ ಗರುಡ ಪುರಾಣದಲ್ಲಿ ನಿಮಗೆ ತಿಳಿದಿರುವ ಹಾಗೆ ಗರುಡ ಇದೊಂದು ಪಕ್ಷಿ . ವಿಷ್ಣುವಿನ ವಾಹನ ಕೂಡ ಆಗಿರುತ್ತದೆ . ವಿಷ್ಣು ಪುರಾಣದ ಒಂದು ಭಾಗವೇ ಗರುಡ ಪುರಾಣ . ಈ ಗರುಡ ಪುರಾಣದಲ್ಲಿ ಮನುಷ್ಯನು ಮಾಡುವ ಯಾವುದೇ ಕೆಲಸ ಅವನ ಜೀವನದಲ್ಲಿ ದರಿದ್ರತೆಯನ್ನು ತರುತ್ತದೆ ಎಂದು ಹೇಳಲಾಗಿದೆ . ಗರುಡ ಪುರಾಣದಲ್ಲಿ ಹೇಳಲಾಗಿರುವ ನಿಯಮಗಳನ್ನು ಮನುಷ್ಯನು ತನ್ನ ಜೀವನದಲ್ಲಿ ಪಾಲಿಸಿದ್ದೆ ಆದರೆ ಆತನು ಜೀವನದಲ್ಲಿ ಸುಖವಾಗಿ ನೆಮ್ಮದಿಯಾಗಿ ಇರುತ್ತಾನೆ .
ಮತ್ತು ಇಂತಹ ಮನುಷ್ಯ ಮರಣದ ನಂತರ ಸ್ವರ್ಗಕ್ಕೆ ಹೋಗುತ್ತಾನೆ .ಕೈ ತುಂಬಾ ದುಡಿದರು ಹಣದ ಕೊರತೆ ತುಂಬಾ ಜನಕ್ಕೆ ಇರುತ್ತದೆ .ಇಂತಹ ಪರಿಸ್ಥಿತಿ ಎಷ್ಟೋ ಜನರಲ್ಲಿ ಇರುತ್ತದೆ . ಎಲ್ಲಾ ಆಗುವುದಕ್ಕೆ ಕಾರಣ ಮನುಷ್ಯನ ಅಭ್ಯಾಸಗಳು ಅಂತ ಹೇಳುತ್ತದೆ ಗರುಡ ಪುರಾಣ . ಮನುಷ್ಯನಿಗೆ ಕೆಲವೊಂದು ತನ್ನಲ್ಲಿರುವ ಅಭ್ಯಾಸಗಳಿಂದಲೇ ಸಂಕಷ್ಟ ಎದುರಾಗುತ್ತದೆ ಎಂದು ವಿಷ್ಣು ಗರುಡ ಪುರಾಣದಲ್ಲಿ ಗರುಡನಿಗೆ ಹೇಳಿದ್ದಾನೆ. ನಾವು ಹೇಳುವಂತಹ ಅಭ್ಯಾಸಗಳು ನಿಮ್ಮಲ್ಲಿ ಇದ್ದರೆ ಅದನ್ನು ಆದಷ್ಟು ಬೇಗ ದೂರ ಇಡುವುದಕ್ಕೆ ಪ್ರಯತ್ನಿಸಿ .
ಇಲ್ಲದಿದ್ದರೆ ನಿಮಗೂ ಕೂಡ ಸಂಕಷ್ಟ ಎದುರಾಗಬಹುದು . ಗರುಡ ಪುರಾಣದಲ್ಲಿ ಮನುಷ್ಯನ ಐದು ಕೆಟ್ಟ ಅಭ್ಯಾಸಗಳ ಬಗ್ಗೆ ಶ್ರೀ ವಿಷ್ಣು ಪುರಾಣದಲ್ಲಿ ಹೇಳಿದ್ದಾನೆ . ಆ ಕೆಟ್ಟ ಅಭ್ಯಾಸಗಳನ್ನು ಮನುಷ್ಯನು ಬಿಡದೆ ಇದ್ದರೆ ಜೀವನದಲ್ಲಿ ದರಿದ್ರತೆ ಹೆಚ್ಚಾಗುತ್ತದೆ . ಹಾಗಾದರೆ ಇದು ಕೆಟ್ಟ ಅಭ್ಯಾಸಗಳು ಯಾವುದು ಎಂಬುದನ್ನು ನೋಡೋಣ .ಮನೆಯಲ್ಲಿ ಅಡುಗೆ ಮಾಡಿದಾಗ ಮೊದಲು ಅದನ್ನು ದೇವರಿಗೆ ನೈವೇದ್ಯ ಮಾಡಬೇಕು . ದೇವರಿಗೆ ನೈವೇದ್ಯ ಮಾಡದೆ ಊಟ ಮಾಡುವುದು ಕೆಟ್ಟ ಅಭ್ಯಾಸ .
ಇದರಿಂದ ಮನೆಯಲ್ಲಿರುವ ಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರಗಡೆ ಹೋಗುತ್ತಾಳೆ . ಹಾಗಾಗಿ ಮನೆಯಲ್ಲಿ ಮಾಡಿರುವ ಅಡಿಗೆಯನ್ನು ದೇವರಿಗೆ ಸಮರ್ಪಿಸಿ ನಂತರ ಸೇವಿಸಬೇಕು . ಆಗ ಮನೆಯಲ್ಲಿರುವ ದೇವರು ಪ್ರಸನ್ನ ರಾಗುತ್ತಾರೆ .ಅಷ್ಟೇ ಅಲ್ಲದೆ ಅನ್ನಪೂರ್ಣೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ . ಆದರೆ ಭಗವಂತನಿಗೆ ಸಮರ್ಪಿಸುವ ಆಹಾರ ಶುದ್ಧವಾಗಿದ್ದು ಮತ್ತು ಸಾತ್ವಿಕವಾಗಿ ಇರಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು .
ರಾತ್ರಿ ಮಲಗುವ ಮುನ್ನ ಎಂಜಲು ತಟ್ಟೆ ಮತ್ತು ಪಾತ್ರೆಗಳನ್ನು ಇಟ್ಟು ಮಲಗಬಾರದು . ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ .ಹೀಗೆ ಮಾಡುವುದರಿಂದ ಶನಿಯ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ . ಲಕ್ಷ್ಮಿ ದೇವಿಯ ಕೂಡ ಕೋಪಗೊಳ್ಳುತ್ತಾಳೆ. ಎಂದೂ ಮನೆಗೆ ಪ್ರವೇಶ ಮಾಡುವುದಿಲ್ಲ . ಹಾಗಾಗಿ ರಾತ್ರಿ ಊಟ ಮಾಡಿದ ನಂತರ ಅಡುಗೆ ಮನೆಯನ್ನು ಸ್ವಚ್ಛ ಮಾಡಿ ಪತ್ರೆಗಳನ್ನು ತೊಳೆದು ನಂತರ ಮಲಗಬೇಕು . ಮನೆಯಲ್ಲಿ ನೆಮ್ಮದಿ ಶಾಂತಿ ಧನಾತ್ಮಕ ಶಕ್ತಿ ಹೆಚ್ಚಾಗಬೇಕು ಅಂದರೆ ,
ಆ ಮನೆಯಲ್ಲಿ ಧರ್ಮ ಗ್ರಂಥಗಳ ಪಠಣೆ ಆಗುತ್ತಿರಬೇಕು . ಮನೆಯಲ್ಲಿ ರಾಮಾಯಣ ಪುರಾಣಗಳಂತಹ ಅನೇಕ ಧರ್ಮ ಗ್ರಂಥಗಳನ್ನು ಓದಿ ನಕಾರಾತ್ಮಕತೆ ಮನೆಯೊಳಗೆ ಪ್ರವೇಶ ಮಾಡದಂತೆ ತಡೆಯಬಹುದು . ಮನೆಯಲ್ಲಿ ನಿಮಗೆ ಧರ್ಮ ಗ್ರಂಥಗಳನ್ನು ಓದುವುದಕ್ಕೆ ಆಗುವುದಿಲ್ಲ ಎಂದರೆ ಧರ್ಮ ಗುರುಗಳ ಪಾಠ ಪ್ರವಚನಗಳನ್ನು ನೀವು ಕೇಳಿ ಮನೆಯಲ್ಲಿ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳಬಹುದು .
ಇಂದಿನ ಕಾಲದಲ್ಲಿ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳುವಂತಹ ಒಳ್ಳೆಯ ಅಭ್ಯಾಸವನ್ನು ಹೊಂದಿದ್ದರು . ಆದರೆ ಈಗ ಕಾಲ ಬದಲಾಗಿದೆ . ನಮ್ಮ ಜೀವನ ಶೈಲಿ ಬದಲಾಗಿದೆ . ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಎದ್ದೇಳುವ ಅಭ್ಯಾಸವನ್ನು ರೂಢಿಸಿ ಕೊಂಡಿರುತ್ತೇವೆ . ಆದರೆ ಧರ್ಮ ಗ್ರಂಥ ಇದೊಂದು ಕೆಟ್ಟ ಅಭ್ಯಾಸ ಎಂದು ಹೇಳುತ್ತದೆ . ಬೆಳಿಗ್ಗೆ ತಡವಾಗಿ ಹೇಳುವವರು ಜೀವನದಲ್ಲಿ ಎಂದೂ ಮುಂದೆ ಬರುವುದಿಲ್ಲ .ಏಕೆಂದರೆ ಆಲಸ್ಯ ತನ ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಅಡ್ಡಿ ಮಾಡುತ್ತದೆ .
ಹಾಗಾಗಿ ಎಲ್ಲಿ ಸಾಧಿಸುವುದಕ್ಕೆ ಆಗುವುದಿಲ್ಲವೋ ಅಲ್ಲಿ ಸಂಪಾದನೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ . ಅಲ್ಲಿಗೆ ನಿಮ್ಮ ಮನೆಯಲ್ಲಿ ದರಿದ್ರ ಮನೆ ಮಾಡುತ್ತದೆ . ಹೀಗೆ ಆಲಸ್ಯ ಇರುವವರಿಗೆ ಅವರಿಗೆ ಬೇಕಾದ ಹಾಗೆ ಹಣ ಸಿಗುವುದಿಲ್ಲ . ಮುಂಜಾನೆ ಮತ್ತು ಸಾಯಂಕಾಲ ಇದು ಭಗವಂತನನ್ನು ಆರಾಧಿಸುವ ಸಮಯ . ಈ ಸಮಯದಲ್ಲಿ ದೇವತೆಗಳನ್ನು ಪ್ರಾರ್ಥಿಸಿದರೆ ಅದರಿಂದ ಆಗುವ ಉಪಯೋಗಗಳು ಹೆಚ್ಚಾಗಿರುತ್ತದೆ . ಪ್ರಾರ್ಥನೆ ಮಾಡುವ ಸಮಯದಲ್ಲಿ ಮನುಷ್ಯರು ಮಲಗಿದಾಗ ದೇವತೆಗಳು ಕೋಪಿಷ್ಟರು ಆಗುತ್ತಾರೆ .
ಇದರಿಂದ ಜೀವನದಲ್ಲಿ ದರಿದ್ರತೆಗೆ ದಾರಿ ಮಾಡಿ ಕೊಟ್ಟ ಹಾಗೆ ಆಗುತ್ತದೆ . ಯಾವ ವ್ಯಕ್ತಿ ಕೆಲಸವನ್ನು ಪ್ರೀತಿಯಿಂದ ಶ್ರದ್ಧೆಯಿಂದ ಮಾಡುವುದಿಲ್ಲ ಆತನ ಕೈಯನ್ನು ಲಕ್ಷ್ಮಿ ಹಿಡಿಯುವುದಿಲ್ಲ .ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನುವುದು ಕೂಡ ದರಿದ್ರ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ .ಹೆಚ್ಚೆಚ್ಚು ತಿನ್ನುವುದರಿಂದ ಆಲಸ್ಯ ತನ ಹೆಚ್ಚಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ ..ಕೊಳಕು ಬಟ್ಟೆಗಳು ಲಕ್ಷ್ಮಿ ದೇವಿಯನ್ನು ನಿಮ್ಮ ಹತ್ತಿರಕ್ಕೂ ಸುಳಿಯುವುದಕ್ಕೆ ಬಿಡುವುದಿಲ್ಲ .
ನೀವು ಕೊಳಕು ಬಟ್ಟೆ ಹಾಕುತ್ತಿದ್ದರೆ ಅದು ಕೂಡ ಒಳ್ಳೆಯ ಅಭ್ಯಾಸ ಅಲ್ಲ .ಲಕ್ಷ್ಮಿ ದೇವಿಗೆ ಸ್ವಚ್ಛತೆ ಎನ್ನುವುದು ತುಂಬಾ ಇಷ್ಟ . ಹೀಗೆ ಕೊಳಕು ಬಟ್ಟೆ ಹಾಕಿಕೊಂಡು ಅವಳ ಧ್ಯಾನವನ್ನು ಮಾಡಿದರೆ ನಿಮಗೆ ಇಂದಿಗೂ ಒಲಿಯುವುದಿಲ್ಲ . ಅದಕ್ಕಾಗಿ ಬೆಳಿಗ್ಗೆ ಸ್ನಾನ ಮಾಡಿದ ನಂತರ ಸ್ವಚ್ಛ ಬಟ್ಟೆಗಳನ್ನು ಧರಿಸಬೇಕು . ಸ್ವಚ್ಛತೆ ಯಾರ ಮನೆಯಲ್ಲಿ ಇರುತ್ತದೆಯೋ ಅಂತ ಮನೆಯಲ್ಲಿ ಲಕ್ಷ್ಮಿ ವಾಸವಾಗಿ ಇರುತ್ತಾಳೆ . ಹಾಗೆಯೇ ನಿಮ್ಮ ಮೈಯನ್ನ ಮತ್ತು ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ .
ಲಕ್ಷ್ಮಿ ಪ್ರಸನ್ನ ಆಗಬೇಕು ಅಂದರೆ ನಾವು ನಮ್ಮ ಮನೆ ಮತ್ತು ನಮ್ಮ ಮನೆಯ ಸುತ್ತಮುತ್ತ ಸ್ವಚ್ಛವಾಗಿ ಇರಬೇಕು .ಇನ್ನೊಬ್ಬರ ಬಗ್ಗೆ ಹಿಂದೆ ಮಾತನಾಡುವುದು ಒಳ್ಳೆಯ ಅಭ್ಯಾಸ ಅಲ್ಲ . ಹೀಗೆ ಮಾಡಿದ್ದೆ ಆದರೆ ಲಕ್ಷ್ಮಿ ದೇವಿ ಪ್ರಸನ್ನಳು ಆಗುವುದಿಲ್ಲ . ಪ್ರತಿಯೊಂದು ಮಾತಿಗೂ ಕೋಪಗೊಳ್ಳುವುದು ಅಥವಾ ಜಗಳ ಆಡುವುದು ಕೂಡ ದರಿದ್ರ ತನಕ್ಕೆ ದಾರಿ ಮಾಡಿಕೊಡುತ್ತದೆ .
ಇಷ್ಟೇ ಅಲ್ಲದೆ ಬೇರೆಯವರ ಮೇಲೆ ಕಾರಣವಿಲ್ಲದೆ ಕಿರುಚಾಡುವುದು ಮತ್ತು ಕೆಟ್ಟದ್ದನ್ನು ಮಾತನಾಡುವುದು ಇವೆಲ್ಲವೂ ಕೂಡ ದರಿದ್ರದ ಸಂಕೇತ .ಇಂತಹವರ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ . ಇನ್ನು ಕೆಲವು ಜನರು ದರೋಡೆ ಮಾಡುವುದನ್ನು ಯೋಚನೆ ಮಾಡುತ್ತಿರುತ್ತಾರೆ . ಅಂದರೆ ಯಾರಾದರೂ ಸಿರಿವಂತರೂ ಇದ್ದರೆ ಅವರ ಮನೆಯಲ್ಲಿ ಕದಿಯುವುದನ್ನು ಯೋಚನೆ ಮಾಡುವ ಜನರಿಗೆ ಎಂದಿಗೂ ಜೀವನದಲ್ಲಿ ಖುಷಿ ಅನ್ನೋದು ಇರುವುದಿಲ್ಲ .
ಜೊತೆಗೆ ಪ್ರಾಮಾಣಿಕವಾಗಿ ದುಡಿದು ಹಣವನ್ನು ಸಂಪಾದನೆ ಮಾಡು ವವರ ಜೊತೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ . ಮನುಷ್ಯನ ಹತ್ತಿರ ದುಡ್ಡಿದ್ದು ಅಂತ ಮನುಷ್ಯನ ಹತ್ತಿರ ದುರಂಕಾರ ಇದ್ದರೆ ಅಂತವರಿಗೂ ಲಕ್ಷ್ಮಿ ಒಲಿಯುವುದಿಲ್ಲ . ದುರಂಕಾರದಿಂದ ನಿಮ್ಮ ಮುಂದಿರುವವರ ಮನಸ್ಸು ನೋವಾಗುತ್ತದೆ . ಮತ್ತೊಂಬ್ಬರ ಮನಸ್ಸನ್ನು ನೋಯಿಸಿದರೆ ಲಕ್ಷ್ಮೀದೇವಿ ಸಹಿಸುವುದಿಲ್ಲ . ಅಂಥವರ ಮನೆಯಿಂದ ಲಕ್ಷ್ಮೀದೇವಿ ಆಚೆ ಹೋಗುತ್ತಾಳೆ . ಹಣ ಹೆಚ್ಚು ಇದೆ ಎಂದು ಅಹಂಕಾರವನ್ನು ತೋರದೆ ನೀವು ದುಡಿದಿರುವ ಸ್ವಲ್ಪ ಹಣವನ್ನು ಬಡ – ಬಗ್ಗರಿಗೆ ದಾನ ಮಾಡಿ . ಇದರಿಂದ ಲಕ್ಷ್ಮಿ ದೇವಿಯ ಪ್ರಸನ್ನಳಾಗುತ್ತಾಳೆ .