ನಾವು ಈ ಲೇಖನದಲ್ಲಿ ಹೆಂಡತಿ ಈ ಮೂರು ಕೆಲಸಗಳನ್ನು ಗಂಡನಿಗಾಗಿ ನಾಚಿಕೆ ಪಡದೇ ಏಕೆ ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ . ಪತ್ನಿ ಮೂರು ಕೆಲಸಗಳನ್ನು ಪತಿಗಾಗಿ ನಾಚಿಕೆ ಪಡದೆ ಮಾಡಬೇಕು .
ಸಂತೋಷದ ದಾಂಪತ್ಯ ಜೀವನಕ್ಕಾಗಿ ಪಾಲಿಸಬೇಕಾದ ಕೆಲವು ನಿಯಮಗಳಿವೆ, ಅದರ ಪ್ರಕಾರ ಜೀವನವನ್ನು ನಡೆಸಿದರೆ ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ .
ಗಂಡನಿಗಾಗಿ ಹೆಂಡತಿ ನಾಚಿಕೆ ಇಲ್ಲದೆ ಈ ಮೂರು ಕೆಲಸಗಳನ್ನು ಮಾಡಬೇಕು . ಈ ಕೆಲಸಗಳನ್ನು ಮಾಡಿದರೆ ಸಂಸಾರದಲ್ಲಿ ಎಂದಿಗೂ ಸಮಸ್ಯೆಗಳು ಬರುವುದಿಲ್ಲ .
ಆ ಕೆಲಸಗಳು ಯಾವುವು ಎಂಬುದನ್ನು ನೋಡೋಣ .
ಗಂಡನ ಪ್ರತಿ ಕಷ್ಟದಲ್ಲಿ ಜೊತೆಯಾಗಿ ನಿಲ್ಲಬೇಕು . ಗಂಡನಿಗೆ ಯಾವುದಾದರು ಕಾರಣಕ್ಕೆ ಬೇಸರವಾಗಿದ್ದರೆ ,ಅದನ್ನು ತಿಳಿದುಕೊಂಡು , ಸಂತೈಸಬೇಕು . ಯಾವಾಗ ಗಂಡನ ಜೊತೆ ಎಲ್ಲಾ ಸಮಯದಲ್ಲಿ ಹೆಂಡತಿ ಇರುತ್ತಾಳೋ, ಆಗ ಯಾವುದೇ ಸಮಸ್ಯೆ ಇದ್ದರೂ,
ಎದುರಿಸಬಹುದು.
ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಬಹಳ ಮುಖ್ಯ . ಸಂಸಾರದ ಜಂಜಾಟದ ನಡುವೆ ಒಬ್ಬರಿಗೊಬ್ಬರು ಪ್ರೀತಿ ತೋರಿಸಲು ಮರೆತಿರಬಹುದು. ಆದರೆ ಹೆಂಡತಿ ಯಾವುದೇ ನಾಚಿಕೆ ಇಲ್ಲದೆ ಗಂಡನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬೇಕು . ಆಗ ಸಂಬಂಧ ಇನ್ನು ಗಟ್ಟಿಯಾಗುತ್ತದೆ .
ಹಾಗೆ ನೋಡಿದರೆ ಒಂದು ಸಂಬಂಧದಲ್ಲಿ ಆಗಾಗ ಸಮಸ್ಯೆಗಳು ಆಗುತ್ತದೆ. ಸಣ್ಣ ವಿಚಾರಕ್ಕೆ ಜಗಳ ಆಗಬಹುದು . ಆದರೆ ಅದನ್ನು ಮುಂದುವರಿಸಿಕೊಂಡು ಹೋಗಬಾರದು .
ಸಾಮಾನ್ಯವಾಗಿ ಹೆಣ್ಣಿಗೆ ತಾಳ್ಮೆ ಜಾಸ್ತಿ . ಹಾಗಾಗಿ ಪ್ರತಿ ಮಾತಿಗೂ ಕಾಲು ಕೆದರಿ ಜಗಳ ಮಾಡುವ ಬದಲು ಗಂಡನ ಬಳಿ ಹೋಗಿ ಜಗಳವನ್ನು ಕೊನೆಗೊಳಿಸುವುದು ಮುಖ್ಯ .
ಹಾಗಂತ ಇವೆಲ್ಲವೂ ಬರೀ ಹೆಣ್ಣಿನ ಜವಾಬ್ದಾರಿ ಅಲ್ಲ . ಗಂಡನಾದವನು ಸಹ ಇವೆಲ್ಲವನ್ನು ಮಾಡಬೇಕು. ಮತ್ತು ಪಾಲಿಸಬೇಕು . ಆಗ ಮಾತ್ರ ಸಂಸಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಸುಲಭವಾಗುತ್ತದೆ.