ನಾವು ಈ ಲೇಖನದಲ್ಲಿ ಋತುಚಕ್ರದ ಸಮಯದಲ್ಲಿ ಯಾಕೆ ಮಹಿಳೆಯರನ್ನು ಸ್ಪರ್ಶ ಕೂಡ ಏಕೆ ಮಾಡಬಾರದು ಎಂದು ತಿಳಿಯೋಣ . ಋತು ಚಕ್ರದ ಸಮಯದಲ್ಲಿ ಯಾವ ರೀತಿಯ ಕಾರ್ಯಗಳನ್ನು ಮಾಡಬಾರದು . ಒಂದು ಬಾರಿ ತಾಯಿ ಲಕ್ಷ್ಮಿ ದೇವಿ ಭಗವಂತನಾದ ವಿಷ್ಣು ಕ್ಷೀರ ಸಾಗರದಲ್ಲಿ ಶೇಷ ನಾಗನ ಮೇಲೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಆಗ ದೇವಿ ಭಗವಂತನಿಗೆ ಒಂದು ಪ್ರಶ್ನೆ ಮಾಡುತ್ತಾರೆ. ಇಂದು ನನ್ನ ಮನಸ್ಸಿನಲ್ಲಿ ಒಂದು ಗೊಂದಲ ಸೃಷ್ಟಿಯಾಗಿದೆ. ಕೇವಲ ನೀವು ಮಾತ್ರ
ಈ ಗೊಂದಲ ದೂರ ಮಾಡಲು ಸಾಧ್ಯ . ಪ್ರಿಯೆ ನಿನ್ನ ಮನಸ್ಸಿನಲ್ಲಿ ಏನೇ ಗೊಂದಲ ಇದ್ದರೂ , ನಿಸ್ಸಂಕೋಚವಾಗಿ ಕೇಳು . ನಿನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತೇನೆ . ಹೇ ಪ್ರಭು ಯಾವ ಶಾಪದ ಕಾರಣದಿಂದಾಗಿ ಋತುಚಕ್ರದ ನೋವನ್ನು ಅನುಭವಿಸಬೇಕಾಗುತ್ತದೆ . ಎರಡನೇ ಪ್ರಶ್ನೆ , ಒಬ್ಬ ಋತುಮತಿ ಸ್ತ್ರೀಯರು ಯಾವ ರೀತಿ ಕಾರ್ಯಗಳನ್ನು ಮಾಡಿದರೆ ಪಾಪ ಅಂಟುತ್ತದೆ . ಹೇ ದೇವಿ ಮಾನವ ಜಾತಿಯ ಕಲ್ಯಾಣ ಕೋಸ್ಕರ ತುಂಬಾ ಉತ್ತಮವಾದ ಪ್ರಶ್ನೆಯನ್ನು ಕೇಳಿದ್ದೀರಾ .
ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇರುವ ಉತ್ತರ ದೇವ ಶರ್ಮ ಅವರ ಪ್ರಾಚೀನ ಕಥೆಯಿಂದ ಸಿಗುತ್ತದೆ . ಈ ಮಹಾನ್ ಕತೆಯನ್ನು ಕೇವಲ ಕೇಳಿದರೂ ಕೂಡ, ಎಲ್ಲಾ ಪಾಪಗಳ ನಾಶವಾಗುತ್ತದೆ . ಯಾವ ಗಂಡ – ಹೆಂಡತಿಯರು ಈ ಕಥೆಯನ್ನು ತುಂಬಾ ಗಮನವಿಟ್ಟು ಕೇಳುತ್ತಾರೋ , ಅವರಿಗೆ ಸೌಭಾಗ್ಯದ ಪ್ರಾಪ್ತಿ ಆಗುತ್ತದೆ . ಹಾಗಾಗಿ ದೇವಿ ನೀವು ಸಹ ಈ ಕಥೆಯನ್ನು ಗಮನವಿಟ್ಟು ಕೇಳಿ . ದೇವಿ ಕೇಳುತ್ತಾರೆ ಈ ದೇವ ಶರ್ಮ ಯಾರು ಆಗಿದ್ದರು . ಇವರ ಆಚಾರ ವಿಚಾರಗಳು ಹೇಗಿದ್ದವು .
ನಾನು ಈ ಕಥೆಯನ್ನು ಖಂಡಿತ ಗಮನವಿಟ್ಟು ಕೇಳುತ್ತೇನೆ . ದಯವಿಟ್ಟು ಈ ಕಥೆಯನ್ನು ನನಗೆ ಹೇಳಿ . ಆಗ ವಿಷ್ಣು ಹೇಳುತ್ತಾರೆ . ಪೂರ್ವಕಾಲದ ಮಾತು ಆಗಿದೆ .ಮಧ್ಯ ದೇಶದಲ್ಲಿ ಒಂದು ಸುಂದರವಾದ ನಗರ ಇತ್ತು . ಆ ಊರಿನಲ್ಲಿ ದೇವ ಶರ್ಮ ಹೆಸರಿನ ಒಬ್ಬ ಬ್ರಾಹ್ಮಣ ವ್ಯಕ್ತಿ ಇದ್ದ .ಈತನಿಗೆ ಎಲ್ಲಾ ಶಾಸ್ತ್ರಗಳ ವೇದ ಜ್ಞಾನ ಇತ್ತು .
ಈತ ಪರಮ ಬುದ್ಧಿವಂತ , ಗುಣವಂತ ಮತ್ತು ಧರ್ಮ ಕಾರ್ಯಗಳನ್ನು ಮಾಡುತ್ತಿದ್ದ . ಎಲ್ಲಾ ವರ್ಗದ ಜನರು ಇವರಿಗೆ ತುಂಬಾ ಗೌರವ ಕೊಡುತ್ತಿದ್ದರು . ಇವರು ಪ್ರತಿದಿನ ಯಜ್ಞ, ದಾನ ,ಧರ್ಮ , ಜೊತೆಗೆ ಸಂಧ್ಯಾ ಉಪಾಸನೆ ಮಾಡುತ್ತಿದ್ದರು .
ಇವರು ಖುಷಿ ಪುತ್ರ ಬಂಧು ಬಾಂಧವರಿಗೆ ಜೊತೆಗೆ ಧನ ಸಂಪತ್ತಿನಲ್ಲಿ ಸಿರಿವಂತರು ಆಗಿದ್ದರು .
ದೇವ ಶರ್ಮ ಅವರ ಹೆಂಡತಿಯ ಹೆಸರು ಭಗ್ನ ಆಗಿತ್ತು. ಇವರು ಕೂಡ ಅತ್ಯಂತ ಗುಣವಂತೆ ಮತ್ತು ಪತಿವ್ರತೆ ಸ್ತ್ರೀ ಆಗಿದ್ದಳು . ನಂತರ ಒಂದು ದಿನ ದೇವ ಶರ್ಮ ಅವರು ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಇಟ್ಟರು . ಸ್ವತ : ತಾವೇ ಬ್ರಾಹ್ಮಣರ ಬಳಿ ಹೋಗಿ , ಆಮಂತ್ರಣವನ್ನು ಕೊಡುತ್ತಾರೆ . ಊರಿನಲ್ಲಿ ವಾಸ ಮಾಡುವ ಎಲ್ಲಾ ಜನರಿಗೆ , ಪೂಜೆ ಗೋಸ್ಕರ ಮತ್ತು ಊಟ ಮಾಡಲು ಕರೆಯುತ್ತಾರೆ .
ನಂತರ ಪೂಜೆಯ ದಿನ ಎಲ್ಲಾ ಬ್ರಾಹ್ಮಣರು ಇವರ ಮನೆಗೆ ಬರುತ್ತಾರೆ . ದೇವ ಶರ್ಮ ಅವರು ಎಲ್ಲಾ ವಿಧಿ – ವಿಧಾನಗಳ ರೀತಿ ಪೂಜೆಯನ್ನು ಮಾಡುತ್ತಾರೆ . ಬ್ರಾಹ್ಮಣರನ್ನು ಆದರದಿಂದ ಸತ್ಕಾರ ಮಾಡಿದರು . ನಂತರ ಎಲ್ಲಾ ಬ್ರಾಹ್ಮಣರನ್ನು ತನ್ನ ಮನೆಯ ಒಳಗಡೆ ಕರೆಯುತ್ತಾರೆ . ಸುಂದರವಾದ ಆಸನದ ಮೇಲೆ ಅವರನ್ನು ಕೂರಿಸಿ , ಮೃಷ್ಟಾನ್ನ ಭೋಜನವನ್ನು ಬಡಿಸಿದರು. ಬ್ರಾಹ್ಮಣರು ಊಟ ಮಾಡಿದ ನಂತರ , ಭಗವಂತನನ್ನು ನೆನೆಯುತ್ತ ಎಲ್ಲರಿಗೂ ವಸ್ತ್ರ ದಾನ ಮಾಡಿ ವಿದಾಯ ಹೇಳುತ್ತಾರೆ . ಈ ಎಲ್ಲಾ ಬ್ರಾಹ್ಮಣರು ದೇವ.ಶರ್ಮರಿಗೆ ಆಶೀರ್ವಾದವನ್ನು ಕೊಟ್ಟು ,ಅಲ್ಲಿಂದ ಹೋಗುತ್ತಾರೆ .
ಇದಾದ ನಂತರ ತಮ್ಮ ಕುಟುಂಬದವರಿಗೆ ಬಂಧು ಬಾಂಧವರಿಗೆ , ಹಸಿದ ಜನರಿಗೆ ಊಟವನ್ನು ಮಾಡಿಸುತ್ತಾರೆ . ಪೂಜೆ ಮುಗಿಸಿ ಯಾವಾಗ ಮನೆಯ ಮುಂದೆ ಬಂದು ನಿಲ್ಲುತ್ತಾರೋ , ಆಗ ಅಲ್ಲಿ ಒಂದು ನಾಯಿ ಮತ್ತು ಹಸು ಮಾತನಾಡುವುದನ್ನು ನೋಡುತ್ತಾರೆ . ಈ ಬ್ರಾಹ್ಮಣ ಹಸು ಮತ್ತು ನಾಯಿಯ ಎಲ್ಲ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ . ಅದನ್ನು ಕೇಳಿ ತುಂಬಾ ಅಚ್ಚರಿಗೆ ಒಳಗಾಗುತ್ತಾರೆ . ಆ ನಾಯಿ ಮತ್ತು ಬ್ರಾಹ್ಮಣನ ತಂದೆ ತಾಯಿ ಆಗಿದ್ದರು . ಅವರು ತಮ್ಮ ಹಿಂದಿನ ಜನ್ಮದ ಪಾಪದ ಕಾರಣದಿಂದಾಗಿ , ಈ ಜನ್ಮದಲ್ಲಿ ನಾಯಿ ಮತ್ತು ಹಸು ಆಗಿದ್ದರು . ಆಗ ಆ ಬ್ರಾಹ್ಮಣ ಮನಸ್ಸಿನಲ್ಲಿಯೇ ಯೋಚನೆ ಮಾಡುತ್ತಾ ,
ಇವರಿಬ್ಬರೂ ಸಾಕ್ಷಾತ್ ನನ್ನ ತಂದೆ ತಾಯಿಯರೇ ಆಗಿದ್ದರು . ಇವರು ನನ್ನ ಮನೆಗೆ ಪಶುಗಳಾಗಿ ಬಂದಿದ್ದಾರೆ . ಯಾವ ಕಾರಣದಿಂದಾಗಿ ಇವರಿಗೆ ಪ್ರಾಣಿಯ ಶರೀರ ಸಿಕ್ಕಿದೆ . ಇವರ ಉದ್ಧಾರಕ್ಕಾಗಿ ನಾನು ಏನು ಮಾಡಬಹುದು . ಇದರ ಬಗ್ಗೆ ಯೋಚನೆ ಮಾಡುತ್ತಾ, ಬ್ರಾಹ್ಮಣನಿಗೆ ಇಡೀ ರಾತ್ರಿ ನಿದ್ದೆ ಬರುವುದಿಲ್ಲ . ರಾತ್ರಿ ಇಡೀ ಭಗವಂತನನ್ನು ನೆನೆಯುತ್ತಾ ಯೋಚನೆ ಮಾಡುತ್ತಾ , ನನ್ನ ತಂದೆ ತಾಯಿಯ ಮುಕ್ತಿಗೆ ಉಪಾಯವನ್ನು ಕೇವಲ ಮುನಿ ವಶಿಷ್ಟರು ಮಾತ್ರ ಹೇಳಲು ಸಾಧ್ಯ ಎಂದು ತಿಳಿಯುತ್ತದೆ. ಹಾಗಾಗಿ ಮುಂಜಾನೆ ಆಗುತ್ತಿದ್ದಂತೆ , ದೇವ ಶರ್ಮ ಅವರು ಸ್ನಾನಾದಿಗಳನ್ನು ಮುಗಿಸಿ ,
ಮುನಿ ವಶಿಷ್ಟ ಅವರ ಆಶ್ರಮಕ್ಕೆ ಹೋಗಿ ತಲುಪುತ್ತಾರೆ . ಆಶ್ರಮಕ್ಕೆ ಬರುತ್ತಿದ್ದಂತೆ ಮುನಿ ವಶಿಷ್ಟ ಅವರು ದೇವ ಶರ್ಮರನ್ನು ಸ್ವಾಗತಿಸುತ್ತಾರೆ . ವಶಿಷ್ಟರು ಈ ರೀತಿಯಾಗಿ ಹೇಳುತ್ತಾರೆ . ಯಾವ ಕಾರಣದಿಂದ ನಮ್ಮ ಆಶ್ರಮಕ್ಕೆ ಆಗಮಿಸಿದ್ದೀರಾ. ನೀವು ದುಃಖದಲ್ಲಿ ಇರುವುದು ಕಂಡು ಬರುತ್ತಿದೆ . ನಿಮ್ಮ ದುಃಖಕ್ಕೆ ಕಾರಣ ಏನು ಇದೆ . ಹೇ ಮುನಿಗಳೇ ನನ್ನ ನಮಸ್ಕಾರಗಳು . ನಿಮ್ಮ ದರ್ಶನದಿಂದ ನನ್ನ ಜನ್ಮ ಸಾರ್ಥಕವಾಗಿದೆ . ಹೇ ಮುನಿ ಒಡೆಯ ಇಂದು ನಾನು ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದೆ ತಂದಿದ್ದೇನೆ . ದಯವಿಟ್ಟು ನೀವು ನನ್ನನ್ನು ದುಃಖದಿಂದ ಆಚೆ ತೆಗೆದುಕೊಂಡು ಬನ್ನಿ .
ಆಗ ಮುನಿ ಹೇಳುತ್ತಾರೆ. ಹೇ ಬ್ರಾಹ್ಮಣ ಚಿಂತಿಸಬೇಡ. ನಿನ್ನಲ್ಲಿ ಇರುವ ಪ್ರಶ್ನೆಗಳನ್ನು ಕೇಳು . ಖಂಡಿತವಾಗಿ ಸಲಹೆಗಳನ್ನು ಕೊಡುತ್ತೇನೆ . ನಂತರ ದೇವ ಶರ್ಮ ಅವರು ಹೇಳುತ್ತಾರೆ . ಹೇ ಮುನಿಗಳೇ ನಾನು ನನ್ನ ಮನೆಯಲ್ಲಿ ನೆನ್ನೆ ಭಗವಂತನಾದ ವಿಷ್ಣುವಿನ ಪೂಜೆಯನ್ನು ಮಾಡಿದೆ . ನಾನು ಅನೇಕ ಬ್ರಾಹ್ಮಣರಿಗೆ ಹಸಿದವರಿಗೆ ಊಟವನ್ನು ಮಾಡಿಸಿದೆ . ವಿಧಿ ಪೂರ್ವಕವಾಗಿ ಭಗವಂತನ ಪೂಜೆ ಆಯಿತು. ನಂತರ ನನ್ನ ಮನೆಯ ಮುಂದೆ ಒಂದು ನಾಯಿ ಮತ್ತು ಹಸು ಬಂದಿತು . ಇವೆರಡೂ ನನ್ನ ಮನೆಯ ಮುಂದೆ ನಿಂತು ಮಾತನಾಡುತ್ತಿದ್ದವು . ಮೊದಲು ನಾಯಿಯು ಹಸುವಿಗೆ ಈ ರೀತಿಯಾಗಿ ಹೇಳಿತು . ಇಂದು ನನ್ನ ಮಗನ ಮನೆಯಲ್ಲಿ ಬ್ರಾಹ್ಮಣರಿಗೆ ಭೋಜನಕ್ಕಾಗಿ ಯಾವ ಹಾಲನ್ನು ತಂದಿದ್ದರೋ ,
ಒಂದು ಹಾವು ಆ ಪಾತ್ರೆಯಲ್ಲಿ ತನ್ನ ವಿಷಯವನ್ನು ಹಾಕಿತ್ತು . ಅದನ್ನು ನೋಡಿ ನನಗೆ ತುಂಬಾ ಚಿಂತೆಯಾಯಿತು . ಅದೇ ಹಾಲಿನಿಂದ ಆಹಾರವನ್ನು ತಯಾರಿಸಬೇಕಾಗಿತ್ತು . ಎಲ್ಲರೂ ಹಾಲನ್ನು ತಿಂದಿದ್ದರೆ , ಅವರ ಮೃತ್ಯು ಆಗುತ್ತಿತ್ತು . ಹಾಗಾಗಿ ನಾನು ಆ ಪಾತ್ರೆಯಲ್ಲಿ ಇರುವ ಎಲ್ಲಾ ಹಾಲನ್ನು ಕುಡಿದೆ. ಯಾವಾಗ ಅದರ ದೃಷ್ಟಿ ನನ್ನ ಮೇಲೆ ಬಿತ್ತು ಮತ್ತೆ ನನ್ನನ್ನು ತುಂಬಾ ಹೊಡೆದಳು . ಇದರಿಂದ ಶರೀರ ನೋವಿಗೆ ಒಳಗಾಯಿತು . ಹಾಗಾಗಿ ನಾನು ಕುಂಟುತ್ತಾ ಹೋಗುತ್ತಿದ್ದೇನೆ . ನನಗೆ ನೋವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ . ಆ ನಾಯಿಯ ಮಾತನ್ನು ಕೇಳಿದ ಆ ಹಸು ತುಂಬಾ ದುಃಖಕ್ಕೆ ಒಳಗಾಗುತ್ತದೆ .
ನಂತರ ಹಸು ಕೂಡ ತನ್ನ ನೋವನ್ನು ಹೇಳುತ್ತದೆ . ಹೇ ಪ್ರಿಯೆ ನನ್ನ ದುಃಖಕ್ಕೆ ಇರುವ ಕಾರಣವನ್ನು ನಾನು ನಿನಗೆ ಹೇಳುತ್ತೇನೆ . ನಾನು ಪೂರ್ವ ಜನ್ಮನದಲ್ಲಿ ಬ್ರಾಹ್ಮಣನ ತಂದೆ ಆಗಿದ್ದೆ .ಬ್ರಾಹ್ಮಣನು ಎಲ್ಲಾ ಬ್ರಾಹ್ಮಣರಿಗೆ ಆಹಾರವನ್ನು ನೀಡಿದೆ . ಆದರೆ ಈತ ನನ್ನ ಮುಂದೆ ಒಂದು ಹುಲ್ಲನ್ನು ಸಹ ಇಡಲಿಲ್ಲ . ನನಗೆ ನೀರನ್ನು ಸಹ ಕುಡಿಸಲಿಲ್ಲ . ಇದೇ ಕಾರಣದಿಂದ ನನಗೆ ತುಂಬಾ ದುಃಖ ಆಗಿದೆ .ನಂತರ ದೇವ ಶರ್ಮ ಅವರು ಹೇಳುತ್ತಾರೆ . ಈ ರೀತಿಯಾಗಿ ನನ್ನ ತಂದೆ ತಾಯಿಗಳು ನಾಯಿ ಮತ್ತು ಹಸುವಿನ ರೂಪದಲ್ಲಿ ಮಾತನಾಡುತ್ತಿರುವುದು ಕಂಡು ನನಗೆ ತುಂಬಾ ದುಃಖ ಆಯಿತು .
ಪ್ರತಿಕ್ಷಣ ಚಿಂತೆ ನನ್ನನ್ನು ಕಾಡುತ್ತಿದೆ . ನಾನು ಯಾವತ್ತಿಗೂ ಯಾವ ಪಾಪವನ್ನು ಮಾಡಿಲ್ಲ . ನಾನು ಧರ್ಮ ಕಾರ್ಯಗಳನ್ನು ಮಾಡಿದ್ದೇನೆ . ಆದರೂ ಸಹ ನನ್ನ ತಂದೆ ತಾಯಿಗಳು ಈ ರೀತಿಯ ಕಷ್ಟವನ್ನು ಎದುರಿಸುತ್ತಿದ್ದಾರೆ . ಇದೇ ಕಾರಣದಿಂದ ನಾನು ನಿಮ್ಮ ಬಳಿ ಬಂದಿದ್ದೇನೆ . ದಯವಿಟ್ಟು ನೀವು ನಿಮ್ಮ ಯೋಗ ಶಕ್ತಿಯಿಂದ ನನ್ನ ತಂದೆ ತಾಯಿಗೆ ಈ ರೀತಿಯ ದುರ್ಗತಿ ಬಂದಿದೆ ಎಂದು ತಿಳಿಸಿ . ಮತ್ತು ಅವರ ಮುಕ್ತಿಗಾಗಿ ನಾನು ಯಾವ ಕಾರ್ಯವನ್ನು ಮಾಡಬೇಕು . ನಂತರ ಗುರು ವಶಿಷ್ಠ ಅವರು ಧ್ಯಾನವನ್ನು ಮಾಡುತ್ತಾರೆ . ಬ್ರಾಹ್ಮಣನ ತಂದೆ ತಾಯಿಯ ಪೂರ್ವ ಜನ್ಮದ ಕಥೆಯನ್ನು ನೋಡುತ್ತಾರೆ . ನಂತರ ದೇವ ಶರ್ಮ ಅವರಿಗೆ ಹೇಳುತ್ತಾರೆ .
ಹಿಂದಿನ ಜನ್ಮದಲ್ಲಿ ನಿನ್ನ ತಂದೆ ತಾಯಿ ದೊಡ್ಡ ಪಾಪಗಳನ್ನು ಮಾಡಿದ್ದಾರೆ . ಅದೇ ಪಾಪದ ಕಾರಣದಿಂದಾಗಿ ಈ ರೀತಿಯಾಗಿ ಅನುಭವಿಸುತ್ತಿದ್ದಾರೆ .ಆಗ ದೇವ ಶರ್ಮ ಅವರು ಹೇಳುತ್ತಾರೆ .ಯಾವ ಪಾಪದ ಕಾರಣದಿಂದಾಗಿ ಅವರಿಗೆ ಈ ಗತಿ ಬಂದಿದೆ . ವಿಸ್ತಾರವಾಗಿ ದಯವಿಟ್ಟು ತಿಳಿಸಿ . ಹೇ ಬ್ರಾಹ್ಮಣ ದೇವತಾ ನೀನು ಗಮನವಿಟ್ಟು ಕೇಳು . ನಿನ್ನ ತಂದೆಯ ರೂಪದಲ್ಲಿ ಇರುವ ಈ ಹಸು ಹಿಂದಿನ ಜನ್ಮದಲ್ಲಿ ಕುಂಡೀ ನಗರದ ಶ್ರೇಷ್ಠ ಬ್ರಾಹ್ಮಣರು ಆಗಿದ್ದರು . ಇವರು ಒಂದು ದಿನ ಏಕಾದಶ ವ್ರತವನ್ನು ಇಟ್ಟು ಊಟವನ್ನು ಮಾಡಿದರು.
ಏಕಾದಶಿಯ ದಿನ ಇವರು ದಾನ ಧರ್ಮವನ್ನು ಸಹ ಮಾಡಲಿಲ್ಲ . ಇವರು ದ್ವಾರದ ಬಳಿ ಬಂದ ಹಸುಗಳಿಗೆ ಯಾವತ್ತಿಗೂ ಏನನ್ನು ತಿನ್ನಿಸಲಿಲ್ಲ .ಇವರು ತಮ್ಮ ಪಿತ್ರರ ಶ್ರಾದ್ಧವನ್ನು ಕೂಡ ವಿಧಿ ಪೂರ್ವಕವಾಗಿ ಮಾಡಲಿಲ್ಲ .ನಿನ್ನ ತಂದೆಯು ಹಿಂದಿನ ಜನ್ಮದಲ್ಲಿ ಋತುಚಕ್ರದ ಸಮಯದಲ್ಲೂ ಕೂಡ , ನಿನ್ನ ತಾಯಿಯ ಜೊತೆ ಸಂಬಂಧವನ್ನು ಮಾಡಿದ್ದರು . ಇದೇ ಒಂದು ಪಾಪದ ಕಾರಣದಿಂದಾಗಿ ಈ ಜನ್ಮದಲ್ಲಿ ಒಂದು ಹಸುವಿನ ಜನ್ಮ ಸಿಕ್ಕಿದೆ .
ನಿನ್ನ ತಾಯಿಯ ಬಗ್ಗೆ ಹೇಳುವುದಾದರೆ , ಅವರು ಋತುಮತಿ ಆಗಿದ್ದಾಗಲೂ ಆಹಾರವನ್ನು ತಯಾರಿಸಿದ್ದಾರೆ . ಋತು ಚಕ್ರದ ಸಮಯದಲ್ಲಿ ಇವರು ದೇವರ ಪೂಜೆಯನ್ನು ಮಾಡಿದ್ದಾರೆ . ತುಳಸಿ ಗಿಡಕ್ಕೆ ನೀರನ್ನು ಸಹ ಹಾಕಿದ್ದಾರೆ . ಋತುಮತಿ ಆಗಿದ್ದಾಗ ದೇವರಿಗೆ ನೈವೇದ್ಯ ಅರ್ಪಿಸಿದ್ದಾಳೆ . ಈ ಒಂದು ಪಾಪದ ಕಾರಣದಿಂದ ನಿನ್ನ ತಾಯಿಗೆ ಮಹಾ ಪಾಪ ಅಂಟಿದೆ .ಋತುಚಕ್ರದ ಸಮಯದಲ್ಲಿ ಮೂರು ದಿನಗಳ ಕಾಲ ಸ್ತ್ರೀ ಅಪವಿತ್ರವಾಗುತ್ತಾಳೆ . ಋತುಚಕ್ರದ ಸಮಯದಲ್ಲಿ ಸ್ತ್ರೀಯರು ಪೂಜೆಗಳನ್ನು ಮಾಡಬಾರದು . ಈ ಮೂರು ದಿನಗಳಲ್ಲಿ ಸ್ತ್ರೀಯರು ತಮ್ಮ ತಲೆ ಕೂದಲನ್ನು ತೊಳೆಯಬಾರದು .
ಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆ . ಋತುಚಕ್ರದ ಸಮಯದಲ್ಲಿ ಮರ ಗಿಡಗಳನ್ನು ಸ್ಪರ್ಶ ಮಾಡಬಾರದು . ಋತುಚಕ್ರದ ಸ್ತ್ರೀಯರೊಡನೆ ಸಂಬಂಧ ಕೂಡ ಮಾಡಬಾರದು . ಯಾವ ಪುರುಷರು ಋತುಮತಿ ಸ್ತ್ರೀಯರೊಡನೆ ಸಂಬಂಧ ಮಾಡುತ್ತಾರೆಯೋ ಅವರಿಗೆ ಬ್ರಹ್ಮ ಹತ್ಯಯ ಪಾಪ ಅಂಟುತ್ತರೆ. ಯಾರು ಇಂತಹ ಸ್ತ್ರೀಯರ ಬಟ್ಟೆಗಳನ್ನು ಸ್ಪರ್ಶ ಮಾಡುತ್ತಾರೋ , ಅವರಿಂದಲೂ ಪಾಪ ಅಂಟುತ್ತದೆ. ಋತುಮತಿ ಸ್ಮೀಯರ ಶರೀರದಲ್ಲಿ 3 ದಿನಗಳ ಕಾಲ ಬ್ರಹ್ಮ ಹತ್ಯಯ ಪಾಪ ವಾಸ ಮಾಡುತ್ತದೆ. ನಾಲ್ಕನೇಯ ದಿನ ಅವರು ಸ್ನಾನ ಮಾಡಿ ಪವಿತ್ರ ಆಗುತ್ತಾರೆ .
ನಾಲ್ಕನೇ ದಿನ ಸ್ನಾನ ಮಾಡಿದ ನಂತರ ತನ್ನ ಗಂಡನ ಮುಖವನ್ನು ನೋಡಬೇಕು. ಬೇರೆ ಪುರುಷರ ಮುಖವನ್ನು ನೋಡಬಾರದು . ಒಂದು ವೇಳೆ ಗಂಡ ಹತ್ತಿರ ಇಲ್ಲ ಅಂದರೆ, ಸೂರ್ಯ ದೇವರ ದರ್ಶನ ಮಾಡಬೇಕು . ವಶಿಷ್ಟರು ಈ ರೀತಿ ಹೇಳುತ್ತಾರೆ . ಇದೇ ಪಾಪದ ಕಾರಣದಿಂದ ನಿನ್ನ ತಂದೆಗೆ ಹಸು ಮತ್ತು ನಿನ್ನ ತಾಯಿಗೆ ನಾಯಿಯ ಜನ್ಮ ಸಿಕ್ಕಿದೆ . ನನ್ನ ತಂದೆ ತಾಯಿಯ ಪಾಪಕ್ಕೆ ಮುಕ್ತಿ ಸಿಗಲು ಯಾವುದಾದರೂ ಉಪಾಯ ಇದ್ದರೆ, ತಿಳಿಸಿ . ಹೇ ಬ್ರಾಹ್ಮಣ ನೀನು ಯಾವುದಾದರೂ ಅಮಾವಾಸ್ಯೆಯ ದಿನ ನಿನ್ನ ತಂದೆ ತಾಯಿಯ ಮುಕ್ತಿಗೋಸ್ಕರ ಶ್ರಾದ್ಧ ಮತ್ತು ದರ್ಪಣವನ್ನು ಮಾಡು .
ಜೊತೆಗೆ ದಾನ ಧರ್ಮಗಳನ್ನು ಮಾಡು . ಹಸುವಿನ ಸೇವೆಯನ್ನು ಮಾಡು . ಗೋಮಾತೆಗೆ ಮೃಷ್ಟಾನ್ನವನ್ನು ತಿನ್ನಿಸು . ಮತ್ತು ನಿನ್ನ ತಂದೆ ತಾಯಿಯ ಮುಕ್ತಿ ಗೋಸ್ಕರ ಭಗವಂತನಲ್ಲಿ ಪ್ರಾರ್ಥನೆ ಮಾಡು . ನಂತರ ಬ್ರಾಹ್ಮಣರು ಅದೇ ರೀತಿಯಾಗಿ ಮಾಡುತ್ತಾರೆ . ತಂದೆ ತಾಯಿಗೆ ಮುಕ್ತಿ ಕೂಡ ಸಿಗುತ್ತದೆ . ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಗೆ ಹೇಳುತ್ತಾರೆ . ಹೇ ದೇವಿ, ಋತುಮತಿ ಸ್ತ್ರೀಯರು ಯಾವ ರೀತಿಯ ಕಾರ್ಯಗಳನ್ನು ಮಾಡಬಾರದು ಎಂದು ನಾನು ನಿನಗೆ ತಿಳಿಸಿದ್ದೇನೆ .
ನಾನು ನಿನಗೆ ಸ್ತ್ರೀಯರು ಯಾಕೆ ಋತುಮತಿ ಆಗುತ್ತಾರೆ . ಯಾಕೆ ತೊಂದರೆ ಕೊಡುತ್ತೇನೆ . ಸತ್ಯ ಯುಗದಲ್ಲಿ
ಕಾಲಕೇಯ ಹೆಸರಿನ ಪ್ರಸಿದ್ಧ ದಾನವ ರಕ್ಷಸ ಇದ್ದ . ಈತನ ಸ್ವಭಾವ ಉಗ್ರವಾಗಿತ್ತು .ಯುದ್ಧ ಮಾಡಲು ಈತ ಮುಂದೆ ಇರುತ್ತಿದ್ದ . ನಂತರ ಈ ದಾನವ ರಾಕ್ಷಸ ಕೆಲವು ರಾಕ್ಷಸರೊಡನೆ ಸೇರಿ ದೇವಲೋಕದ ಒಡನೆ ದಾಳಿಯನ್ನು ನಡೆಸುತ್ತಾನೆ . ಈ ಅಸುರರ ಬಳಿ ಭಯಂಕರವಾದ ಶಸ್ತ್ರಗಳು ಇದ್ದವು. ಇವುಗಳಿಂದ ದೇವತೆಗಳಿಗೆ ಎದುರಿಸಲು ಸಾಧ್ಯವಾಗಲಿಲ್ಲ . ನಂತರ ಬ್ರಹ್ಮದೇವರ ಬಳಿ ಓಡಿ ಹೋಗುತ್ತಾರೆ . ನಂತರ ಬ್ರಹ್ಮದೇವರು ಆಸುರರನ್ನು ಸೋಲಿಸುವ ಉಪಾಯವನ್ನು ದೇವತೆಗಳಿಗೆ ತಿಳಿಸುತ್ತಾರೆ .
ಇಲ್ಲಿ ಬ್ರಹ್ಮದೇವರು ಇಂದ್ರ ದೇವರಿಗೆ ಹೇಳುತ್ತಾರೆ. ಹೇ ಇಂದ್ರ ನೀನು ಈಗಲೇ ಮಹರ್ಷಿಗಳ ಬಳಿ ಹೋಗು. ಅವರು ತಮ್ಮ ಶರೀರದ ಎಲಬುಗಳಿಂದ ಶಸ್ತ್ರಗಳನ್ನು ನೀಡುತ್ತಾರೆ . ಅದೇ ಅಸ್ತ್ರಗಳನ್ನು ಬಳಸಿಕೊಂಡು , ನೀವು ರಾಕ್ಷಸರನ್ನು ಕೊಲ್ಲಬಹುದು . ನಂತರ ಎಲ್ಲಾ ದೇವತೆಗಳು ಮಹರ್ಷಿ ದಧೀತಿಗಳ ಆಶ್ರಮಕ್ಕೆ ಹೋಗುತ್ತಾರೆ . ಅವರಲ್ಲಿ ಪ್ರಾರ್ಥನೆ ಮಾಡಿ . ಅಸ್ತ್ರಗಳನ್ನು ಕೇಳುತ್ತಾರೆ .ನಂತರ ಮಹರ್ಷಿಗಳು ಜಗತ್ತಿನ ಕಲ್ಯಾಣ ಗೋಸ್ಕರ ತಮ್ಮ ಶರೀರದ ಮೂಳೆಯಿಂದ ಅಸ್ತ್ರ ಶಸ್ತ್ರಗಳನ್ನು ನೀಡುತ್ತಾರೆ .
ಅಸ್ತ್ರಗಳಲ್ಲಿ ಒಂದು ವಜ್ರದ ಹೆಸರಿನ ಶಸ್ತ್ರ ಇರುತ್ತದೆ. ಇದನ್ನು ದೇವರಾಜ ಇಂದ್ರ ಅವರು ಧರಿಸುತ್ತಾರೆ . ನಂತರ ಎಲ್ಲಾ ದೇವತೆಗಳು ಆ ರಾಕ್ಷಸರೊಡನೆ ಯುದ್ಧ ಮಾಡಲು ಹೊರಡುತ್ತಾರೆ . ದೇವತೆಗಳು ಮತ್ತು ದಾನವರ ನಡುವೆ ದೊಡ್ಡದಾದ ಯುದ್ಧ ನಡೆಯುತ್ತದೆ . ಎಲ್ಲಾ ದೇವತೆಗಳು ರಾಕ್ಷಸರೊಡನೆ ಯುದ್ಧ ಮಾಡಲು ಆಕಾಶದಲ್ಲಿ ಬರುತ್ತಾರೆ. ಅಗ್ನಿ ದೇವರು ತಮ್ಮ ಅಗ್ನಿಯನ್ನು ಪ್ರಯೋಗ ಮಾಡಿ, ರಾಕ್ಷಸರ ಮೇಲೆ ದಾಳಿಯನ್ನು ನಡೆಸುತ್ತಾರೆ . ಅಗ್ನಿಯ ಪ್ರಭಾವದಿಂದ ರಾಕ್ಷಸರ ಅಂಗಾಂಗಗಳೆಲ್ಲ ಸುಡುತ್ತವೆ .
ನಂತರ ವರುಣ ದೇವರು ಮಳೆಯನ್ನು ಸುರಿಸಿ , ರಾಕ್ಷಸರನ್ನು ಮುಳುಗಿಸುತ್ತಾರೆ . ಅನೇಕ ದಿನಗಳ ಪ್ರಕಾರ ದೇವತೆ ಮತ್ತು ರಾಕ್ಷಸರ ನಡುವೆ ಯುದ್ಧ ನಡೆಯುತ್ತವೆ. ನಂತರ ದೇವರಾಜ ಇಂದ್ರ ಮತ್ತು ಮೃತರಾಸುರ ಒಬ್ಬರ ನಡುವೆ ಒಬ್ಬರು ಹೊಡೆದಾಡಲು ಬರುತ್ತಾರೆ. ಇಬ್ಬರ ನಡುವೆ ಯುದ್ಧ ನಡೆಯುತ್ತದೆ . ನಂತರ ದೇವರಾಜ ಇಂದ್ರ ಅವರು ತಮ್ಮ ವಜ್ರಾಯುಧದಿಂದ ಆ ರಾಕ್ಷಸನ ಮೇಲೆ ದಾಳಿ ನಡೆಸುತ್ತಾರೆ.
ನಂತರ ಈ ರಾಕ್ಷಸನ ಮೃತ್ಯು ಆದಂತೆ , ಆತನ ಶರೀರದಿಂದ ಬ್ರಹ್ಮ ಹತ್ಯ ಆಚೆ ಬರುತ್ತಾಳೆ. ನಂತರ ಇಂದ್ರ ದೇವರನ್ನು ಬೆನ್ನಟ್ಟುತ್ತಾಳೆ. ನಂತರ ಬ್ರಹ್ಮ ಹತ್ಯ ಇಂದ್ರನ ಶರೀರವನ್ನು ಪ್ರವೇಶ ಮಾಡುತ್ತಾಳೆ . ಇದರಿಂದ ಇಂದ್ರ ದೇವರಿಗೆ ಬ್ರಹ್ಮ ಹತ್ಯಯ ಪಾಪ ಅಂಟುತ್ತದೆ . ನಂತರ ದೇವರಾಜ ಇಂದ್ರರು ಬ್ರಹ್ಮದೇವರ ಬಳಿ ಹೋಗುತ್ತಾರೆ . ಬ್ರಹ್ಮ ಹತ್ಯಯಿಂದ ಮುಕ್ತಿಗೊಳಿಸಲು ಅವರ ಹತ್ತಿರ ಬೇಡಿಕೊಳ್ಳುತ್ತಾರೆ . ಆಗ ಬ್ರಹ್ಮ ದೇವರು ಇಂದ್ರ ದೇವನ ಶರೀರ ದಿಂದ ಬ್ರಹ್ಮ ಹತ್ಯಯನ್ನು ಆಚೆ ಬರಲು ಹೇಳುತ್ತಾರೆ. ನಂತರ ಬ್ರಹ್ಮ ಹತ್ಯ, ಇಂದ್ರ ಶರೀರದಿಂದ ಆಚೆ ಬಂದು, ಬ್ರಹ್ಮ ದೇವರಿಗೆ ಈ ರೀತಿ ಹೇಳುತ್ತಾಳೆ .ಇಲ್ಲಿಯ ತನಕ ನಾನು ಹಸುವಿನ ಶರೀರದಲ್ಲಿ ವಾಸ ಮಾಡುತ್ತಿದ್ದೆ .ಯಾಕೆಂದರೆ ಆತ ಅನೇಕ ಬ್ರಹ್ಮ ಹತ್ಯಗಳನ್ನು ಮಾಡಿದ್ದ .
ಯಾವಾಗ ಇಂದ್ರ ದೇವರು ಆತನ ವಧೆಯನ್ನು ಮಾಡಿದರು .ನಂತರ ನಾನು ಇಂದ್ರ ದೇವರ ಶರೀರದಲ್ಲಿ ವಾಸ ಮಾಡಲು ಶುರು ಮಾಡಿದೆ. ಈಗ ನೀವೇ ನನಗೆ ಸರಿಯಾದ ಸ್ಥಾನ ನೀಡಿ. ನಂತರ ಬ್ರಹ್ಮದೇವರು ಹೇಳುತ್ತಾರೆ . ಹೇ ಬ್ರಹ್ಮ ಹತ್ಯ ನಾನು ನಿನಗೆ ಸರಿಯಾದ ಸ್ಥಾನವನ್ನು ಕೊಡುತ್ತೇನೆ .ನಂತರ ಬ್ರಹ್ಮ ದೇವರು ಬ್ರಹ್ಮ ಹತ್ಯಳನ್ನು ನಾಲ್ಕು ಭಾಗಗಳಾಗಿ ಮಾಡಿದರು. ನಂತರ ಹೇ ಬ್ರಹ್ಮ ಹತ್ಯ ನಿನ್ನ ಒಂದು ಭಾಗ ಅಗ್ನಿಯಲ್ಲಿ ಇರುತ್ತದೆ . ಯಾವ ಮನುಷ್ಯರು ಅಗ್ನಿಗೆ ಆಹುತಿಯನ್ನು ಕೊಡುವುದಿಲ್ಲವೋ , ನೀನು ಅವರ ಶರೀರದಲ್ಲಿ ಪ್ರವೇಶ ಮಾಡು . ನಿನ್ನ ಎರಡನೇ ಭಾಗ ನೀರಿನ ಒಳಗಡೆ ಇರುತ್ತದೆ . ಯಾರು ನೀರಿನಲ್ಲಿ ಹುಗಿಯುತ್ತಾರೋ , ಮಲಮೂತ್ರದ ತ್ಯಾಗ ಮಾಡುತ್ತಾರೋ , ಅವರ ಶರೀರದಲ್ಲಿ ಪ್ರವೇಶ ಮಾಡು .
ಮೂರನೇ ಭಾಗ ಮರ-ಗಿಡಗಳು ವೃಕ್ಷದಲ್ಲಿ ಇರುತ್ತದೆ . ಯಾವ ಮನುಷ್ಯರು ಕಾರಣವಿಲ್ಲದೆ ವೃಕ್ಷವನ್ನು ಕತ್ತರಿಸುತ್ತಾರೋ , ಅವರಿಗೂ ಸಹ ಬ್ರಹ್ಮ ಹತ್ಯ ಪಾಪ ಹಂಟುತ್ತದೆ . ನಂತರ ಬ್ರಹ್ಮದೇವರು ಅಪ್ಸರೆಯನ್ನು ಕರೆಯುತ್ತಾರೆ . ಈ ಬ್ರಹ್ಮ ಹತ್ಯಯ 4ನೇ ಭಾಗವನ್ನು ತೆಗೆದುಕೊಳ್ಳಿ . ಹೇ ಪ್ರಭು ನಿಮ್ಮ ಆಜ್ಞೆಯ ಮೇಲೆ ನಾವು ಸ್ವೀಕರಿಸಲು ತಯಾರಾಗಿದ್ದೇವೆ . ಆದರೆ ನಮಗೂ ಸಹ ಇದರ ಮುಕ್ತಿಯ ಯಾವುದಾದರು ಉಪಾಯ ತಿಳಿಸಿ . ನಂತರ ಬ್ರಹ್ಮದೇವರು ಹೇಳುತ್ತಾರೆ . ಹೇ ಅಪ್ಸರೆಯರೇ ಯಾವ ಪುರುಷರು ಋತು ಮತಿಯ ಸ್ತ್ರೀಯರೊಡನೆ ಸಂಬಂಧ ಮಾಡುತ್ತಾರೋ , ಅವರ ಒಳಗಡೆ ಈ ಬ್ರಹ್ಮ ಹತ್ಯ ಪ್ರವೇಶ ಮಾಡುತ್ತಾಳೆ .
ಈ ರೀತಿಯಾಗಿ ಬ್ರಹ್ಮತ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಯಿತು . ಒಂದು ಭಾಗ ಅಗ್ನಿ , ಇನ್ನೊಂದು ಭಾಗ ನೀರು , ಮೂರನೆಯದು ಮರ-ಗಿಡಗಳಲ್ಲಿ , ನಾಲ್ಕನೆಯದು ಸ್ತ್ರೀಯರ ಒಳಗಡೆ , ಪ್ರವೇಶ ಮಾಡಿತು . ಇದೇ ಬ್ರಹ್ಮ ಹತ್ಯದ ಕಾರಣದಿಂದಾಗಿ ಸ್ತ್ರೀಯರಿಗೆ ಋತುಚಕ್ರ ಬರುತ್ತದೆ . ಯಾವ ಪುರುಷರು ಋತುಚಕ್ರದ ಸಮಯದಲ್ಲಿ ಸ್ತ್ರೀಯರನ್ನು ಸ್ಪರ್ಶ ಮಾಡುತ್ತಾರೋ , ಅಥವಾ ಅವರೊಡನೆ ಸಂಬಂಧ ಮಾಡುತ್ತಾರೋ , ಆ ವ್ಯಕ್ತಿಗೆ ಬ್ರಹ್ಮ ಹತ್ಯ ಪಾಪ ಅಂಟುತ್ತದೆ .
ಆಗ ವಿಷ್ಣು ಹೇಳುತ್ತಾರೆ . ಹೇ ದೇವಿ ಈ ರೀತಿಯಾಗಿ ನಾನು ನಿನಗೆ ಋತುಮತಿ ಸ್ತ್ರೀಯರ ಬಗ್ಗೆ ತಿಳಿಸಿದ್ದೇನೆ . ಅವರು ಯಾವ ಕಾರ್ಯಗಳನ್ನು ಮಾಡಬಾರದು ಎಂದು ತಿಳಿಸಿದ್ದೇನೆ . ಆಗ ದೇವಿ ಲಕ್ಷ್ಮಿ ಹೇಳುತ್ತಾರೆ . ಹೇ ಪ್ರಭು ಇಂದು ನನಗೆ ಮಹತ್ವಪೂರ್ಣವಾದ ಜ್ಞಾನವನ್ನು ಕೊಟ್ಟಿದ್ದೀರಾ . ನಾನು ನಿನಗೆ ಒಂದು ಮಾತನ್ನು ಕೊಡುತ್ತೇನೆ . ಯಾವ ಸ್ತ್ರೀಯರು ಋತುಚಕ್ರದ ಸಮಯದಲ್ಲಿ ಪೂಜೆಯನ್ನು ಮಾಡುತ್ತಾರೋ , ಗಂಡನ ಜೊತೆ ಸಂಬಂಧ ಇಡುತ್ತಾರೋ , ಅವರ ಮನೆಯ ಒಳಗಡೆ ನಾನು ಪ್ರವೇಶ ಮಾಡುವುದಿಲ್ಲ .