ನಾವು ಈ ಲೇಖನದಲ್ಲಿ ಹನುಮಂತ ಹಾಗೂ ಶನಿಯ ನಡುವೆ ಏನೆಲ್ಲಾ ನಡೆಯುತ್ತದೆ. ಎಂಬ ವಿಷಯದ ಬಗ್ಗೆ ತಿಳಿಯೋಣ . ಸೂರ್ಯ ಸನ್ವಿತ್ವದ ಪ್ರಕಾರ ಹನುಮಂತ ಹುಟ್ಟಿರುವುದು ಶನಿವಾರದ ದಿವಸ . ಹಾಗಾಗಿ ಶನಿವಾರದಂದು ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೋಡಬಹುದು . ಶನಿ ದೇವರು ಕ್ರೂರ ಹಾಗೂ ಶಿಕ್ಷತಾ ಮನೋಭಾವದವರು ಆದರೆ, ಹನುಮನ ಸ್ವಭಾವ ಶಾಂತಿ ಸ್ವಭಾವ . ಹನುಮ ಹಾಗೂ ಶನಿ ಇವರಿಬ್ಬರಲ್ಲೂ ಶಿವನ ಅಂಶ ಇದೆ.
ಶನಿಯಲ್ಲಿ ಶಿವನ ಕಟ್ಟು ನಿಟ್ಟಾದ ಅಂಶ ಇದ್ದರೆ , ಶಿವನ ಶಾಂತಿಯ ಅಂಶ ಹನುಮನಲ್ಲಿ ಇದೆ. ಶನಿವಾರದಂದು ಎಣ್ಣೆ ಅಥವಾ ತೈಲ ವ್ಯಾಪಾರ ಮಾಡುವುದು ಶ್ರೇಯಸ್ಕರವಲ್ಲ ಎಂದು ಹೇಳಲಾಗುತ್ತದೆ. ಆದರೆ ಹನುಮನಿಗೆ ಶನಿವಾರದಂದು ತೈಲ ದಾನ ಮಾಡಿದರೆ, ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು . ಹನುಮನ ವಿಚಿತ್ರ ಮೈಬಣ್ಣಕ್ಕೆ ಶನಿ ಹನುಮನ ಮೇಲೆ ಇಟ್ಟಿದ್ದ ವಕ್ರ ದೃಷ್ಟಿಯೇ. ಕಾರಣ ಎಂದು ಕೂಡ ಹೇಳಲಾಗಿದೆ. ಮತ್ತು ಎಲ್ಲಾ ಗ್ರಹಗಳು ಹನುಮನ ಬಾಲದ ಮುಷ್ಠಿಯಲ್ಲಿ ಇದೆ ಎಂದು ಹೇಳಲಾಗಿದೆ.
ಹಾಗಾಗಿ ಅವನನ್ನು ಹೊಲಿಸಿಕೊಂಡರೆ, ಅಷ್ಟ ಸಿದ್ಧಿ ಪ್ರಾಪ್ತಿಯಾಗುತ್ತದೆ. ರಾಮಾಯಣದಲ್ಲಿ ಹನುಮನಂತೆ ಶನಿ ಕೂಡ ಮುಖ್ಯ ಪಾತ್ರ ವಹಿಸುತ್ತಾನೆ . ರಾವಣ ತಪಸ್ಸು ಮಾಡಿ , ಶಿವ ಹಾಗೂ ಬ್ರಹ್ಮನಿಂದ ಪಡೆದ ವರದಿಂದ ಬಹಳಷ್ಟು ಶಕ್ತಿಶಾಲಿಯಾಗಿ ಇರುತ್ತಾನೆ. ಇದಾದ ಮೇಲೆ ಎಲ್ಲಾ ಗ್ರಹಗಳನ್ನು ತನ್ನ ಸಿಂಹಾಸನದಲ್ಲಿ ಮೆಟ್ಟಿಲುಗಳಾಗಿ ಮಾಡಿಕೊಂಡಿರುತ್ತಾನೆ. ಎಲ್ಲಾ ದೇವತೆಗಳು ಸಂಕಟದಲ್ಲಿ ಇದ್ದಾರೆ, ಎಂದು ಗೊತ್ತಾದಾಗ ಶನಿ ಇದಕ್ಕೆ ಪರಿಹಾರ ಹುಡುಕುವ ಜವಾಬ್ದಾರಿಯನ್ನು ಹೊತ್ತಿ ಕೊಳ್ಳುತ್ತಾನೆ.
ರಾವಣ ಉತ್ತಮ ಜ್ಞಾನಿಯೂ ಆಗಿರುತ್ತಾನೆ. ಹಾಗಾಗಿ ಅವನನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರುವುದಿಲ್ಲ . ಆದಾದ ನಂತರ ರಾವಣನಿಗೆ ಮೇಘನಾಥ ಎಂಬ ಮಗ ಹುಟ್ಟುತ್ತಾನೆ. ಅವನು ಕೂಡ ತನ್ನಂತೆಯೇ ಶಕ್ತಿಶಾಲಿ ಆಗಬೇಕೆಂದು ತನ್ನ ಮಗನ ಜಾತಕದಲ್ಲಿ ಎಲ್ಲಾ ಗ್ರಹಗಳನ್ನು 11ನೇ ಮನೆಯಲ್ಲಿ ಇರಿಸುತ್ತಾನೆ . ಅದಾದ ಮೇಲೆ ಎಲ್ಲಾ ದೇವತೆಗಳು ಶನಿ ಅತ್ತ ತಿರುಗಿ ನೋಡಿದಾಗ ಶನಿ ಮೆಲ್ಲಗೆ 12ನೇ ಮನೆಯ ಒಳಗೆ ಶನಿ ತನ್ನ ಕಾಲು ಚಾಚುತ್ತಾನೆ .
ಆಗ ರಾವಣನಿಗೆ ಇದರಿಂದ ಮೇಘನಾಥನ ಸಾವು ಆಗುತ್ತದೆ ಎಂದು ತಿಳಿಯುತ್ತದೆ . ಇದರಿಂದ ಕೋಪಗೊಂಡ ರಾವಣ ಶನಿಯನ್ನು ಚಿಕ್ಕ ಕತ್ತಲೆಯ ಕೋಣೆಯಲ್ಲಿ ಬಂಧಿಸುತ್ತಾನೆ . ಅದಾದ ಮೇಲೆ ಸೀತೆಯನ್ನು ಹುಡುಕಲು ಬಂದ ಹನುಮಂತನಿಗೆ ಶನಿಯ ಅಳಲು ಕೇಳುತ್ತದೆ . ಇದನ್ನು ಕಂಡು ಹನುಮ ಶನಿಯನ್ನು ಬಿಡಿಸುತ್ತಾನೆ .ಆದರೆ ಶನಿಯ ವಕ್ರ ದೃಷ್ಟಿ ಹನುಮನ ಮೇಲೆ ಬಿದ್ದು ಬಿಡುತ್ತದೆ . ಆಗ ಶನಿ ನನ್ನನ್ನು ಶನಿವಾರದಂದು ಯಾರು ಪೂಜಿಸುತ್ತಾರೆ ಅವರಿಗೆ ನನ್ನ ವಕ್ರ ದೃಷ್ಟಿಯ ಪ್ರಭಾವ ಬೀಳುವುದಿಲ್ಲ ಎಂದು ಮಾತು ಕೊಡುತ್ತಾನೆ .
ಇದಾದ ಮೇಲೆ ಲಂಕಾವನ್ನು ಸುಡುವಾಗ ಹನುಮನಿಗೆ ರಾವಣನ ಆ ಸ್ಥಾನವನ್ನು ಪೂರ್ತಿಯಾಗಿ ಸುಡಲು ಆಗುವುದಿಲ್ಲ. ಆಗ ಶನಿ ತನ್ನ ವಕ್ರ ದೃಷ್ಟಿಯಿಂದ ಚಿನ್ನವನ್ನೆಲ್ಲಾ ಕಪ್ಪಾಗಿಸುತ್ತಾನೆ . ಇದಾದ ಮೇಲೆ ಹನುಮನಿಗೆ ತನ್ನ ಕೆಲಸ ಸುಲಭವಾಗುತ್ತದೆ . ಯುದ್ಧದ ಸಮಯದಲ್ಲಿ ಶನಿ ಹನುಮನ ತಲೆಯ ಮೇಲೆ ಕೂತಿರುತ್ತಾನೆ .ಆಗ ಯುದ್ಧದಲ್ಲಿ ಹನುಮ ತನ್ನ ತಲೆಯಿಂದ ಬಂಡೆಗಳನ್ನು ಮರಗಳನ್ನು ಪುಡಿ ಪುಡಿ ಮಾಡುತ್ತಾನೆ. ಇದರಿಂದ ಶನಿಗೆ ತೀವ್ರವಾದ ರಕ್ತ ಸ್ರಾವ ಆಗುತ್ತದೆ.
ನಂತರ ಶನಿ ಹನುಮನ ತಲೆಯಿಂದ ಕೆಳಗೆ ಇಳಿಯುತ್ತಾನೆ .ಇದನ್ನು ನೋಡಲಾಗದ ಹನುಮ ಶನಿಗೆ ಸಾಸಿವೆ ಎಣ್ಣೆ ಹಚ್ಚಿ ಶನಿಯ ನೋವನ್ನು ಕಡಿಮೆ ಮಾಡುತ್ತಾನೆ .ಆದ್ದರಿಂದ ಶನಿ ದೇವಾಲಯಗಳಲ್ಲಿ ಸಾಸಿವೆ ಎಣ್ಣೆ ನೀಡುವ ಅಥವಾ ಹಚ್ಚುವ ಪದ್ಧತಿ ಇದೆ . ನಂತರ ಶನಿ ಹನುಮನಿಗೆ ಒಂದು ವರ ಕೇಳುವಂತೆ ಹೇಳುತ್ತಾನೆ. ಆಗ ಹನುಮ ನಿನ್ನ ವಕ್ರ ದೃಷ್ಟಿಯಿಂದ ನಿನ್ನ ಭಕ್ತರ ಮೇಲೆ ಯಾವ ಪ್ರಭಾವ ಬೀಳ ಬಾರದು ಎಂದು ಹೇಳುತ್ತಾನೆ. ಹಾಗಾಗಿ ಹನುಮನ ಭಕ್ತರಿಗೆ
ಶನಿಯ ವಕ್ರ ದೃಷ್ಟಿಯ ಪ್ರಭಾವ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. ಮತ್ತೊಂದು ಘಟನೆ ಹನುಮನ ಶಕ್ತಿಯ ಪ್ರಭಾವವನ್ನು ತಿಳಿಸುತ್ತದೆ. ಶನಿ ಒಂದು ಸಲ ಹನುಮನ ಹೆಗಲು ಏರಿ ಕುಳಿತಿರುತ್ತಾನೆ. ಆಗ ಗಾತ್ರದಲ್ಲಿ ಹನುಮ ದೊಡ್ಡದಾಗಿ ಪಕ್ಕದಲ್ಲಿದ್ದ ಗೋಡೆಗೆ ಒರಗುತ್ತಾನೆ. ಇದರ ಮಧ್ಯೆ ಸಿಕ್ಕಿಹಾಕಿಕೊಂಡ ಶನಿ ವಿಪರೀತ ನೋವಿನಿಂದ ಒದ್ದಾಡುತ್ತಾನೆ. ಶನಿ ತನ್ನನ್ನು ಬಿಟ್ಟು ಬಿಡುವಂತೆ ಹನುಮನಲ್ಲಿ ಬೇಡಿಕೊಳ್ಳುತ್ತಾನೆ. ಇದಾದ ನಂತರ ಶನಿ ಯಾವುದೇ ಮನುಷ್ಯನಿಗೆ ನಿನ್ನ ವಕ್ರ ದೃಷ್ಟಿ ಬಿದ್ದರೂ ಅವರು ಪ್ರಾರ್ಥಿಸಿದರೆ, ಸಾಕು ಅವರನ್ನು ಬಿಟ್ಟು ಬಿಡುತ್ತೇನೆ ಎಂದು ಮಾತು ನೀಡುತ್ತಾನೆ. ಆಗ ಹನುಮ ಶನಿಯನ್ನು ಬಿಡುತ್ತಾನೆ. ಹೀಗೆ ಇವರಿಬ್ಬರ ನಡುವೆ ಹಲವಾರು ರೀತಿಯ ಸಂಭಾಷಣೆಗಳು ನಡೆದಿದ್ದವೂ ಎಂದು ಹೇಳಲಾಗಿದೆ.