ಗಣೇಶನನ್ನು ಮನೆಗೆ ತರುವಾಗ ಈ ಏಳು ನೇಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಹೆಚ್ಚಿನ ಜನರ ಮನೆಯಲ್ಲಿ ಗಣೇಶ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಾರೆ. ಮನೆಯಲ್ಲಿ ಗಣೇಶನನ್ನು ಕೂರಿಸುವ ಮುನ್ನ ನಾವು ಒಂದಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಬೇಕು.
ಪರಿವಾರದೊಂದಿಗೆ ಮಾರುಕಟ್ಟೆಗೆ ಹೋಗಿ ವಿಗ್ರಹವನ್ನು ಖರೀದಿಸಿ ತರಬೇಕು. ಜೊತೆಗೆ ತಾಯಿ ಗೌರಿಯ ಪುಟ್ಟ ವಿಗ್ರಹವನ್ನು ತಂದಿಟ್ಟುಕೊಳ್ಳಬೇಕು. ರಾಸಾಯನಿಕಗಳಿಂದ ತಯಾರಿಸಿದ ವಿಗ್ರಹಗಳನ್ನು ತರಬಾರದು. ಸಂಪ್ರೀತನಾಗಿ ಕುಳಿತಿರುವ ಗಣಪನನ್ನೆ ಮನೆಗೆ ತರಬೇಕು. ನಿಂತಿರುವತವ ನಾಟಿ ಮಾಡುತ್ತಿರುವ ಗಣಪನನ್ನು ತರಬಾರದು. ಬಲಮುರಿ ಗಣಪನನ್ನು ತರಬೇಕು.
ಗಣಪನೊಂದಿಗೆ ಮೂಶಿಕ ಇರಬೇಕು. ಗಣೇಶನನ್ನು ಸ್ಥಾಪಿಸುವ ಮುನ್ನ ಮನೆಯನ್ನು ಶುದ್ಧಗೊಳಿಸಬೇಕು. ಗಣೇಶನ ವಿಗ್ರಹವನ್ನು ಸ್ಥಾಪಿಸುವ ಸ್ಥಳದಲ್ಲಿ ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಿಸಬೇಕು. ಗಣೇಶನನ್ನು ತೋರಿಸುವಾಗ ಯಾವುದೇ ಧೂಳು, ಕೊಳಕು ಮನೆಯಲ್ಲಿ ಇರಬಾರದು. ಗಣೇಶನ ತರುವಾಗ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಗಣೇಶನನ್ನು ಕೂರಿಸಿಕೊಂಡು ಬರಬೇಕು.
ಮಹಿಳೆಯರು ಗಣಪನಿಗೆ ಆರತಿ ಎತ್ತಿ ಬರಮಾಡಿಕೊಳ್ಳಬೇಕು. ಗಣಪನನ್ನ ತಂದ ಬರಹಣೆಗೆ ತಿಲಕವನ್ನು ಇಡಬೇಕು. ಚೌಕ ಅಥವಾ ಸ್ವಸ್ತಿಕ್ ಚಿನ್ನೆಯನ್ನು ಎಳೆದು ಮಾವಿನ ಎಲೆಯ ಮೇಲೆ ಪೂರ್ವ ಅಥವಾ ಈಶಾನ್ಯ ದಿಕ್ಕಿನೊಳಗೆ ಕೂರಿಸಬೇಕು. ಗಣೇಶನ ಹಬ್ಬದ ವಿಧಿ ವಿಧಾನಗಳು ಗಣೇಶ ನನ್ನ ಶುಭ ಪೀಠದ ಮೇಲೆ ಪ್ರತಿಷ್ಠಾಪಿಸಬೇಕು.
ಪ್ರತಿಷ್ಠಾಪಿಸುವ ಮುನ್ನ ಪಂಚಾಮೃತದಿಂದ ಸ್ನಾನ ಮಾಡಿಸಬೇಕು.
ಗಣೇಶನನ್ನು ಇಡುವ ಜಾಗದಲ್ಲಿ ಗಂಗಾಜಲವನ್ನು ಇಟ್ಟು ಆಸನವನ್ನು ಮಾಡಿ ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಕಿ ವಿಗ್ರಹವನ್ನು ಇಡಬೇಕು. ವಿಗ್ರಹದ ಎರಡು ಬದಿಯಲ್ಲಿ ಒಂದೊಂದು ಎಲೆ ಅಡಿಕೆಯನ್ನು ಇಟ್ಟು ಅದನ್ನು ವೃದ್ದಿ,ಸಿದ್ದಿ ಎಂದು ಪರಿಗಣಿಸಬೇಕು. ಕೇಸರಿ ಚಂದನ ಅಕ್ಷತೆ ಗರಿಕೆ ಹೂವು ಹೀ ಗೆ ಗಣಪನಿಗೆ ಇಷ್ಟವಾಗುವ ವಸ್ತುಗಳಿಂದ ಪೂಜಿಸಬೇಕು.
ಗಣೇಶನನ್ನು ಪ್ರತಿಷ್ಠಾಪಿಸುವವರೆಗೂ ಮನೆಯಲ್ಲಿ ಗಣೇಶ ಸ್ತುತಿ ಗಣೇಶ ಭಜನೆ, ಗಣೇಶ ಚಾಲಿಸ ಶ್ರೀ ಗಣೇಶ ಸಹಸ್ರ ನಾಮಾವಳಿ ಮಾಡುತ್ತಾ, ಗಣೇಶನಿಗೆ ಆರತಿಯನ್ನು ಎತ್ತಬೇಕು. ಸಂಕಟ ನಿವಾರಕ ಗಣೇಶ ಸ್ತೋತ್ರವನ್ನು ಪಠಿಸಬೇಕು. ಗಣೇಶನನ್ನು ವಿಸರ್ಜಿಸುವವರೆಗೂ ಶ್ರದ್ಧಾ ಭಕ್ತಿಯಿಂದ ನಿಯಮಗಳನ್ನು ಪಾಲಿಸಬೇಕು. ಇದರಿಂದ ಗಣಪತಿಗೆ ಖುಷಿಯಾಗಿ ಬೇಡಿದವರಗಳನ್ನು ಈಡೇರಿಸುತ್ತಾನೆ. ಮನೆಯಲ್ಲಿ ಸಂತೋಷ ಶಾಂತಿ ಸಮೃದ್ಧಿಯನ್ನು ಬಯಸುವ ಜನ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಇಡಬೇಕೆಂದು ಹೇಳಲಾಗುತ್ತದೆ.
ಬಿಳಿ ಗಣೇಶನ ಫೋಟೋವನ್ನು ಇಟ್ಟು ಪೂಜಿಸಬಹುದು. ಸ್ವ ಬೆಳವಣಿಗೆಯನ್ನು ಬಯಸುವವರು ಸಿಂಧೂರ ಬಣ್ಣದ ಗಣಪತಿಯನ್ನು ಮನೆಗೆ ತರಬೇಕು. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಗಣೇಶನ ವಿಗ್ರಹವನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಮುನ್ನ ಅನುಸರಿಸಬೇಕಾದ ನಿಯಮಗಳು. ಹಸಿರು ಹಳದಿ ಮತ್ತು ಕೆಂಪು ಬಣ್ಣದ ಗಣೇಶನ ವಿಗ್ರಹವನ್ನು ಮನೆಗೆ ತರಬೇಕು.
ಹಸಿರು ಬಣ್ಣದ ವಿಗ್ರಹದಿಂದ ಸಮೃದ್ಧಿ ಹೆಚ್ಚಾಗುತ್ತದೆ. ಉತ್ತಮ ದಾಂಪತ್ಯ ಜೀವನಕ್ಕೆ ಸುಖಕಾಗಿ ಹಳದಿ ಬಣ್ಣದ ವಿಗ್ರಹವನ್ನು ಇಡಬೇಕು. ಗಣೇಶನ ವಿಗ್ರಹವನ್ನು ಈಶಾನ್ಯ ಉತ್ತರ ಅಥವಾ ಪೂರ್ವ ದಿಕ್ಕಿಗೆ ಕುರಿಸಬೇಕು. ಮನೆ ಅಥವಾ ಕಚೇರಿಯಲ್ಲಿ ಆಗಲಿ ದಕ್ಷಿಣ ನೈರುತ್ಯ ಆಗ್ನೇಯ ದಿಕ್ಕಿನಲ್ಲಿ ಕೂರಿಸಬಾರದು. ವಿಗ್ರಹದ ಗಾತ್ರ 9 ಇಂಚು ಅಥವಾ ಅದಕ್ಕಿಂತಲೂ ಹೆಚ್ಚಿರಬೇಕು.
ವಿಗ್ರಹವನ್ನು ಹಳದಿ ಬಣ್ಣದಲ್ಲಿ ಅಲಂಕಾರ ಮಾಡಬೇಕು. ಗಣೇಶನ ಮುಂದೆ ನೀರು ತುಂಬಿದ ಕಳಸವನ್ನು ಇಡಬೇಕು. ಗಣೇಶನ ವಿಗ್ರಹವನ್ನು ಮನೆಯ ಹೊರಭಾಗಕ್ಕೆ ಎದುರಾಗಿರುವ ರೀತಿಯಲ್ಲಿ ಇರಿಸಬೇಕು.
ವಿಗ್ರಹವನ್ನು ಅಡುಗೆಮನೆ ವಾಶ್ರೂಮ ಅಥವಾ ಶೌಚಾಲಯಕ್ಕೆ ಹೊಂದಿಕೊಂಡ ಗೋಡೆಯ ಬಳಿ ಇಡಬಾರದು.
ಗಣೇಶನ ವಿಗ್ರಹವು ಕುಳಿತುಕೊಳ್ಳುವ ಬಂಗಿಯಲ್ಲಿ ಇರಿಸಬೇಕು.
ಇದರಿಂದ ಗಣೇಶನು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾನೆ. ಪೆಂಡಲ್ಗಳಲ್ಲಿ ಇಡುವಾಗ ಅದು ನಿಂತಿರುವ ವಿಗ್ರಹವಾದರೂ ಸಮಸ್ಯೆ ಇಲ್ಲ. ಯಾವುದೇ ಕಾರಣಕ್ಕೂ ಮೆಟ್ಟಿಲುಗಳ ಕೆಳಗೆ ಗಣೇಶನ ವಿಗ್ರಹವನ್ನು ಇಡಬಾರದು.
ವಿಗ್ರಹವನ್ನು ವಿಸರ್ಜನೆ ಮಾಡುವವರೆಗೂ ಆತ ನಿಮ್ಮ ಮನೆಯಲ್ಲಿ ಇರುತ್ತಾನೆ. ಆತನನ್ನ ನಿಮ್ಮ ಕುಟುಂಬದಲ್ಲಿ ಒಬ್ಬ ಎಂದು ಪರಿಗಣಿಸಬೇಕು.
ಮೂರು ಬಾರಿ ಆಹಾರವನ್ನು ನೈವೇದ್ಯ ಮಾಡಬೇಕು. ಇದರಲ್ಲಿ ಮೋದಕ ಮತ್ತು ಲಡ್ಡುಗಳು ಇರಲೇಬೇಕು.
ಇನ್ನು ಶಿವ ಪುರಾಣ ಸ್ಕಂದ ಪುರಾಣ ಲಿಂಗ ಪುರಾಣಗಳಲ್ಲಿ ರುದ್ರಾಕ್ಷಿ ಧಾರಣೆ ಮಹತ್ವವನ್ನು ವಿವರಿಸಲಾಗಿದೆ. 14 ಪ್ರಕಾರದ ರುದ್ರಾಕ್ಷಿಗಳಿವೆ ಅವುಗಳಲ್ಲಿ ಗಣೇಶನ ರುದ್ರಾಕ್ಷಿ ಬಹಳ ವಿಶಿಷ್ಟವಾಗಿದೆ. ಇದಕ್ಕೆ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಇದೆ.
ಇದನ್ನು ಧರಿಸುವುದರಿಂದ ನೀವು ಗಣೇಶನ ವಿಶೇಷ ಕೃಪೆಗೆ ಪಾತ್ರರಾಗಬಹುದು. ಗಣೇಶ ರುದ್ರಾಕ್ಷಿ ಧರಿಸಿದವರೊಂದಿಗೆ ಸದಾ ಇದ್ದು ಅವರ ರಕ್ಷಣೆಯನ್ನು ಮಾಡುತ್ತಾನೆ. ಈ ರುದ್ರಾಕ್ಷಿಣ್ಯ ಸಂಕಷ್ಟಿ ದಿನ ಧರಿಸಬೇಕು. ಗಣೇಶ ಚತುರ್ಥಿ ಎಂದು ಧಾರಣೆ ಮಾಡಿದರೆ ಬಹಳ ಶುಭ ಕಾರಕ. ಹಬ್ಬದ ದಿನದಲ್ಲಿ ವಿಗ್ರಹದ ಬಾಳಿ ರುದ್ರಾಕ್ಷಿ ಪೂಜೆ ಮಾಡಿದರು ಒಳ್ಳೆಯದಾಗುತ್ತದೆ. ಗಣೇಶ ರುದ್ರಾಕ್ಷಿಯಲ್ಲಿ ಗಣೇಶನ ಸೊಂಡಿಲ ಆಕಾರವು ಮೂಡಿರುವಂತೆ ಇರುತ್ತದೆ.