ಲಕ್ಷ್ಮೀ ಅನುಗ್ರಹ ಸಿಗಬೇಕೆಂದರೆ ದೇವರ ಮನೆಯಲ್ಲಿ ಈ ವಸ್ತುಗಳು ಇರಲೇಬೇಕು ಇವೆಲ್ಲಾ ಲಕ್ಷ್ಮೀ ಸಹೋದರರು

0

ನಮ್ಮ ಮನೆಯ ಪೂಜಾ ಮಂದಿರದಲ್ಲಿ ಯಾವ ವಸ್ತು ಇರಬೇಕು ನಮಗೆ ಪರಿಪೂರ್ಣ ಲಕ್ಷ್ಮೀ ಅನುಗ್ರಹ ಸುಖ ಶಾಂತಿ ನೆಮ್ಮದಿ ಸಿಗಲು ಏನು ಮಾಡಬೇಕೆಂದು ತಿಳಿದುಕೊಳ್ಳೋಣ…. ಮುಖ್ಯವಾಗಿ ಮನುಷ್ಯನ ಶರೀರಕ್ಕೆ ಗುಂಡಿಗೆ ಎಷ್ಟು ಮುಖ್ಯವೋ ಅಷ್ಟೇ ಮನೆಗೆ ದೇವರ ಕೋಣೆ ಕೂಡ ಬಹಳ ಮುಖ್ಯ….!

ಅತಿ ಮುಖ್ಯವಾದ ವಸ್ತು ಭಗವದ್ಗೀತೆ ತಪ್ಪದೆ ಮುಖ್ಯವಾಗಿ ಇಡಬೇಕು… ಸಾಲದು ಕನಿಷ್ಠ ಪಕ್ಷ ದಿನಕ್ಕೆ ಒಂದು ಪುಟವಾದರೂ ಓದಬೇಕು…. ಪೂಜೆ ಮಾಡಬೇಕು.

ನವಿಲುಗರಿ ನರದೋಷ, ಅಶಾಂತಿ ತೊಲಗಿಸಲು ಮುಖ್ಯವಾಗಿ ನವಿಲುಗರಿ ಇಡಲೇಬೇಕು…. ವೆಂಕಟೇಶ್ವರ ಸ್ವಾಮಿ, ಲಕ್ಷ್ಮಿ ದೇವಿ, ಸುಬ್ರಮಣ್ಯ ಸ್ವಾಮಿ, ಶ್ರೀ ಕೃಷ್ಣ ದೇವರಿಗೆ ತುಂಬಾ ಇಷ್ಟವಾದ ವಸ್ತುವಾಗಿದೆ. ಖಂಡಿತವಾಗಿಯೂ ನವಿಲುಗರಿಯನ್ನು ದೇವರ ಕೋಣೆಯಲ್ಲಿ ಬೇಕು ಇದರಿಂದ ಭಗವಂತನ ಆಶೀರ್ವಾದ ಸದಾ ಇರುತ್ತದೆ.

ಗೋಮಾತಾ ವಿಗ್ರಹ ಕರುವಿಗೆ ಹಾಲು ಕುಡಿಸುತ್ತಿರುವ ವಿಗ್ರಹ ಇಟ್ಟರೆ ಬಹಳ ಒಳ್ಳೆಯದು ,ಸಕಲ ದೇವತೆಗಳು ನಡೆಸಿದ್ದಾರೆ….ಸಕಲ ಶುಭ ಕಾರ್ಯಗಳನ್ನು ನಡೆಯಲು ಸದಾ ಲಕ್ಷ್ಮಿ ತಾಯಿಯ ಅನುಗ್ರಹ ಸಿಗಲು ಖಂಡಿತವಾಗಿಯೂ ಇಟ್ಟು ಪೂಜಿಸಬೇಕು.

ಛತ್ರಿ ( ಪುಟ್ಟ ಛತ್ರಿ)ಮತ್ತು ಚಾಮರ ( ಪುಟ್ಟ ಚಾಮರ) ಪ್ರತಿನಿತ್ಯ ಪೂಜೆ ಮಾಡುವಾಗ ಚಾಮರ ಉಪಯೋಗಿಸಿದ ಪೂಜೆ ಮಾಡಿದರೆ ದೇವರಿಗೆ ಉಪಚಾರ ಮಾಡಿದಂತೆ ಇದರಿಂದ ಮನೆಯಲ್ಲಿ ದೈವ ಶಕ್ತಿ ದೈವ ಕಳೆ ಹೆಚ್ಚಾಗಿರುತ್ತದೆ. ಮನೆಯಲ್ಲಿ ದೈವಬಲ ಕೂಡ ಅಧಿಕವಾಗಿರುತ್ತದೆ.

ದಕ್ಷಿಣಾಮೂರ್ತಿ ಶಂಖ ಸಣ್ಣ ಶಂಕು ಇಟ್ಟರೆ ಬಹಳ ಒಳ್ಳೆಯದು ಇದರಿಂದ ಸಾಲಿಗ್ರಾಮ ದೇವರ ವಿಗ್ರಹಗಳಿಗೆ ಅಭಿಷೇಕ ಮಾಡಿದರೆ ಬಹಳ ಒಳ್ಳೆಯದು. ಬಾಯಿಂದ ಊದುವ ಶಂಖದಿಂದ ಅಭಿಷೇಕ ಮಾಡಬಾರದು ಯಾವುದೇ ಶಂಖ ನೆಲದ ಮೇಲೆ ಇಡಬಾರದು.

ಲಕ್ಷ್ಮಿ ಕವಡೆಗಳು ಕವಡೆಯ ಹಿಂಭಾಗದಲ್ಲಿ ಸ್ವಲ್ಪ ಅರಿಶಿಣ ಬಣ್ಣದಲ್ಲಿ ಇರುತ್ತದೆ ಅದೇ ಲಕ್ಷ್ಮಿ ಕನಿಷ್ಠ 9 ಸಣ್ಣ ತಟ್ಟೆಗೆ ಇಡಬೇಕು ಈ ರೀತಿ ಇಟ್ಟರೆ ಗಂಡ ಹೆಂಡತಿ ಮಧ್ಯ ಮನಸ್ತಾಪ ಬರುವುದಿಲ್ಲ, ಅನ್ಯೋನ್ಯವಾಗಿರುತ್ತಾರೆ ದಾಂಪತ್ಯ ಬಹಳ ಚೆನ್ನಾಗಿರುತ್ತದೆ.

ಗೋಮತಿ ಚಕ್ರ ಇದು ಕೂಡ ಕನಿಷ್ಠ 9 ಇಟ್ಟುಪೂಜಿಸಬೇಕು ಗೋಮತಿ ಚಕ್ರವನ್ನು ಪೂಜಿಸಿದರೆ ಪ್ರಪಂಚದಲ್ಲಿ ಇರುವ ಎಲ್ಲ ಗೋವುಗಳನ್ನು ಪೂಜಿಸಿದಷ್ಟುಫಲ ಸಿಗುತ್ತದೆ… ಇದು ಲಕ್ಷ್ಮಿ ದೇವಿಗೆ ಬಹಳ ಇಷ್ಟವಾದ ವಸ್ತು ಮಹಾ ಶಕ್ತಿ ಇರುತ್ತದೆ. ಸಮುದ್ರದಲ್ಲಿ ಸಿಗುವ ಎಲ್ಲಾ ಪವಿತ್ರ ವಸ್ತುಗಳು ಲಕ್ಷ್ಮೀದೇವಿಗೆ ನೇರವಾಗಿ ಸಂಪರ್ಕ ಹೊಂದಿರುತ್ತದೆ ತಾಯಿಯು ಸಮುದ್ರದಲ್ಲಿ ಜನಿಸುವುದರಿಂದ ಇದೆಲ್ಲ ತಾಯಿಗೆ ಸೋದರ ಸಂಬಂಧ ಹೊಂದಿರುತ್ತದೆ ಆದ್ದರಿಂದ ವಿಶೇಷ ಶಕ್ತಿ ಹೊಂದಿರುತ್ತದೆ.
ಇನ್ನು ದೇವರ ಮನೆ ತುಂಬಾ ಸ್ವಚ್ಛವಾಗಿರಬೇಕು ಯಾವುದೇ ಅಂಟು ದೂಳು ಇರಬಾರದು ಒಂದು ಡಬ್ಬಿಯಲ್ಲಿ ಒಂಬತ್ತು ಪಚ್ಚ ಕರ್ಪೂರ ,9ಏಲಕ್ಕಿ,9 ಲವಂಗ, ಹಾಕಿಬಿಡಿ ಈ ರೀತಿ ಹಾಕಿ ಇಡುವುದರಿಂದ ದೈವಿಕ ಶಕ್ತಿ ಹೆಚ್ಚಾಗಿರುತ್ತದೆ.

Leave A Reply

Your email address will not be published.