ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ. ಮನೇಲಿ ಮುತ್ತೈದೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಮೊದಲನೆಯದಾಗಿ ಸಂಜೆ ವೇಳೆಗೆ ಬಟ್ಟೆಗಳನ್ನು ಒಗೆಯಬಾರದು. ಸಂಜೆ ವೇಳೆಯಲ್ಲಿ ಮಹಾಲಕ್ಷ್ಮಿಯ ಪ್ರವೇಶದ ಕಾಲವಾದ್ದರಿಂದ ಆ ಸಮಯದಲ್ಲಿ ಬಟ್ಟೆ ಒಗೆಯುವುದು ಸೂಕ್ತವಲ್ಲ. ಮಹಿಳೆಯರು ಉದ್ದವಾಗಿ ಉಗುರುಗಳನ್ನು ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದರ ಜೊತೆಗೆ ತಾಯಿ ಲಕ್ಷ್ಮಿದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗೆ ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ.
ಮಹಿಳೆಯರು ಹೆಚ್ಚು ಹೊತ್ತು ನಿದ್ರಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಯಾವುದೇ ಕೆಲಸ ಕೈ ಹಾಕಿದ್ರು ಕೂಡ ಯಶಸ್ಸು ಲಭಿಸುವುದಿಲ್ಲ.
ಮಂಗಳವಾರ ಹಾಗೂ ಶುಕ್ರವಾರದ ದಿನ ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಕೆಲವರು ಜೀವನದಲ್ಲಿ ಮಾನಸಿಕವಾಗಿನೊಂದು ಯಾವಾಗಲೂ ಕಣ್ಣೀರು ಹಾಕುತ್ತಾರೆ. ಆದರೆ ಇದು ಮನೆಗೆ ಶ್ರೇಯಸ್ಸಲ್ಲ.
ತಪ್ಪದೇ ನಿಮ್ಮ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ. ಎಷ್ಟೋ ಜನರ ಮನೆಯಲ್ಲಿ ತುಳಸಿ ಪೂಜೆಯನ್ನು ಮಾಡುವುದಿಲ್ಲ ಇದು ತಪ್ಪು.
ತಪ್ಪದೇ ಮುತ್ತೈದೆಯರು ತುಳಸಿ ಪೂಜೆಯನ್ನು ಮಾಡಬೇಕು. ಹೆಣ್ಣು ಮಕ್ಕಳು ಕೂದಲನ್ನು ಕಟ್ಟದೆ ಪೂಜೆಯನ್ನು ಮಾಡಬಾರದು. ಇದರಿಂದ ಪೂಜೆಯ ಫಲ ಸಿಗುವುದಿಲ್ಲ. ಹಾಗಾಗಿ ಮಡಿಯಿಂದ ಪೂಜೆ ಮಾಡಬೇಕು. ಯಾವುದೇ ಶುಭ ಸಮಾರಂಭಗಳಿಗೆ ಹೋಗುವಾಗ ಅಥವಾ ಮನೆಯಲ್ಲಿ ಇರುವಾಗಲೂ ಕೂಡ ಮುತ್ತೈದೆಯರು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇಂತಹ ತಪ್ಪುಗಳನ್ನು ಮುತ್ತೈದೆಯರು ಮಾಡದೇ ಲಕ್ಷ್ಮಿಯನ್ನು ನಿಮ್ಮ ಮನೆಗೆ ಆಹ್ವಾನಿಸಿಕೊಳ್ಳಿ.ಹಿಂದೂ ಧರ್ಮದಲ್ಲಿ ಅಲಂಕಾರಕ್ಕೆ ಹೆಚ್ಚಿನ ಮಹತ್ತ್ವವಿದೆ.
ಅದರಲ್ಲೂ ಮುತ್ತೈದೆಯರು 16 ರೀತಿಯ ಅಲಂಕಾರವನ್ನು ಮಾಡಿಕೊಳ್ಳಬೇಕು ಅಂತ ಹೇಳಲಾಗುತ್ತದೆ. ಕೈಗೆ ಬಳೆ, ಹಣೆಗೆ ಕುಂಕಮ, ಹಸ್ತಕ್ಕೆ ಮದರಂಗಿ ಹಾಗೆ ಕಾಲಿಗೆ ಅರಗಿಣ ಬಣ್ಣವನ್ನು ಹಚ್ಚಿಕೊಳ್ಳುವ ಸಂಪ್ರದಾಯವಿದೆ. ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಬಳೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಾತಿ, ಮತ, ಬೇಧವಿಲ್ಲದೆ ಎಲ್ಲ ಹೆಣ್ಣುಮಕ್ಕಳು ಕೂಡ ಬಳೆ ಧರಿಸುತ್ತಾರೆ. ಆದರೆ ನಿಮ್ಮ ಬಳೆಗಳನ್ನು ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಬಿಟ್ಟು ಅಕ್ಕಪಕ್ಕದ ಹೆಣ್ಣು ಮಕ್ಕಳಿಗೆ ಬಿಟ್ಟು ಅಕ್ಕಪಕ್ಕದ ಹೆಣ್ಣು ಮಕ್ಕಳಿಗೆ ಅಥವಾ ಗೆಳತಿಯರಿಗೆ ನೀಡಬಾರದು. ಹೆಣ್ಣು ಮಕ್ಕಳಿಗೆ ಎಷ್ಟು ಒಡವೆ ವಸ್ತ್ರ ಇದ್ದರೂ ಕೂಡ ಇನ್ನು ಬೇಕು ಅಂತ ಅನ್ನಿಸುತ್ತದೆ.
ನಿಮ್ಮ ಬಳಿ ಹೆಚ್ಚು ಒಡವೆ ಅಥವಾ ವಸ್ತ್ರ ಇರೋದನ್ನ ನೋಡಿ ಅಕ್ಕಪಕ್ಕದ ಮನೆಯವರು ತಮಗೂ 1 ದಿನ ಹಾಕಿಕೊಳ್ಳೋದು ಕೊಡಿ ಅಂತ ಕೇಳಬಹುದು. ಆದರೇ ನಿಮ್ಮ ಬಳೆಗಳನ್ನ ಮಾತ್ರ ಎಂದಿಗೂ ತೆಗೆದುಕೊಳ್ಳಬೇಡಿ. ಮನೆಗೆ ಬರುವ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡುವುದು ಹಿಂದೂಗಳ ಸಂಪ್ರದಾಯ.ಆದರೆ ಇಲ್ಲಿ ಕೆಲ ಮಹಿಳೆಯರು ಮಾಡುವ ತಪ್ಪು ಏನು ಅಂದರೆ ತಾವು ಬಳಸುವ ಅರಿಶಿನ ಕುಂಕುಮವನ್ನೇ ಬಂದ ಹೆಣ್ಣು ಮಕ್ಕಳಿಗೂ ಕೂಡ ಕೊಟ್ಟು ಬಿಡುತ್ತಾರೆ. ಆದರೆ ಹೀಗೆ ಮಾಡಬಾರದು. ನೀವು ಗಳಸಲು ಬೇರೆ ಅರಿಶಿಣ ಕುಂಕುಮ ಮತ್ತು ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಕೊಡಲು ಬೇರೆ ಅರಿಶಿನ ಮತ್ತು ಕುಂಕುಮವನ್ನು ಪ್ರತ್ಯೇಕವಾಗಿಟ್ಟುಕೊಳ್ಳಬೇಕು.
ಹಾಗೇ ನೀವು ತಲೆಗೆ ಮುಡಿದ ಹೂವನ್ನು ಬೇರೆಯವರಿಗೆ ಬಿಚ್ಚಿ ಕೊಡಬಾರದು. ಉದಾಹರಣೆಗೆ ನೀವು ಮುಡಿದಂತಹ ಮಲ್ಲಿಗೆ ಹೂವು ಸುಂದರವಾಗಿದ್ದು ನಿಮ್ಮ ಗೆಳತಿ ಅದನ್ನು ನೋಡಿ ಅದರಲ್ಲಿ ಸಣ್ಣ ತುಂಡನ್ನು ಕೊಡು ಅಂತ ಕೇಳಿದರೆ ನೀವು ಅದನ್ನು ಬಿಚ್ಚಿಕೊಡಬಾರದು. ನೀವು ಧರಿಸಿದ ಹೂವಿನ ಮಾಲೆಯಿಂದ ಒಂದು ಹೂವನ್ನು ಕೂಡ ಬೇರೆ ಹೆಣ್ಣು ಮಕ್ಕಳಿಗೆ ನೀಡಿದರೆ ನಿಮ್ಮ ಪುಣ್ಯವೆಲ್ಲ ಅವರಿಗೆ ಹೋಗಿ ಅವರ ಪಾಪವೆಲ್ಲ ನಿಮಗೆ ಬರುತ್ತದೆ. ನೀವು ಬಳಸುವ ಚಿನ್ನ ಮತ್ತು ಬೆಳ್ಳಿ ಸಾಮಾಗ್ರಿಗಳನ್ನ ಸಂಬಂಧಿಕರಿಗೆ ಬಿಟ್ಟು ಬೇರೆ ಯಾರಿಗೂ ಕೊಡಬಾರದು. ಸ್ನೇಹಿತರಿಗೆ ಅಥವಾ ಪರಿಚಯದವರಿಗೆಲ್ಲ ನೀವು ಬಳಸುವ ಚಿನ್ನ ಬೆಳ್ಳಿಯನ್ನು ಕೊಡಬಾರದು.
ಚಿನ್ನವನ್ನು ಲಕ್ಷ್ಮಿ ರೂಪ ಅಂತ ಪರಿಗಣಿಸಲಾಗುತ್ತದೆ. ಬೆಳ್ಳಿಯನ್ನ ಬೆಳಕು ಅಂತ ಹೇಳಲಾಗುತ್ತದೆ. ಹಾಗಾಗಿ ನೀವು ಚಿನ್ನ ಬೆಳ್ಳಿಯನ್ನ ಬೇರೆಯವರಿಗೆ ನೀಡಿದರೆ ನಿಮ್ಮ ಅದೃಷ್ಟ ಮತ್ತು ನಿಮ್ಮ ಮನೆಯ ಬೆಳಕನ್ನು ಬೇರೆಯವರಿಗೆ ಕೊಟ್ಟಂತೆ ಆಗುತ್ತದೆ.ಹಾಗೆ ನೀವು ಬಳಸುವ ಕಾಡಿಗೆಯನ್ನು ಕೂಡ ಬೇರೆಯವರಿಗೆ ನೀಡಬೇಡಿ. ಬೇಕಾದರೆ ಬೇರೆ ಕೊಡುವುದಕ್ಕೆ ಅಂತ ಬೇರೆ ಕಾಡಿಗೆ ಡಬ್ಬವನ್ನು ತಂದಿಡಿ.
ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಕೂಡ ಬರೀ ಹಣೆಯಲ್ಲಿ ಇರಬಾರದು. ಸದಾಕಾಲ ಹಣೆಯಲ್ಲಿ ಕುಂಕುಮವನ್ನು ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಮಹಾಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಕೆಲವು ಹೆಣ್ಣುಮಕ್ಕಳಿಗೆ ಉಗುರುಗಳನ್ನ ಕಡಿಯೋ ಕೆಟ್ಟ ಅಭ್ಯಾಸವಿರುತ್ತದೆ. ಇದು ತಪ್ಪು ಯಾವುದೇ ಕಾರಣಕ್ಕೂ ಉಗುರು ಕಚ್ಚಬಾರದು. ಇದರಿಂದ ಹೆಣ್ಣು ಮಕ್ಕಳಲ್ಲಿ ಸಹನೆ ಕ್ಷೀಣವಾಗುತ್ತದೆ ಅಂತ ಹೇಳಲಾಗುತ್ತದೆ ಹಾಗೂ ದಾರಿದ್ರ ಉಂಟಾಗುತ್ತದೆ. ಉಗುರು ಕಚ್ಚುವುದು ಅಥವಾ ಉಗುರು ಬೆಳೆಸುವುದು ಇಂತಹ ತಪ್ಪುಗಳನ್ನು ಮಾಡಬಾರದು. ಇದು ಆರೋಗ್ಯಕ್ಕೂ ತೊಂದರೆಯಾಗುತ್ತದೆ ಮತ್ತು ಆರ್ಥಿಕವಾಗಿಯೂ ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.