ಗಂಡು-ಹೆಣ್ಣು ಎರಡು ಈ ಸೃಷ್ಟಿಯ ಅವಿಭಾಗ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ. ಇಂತಹ ಒಂದು ಬಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗಿನ ಕಾಲದಲ್ಲಿ ಈ ಮದುವೆಗೆ ಅರ್ಥವೇ ಇಲ್ಲದಂತಾಗಿದೆ ಪ್ರೀತಿಸಿ ಮದುವೆಯಾದರು ಅಥವಾ ಅರೆಂಜ್ ಮ್ಯಾರೇಜ್ ಆದರೂ ಕೇವಲ ನಾಲ್ಕು ದಿನದ ಆಟ ಅನ್ನುವಂತಾಗಿದೆ.
ಇದಕ್ಕೆ ಪೂರಕ ಎನ್ನುವ ಹಾಗೆ ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುತ್ತಾರೆ. ಈ ರೀತಿ ಆಗುವುದು ಯಾಕೆ ಗೊತ್ತಾ ಎನ್ನುವುದನ್ನು ನಾವಿಲ್ಲಿ ತಿಳಿಯೋಣ. ಜಗತ್ತು ಎನ್ನುವುದು ಒಂದು ವಿಸ್ಮಯ ಜಗತ್ತಿನ ಸೃಷ್ಟಿಯಲ್ಲಿ ಭಾಗವಾದ ಮಾನವ ಜನ್ಮ ಕೂಡ ಒಂದು ಅದ್ಭುತವೇ ಈ ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ನೈಸರ್ಗಿಕ ಪ್ರಕ್ರಿಯೆ ಎಂದು ಹೇಳಬಹುದು.
ಮನುಷ್ಯ ಜೀವನವನ್ನು ಧರ್ಮಾರ್ಥ ಕಾಮಾ ಮೋಕ್ಷಾಗಳಿಂದ ಪುರುಷಾರ್ಥಗಳಲ್ಲಿ ಅರ್ಥೈಸಲಾಗುತ್ತದೆ. ಸ್ತ್ರೀ ಪುರುಷ ಸಂಬಂಧದ ವಿಷಯದಲ್ಲೂ ಅಷ್ಟೇ ವಿವಾಹಿತರನ್ನು ಅವಿವಾಹಿತರನ್ನು ರಕ್ಷಿಸುವ ಒಂದು ಸಭೆ ಸುಂದರ ಚೌಕಟ್ಟು ವಿವಾಹ ಗಂಡು-ಹೆಣ್ಣು ಈ ಸಂಬಂಧದಲ್ಲಿ ಬದ್ಧರಾಗುವ ಆ ಜೀವನವು ಪರಸ್ಪರ ಮೈತ್ರಿ ನಿಷ್ಠೆ ಪ್ರಾಮಾಣಿಕತೆಗಳನ್ನು ಪಾಲಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡುತ್ತಾರೆ.
ಇದು ಗುರು ಹಿರಿಯರ ಬಂಧು ಮಿತ್ರರ ಕುಲದೇವರ ಮತ್ತು ಅಗ್ನಿಯ ಸಾಕ್ಷಿಯಾಗಿ ನಡೆಯುತ್ತದೆ. ಇವೆಲ್ಲ ಮೂಡನಂಬಿಕೆಗಳಲ್ಲ ಮನಸ್ಸು ಬುದ್ಧಿಗಳಿಂದ ಅಪಾರ ಸಂಸ್ಕಾರವನ್ನು ನೀಡುವಂತಹ ಸಾಂಸ್ಕೃತಿಕ ಬೋಧಕಗಳು ಆದರೆ ಇತ್ತೀಚಿನ ದಿನಗಳಲ್ಲಿ ಗಂಡು-ಹೆಣ್ಣು ಮದುವೆ ಆಗಿ ಕೆಲವು ತಿಂಗಳುಗಳ ಕಾಲ ಅಥವಾ ಕೆಲವು ವರ್ಷಗಳ ಕಾಲ ಚೆನ್ನಾಗಿರುತ್ತಾರೆ ಆನಂತರ ಕಿತ್ತಾಟ ಮನಸ್ತಾಪ ಶುರುವಾಗಿ ಬಿಡುತ್ತದೆ.
ಇದಕ್ಕೆ ಹೆಚ್ಚಾಗಿ ಪುರುಷನು ಇನ್ನು ಬಹಳ ಸಂಗಡ ಮಾಡುವುದೇ ಕಾರಣವಾಗಿರುತ್ತದೆ. ಹೆಚ್ಚಿನ ಗಂಡಸರು ತನ್ನನ್ನು ನಂಬಿ ಬಂದ ಸುಂದರವಾದ ಹೆಂಡತಿ ಇದ್ದರು ಪರಸ್ತ್ರೀ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಆ ಸ್ತ್ರೀ ಗಾಗಿ ತನ್ನ ಹೆಂಡತಿಯನ್ನು ಮೂಲೆಗುಂಪು ಮಾಡುತ್ತಾನೆ. ಆದರೆ ಈ ರೀತಿ ಗಂಡಸರು ಬದಲಾಗಲು ಕಾರಣ ಇದೆ ಹೆಚ್ಚಿನ ಗಂಡಸರಿಗೆ ಒಂದು ವೀಕ್ನೆಸ್ ಇರುತ್ತದೆ.
ಅವರಿಗೆ ಯಾವುದೇ ಒಂದು ವಸ್ತುವಿನ ಮೇಲಿನ ಆಸಕ್ತಿ ಬಹಳ ಬೇಗ ಕಡಿಮೆ ಆಗಿಬಿಡುತ್ತದೆ. ಒಂದು ವಸ್ತು ಬೋರೆನಿಸಿದಾಗ ಬೇರೆ ವಸ್ತುವಿನ ಕಡೆ ಆಕರ್ಷಿಸಲಾಗುತ್ತಾರೆ. ಅದೇ ರೀತಿ ತನ್ನ ಪತ್ನಿಯ ಜೊತೆ ಇದ್ದು ಆಕೆಯ ಜೊತೆ ಸುಖ ಅನುಭವಿಸಿ ಕೊನೆಗೆ ಆತ ಆಕೆಯಿಂದ ಬೋರಾಗಿ ಬೇರೆ ಸ್ತ್ರೀಯ ಸಂಗಡ ಮಾಡುತ್ತಾನೆ. ಇಂತಹ ಪುರುಷರು ಸದಾ ಬದಲಾವಣೆ ಬಯಸುತ್ತಲೇ ಇರುತ್ತಾರೆ.
ಇದು ಕೇವಲ ಗಂಡಸರು ಅಷ್ಟೇ ಅಲ್ಲ ಕೆಲ ಮಹಿಳೆಯರು ಕೂಡ ಇದೇ ರೀತಿಯ ವೀಕ್ನೆಸ್ ಹೊಂದಿರುತ್ತಾರೆ. ಕೆಲವರದು ವೀಕ್ನೆಸ್ ಆದರೆ ಇನ್ನೂ ಕೆಲವರದು ಚಟ ಆಗಿರುತ್ತದೆ. ಈ ರೀತಿ ಮಾಡುವ ಬದಲು ಕಟ್ಟಿಕೊಂಡ ಹೆಂಡತಿ ಅಥವಾ ಗಂಡನನ್ನು ಪ್ರೀತಿಯಿಂದ ನೋಡಿಕೊಂಡರೆ ಅದಕ್ಕಾಗಿ ಅದಕ್ಕಿಂತ ದೊಡ್ಡ ಸ್ವರ್ಗ ಇನ್ನೊಂದಿಲ್ಲ.
ಕೇವಲ ಕ್ಷಣಿಕ ಸುಖಕ್ಕಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಇರುವ ಜೀವನವನ್ನು ತನ್ನನ್ನು ನಂಬಿಕೊಂಡ ತಂದೆ ತಾಯಿ ಮನೆಯವರನ್ನ ಬಿಟ್ಟು ಬಂದ ಹೆಂಡತಿಯನ್ನು ಜೀವನ ಪೂರ್ತಿ ಸುಖವಾಗಿ ನೋಡಿಕೊಂಡರೆ ದೇವರು ಕೂಡ ಮೆಚ್ಚುತ್ತಾನೆ.