ನಾವು ಈ ಲೇಖನದಲ್ಲಿ ಜೂನ್ ತಿಂಗಳ ತುಲಾ ರಾಶಿಯ ರಾಶಿ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ .ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಏನು ಫಲ ದೊರೆಯುತ್ತದೆ , ಯಾವ ಪ್ರಯೋಜನಗಳು ಇದೆ , ಯಾವ ರೀತಿ ಎಚ್ಚರಿಕೆ ಇದೆ , ಹಾಗೆಯೇ ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬ ಅದ್ಭುತವಾದ ವಿಚಾರವನ್ನು ಇಲ್ಲಿ ಸರಳವಾಗಿ ತಿಳಿಸಲಾಗಿದೆ .
ತುಲಾ ರಾಶಿಯವರ ಲಾಂಛನ ತಕ್ಕಡಿಯ ಚಿಹ್ನೆ . ಇವರಿಗೆ ರಾಶಿಯಾಧಿಪತಿ ಶುಕ್ರ ಆಗಿರುತ್ತದೆ .ಶುಕ್ರ ವಾಯು ತತ್ವದ ರಾಶಿ . ಜೊತೆಗೆ ಪಶ್ಚಿಮ ದಿಕ್ಕಿನ ಒಂದು ರಾಶಿ ಆಗಿರುತ್ತದೆ .ಪುರುಷ ಲಿಂಗದ ರಾಶಿ . ಈ ರಾಶಿಯ ರತ್ನ ವಜ್ರ ಆಗಿರುತ್ತದೆ .ಈ ರಾಶಿಯ ಬಣ್ಣ ಬಿಳಿ ಮತ್ತು ನೀಲಿ ಆಗಿದೆ . ಅದೃಷ್ಟದ ದಿನ ಶುಕ್ರವಾರ ಮತ್ತು ಸೋಮವಾರ ಆಗಿರುತ್ತದೆ . ಅದೃಷ್ಟದ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ ಆಗಿರುತ್ತದೆ . ಅದೃಷ್ಟದ ಸಂಖ್ಯೆ 4 6 7 9 ಇವುಗಳು ಅದೃಷ್ಟದ ಸಂಖ್ಯೆಗಳು ಆದರೆ ,
ಅದೃಷ್ಟದ ದಿನಾಂಕ 6 15 24 ಆಗಿರುತ್ತದೆ. ಇನ್ನು ಮಿತ್ರ ರಾಶಿ ಮಿಥುನ ರಾಶಿ , ಕಟಕ ರಾಶಿ , ಕುಂಭ ರಾಶಿ ಆಗಿರುತ್ತದೆ. ಶತ್ರು ರಾಶಿ ಸಿಂಹ ರಾಶಿ ಆಗಿರುತ್ತದೆ . ತುಲಾ ರಾಶಿಯವರು ಬಹಳಷ್ಟು ನಿಪುಣರಾಗಿ ಇರುತ್ತಾರೆ . ಜಾಣರು, ಅಧ್ಯಯನಶೀಲರು , ಎಂತಹ ಹದಗೆಟ್ಟಿರುವ ವ್ಯವಸ್ಥೆಯನ್ನು ಇವರ ಕೈಯಲ್ಲಿ ಕೊಟ್ಟರೂ ಕೂಡ ಅದನ್ನು ಸುಧಾರಣೆಗೊಳಿಸುತ್ತಾರೆ . ಯಾವುದೇ ಒಂದು ಮನೆ ಆಗಿರಬಹುದು , ಕಚೇರಿ ಆಗಿರಬಹುದು , ತುಲಾ ರಾಶಿ ಅವರು ಎಲ್ಲಿ ಇರುತ್ತಾರೆ,
ಅಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ . ಒಂದು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಾರೆ . ನಾಯಕತ್ವದ ಗುಣ ಇವರಲ್ಲಿ ಕಂಡುಬರುತ್ತದೆ . ಇವರ ಧ್ವನಿಯಲ್ಲಿ ಬಹಳಷ್ಟು ಆಕರ್ಷಣೆ ಇರುತ್ತದೆ . ಅಂದರೆ ಸ್ವರ ಮಾಧುರ್ಯವಾಗಿ ಇರುತ್ತದೆ . ಮಾತಿನಲ್ಲಿ ಬಹಳಷ್ಟು ಮೃದು ತನ ಇರುತ್ತದೆ . ಎಲ್ಲಕ್ಕಿಂತ ಮುಖ್ಯವಾಗಿ ದೃಢವಾದ ಸಂಕಲ್ಪ ಇವರಿಗೆ ಇರುತ್ತದೆ . ಇಂತಹ ತುಲಾ ರಾಶಿಯವರಿಗೆ ಜೂನ್ ತಿಂಗಳಲ್ಲಿ ಯಾವ ಲಾಭವಿದೆ ಎಂದು ತಿಳಿಯೋಣ .
ಯಾವುದೋ ಒಂದು ಮುಖ್ಯವಾದ ಕೆಲಸಕ್ಕೋಸ್ಕರ ಸಮಯವನ್ನು ವಿನಿಯೋಗ ಮಾಡುತ್ತಾರೆ . ಅಧಿಕವಾಗಿ ಓಡಾಟ, ಅಧಿಕವಾಗಿ ಖರ್ಚು , ಈ ರೀತಿಯ ಸನ್ನಿವೇಶಗಳು ಬರುತ್ತವೆ . ಇವರು ಯಾವಾಗಲೂ ಚುರುಕಾಗಿ ಇರುವ ಮನಸ್ಥಿತಿಯನ್ನು ಹೊಂದಿರುತ್ತಾರೆ . ಬಹಳಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ . ಭಿನ್ನ – ಭಿನ್ನವಾದ ವಿಚಾರಗಳು ಇವರಲ್ಲಿ ಇರುತ್ತದೆ .ಭಿನ್ನವಾಗಿ ಯೋಚನೆ ಮಾಡುವ ಮನಸ್ಥಿತಿ ಇವರಲ್ಲಿ ಇರುತ್ತದೆ . ಈ ರಾಶಿಯವರು ಅಲೆದಾಟ ಓಡಾಟ ಸ್ವಲ್ಪ ಕಡಿಮೆ ಮಾಡಿಕೊಡಬೇಕಾಗುತ್ತದೆ .
ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು . ಕೆಲಸವನ್ನು ಪ್ರೀತಿಸಬೇಕು ಆರಾಧಿಸಬೇಕು ಹೆಚ್ಚಿನ ಗಮನವನ್ನು ಕೊಡಬೇಕು . ಮಾನಸಿಕವಾಗಿ , ದೈಹಿಕವಾಗಿ , ಆರ್ಥಿಕವಾಗಿ ಸದೃಢರಾಗುವ ಸಾಧ್ಯತೆ ಇರುತ್ತದೆ . ಇರುವ ಅನೇಕ ಸಮಸ್ಯೆಗಳು ಕೂಡ ಸರಿ ಹೋಗುತ್ತದೆ . ಮನೆಯಲ್ಲಿ ಪತಿ ಪತ್ನಿಯರ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಉಂಟಾಗುತ್ತದೆ . ಇದು ತಾತ್ಕಾಲಿಕವಾಗಿ ಮಾತ್ರ ಇರುತ್ತದೆ . ಇದನ್ನು ಬಹಳ ವಿಕೋಪಕ್ಕೆ ಒಯ್ಯುವ ಪ್ರಯತ್ನವನ್ನು ಮಾಡಬಾರದು .
ಚಿಕ್ಕ ಪುಟ್ಟ ಸಮಸ್ಯೆಗಳು ಬಂದಾಗ ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ವ್ಯವಹರಿಸಬೇಕು . ಸಮಸ್ಯೆಯನ್ನು ಬೇಗನೇ ಪರಿಹರಿಸಿಕೊಳ್ಳಲು ಪ್ರಯತ್ನ ಮಾಡಿ . ಒಳ್ಳೆಯ ಫಲಗಳು ದೊರೆಯುತ್ತದೆ . ಮಕ್ಕಳ ವಿಚಾರದಲ್ಲಿ ಆರೋಗ್ಯಕ್ಕೆ ಸಂಬಂಧ ಪಟ್ಟ ಎಚ್ಚರಿಕೆಯ ವಿಚಾರವನ್ನು ಅನುಸರಿಸಬೇಕಾಗುತ್ತದೆ .ನೀವು ಮಾಡುವ ಕೆಲಸಗಳಲ್ಲಿ ಪೂರ್ಣಗೊಳ್ಳುವ ಸನ್ನಿವೇಶ ಕಂಡುಬರುತ್ತದೆ . ಹೊಸ ಆದಾಯದ ಮೂಲ ನಿಮಗೆ ದೊರೆಯುತ್ತದೆ . ಬೆಲೆಬಾಳುವ ವಸ್ತುಗಳನ್ನು ನೀವು ಕಾಣಿಕೆಯಾಗಿ ಪಡೆಯುವ ಸಾಧ್ಯತೆ ಇದೆ .
ಅಥವಾ ಕಾಣಿಕೆಯಾಗಿ ನೀಡಬಹುದು . ನಿಮ್ಮ ಬಳಿ ಇರುವ ಬೆಳೆಬಾಳುವ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನು ನೀವು ಮಾಡಬೇಕು . ವಿದ್ಯಾರ್ಥಿಗಳಿಗೆ ಇದು ಉತ್ತಮವಾದ ಕಾಲ ಆಗಿರುತ್ತದೆ . ಹೆಚ್ಚಿನ ಪ್ರಯತ್ನವನ್ನು ಪಟ್ಟರೆ, ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಒಳ್ಳೆಯ ಲಾಭ ದೊರೆಯುತ್ತದೆ . ಮೊಬೈಲ್ ಕಡಿಮೆ ಮಾಡಿ ಓದಿನ ಕಡೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರೆ , ಅದ್ಭುತವಾದ ಫಲ ನಿಮಗೆ ದೊರೆಯುತ್ತದೆ .ಪ್ರೇಮಿಗಳಿಗೂ ಕೂಡ ಉತ್ತಮವಾದ ಫಲ ದೊರೆಯುತ್ತದೆ .
ಇವರ ಮಧ್ಯದಲ್ಲಿ ಹೊಂದಾಣಿಕೆ ಹೆಚ್ಚಾಗಿ ಕಂಡು ಬರುತ್ತದೆ . ತಂದೆ ಮತ್ತು ಸೋದರ ಮಾವನಿಂದ ಧನ ಸಹಾಯ ಆಗುವ ಸಾಧ್ಯತೆ ಇದೆ . ಧನಪ್ರಾಪ್ತಿ ಆಗುವ ಸನ್ನಿವೇಶಗಳು ಕಂಡುಬರುತ್ತದೆ . ಶತ್ರುಗಳನ್ನು ಜಯಿಸಿ ಯಶಸ್ಸನ್ನು ಕಾಣಬಹುದು .ಎಷ್ಟೇ ಒತ್ತಡ ತೊಂದರೆಗಳು ಇದ್ದರೂ ಕೂಡ , ನಿಮ್ಮ ಗುರಿಯನ್ನು ಪೂರ್ಣಗೊಳಿಸುವ ಸನ್ನಿವೇಶ ಕಂಡುಬರುತ್ತದೆ . ಅನಿರೀಕ್ಷಿತವಾದ ಬಡ್ತಿ ದೊರೆಯುವ ಸಾಧ್ಯತೆ ಇದೆ . ಮನಸ್ಸಿಗೆ ನೆಮ್ಮದಿ ಇರುತ್ತದೆ . ಉದ್ಯೋಗಿಗಳಿಗೆ ಸಂಬಳ ಅಧಿಕ ಆಗುವ ಸಾಧ್ಯತೆ ಇದೆ .
ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ದೊರೆಯುತ್ತದೆ . ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ . ಜೀವನದಲ್ಲಿ ಸಂತೋಷ ನೆಮ್ಮದಿ ಇರುತ್ತದೆ . ಆದರೆ ಅಲೆದಾಟ ತುಂಬಾ ಇರುತ್ತದೆ . ಬಂಧು ವರ್ಗದಲ್ಲಿ ಅತ್ಯಂತ ಗೌರವದ ಭಾವನೆಗಳು ನಿಮ್ಮ ಮೇಲೆ ಇರುತ್ತದೆ .ಬಂಧು ಬಾಂಧವರಲ್ಲಿ ಗೌರವ ಹೆಚ್ಚಾಗಿರುತ್ತದೆ . ಗಣನೀಯವಾದ ಅಭಿವೃದ್ಧಿಗಳು ನಿಮಗೆ ಕಂಡುಬರುವ ಸನ್ನಿವೇಶ ಆಗಿದೆ .
ಕಲಾವಿದರಿಗೆ ತುಂಬಾ ಒಳ್ಳೆಯ ಫಲ ಇದೆ . ಆರೋಗ್ಯ ತುಂಬಾ ಚೆನ್ನಾಗಿದ್ದರೂ ಕೂಡ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ಮಾಡುವ ಪ್ರಯತ್ನವನ್ನು ಮಾಡಬೇಕು . ಒಟ್ಟಾರೆಯಾಗಿ ತುಲಾ ರಾಶಿಯವರಿಗೆ ಈ ಜೂನ್ ತಿಂಗಳಲ್ಲಿ ಅದ್ಭುತವಾದ ಫಲ ದೊರೆಯುತ್ತದೆ . ನಿರೀಕ್ಷೆಗೂ ಹೆಚ್ಚಿನ ಫಲವನ್ನು ನೀವು ಪಡೆಯಬಹುದು . ಕೆಲವೊಂದು ಎಚ್ಚರಿಕೆಗಳನ್ನು ನೀವು ಅನುಸರಿಸಿದರೆ , ನೀವು ಅಂದು ಕೊಳ್ಳುವುದಕ್ಕಿಂತ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು .
ಇದಕ್ಕೆಲ್ಲಾ ಪರಿಹಾರಗಳು ಏನೆಂದರೆ, ನಿಮ್ಮ ಮನೆಯ ದೇವತೆಯಾದ ಕುಲ ದೇವರನ್ನು ಆರಾಧನೆ ಮಾಡಬೇಕು .
ಕುಲ ದೇವರನ್ನು ಆರಾಧನೆ ಮಾಡುವುದರಿಂದ ಬಹಳ ಒಳ್ಳೆಯ ಅನುಕೂಲ ಆಗುತ್ತದೆ . ಗಣೇಶನ ಪೂಜೆಯನ್ನು ಮಾಡಬೇಕು . ಗಣೇಶನಿಗೆ ಗರಿಕೆಯನ್ನು ಅರ್ಪಿಸುವ ಪ್ರಯತ್ನವನ್ನು ಮಾಡಬೇಕು . ಗಣಪತಿಯ ಆರಾಧನೆ ಮಾಡಿದರೆ ನಿಮಗೆ ಹೆಚ್ಚಿನ ಪ್ರಯೋಜನ ಆಗುತ್ತದೆ .