ನೀವು ಅಂದುಕೊಂಡ ಕೆಲಸ ಸರಿಯಾಗಿ ಆಗಬೇಕು ಎಂದರೆ ನೀವು ಮಾಡುತ್ತಿರುವ ಕೆಲಸ ಸರಿಯಾಗಿ ಮುಗಿಯಬೇಕು. ಯಾವುದೇ ರೀತಿ ಅಡೆತಡೆಗಳು ಬರಬಾರದು. ಮನೆಯಿಂದ ಹೊರಗೆ ಹೋಗುತ್ತಿದ್ದೇವೆ ಉದ್ಯೋಗ ವ್ಯಾಪಾರದಲ್ಲಿ ನೆಮ್ಮದಿ ಸಿಗಬೇಕು ಅತಿ ಹೆಚ್ಚು ಲಾಭದಿಂದ ಮನೆಗೆ ಬರಬೇಕು ಈ ದಿನ ಅಖಂಡ ಜಯವನ್ನು ಸಾಧಿಸಬೇಕು ಎಂದರೆ ನೀವು ಮನೆಯಿಂದ ಹೊರಗೆ ಹೋಗುವಾಗ
ಈ ಒಂದು ದಾರವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ನೋಡಿ. ಸದಾ ಕಾಲ ಗುರುವಿನ ಬಲ ನಿಮ್ಮ ಜೊತೆಗೆ ಇರುತ್ತದೆ. ನಿಮ್ಮ ಮನೆದೇವರು ಸದಾ ಕಾಲ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಜೊತೆಯಲ್ಲಿ ಇರಬೇಕೆಂದರೆ ಈ ಚಿಕ್ಕ ತಂತ್ರವನ್ನು ಒಂದು ದಿನ ಮಾಡಿನೋಡಿ ಬದಲಾವಣೆಗಳನ್ನು ನೀವೇ ನಂಬುವುದಿಲ್ಲ ಈ ದಾರ ಯಾವುದು ಯಾವ ದಿನ ಯಾವ ಸಮಯದಲ್ಲಿ ಸಿದ್ಧಿ ಮಾಡಿಕೊಳ್ಳಬೇಕೆಂದು ನೋಡೋಣ.
ಈ ತಂತ್ರವನ್ನು ಮಾಡುವ ಮೊದಲು ಮಾಂಸಹಾರವನ್ನು ಸೇವಿಸಿರಬಾರದು ಹಾಗೂ ಮಧ್ಯಪಾನವನ್ನು ಮಾಡಿರಬಾರದು. ಪುರುಷರಾದರು ಮಾಡಬಹುದು. ಮಹಿಳೆಯರಿಂದ ಈ ದಾರವನ್ನು ಸಿದ್ಧಿ ಮಾಡಿಕೊಂಡು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಹುದು ವಿದ್ಯಾರ್ಥಿಗಳು ತಮ್ಮ ಜಯಬಿನಲ್ಲಿ ಇಟ್ಟುಕೊಂಡರೆ ವಿಶೇಷವಾದ ಜ್ಞಾನಾರ್ಜನೆ ಯಾಗುತ್ತದೆ ಅಂತಹದೈವ ಶಕ್ತಿ ಈ ದಾರಕ್ಕಿರುತ್ತದೆ.
ಗುರುವಾರದ ದಿನ ಬೆಳಗ್ಗೆ ಸ್ನಾನ ಆದ ನಂತರ ಇದನ್ನು ಸಿದ್ಧಿ ಮಾಡಿಕೊಳ್ಳಬೇಕು. ಸೂರ್ಯ ಹುಟ್ಟುವ ಮೊದಲು ಈ ಕೆಲಸವನ್ನು ಮಾಡಬೇಕು ಒಂದು ಬಿಳಿ ಬಣ್ಣದ ದಾರವನ್ನು ತೆಗೆದುಕೊಳ್ಳಿ ದಪ್ಪದಾದರೂ ಆಗಿರಬಹುದು ತೆಳುವಾದದ್ದಾದರೂ ಆಗಿರಬಹುದು ಎಷ್ಟು ಉದ್ದದ್ದಾದರೂ ಪರವಾಗಿಲ್ಲ ಅದನ್ನು ಅರಿಶಿಣದ್ದಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಮೊದಲು ದಾರವನ್ನು ಆ ನೀರಿನಲ್ಲಿ ಅದ್ದಬೇಕು ನಂತರ
ಅದಕ್ಕೆ ಅರಿಶಿನವನ್ನು ಆ ದಾರಕ್ಕೆ ಸಂಪೂರ್ಣವಾಗಿ ಹಚ್ಚಬೇಕು ನಂತರ ಕರ್ಪೂರದ ಬಿಲ್ಲೆಯನ್ನು ತೆಗೆದುಕೊಂಡು ಈ ಅರಿಶಿಣದ ದಾರಕ್ಕೆ ಉಜ್ಜಬೇಕು. ದೇವರ ಮುಂದೆ ಇಟ್ಟು ಸಂಕಲ್ಪವನ್ನು ಮಾಡಿ ಗುರುವಿನ ಸಂಕಲ್ಪವನ್ನು ಮಾಡಿ ನೀವು ಆ ದಿನ ವಿಶೇಷವಾದ ಸಂಕಲ್ಪವನ್ನು ಮಾಡಿ ಕಷ್ಟಗಳು ಕಳೆಯಬೇಕು ಎಂದುಕೊಂಡು ನಮ್ಮ ಜೀವನದಲ್ಲಿ ಯಾವುದೇ ಕೆಲಸವನ್ನು ಮಾಡಿದರು ಕೈಗೂಡುತ್ತಿಲ್ಲ ಕೆಲಸ ಕೈಗೂಡಬೇಕು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದೇನೆ ಈ ಕೆಲಸ
ಬೇಕು ಅಥವಾ ಮನೆ ಕಟ್ಟಿಸುತ್ತಿದ್ದೇವೆ ಅರ್ಧಕ್ಕೆ ನಿಂತಿದೆ ಅದು ಮುಂದುವರಿಯಬೇಕು ಅಥವಾ ಸೈಟ್ ತೆಗೆದುಕೊಳ್ಳಬೇಕು ಅಥವಾ ಭೂಮಿ ಖರೀದಿ ಆಗಬೇಕು, ಮದುವೆ ಕಾರ್ಯಗಳು ವಿದ್ಯಾಭ್ಯಾಸದಲ್ಲಿ ಅಡೆತಡೆ ಮನೆಯಲ್ಲಿ ಗಂಡ ಹೆಂಡತಿಯ ಜಗಳ ಮನೆಯಿಂದ ಹೊರಗೆ ಹೋದಾಗ ನಷ್ಟವಾಗುತ್ತಿದೆ.ಇದನ್ನೆಲ್ಲ ಕೇಳಿಕೊಂಡು ಭಕ್ತಿ ನಂಬಿಕೆಯಿಂದ ಈ ಸಂಕಲ್ಪವನ್ನು ಮಾಡಬೇಕು.
ಈ ದಾರವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಹೋಗಿ ನೋಡಿ ಅವತ್ತಿನ ದಿನ ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಲ್ಲ ರೀತಿಯ ಸಂಕಷ್ಟಗಳು ಪ್ರತಿವಾರವೂ ಕಡಿಮೆಯಾಗುತ್ತಾ ಬರುತ್ತದೆ. ಇದನ್ನು ಪ್ರತಿನಿತ್ಯ ಜೇಬಿನಲ್ಲಿ ಇಟ್ಟುಕೊಂಡು ಹೋದರೆ ಆ ಶಕ್ತಿ ಕಡಿಮೆ ಆಗುತ್ತದೆ.
ಯಾವುದಾದರೂ ಮುಖ್ಯವಾದ ಕೆಲಸ ಇದ್ದಾಗ ಮನೆಯಲ್ಲಿ ಕಿರಿಕಿರಿ ತೊಂದರೆಗಳಿದ್ದಾಗ ಹೊರಗಡೆ ನಷ್ಟಗಳು ಹೆಚ್ಚಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ಮಾತ್ರ ದೇವರಕೋಣೆಯಿಂದ ಧಾರವನ್ನು ಎತ್ಕೊಂಡು ಸ್ನಾನ ಆದ ನಂತರ ಜೇಬಿನಲ್ಲಿಟ್ಟುಕೊಂಡು ಹೋಗಬೇಕು. ಹೀಗೆ ಮುಖ್ಯವಾದ ದಿನದಂದು ಮಾತ್ರ ಈ ದಾರವನ್ನು ಬಳಸಬೇಕು. ಇದನ್ನು ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಬದಲಾಯಿಸುತ್ತಿರಬೇಕು.
ಈ ರೀತಿ ತಂತ್ರದಿಂದ ನಿಮಗೆ ಸದಾ ಕಾಲ ಗುರುವಿನ ಅನುಗ್ರಹ ಇರುತ್ತದೆ. ಹಳದಿ ಎಂದರೆ ಗುರುವಿನ ಸಂಕೇತ. ಮನೆದೇವರ ಸಂಕಲ್ಪವಾಗುತ್ತದೆ. ಎರಡು ದೇವರ ಅನುಗ್ರಹದಿಂದ ನಿಮಗಿರುವ ಎಲ್ಲಾ ದಾರಿದ್ರ ದೋಷಗಳು ಕಳೆಯುತ್ತದೆ ಹಣಕಾಸಿನ ಸಮಸ್ಯೆ ಕಳೆಯುತ್ತದೆ ನಷ್ಟ ದರಿದ್ರತೆ ಕಲಿಯುವುದರಿಂದ ವಿಶೇಷವಾದಂತಹ ಫಲ ಕೊಡುತ್ತದೆ.