ಈ ಫೋಟೋಗಳು ಮನೆಲಿ ಇದ್ದರೆ ಮೊದಲು ತೆಗೆದುಬಿಡಿ

ನಾವು ಈ ಲೇಖನದಲ್ಲಿ ಇಂತಹ ಫೋಟೋಗಳು ಮನೆಯಲ್ಲಿ ಇದ್ದರೆ ಈಗಲೇ ತೆಗೆದು ಬಿಡಿ . ಎಂದು ಹೇಳಲಾಗಿದೆ . ಈ ಒಂದು ಫೋಟೋ ನಿಮ್ಮ ಮನೆಯಲ್ಲಿ ಇದ್ದರೆ , ಮೊದಲು ತೆಗೆದುಬಿಡಿ . ಇಲ್ಲ ಅಂದರೆ , ಕಷ್ಟಗಳು ತಪ್ಪುವುದಿಲ್ಲ . ಅನ್ನೋ ರಹಸ್ಯ ಮತ್ತು ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಮನೆಯಲ್ಲಿ ನೆಮ್ಮದಿ , ಸಂಪತ್ತು , ಸಮೃದ್ಧಿ ತುಂಬಿರಬೇಕು ಎಂದರೆ, ಮನೆಯ ವಾಸ್ತು ಸರಿಯಾಗಿ ಇರಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆಗಿದೆ .

ಇತ್ತೀಚಿನ ದಿನಗಳಲ್ಲಿ ಎಲ್ಲರೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂಬುದು ನಿಮಗೆ ತಿಳಿದೇ ಇದೆ . ವಾಸ್ತು ಶಾಸ್ತ್ರದ ಕೆಲವು ಮಾರ್ಗಗಳನ್ನು ಅನುಸರಿಸಿದರೆ , ನಿಮ್ಮ ಮನೆಯಲ್ಲಿ ಸಂಪತ್ತಿನ ಕೊರತೆ ಎಂದಿಗೂ ಉಂಟಾಗುವುದಿಲ್ಲ . ವಾಸ್ತು ಶಾಸ್ತ್ರದ ಸಲಹೆಗಳನ್ನು ಅನುಸರಿಸಿಕೊಂಡು ನೆಮ್ಮದಿಯ ಜೀವನವನ್ನು ಕಂಡುಕೊಳ್ಳಬಹುದು . ವಾಸ್ತು ಶಾಸ್ತ್ರದ ಪ್ರಕಾರ ಕಳ್ಳಿ ಗಿಡದಲ್ಲಿ ಇರುವ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಹೊರ ಸೂಸುತ್ತವೆ.

ಹಾಗಾಗಿ ಮುಳ್ಳುಗಳು ಇರುವ ನಕಾರಾತ್ಮಕ ಶಕ್ತಿ ಹೊಂದಿರುವ ಗಿಡಗಳನ್ನು ಮನೆಯಲ್ಲಿ ಇಡಬಾರದು. ಇದು ಮನೆಯಲ್ಲಿ ವಾಸ ಇರುವ ಜನರ ಮನಸ್ಸಿನಲ್ಲಿ ಆತಂಕ ಮತ್ತು ಉದ್ವೇಗವನ್ನು ಉಂಟು ಮಾಡುತ್ತದೆ . ಇದೇ ಕಾರಣಕ್ಕೆ ಆಗಾಗ ಜಗಳ ಮತ್ತು ಮನಸ್ತಾಪಗಳು ಆಗುತ್ತಿರುತ್ತವೆ. ಮನೆ ಅಥವಾ ಕಚೇರಿಯಲ್ಲಿ ಮಹಾಭಾರತ ಯುದ್ಧ , ಮಹಿಷಾಸುರ ಮರ್ಧನದ ಫೋಟೋ , ರಾಮಾಯಣ ಯುದ್ಧದ ಫೋಟೋ , ಸೇರಿದಂತೆ ಈ ರೀತಿ ಹಿಂಸೆಯನ್ನು ತೋರಿಸುವ ಫೋಟೋಗಳನ್ನು ಇಡಬಾರದು .

ಇದು ಕುಟುಂಬ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ .ಆಗಾಗ ಜಗಳಗಳು ನಡೆಯುತ್ತಲೇ ಇರುತ್ತವೆ . ನಿಮ್ಮ ಮನೆಯಲ್ಲಿ ಯುದ್ಧದ ಫೋಟೋಗಳು ಇದ್ದರೆ ಮೊದಲು ಅವುಗಳನ್ನು ತೆಗೆದುಹಾಕಿ . ಅದೇ ರೀತಿ ಮನೆಯಲ್ಲಿ ಒಡೆದ ಅಥವಾ ಚೂರಾದ ಕನ್ನಡಿ ಇದ್ದರೆ , ಅದು ದುರಾದೃಷ್ಟಕ್ಕೆ ಆಹ್ವಾನ ನೀಡಿದಂತೆ , ಎಂದು ವಾಸ್ತುಶಾಸ್ತ್ರ ಹೇಳುತ್ತದೆ.. ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ . ಆದರೆ ಗಾಜು ಒಡೆದಾಗ ಈ ನಕಾರಾತ್ಮಕ ಶಕ್ತಿಗಳು ಹೊರಗಡೆ ಬಿಡುಗಡೆಯಾಗುತ್ತದೆ

.ಇದು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ . ಇದರಿಂದ ಮನೆಯಲ್ಲಿ ಸಮಸ್ಯೆಗಳು , ಜಗಳ , ಶತ್ರು ಕಾಟಗಳು ಹೆಚ್ಚಾಗುತ್ತವೆ . ಒಡೆದ ಅಥವಾ ಸೀಳಿದ ಕನ್ನಡಿ ಮನೆಯಲ್ಲಿದ್ದರೆ , ಅದನ್ನು ಕೂಡಲೇ ಎಸೆಯಿರಿ . ಒಡೆದ ಫೋಟೋಗಳನ್ನು ಅಥವಾ ಮುಕ್ಕಾದ ದೇವರ ಮೂರ್ತಿಗಳನ್ನು ಮನೆಯಲ್ಲಿ ಎಂದಿಗೂ ಇಡಬಾರದು . ಅಂತ ವಾಸ್ತು ಶಾಸ್ತ್ರ ಹೇಳುತ್ತದೆ . ಭಗ್ನಗೊಂಡಿರುವ ವಿಗ್ರಹಕ್ಕೆ ಎಂದಿಗೂ ಪೂಜೆ ಮಾಡಬಾರದು . ದೇವರ ವಿಗ್ರಹಗಳು ಭಗ್ನವಾಗಿದ್ದರೆ ,

ಮುಕ್ಕಾಗಿದ್ದರೆ , ಅದರಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ . ಹಾಗಾಗಿ ಇದರಿಂದ ಮನೆಯಲ್ಲಿ ಕಷ್ಟಗಳು ಬರಬಹುದು . ಭಗ್ನ ವಾಗಿರುವ ಫೋಟೋ ಇದ್ದರೆ , ಅದನ್ನು ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಬೇಕು . ತಾಜ್ ಮಹಲ್ ಫೋಟೋ ಅಥವಾ ಪ್ರತಿಕೃತಿಯನ್ನು ಮನೆಯಲ್ಲಿ ಇಡುವುದು ಕೂಡ ಅಶುಭ ಎಂದು ಪರಿಗಣಿಸಲಾಗಿದೆ . ಸಹಜವಾಗಿ ತಾಜ್ಮಹಲ್ ಬಹಳ ಸುಂದರವಾಗಿ ಇದೆ . ಇದು ವಾಸ್ತವವಾಗಿ ಸಹಜಹಾನ್ ತನ್ನ ಪತ್ನಿಗಾಗಿ ನಿರ್ಮಿಸಿದ ಸಮಾಧಿ ಎಂದು ಹೇಳಲಾಗುತ್ತದೆ .

ಹಾಗಾಗಿ ಈ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಶುಭ ಎಂದು ಹೇಳಲಾಗಿದೆ . ಮನೆಯಲ್ಲಿ ಹರಿಯುವ ಜಲಪಾತದ ಚಿತ್ರವನ್ನು ಹಾಕುವುದರಿಂದ , ಆರ್ಥಿಕ ನಷ್ಟ ಉಂಟಾಗುತ್ತದೆ . ಮತ್ತು ಮನಸ್ಸು ಅಸ್ಥಿರವಾಗಿ ಇರುತ್ತದೆ . ಇಂತಹ ಚಿತ್ರವನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ , ಈ ಚಿತ್ರಗಳನ್ನು ಹಾಕುವುದರಿಂದ ಖರ್ಚು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ . ಅಳುತ್ತಿರುವ ಮಗುವಿನ ಫೋಟೋವನ್ನು ಹಾಕುವುದರಿಂದ ,

ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಮಾನಸಿಕ ಒತ್ತಡ ಉಂಟಾಗುತ್ತದೆ . ದುಃಖದ ವಾತಾವರಣ ಸೃಷ್ಟಿಸುವ ಯಾವುದೇ ಚಿತ್ರವನ್ನು ಮನೆಯಲ್ಲಿ ಇಡಬಾರದು . ಮುಳುಗುತ್ತಿರುವ ಹಡಗು ಅಥವಾ ದೋಣಿಯ ಚಿತ್ರವನ್ನು ತಪ್ಪಾಗಿಯೂ ಕೂಡ ನಿಮ್ಮ ಮನೆಯಲ್ಲಿ ಹಾಕಬಾರದು . ಹೀಗೆ ಮಾಡುವುದರಿಂದ , ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ . ಈ ಚಿತ್ರಗಳು ಅಲ್ಲದೆ ಹಾವು, ಪಾರಿವಾಳ , ಕೋತಿ , ಗೂಬೆ , ಕರಡಿ , ಹಂದಿ , ಹುಲಿ , ನರಿ ಇತ್ಯಾದಿ ಪ್ರಾಣಿಗಳ ಕೆಲವು ಚಿತ್ರಗಳನ್ನು ಮನೆಯಲ್ಲಿ ಇಡಬಾರದು .

ವಾಸ್ತು ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಪರ್ವತಗಳ ಚಿತ್ರವನ್ನು ಹಾಕುವುದು ಅಥವಾ ಸೂರ್ಯಾಸ್ತದ ಚಿತ್ರವನ್ನು ಹಾಕುವುದು ಅಶುಭ ಎಂದು ಪರಿಗಣಿಸಲಾಗಿದೆ . ಇಂತಹ ಚಿತ್ರಗಳು ಜೀವನದಲ್ಲಿ ನಿರಾಸೆ ಮತ್ತು ಅವನತಿಯನ್ನು ತರುತ್ತವೆ . ಶಂಖವನ್ನು ಊದುವ ಮೂಲಕ ಭಗವಾನ್ ವಿಷ್ಣು ನಕಾರಾತ್ಮಕತೆಯನ್ನು ನಾಶಪಡಿಸುತ್ತಿದ್ದ , ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಶಂಖವನ್ನು ಊದಲು ಮತ್ತು ಪೂಜೆ ಮಾಡುವ ಉದ್ದೇಶಗಳಿಗೆ ಬಳಸುತ್ತಾರೆ.

ಎಂದು ವೈಧಿಕ ಗ್ರಂಥಗಳಲ್ಲಿ ಹೇಳಿದ್ದಾರೆ. ಅಲ್ಲದೇ ಮನೆಯಲ್ಲಿ ಪ್ರತೀ ದಿನ ಪೂಜಾ ಸಮಯದಲ್ಲಿ ಶಂಖವನ್ನು ಊದಿದರೆ ಹೃದಯ ಸಂಬಂಧಿ ರೋಗಗಳಿಂದ ನಾವು ಪಾರಾಗಬಹುದು ಎಂದು ಹೇಳಲಾಗಿದೆ. ನೀವು ಶಂಖವನ್ನು ಮನೆಗೆ ತರಬೇಕು ಎಂದರೆ, ಕನಿಷ್ಠ ಎರಡು ಶಂಖಗಳನ್ನು ಮನೆಗೆ ತೆಗೆದುಕೊಂಡು ಬನ್ನಿ . ಅವುಗಳನ್ನು ಪ್ರತ್ಯೇಕವಾಗಿ ಇಡಬೇಕು.

ಊದಲು ಬಳಸುವ ಶಂಖಕ್ಕೆ ನೀರು ಅಥವಾ ಯಾವುದೇ ಧಾರ್ಮಿಕ ಪಠಣಗಳನ್ನು ಮಾಡಬಾರದು. ಇದನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಪೂಜೆಗಾಗಿ ತಂದ ಶಂಖವನ್ನು ಗಂಗಾ ಜಲದಿಂದ ಶುದ್ದಿ ಮಾಡಬೇಕು . ಹಾಗೂ ಆ ಶಂಖವನ್ನು ಪವಿತ್ರ ಬಿಳಿ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಪೂಜೆ ಮಾಡುವ ಶಂಖವನ್ನು ಊದುವ ಶಂಖಕ್ಕಿಂತ ಸ್ವಲ್ಪ ಮೇಲೆ ಇಡಬೇಕು . ಈ ರೀತಿಯಾಗಿ ಕೆಲವೊಂದು ನಿಬಂಧನೆಗಳನ್ನು ತಿಳಿಸಿಕೊಡಲಾಗಿದೆ .

Leave a Comment