ನಾವು ಈ ಲೇಖನದಲ್ಲಿ, ಕನ್ಯಾ ರಾಶಿಯವರ ,ಯುಗಾದಿಯ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ಕನ್ಯಾ ರಾಶಿಯವರಿಗೆ ಬಹಳ ಅದ್ಭುತ ಫಲಗಳಿವೆ. ಮತ್ತು ಕೆಲವೊಂದು ಎಚ್ಚರಿಕೆಗಳನ್ನು ತಿಳಿದುಕೊಳ್ಳೋಣ. ಗುರು ಈ ವರ್ಷ 8ನೇ ಸ್ಥಾನದಲ್ಲಿ ಇರುತ್ತಾರೆ. ಏಪ್ರಿಲ್ ಕಳೆದ ನಂತರ ,ನಿಮಗೆ ಒಂಬತ್ತನೇ ಗುರುವಾಗಿರುತ್ತಾರೆ. ಅಂದರೆ ನಿಮಗೆ ಸಂಪೂರ್ಣವಾದ ಗುರುಬಲವಿರುತ್ತದೆ. ಬಹಳಷ್ಟು ಅದ್ಭುತವಾದ ಪರಿಣಾಮಗಳು ಉಂಟಾಗುತ್ತದೆ . ಜೀವನದಲ್ಲಿ ಸುಖ ಶಾಂತಿ ನೆಲೆಗೊಳ್ಳುತ್ತದೆ.
ಹಣಕಾಸಿನಲ್ಲಿ ವೃದ್ದಿಯಾಗುತ್ತದೆ. ಉತ್ತಮ ಧನ ಸಂಪಾದನೆಯಾಗುತ್ತದೆ. ಹಿತೈಷಿಗಳಿಂದ ಒಳ್ಳೆಯ ಸಹಕಾರ ಸಿಗುತ್ತದೆ. ಗಣ್ಯ ವ್ಯಕ್ತಿಗಳಿಂದಲೂ, ಕೂಡ ಹೆಚ್ಚಿನ ಸಹಕಾರ ಸಿಗುತ್ತದೆ. ಮೇಲಧಿಕಾರಿಗಳಿಂದ ಉತ್ತಮ ಸಹಕಾರ ಸಿಗುತ್ತದೆ. ಸರ್ಕಾರದ ಸೌಲಭ್ಯಗಳು ಸಹ ಸಿಗುತ್ತದೆ. ಕೆಲವೊಂದು ಸನ್ಮಾನಗಳಿಗೆ ಮನ್ನಣೆ ಸಿಗುತ್ತದೆ. ಗುರು ಹಿರಿಯರಲ್ಲಿ , ಪೂಜ್ಯ ಭಾವನೆ ಇರುತ್ತದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತದ್ದು, ಸಾರ್ವಜನಿಕರಲ್ಲಿ ಪ್ರೀತಿ ಇರುತ್ತದೆ. ಸಮಾಜದಲ್ಲಿ ಒಂದು ಪ್ರತಿಷ್ಠಿತ ಸ್ಥಾನಮಾನ ನಿಮಗೆ ದೊರೆಯುತ್ತದೆ.
ಮಾಡುವ ಕೆಲಸದಲ್ಲಿ ಒಳ್ಳೆಯ ಪ್ರಾಪ್ತಿಯ ಯೋಗವಿದೆ. ನೂತನ ಆಭರಣ, ಮತ್ತು ವಾಹನಗಳು, ಹೊಲ ಮನೆ ,ಆಸ್ತಿ ,ಎಲ್ಲವೂ ಕೈಗೂಡುತ್ತದೆ. ಅಂದುಕೊಂಡ ಅಂತಹ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಇಷ್ಟಾರ್ಥದ ಕಾರ್ಯಗಳು, ಸಿದ್ಧಿಯಾಗುತ್ತದೆ. ಸರ್ವತೋಮುಖ ಅಭಿವೃದ್ಧಿಯನ್ನು ಕಾಣುತ್ತೀರಾ. ಶನಿದೇವನ ಕೃಪೆಯಿಂದ ,ನಿಮಗೆ ಉತ್ತಮ ಫಲಗಳು ದೊರಕುತ್ತದೆ. ಅಂದುಕೊಂಡಂತಹ ಕಾರ್ಯಗಳಲ್ಲಿ ಜಯ , ಮತ್ತು ಯಶಸ್ಸನ್ನು ಪಡೆಯುತ್ತೀರಾ. ಆದರೂ ಸಹ ಕೆಲವೊಂದು ಎಚ್ಚರಿಕೆಗಳನ್ನು ನೀವು ವಹಿಸಬೇಕಾಗುತ್ತದೆ.
ಮಿಶ್ರಫಲಗಳ ಸನ್ನಿವೇಶಗಳಿದ್ದರೂ , ಸಹ ಹೆಚ್ಚಿಗೆ ಶುಭ ಫಲಗಳನ್ನೇ ಪಡೆಯುತ್ತೀರಾ. ವ್ಯಾಪಾರ ಮತ್ತು ಉದ್ಯೋಗಗಳು, ಬರದಿಂದ ಸಾಗುತ್ತದೆ. ಶತ್ರುಗಳು ಈ ಕಾಲದಲ್ಲಿ ನಿಮಗೆ ಹಿತೈಷಿಗಳಾಗುತ್ತಾರೆ. ಕೋರ್ಟು ಮತ್ತು ಕಚೇರಿಯ ವ್ಯಾಜ್ಯಗಳಲಿ, ನಿಮಗೆ ಜಯ ಲಭಿಸುತ್ತದೆ. ಗಣ್ಯ ವ್ಯಕ್ತಿಗಳಿಂದ ,ನಿಮಗೆ ಮಾನ ಮನ್ನಣೆ ಸಿಗುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಸಾರ್ವಜನಿಕರಲ್ಲಿ , ಪ್ರೀತಿ ವಿಶ್ವಾಸ ಇಟ್ಟುಕೊಂಡು ಜನ ಮನ್ನಣೆ ಪಡೆಯುತ್ತೀರಾ.
ಕಲ್ಯಾಣ ಕಾರ್ಯಗಳಿಗೆ ನಿಮ್ಮ ಸೇವೆಯನ್ನು ಸಲ್ಲಿಸುತ್ತೀರಾ. ದುಷ್ಟ ಜನರಿಂದ ಸ್ವಲ್ಪ ದೂರವಿರುವುದು ಒಳ್ಳೆಯದು . ಮನೆಯಲ್ಲಿ ದ್ವೇಷ ಅಸೂಯೆಯಿಂದ , ದೃತಿಗೆಡುವ ಸಂದರ್ಭವಿರುತ್ತದೆ ಅದರ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸಿ. ಇರುವಂತಹ ಹಣಕಾಸನ್ನು ಉಳಿಸಿಕೊಳ್ಳುವ , ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಇರಬೇಕು. ಬಂಧು ಬಾಂಧವರಿಂದ ,ಹೆಚ್ಚಿಗೆ ಸಹಕಾರ ಸಿಗುತ್ತದೆ. ನೀವು ಕೆಲಸ ಮಾಡುವ ಜಾಗದಲ್ಲಿ ಮೇಲಾಧಿಕಾರಿಗಳಿಂದ, ಒತ್ತಡದ ಅನುಭವವಿರುತ್ತದೆ. ಅದನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಸ್ನೇಹದಿಂದ ಎಲ್ಲರನ್ನು ನಿಭಾಯಿಸಿ . ಮತ್ತು ತಾಳ್ಮೆ ಎಚ್ಚರಿಕೆಯನ್ನು ವಹಿಸಿ.
ವಿಶೇಷವಾಗಿ ವ್ಯಾಪಾರಸ್ಥರು ನಿಮ್ಮ ಹೊಸ ವಿಚಾರಗಳನ್ನು, ಮತ್ತು ಹೂಡಿಕೆ ಮಾಡುವಾಗ, ಅದರಲ್ಲಿ ನುರಿತ ವ್ಯಕ್ತಿಗಳಿಂದ, ಅಭಿಪ್ರಾಯವನ್ನು ,ತೆಗೆದುಕೊಂಡು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ದಾಸ್ತಾನು ,ಮತ್ತು ಇನ್ನಿತರ ಕೆಲಸಗಳಿಗೆ ಏಪ್ರಿಲ್ 30ರ ನಂತರ ಮಾಡಿಕೊಂಡರೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ವ್ಯಾಪಾರಿ ಉದ್ಯೋಗಿಗಳಿಗೆ ಒಳ್ಳೆಯ ಧನ ಲಾಭವಿದೆ. ಆದರೆ ಅದರಷ್ಟೇ, ಅಧಿಕ ಖರ್ಚು ಸಹ ಇರುತ್ತದೆ. ಖರ್ಚಿನ ಮೇಲೆ ಕಡಿವಾಣವನ್ನು ಹಾಕಿ. ಸಮಾಧಾನದಿಂದ, ಮುನ್ನಡೆಯುವಂತಹ , ಸನ್ನಿವೇಶ ವ್ಯಾಪಾರಸ್ಥರಲ್ಲಿ ಕಾಣುತ್ತದೆ.
ಕೃಷಿಕರು ಹೆಚ್ಚಿನ ಶ್ರಮವನ್ನು ಪಟ್ಟರೆ ಒಳ್ಳೆಯ ಫಲಗಳನ್ನು ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಈ ವರ್ಷದಲ್ಲಿ ನಿಮಗೆ ಗುರುವಿನಿಂದ ,ಮತ್ತು ಶನಿದೇವನ ಕೃಪೆಯಿಂದ ಅದ್ಭುತ ಲಾಭಗಳು ಸಿಗುತ್ತದೆ. ಹಾಗೆಂದು ಎಲ್ಲವೂ ಅದ್ಭುತವಾಗಿದೆ .ಎಂದು ಭಾವಿಸಬೇಡಿ .ಜೊತೆಗೆ ಕೆಲವೊಂದು ಎಚ್ಚರಿಕೆಗಳನ್ನು, ಪಾಲಿಸಬೇಕಾಗುತ್ತದೆ. ಜನಗಳ ಜೊತೆಯಲ್ಲಿ ನಯ ವಿನಯದಿಂದ, ವರ್ತಿಸಬೇಕಾಗುತ್ತದೆ. ಕೆಲಸ ಕಾರ್ಯಗಳನ್ನು ತುಂಬ ಬೇಗ ಮಾಡಬೇಕಾಗುತ್ತದೆ.
ಮನೆಯಲ್ಲಿರುವಂತಹ ಸಣ್ಣ ಪುಟ್ಟ ಸಮಸ್ಯೆಗಳ ಕಡೆಗೆ, ಮತ್ತು ಸದಸ್ಯರ ಕಡೆಗೆ ಗಮನವನ್ನು ಹರಿಸಬೇಕಾಗುತ್ತದೆ. ತಂದೆ ತಾಯಂದಿರ ,ಬಗ್ಗೆ ಕಾಳಜಿಯನ್ನು ವಹಿಸಿ .ಮತ್ತು ಅನಗತ್ಯ ದೂರದ ಪ್ರಯಾಣವನ್ನು, ನೀವು ತಡೆಹಿಡಿಯಬೇಕಾಗುತ್ತದೆ. ಈ ಎಚ್ಚರಿಕೆಯನ್ನು ಪಾಲಿಸಿಕೊಂಡಲ್ಲಿ, ಒಳ್ಳೆಯ ಸ್ಥಾನಮಾನಗಳು ನಿಮಗೆ ಲಭಿಸುತ್ತದೆ . ಯಶಸ್ವಿನ ಮತ್ತು ಅದ್ಭುತವಾದ ಫಲಗಳು ಈ ಕನ್ಯಾ ರಾಶಿಯವರಿಗೆ ಈ ವರ್ಷದಲ್ಲಿ ಸಿಗುತ್ತದೆ. ಮತ್ತು ಭಾದ್ರಪದಮಾಸ ಐದು ,ಹತ್ತು ,ಹದಿನೈದು,
ಶನಿವಾರ ಶ್ರವಣ ನಕ್ಷತ್ರ, ಇವುಗಳು ನಿಮಗೆ ಘಾತವಾಗಿರುತ್ತದೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಿ. ಇದರಿಂದ ನಿಮಗೆ ಉತ್ತಮ ಫಲಗಳು ಸಿಗುತ್ತದೆ. ಈ ವರ್ಷದಲ್ಲಿ ಮಾಡಬೇಕಾದಂತಹ ಪರಿಹಾರವೆಂದರೆ , ಜಯದುರ್ಗ ಹೋಮವನ್ನು, ಮಾಡಿಸಿಕೊಳ್ಳಿ ಮಹಾ ಮೃತ್ಯುಂಜಯ ಪಠಣೆಯನ್ನು ಮಾಡಿಕೊಳ್ಳಿ. ಜೊತೆಗೆ ಕಷ್ಟದಲ್ಲಿದ್ದವರಿಗೆ, ಸಹಾಯವನ್ನು ಮಾಡಿ. ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಿ. ಪ್ರತಿ ಸೋಮವಾರ ಶಿವನಿಗೆ ರುದ್ರಾಭಿಷೇಕವನ್ನು, ಮಾಡಿಕೊಳ್ಳಿ . ಇದರಿಂದ ನಿಮಗೆ ಅದ್ಭುತವಾದಂತಹ ಫಲಗಳು ದೊರಕುತ್ತದೆ.