ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಯಾವ ರೀತಿಯ ವೃಕ್ಷದ ಬಗ್ಗೆ ತಿಳಿಸುತ್ತೇವೆಂದರೆ ಈ ಸಸ್ಯ ಮನೆಯಲ್ಲಿದ್ದರೇ ಮನೆಯ ಸದಸ್ಯರೆಲ್ಲರಿಗೂ ಏಳಿಗೆ ಆಗುತ್ತದೆ. ಸಮಾಜದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ. ಮನೆಯಲ್ಲಿರುವ ಸದಸ್ಯರು ಹಲವಾರು ಪಾಪಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಈ ಸಸ್ಯ ಮನೆಯಲ್ಲಿರುವುದರಿಂದ ಒಳ್ಳೆಯ ಲಾಭಗಳು ಸಿಗುತ್ತವೆ.
ಈ ವೃಕ್ಷ ಮನೆಯಲ್ಲಿರುವುದರಿಂದ ಸಮಾಜದಲ್ಲಿ ಗೌರವ ಮತ್ತು ಘನತೆ ಸಿಗುವುದರ ಜೊತೆಗೆ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೇ ಅವರು ಕೂಡ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಮನೆಯಲ್ಲಿ ಶಾಂತಿಯು ವಾಸ ಮಾಡುತ್ತದೆ. ಇದನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ನಾವೆಲ್ಲರೂ ತುಳಸಿ ಗಿಡವನ್ನು ಪೂಜನೀಯವೆಂದು ತಿಳಿಯಲಾಗಿದೆ. ವಿಷ್ಣುವಿಗೆ ತುಳಸಿಯನ್ನ ಅರ್ಪಿಸುತ್ತೇವೆ. ತುಳಸಿ ಗಿಡಕ್ಕೆ ನೀರನ್ನು ಹಾಕುವುದರಿಂದ ಸುಖ ಸಂಮೃದ್ಧಿಯ ಪ್ರಾಪ್ತಿಯಾಗುತ್ತದೆಯೋ, ಇಚ್ಛೆಗಳು ಈಡೇರುತ್ತವೆಯೋ ಅದೇ ರೀತಿ ಬಿಲ್ವಪತ್ರೆ ಮರವು ಕೂಡ ತುಂಬಾ ವಿಶೇಷವಾದ ಮಹತ್ತ್ವವನ್ನು ಹೊಂದಿದೆ. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದರಿಂದ ಮನಸ್ಸಿನ ಎಲ್ಲಾ ಇಚ್ಛೆಗಳು ಪೂರ್ಣವಾಗುತ್ತವೆ.
ಬಿಲ್ವಪತ್ರೆಯ ಮರವನ್ನು ನಿಮ್ಮ ಮನೆಯ ಹತ್ತಿರ ನೆಡುವುದರಿಂದ ಒಳ್ಳೆಯದು ಆಗುತ್ತದೆ. ಬಿಲ್ವಪತ್ರೆ ಮರವನ್ನು ತುಂಬಾ ಕಡಿಮೆ ಮನೆಗಳಲ್ಲಿ ನೋಡಿರುತ್ತೀರ. ಏಕೆಂದರೆ ಈ ವಿಷಯದ ಬಗ್ಗೆ ಹಲವಾರು ಜನರಿಗೆ ಗೊತ್ತೇ ಇರುವುದಿಲ್ಲ. ಇದರ ಬಗ್ಗೆ ಶಿವಪುರಾಣದಲ್ಲಿ ಹೇಳಿದ್ದಾರೆ. ಇದರ ಎಲೆಗಳು ಶಿವನಿಗೆ ಅತೀ ಪ್ರಿಯವಾಗಿರುತ್ತವೆ. ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಕೆಲವು ವಿಷಯಗಳು ಇರುತ್ತವೆಯೋ ಕೆಲವು ಮುಖ್ಯವಾದ ನಿಯಮಗಳು
ಇರುತ್ತವೆ. ಬಿಲ್ಪಪತ್ರೆ ಎಲೆಯನ್ನು ದೇವಾಲಯ ಶಿವಲಿಂಗಕ್ಕೂ ಅರ್ಪಿಸಬಹುದು ಮತ್ತು ನಿಮ್ಮ ಮನೆಯಲ್ಲಿರುವ ಶಿವಲಿಂಗಕ್ಕೂ ಅರ್ಪಿಸಬಹುದು. ಬಿಲ್ವಪತ್ರೆ ಎಲೆಗಳನ್ನು ತೊಳೆದು ಪುನಃ ಅರ್ಪಿಸಬಹುದು. ಇದರಿಂದ ಯಾವ ರೀತಿಯ ನಷ್ಟವಾಗುವುದಿಲ್ಲ. ಈ ಎಲೆಗಳು ಒಣಗಿ ಹಾಳಾಗುವುದಿಲ್ಲವೋ ಅಲ್ಲಿಯವರೆವಿಗೂ ಶಿವನಿಗೆ ಅರ್ಪಿಸಬಹುದು.
ಬಿಲ್ವ ಪತ್ರೆ ಎಲೆಗಳನ್ನು ಅಷ್ಟಮಿ, ಅಮಾವಾಸ್ಯೆ, ಹುಣ್ಣಿಮೆ ಮತ್ತು ಸೋಮವಾರದ ದಿನ ಬಿಲ್ವಪತ್ರೆ ಎಲೆಗಳನ್ನು ಕತ್ತರಿಸಬಾರದು. ಈ ಎಲೆಗಳಿಂದ ಪ್ರತಿದಿನ ಪೂಜೆ ಮಾಡುತ್ತಿದ್ದರೆ ರವಿವಾರವೇ ತೆಗೆದುಕೊಂಡು ಇಟ್ಟುಕೊಳ್ಳಬೇಕು. ಇದೇ ರೀತಿ ದ್ವಾದಶಿ ರವಿವಾರದ ದಿನ ಬೀಳುತ್ತದೆಯೋ ಆ ದಿನ ಬಿಲ್ವಪತ್ರೆಯ ಮರದ ಕೆಳಗೆ ದೀಪವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನಸ್ಸಿನ ಆಸೆಗಳು ಈಡೇರುತ್ತವೆ.
ಹಣಕಾಸಿನ ಸಮಸ್ಯೆಗಳು ಬಹಳ ಬೇಗ ದೂರವಾಗುತ್ತವೆ. ಮನುಷ್ಯನಿಗೆ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ. ಶಿವನಿಗೆ ಬಿಲ್ವಪತ್ರೆಯನ್ನು ಮನೆಯ ಸದಸ್ಯರೆಲ್ಲರೂ ಅರ್ಪಿಸುವುದರಿಂದ ಹಲವಾರು ಪಾಪಗಳು ಕಳೆದು ಮನೆಯಲ್ಲಿ ಶಾಂತಿ, ಸಂಮೃದ್ಧಿ ಉಂಟಾಗುತ್ತದೆ. ಯಾವ ಸ್ಥಳದಲ್ಲಿ ಬಿಲ್ವಪತ್ರೆಯ ಮರವಿರುತ್ತದೆಯೋ ಆ ಸ್ಥಾನ ಕಾಶೀತೀರ್ಥಕ್ಕೆ ಸಮಾನವಾಗಿ ಪೂಜನೀಯವಾಗುತ್ತದೆ.
ಇಂತಹ ಕ್ಷೇತ್ರಕ್ಕೆ ಹೋಗುವುದರಿಂದ ಅಕ್ಷಯಪುಣ್ಯದ ಪ್ರಾಪ್ತಿಯು ಆಗುತ್ತದೆ. ಸ್ನೇಹಿತರೇ ನೀವಾನಾದರೂ ನಿಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟರೇ ಹಲವಾರು ತಂತ್ರಸಮಸ್ಯೆಗಳಿಂದ ಮುಕ್ತಿಯೂ ಸಿಗುತ್ತದೆ. ನಿಮ್ಮ ಇಡೀ ಮನೆ ಕೆಟ್ಟ ದೃಷ್ಟಿಗಳಿಂದ ಉಳಿಯುತ್ತದೆ. ಇಂತಹ ಮರಗಳಿಂದ ಮನೆಯ ಸದಸ್ಯರಲ್ಲಿ ಸಾಮರಸ್ಯದ ಮನೋಭಾವನೆ ಹೆಚ್ಚಾಗುತ್ತದೆ. ಈ ವೃಕ್ಷವನ್ನು ನಿಮ್ಮ ಮನೆಗೆ ಯಾವ ಸಮಯ,
ಯಾವ ದಿನದಲ್ಲಾದರೂ ನಿಮ್ಮ ಮನೆಗೆ ತಂದು ನೆಡಬಹುದಾಗಿದೆ. ಈ ಸಸ್ಯವನ್ನು ನಿಮ್ಮ ಮನೆಯ ಉತ್ತರ ಪಶ್ಚಿಮ ದಿಕ್ಕು ಅಂದರೆ ವಾಯುವ್ಯ ದಿಕ್ಕಿನಲ್ಲಿ ನೆಟ್ಟರೇ ಸಮಾಜದಲ್ಲಿ ಗೌರವ ಘನತೆ ಹೆಚ್ಚಾಗುತ್ತದೆ. ಒಂದು ವೇಳೆ ಉತ್ತರ ದಿಕ್ಕು ಮತ್ತು ದಕ್ಷಿಣ ದಿಕ್ಕಿನಲ್ಲಿ ನೆಟ್ಟರೇ ಇದರಿಂದ ಮನೆಯಲ್ಲಿ ಸುಖಶಾಂತಿ ಹೆಚ್ಚಾಗುತ್ತದೆ ಮತ್ತು ಹಣದ ಸಮಸ್ಯೆ ದೂರವಾಗುತ್ತದೆ. ಒಂದು ವೇಳೆ ಈ ವೃಕ್ಷವನ್ನು ಮನೆಯ ಮಧ್ಯಭಾಗದಲ್ಲಿ ಬೆಳೆಸಿದರೇ ಇದರಿಂದ ನಿಮ್ಮ ಜೀವನವು ಚೆನ್ನಾಗಿರುತ್ತದೆ.