ನಾವು ಈ ಲೇಖನದಲ್ಲಿ ಲವಂಗದ ಈ 13 ಪರಿಹಾರಗಳು ನಿಮ್ಮ ಜೀವನದ ದಿಕ್ಕನ್ನೇ ಹೇಗೆ ಬದಲಾಯಿಸುತ್ತದೆ. ಎಂದು ತಿಳಿಯೋಣ . ಲವಂಗದ ಈ 13 ಪರಿಹಾರಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ …..!
ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು . ಆದ್ದರಿಂದ ಈ ತಂತ್ರಗಳ ಬಗ್ಗೆ ತಿಳಿದಿರುವುದು ಮುಖ್ಯ . ಲವಂಗದ ತಂತ್ರಗಳನ್ನು ಹಣದ ಲಾಭಕ್ಕಾಗಿ , ತೊಂದರೆಗಳನ್ನು ತೊಡೆದು ಹಾಕಲು ಮತ್ತು ಅದೃಷ್ಟವನ್ನು ಬಲಪಡಿಸಲು ಬಳಸಲಾಗುತ್ತದೆ . ಲವಂಗಕ್ಕೆ
ಸಂಬಂಧಿಸಿದ ಕೆಲವು ವಿಶೇಷ ತಂತ್ರಗಳು ಮತ್ತು ಪರಿಹಾರ ಈ
ಕೆಳಕಂಡಂತಿವೆ … !
ಮಸಾಲೆಗಳನ್ನು ಕೇವಲ ಔಷಧವಾಗಿ ಬಳಸಲಾಗುವುದಿಲ್ಲ . ಆದರೆ ಅವುಗಳ ಬಳಕೆಯು ಜೀವನದಲ್ಲಿ ಬದಲಾವಣೆಯನ್ನು ತರಬಹುದು . ಇಂದು ನಾವು ಲವಂಗದ ಬಗ್ಗೆ ತಿಳಿದು ಕೊಳ್ಳುತ್ತಿದ್ದೇವೆ . ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದು ಮಾತ್ರವಲ್ಲದೆ , ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರಬಹುದು . ಅಂತಹ ಪರಿಸ್ಥಿತಿಯಲ್ಲಿ ಜನರು ಈ ತಂತ್ರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ .. .
ನಿಮ್ಮ ಯಾವುದೇ ಕೆಲಸಗಳು ಸ್ಥಗಿತಗೊಂಡಿದ್ದರೆ , ಅಥವಾ ದೀರ್ಘಕಾಲದ ವರೆಗೆ ಮಾಡಲಾಗದಿದ್ದರೆ , ನೀವು ಲವಂಗ , ಏಲಕ್ಕಿ ಮತ್ತು ವಿಳ್ಳೆದೆಲೆಯನ್ನು ಸುತ್ತಿ ಗಣೇಶನಿಗೆ ಅರ್ಪಿಸಬೇಕು .. ಹೀಗೆ ಮಾಡುವುದರಿಂದ , ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುವುದು ಮಾತ್ರವಲ್ಲದೆ , ಜೀವನದಲ್ಲಿ ಯಶಸ್ಸು ಕೂಡ ಬರಬಹುದು .
ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ , ಈ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಏಳರಿಂದ ಎಂಟು ಲವಂಗವನ್ನು ಸುಟ್ಟು .ಮನೆಯ ಯಾವುದೇ ಮೂಲೆಯಲ್ಲಿ ಇರಿಸಿ . ಹೀಗೆ ಮಾಡುವುದರಿಂದ ಮನೆಯ ಸುಖ ಶಾಂತಿ ನೆಲೆಸುವುದರ ಜೊತೆಗೆ ವೈಷಮ್ಯ ದೂರವಾಗುತ್ತದೆ .
ಯಾವುದೇ ಕೆಲಸದಲ್ಲಿ ಅಡಚಣೆ ಉಂಟಾದರೆ , ಮನೆಯಲ್ಲಿ ಪೂಜೆ ಮಾಡುವಾಗ ಎರಡು ಲವಂಗವನ್ನು ಆರತಿ ತಟ್ಟೆಯಲ್ಲಿ ಇಡಿ . ಹೀಗೆ ಮಾಡುವುದರಿಂದ , ಮನೆಯ ವಾತಾವರಣ ಉತ್ತಮವಾಗಿ ಇರಬಹುದು . ಅಲ್ಲದೇ , ಜೀವನದಲ್ಲಿ ಯಾವುದೇ ಅಡೆತಡೆಗಳನ್ನು ತಡೆಯಬಹುದು….
ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಲವಂಗವು ನಿಮಗೆ ತುಂಬಾ ಉಪಯುಕ್ತವಾಗಿದೆ . ಅಂತಹ ಪರಿಸ್ಥಿತಿಯಲ್ಲಿ , ನೀವು ಕರಿಮೆಣಸು ಮತ್ತು ಲವಂಗವನ್ನು ನಿಮ್ಮ ತಲೆಯ ಮೇಲಿಂದ ದೂರ ಹೋಗಿ ಬೀಳುವ ಹಾಗೆ ಬಿಸಾಕಬೇಕು . ಯಾರು ಬರದ ಜಾಗದಲ್ಲಿ ಈ ತಂತ್ರ ಮಾಡಿ . ತದನಂತರ ಹಿಂತಿರುಗಿ ನೋಡದೆ ವಾಪಸ್ ಬನ್ನಿ . ಇದರಿಂದ ಹಣದ ಕೊರತೆ ನೀಗಿಸಬಹುದು …..
ರಾಹು – ಕೇತುಗಳ ಕೆಟ್ಟ ಪರಿಣಾಮವನ್ನು ಲವಂಗದ ಸಹಾಯದಿಂದ ಕಡಿಮೆ ಮಾಡಬಹುದು . ಜಾತಕದಲ್ಲಿ ರಾಹು ಕೇತು ದೋಷವಿದ್ದರೆ , ಪ್ರತಿ ಶನಿವಾರದಂದು ಲವಂಗವನ್ನು ದಾನ ಮಾಡಬೇಕು .
ನಿರಂತರ 40 ದಿನಗಳ ಕಾಲ ಶಿವಲಿಂಗದ ಮೇಲೆ ಲವಂಗ ಅರ್ಪಿಸಿದರೆ , ಎಲ್ಲಾ ದುಷ್ಪರಿಣಾಮ ಕೊನೆಗೊಳ್ಳುತ್ತದೆ .
ನೀವು ಯಾವುದೇ ಕೆಲಸದ ಕಾರಣದಿಂದ ಮನೆಯಿಂದ ಹೊರಗೆ ಹೋಗುತ್ತಿದ್ದರೆ , ಮನೆಯಿಂದ ಹೊರಡುವಾಗ ನಿಮ್ಮ ಬಾಯಿಯಲ್ಲಿ ಎರಡು ಲವಂಗವನ್ನು ಇಟ್ಟುಕೊಳ್ಳಿ . ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ನಿಮ್ಮ ಇಷ್ಟ ದೇವರನ್ನು ಧ್ಯಾನಿಸಿ .ಹೀಗೆ ಮಾಡುವುದರಿಂದ , ಹೋದ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು .
ಯಶಸ್ಸು ಸಿಗದಿದ್ದರೆ ಮಂಗಳವಾರ ಆಂಜನೇಯನಿಗೆ ಎಣ್ಣೆಯ ದೀಪವನ್ನು ಹಚ್ಚಿ . ದೀಪದಲ್ಲಿ ಎರಡು ಲವಂಗವನ್ನು ಹಾಕಿ ನಂತರ , ಹನುಮಾನ್ ಚಾಲೀಸಾ ವನ್ನು ಪಠಿಸಿ ಮತ್ತು ಆರತಿ ಮಾಡಿ ಇದನ್ನು 21 ಮಂಗಳವಾರಗಳ ಕಾಲ ನಿರಂತರವಾಗಿ ಮಾಡುವುದರಿಂದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.
ಹಣವಿದ್ದರೂ ಕೈಗೆ ಸಿಗದಿದ್ದರೆ , ನಿಮ್ಮ ಹಣ ಎಲ್ಲೋ ಸಿಲುಕಿದ್ದರೆ , ನಿಮ್ಮದೇ ಹಣ ಪಡೆಯಲು ಸಮಸ್ಯೆ ಆಗುತ್ತಿದ್ದರೆ , ಆಗ ಲವಂಗದಿಂದ ಹಣವನ್ನು ನಿಮ್ಮದಾಗಿಸಿಕೊಳ್ಳಿ . ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ, 11 ಅಥವಾ 21 ಲವಂಗಗಳನ್ನು ಕರ್ಪೂರದ ಜೊತೆ ಸೇರಿಸಿ , ಅಮಾವಾಸ್ಯೆ ಇಲ್ಲವೇ ಹುಣ್ಣಿಮೆಯ ರಾತ್ರಿ ಸುಟ್ಟು ಹಾಕಬೇಕು . ನಂತರ ಲಕ್ಷ್ಮಿ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು . ಹೀಗೆ ಮಾಡುವುದರಿಂದ ನಿಮ್ಮ ಸಿಲುಕಿರುವ ಹಣ ಕೈಗೆ ಬರುತ್ತದೆ . ಹಣ ಕೈ ಸೇರಲು ಇರುವ ಅಡಚಣೆಗಳು ತೊಲಗುತ್ತವೆ .
ಸಂದರ್ಶನ ಪಾಸಾಗಲು ಯಾವುದೋ ಸಂದರ್ಶನಕ್ಕೆ ಹೊರಟಿದ್ದರೆ , ಅಥವಾ ಯಾವುದೋ ಹೂಡಿಕೆ ಸಂಬಂಧ ಪಟ್ಟ ಮಾತುಕತೆಗೆ ಹೊರಟಿದ್ದರೆ , ಆಗ ಲವಂಗದ ಈ ಪರಿಹಾರ ಮಾಡಿ ಹೊರಡಿ . ಇದರಿಂದ ಹೋದ ಕೆಲಸ ಖಂಡಿತ ಕೈ ಗೂಡುತ್ತದೆ . ಮನೆಯಿಂದ ಹೊರ ಹೋಗುವಾಗ ಬಾಯಲ್ಲಿ ಲವಂಗ ಇಟ್ಟುಕೊಳ್ಳಿ . ಅಗಿದು ಉಳಿದುದನ್ನು ಹೋದ ಕಚೇರಿಯ ಸ್ಥಳದಲ್ಲಿ ಉಗಿಯಿರಿ . ನಿಮ್ಮ ಮನೆ ದೇವರಲ್ಲಿ ಕೆಲಸದಲ್ಲಿ ಯಶಸ್ಸು ಕೊಡಲು ಬೇಡಿಕೊಳ್ಳಿ . ಇದರಿಂದ ಸಂದರ್ಶನದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ .
ಕಷ್ಟ ಪಟ್ಟಿದ್ದರ ಫಲ ಸಿಗದಿದ್ದರೆ, ಬಹಳಷ್ಟು ಸಾರಿ ಕಷ್ಟಪಟ್ಟು ದುಡಿದರೂ ಅದಕ್ಕೆ ತಕ್ಕದಾದ ಫಲ ಸಿಗುತ್ತಿಲ್ಲ ಎನಿಸುತ್ತದೆ . ಅಂತ ಸಂದರ್ಭದಲ್ಲಿ ಮಂಗಳವಾರದ ದಿನ ಆಂಜನೇಯ ವಿಗ್ರಹದ ಎದಿರು ಮಲ್ಲಿಗೆ ಎಣ್ಣೆಯ ದೀಪ ಹಚ್ಚಿ . ಆ ದೀಪಕ್ಕೆ ಎರಡು ಲವಂಗವನ್ನು ಹಾಕಿ . ನಂತರ ದೇವರ ಎದುರು ಕೂತು ಹನುಮಾನ್ ಚಾಲೀಸಾ ಹೇಳಿ ಆರತಿ ಬೆಳಗಿ . ಆಂಜನೇಯನಲ್ಲಿ ಭಕ್ತಿಯಿಂದ ನಿಮ್ಮ ಕೆಲಸದ ಯಶಸ್ವಿಗಾಗಿ ಬೇಡಿಕೊಳ್ಳಿ . ಇದನ್ನು ನಿರಂತರ 21 ಮಂಗಳವಾರದ ಕಾಲ ಮಾಡಿ . ನಿಮ್ಮ ದುಡಿಮೆಗೆ ತಕ್ಕ ಫಲ ದೊರತೇ ದೊರೆಯುತ್ತದೆ .
ಹಣ ಸೆಳೆಯಲು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು , ಮನೆಯಲ್ಲಿ ಸಂತೋಷ ಸಮೃದ್ಧಿ ತುಂಬಿರುವಂತೆ ನೋಡಿಕೊಳ್ಳಲು , ಅಮ್ಮನಿಗೆ ಪ್ರತಿದಿನ ಗುಲಾಬಿ ಹೂಗಳ ಜೊತೆಗೆ ಎರಡು ಲವಂಗಗಳನ್ನು ನೀಡಿ . ಪ್ರತಿ
ದಿನ ಸಾಧ್ಯವಾಗದಿದ್ದರೆ , ಕನಿಷ್ಠ ಪಕ್ಷ ಶುಕ್ರವಾರದಂದು ಹೀಗೆ ಮಾಡಿ .
ನಕಾರಾತ್ಮಕತೆ ತೆಗೆಯಲು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆಯಲು ಶನಿವಾರ ಎಣ್ಣೆ ದೀಪದೊಂದಿಗೆ ನಾಲ್ಕು ಲವಂಗ ಗಳನ್ನು ಸುಟ್ಟು ಹಾಕಿ.. ಇದನ್ನು ಮನೆಯ ಕತ್ತಲ ಮೂಲೆಯಲ್ಲಿ ಇರಿಸಿ . ಇದರಿಂದ ಮನೆಯ ನಕಾರಾತ್ಮಕ ಶಕ್ತಿ ನಿಧಾನವಾಗಿ ತೊಲಗುತ್ತವೆ. ಎಲ್ಲ ಕೆಲಸಗಳು ಆಗ ತೊಡಗಿ ಮನೆಯಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ ನೋಡಿ .