ಮಹಿಳೆಯರು ಈ ಕೆಲಸಗಳನ್ನು ಮಾಡಲೇಬಾರದು. ಮಹಿಳೆಯರು ಕುಂಬಳಕಾಯಿಯನ್ನು ಹೊಡೆಯಬಾರದು, ಹೀಗೆ ಮಾಡುವುದರಿಂದ ಗರ್ಭಕೋಶ ಕೆಳಗೆ ಜಾರುವ ಸಾಧ್ಯತೆ ಹೆಚ್ಚುತ್ತದೆ.
ಸತ್ತವರ ಮನೆಗೆ ಹೋದಾಗ ಮತ್ತೆ ಬರುತ್ತೇನೆ ಎಂದು ಹೇಳಬೇಡಿ. ದುಃಖವನ್ನು ವಿಚಾರಿಸಲು ಮನೆಗೆ ಬರುವವರನ್ನು ಆಹ್ವಾನಿಸಬೇಡಿ. ಹಾಗೆ ಮಾಡಿದರೆ ನಾವು ಪರೋಕ್ಷವಾಗಿ ದುರಾದೃಷ್ಟವನ್ನು ಬಯಸಲು ಪ್ರಾರಂಭಿಸುತ್ತೇವೆ,
ಇನ್ನೊಬ್ಬರು ಧರಿಸುವ ಹೂವುಗಳನ್ನು ಇನ್ನೊಬ್ಬರು ಧರಿಸಬಾರದು ಅದೇ ರೀತಿಯಲ್ಲಿ ನೀವು ಬೊಟ್ಟು ಧರಿಸಬಾರದು. ವಿವಾಹಿತ ಮಹಿಳೆಯರು ಕಪ್ಪು ಬಣ್ಣದ ವಸ್ತುಗಳು ಮತ್ತು ಬಟ್ಟೆಗಳನ್ನು ಧರಿಸಬಾರದು.
ಮನೆಯಲ್ಲಿರುವ ಉಪ್ಪು, ಮೆಣಸಿನಕಾಯಿ, ಹುಣಸೆ ಹಣ್ಣು ಮತ್ತು ಮೊಸರನ್ನು ಯಾರಿಗೂ ಕೈಗೆ ಕೊಡಬಾರದು ಅದನ್ನು ಕೆಳಗೆ ಇರಿಸಿ ಅವರಿಗೆ ತೆಗೆದುಕೊಳ್ಳಲು ಹೇಳಿ. ಆದರೆ ಮುಸ್ಸಂಜೆ ಸಮಯದಲ್ಲಿ ಈ ಪದಾರ್ಥಗಳನ್ನು ಬೇರೆಯವರಿಗೆ ಕೊಡುವುದಾಗಲಿ ಅಥವಾ ಸಾಲವಾಗಿ ಮನೆಗೆ ತರುವುದಾಗಲಿ ಮಾಡಲೇಬಾರದು.
ಪೊರಕೆಗಳನ್ನು ನಿಲ್ಲಿಸಿದ ಸ್ಥಿತಿಯಲ್ಲಿ ಇಡಬಾರದು ಮಲಗಿಸಿ ವಿಶ್ರಾಂತಿ ಇರುವ ರೂಪದಲ್ಲಿ ಇಡಬೇಕು ಹಾಗೂ ಗಲೀಜಾಗಿರುವ ಸ್ಥಳದಲ್ಲಿ ಇಡಬಾರದು,
ಸತ್ತ ವ್ಯಕ್ತಿಯ ಬಟ್ಟೆಗಳನ್ನು ಬಳಸಬೇಡಿ ಎಲ್ಲರಿಗೂ ಬಟ್ಟೆಯೆಂದರೆ ಒಲವು ಕೂಡ. ಅಂತಹ ಪರಿಸ್ಥಿತಿಯಲ್ಲಿ ಯಾರಾದರೂ ಅವನ ಮರಣದ ನಂತರ ಅವನ ಬಟ್ಟೆಗಳನ್ನು ಬಳಸಿದರೆ, ಅವನು ಕೂಡ ಪಿತೃ ದೋಷಕ್ಕೆ ಬಲಿಯಾಗಬಹುದು. ವಾಸ್ತವವಾಗಿ, ಪೂರ್ವಜರು ಮೋಕ್ಷವನ್ನು ಪಡೆಯಲು ಅವರು ತಮ್ಮ ಬಾಂಧವ್ಯವನ್ನು ಕಳೆದುಕೊಳ್ಳುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ ಅವರ ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.
ಕಸ ಗುಡಿಸುವಾಗ ಕಸ ಪೊರಕೆಹಿಂದ ಹೊಸ್ತಿಲನ್ನು ಗುಡಿಸಬೇಡಿ. ಹೊಸ್ತಿಲನ್ನು ಒಂದು ಶುದ್ಧ ಬಟ್ಟೆಯಿಂದ ಶುಚಿ ಮಾಡಿ ಅಥವಾ ನೀರಿನಿಂದ ಶುಚಿ ಮಾಡಿ. ಅರಿಶಿನ ಕುಂಕುಮ ಹಚ್ಚಿ ರಂಗೋಲಿ ಇಟ್ಟು ಹೂವು ಇಟ್ಟು ಅಲಂಕರಿಸಿ ಲಕ್ಷ್ಮೀ ದೇವಿ ಸಂತೃಪ್ತಿಗೊಳ್ಳುತ್ತಾರೆ. ಕೆಲವರು ಪದೇ ಪದೇ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ ಎಂದು ಅರಿಶಿನ ಕುಂಕುಮ ಮತ್ತು ಬಿಳಿ ಬಣ್ಣದ ಪೈಂಟ್ ಬಳಸಿ ಶಾಶ್ವತ ರಂಗೋಲಿ ಹಾಕಿರುತ್ತಾರೆ ಆದರೆ ಅದು ತಪ್ಪು.
ಮೊದಲೆಲ್ಲಾ ಸ್ನಾನದ ಮನೆ ಶೌಚಾಲಯ ಹೊರಗಿರುತ್ತಿತ್ತು. ಆದರೆ ಈಗ ಮನೆಯ ಒಳಗೆ ಇರುವುದರಿಂದ ಸ್ವಚ್ಛತೆ ಮತ್ತು ವಾಸ್ತುವಿನ ಅಗತ್ಯ ಬಹಳ ಮುಖ್ಯ. ಸಾಮಾನ್ಯವಾಗಿ ಪುರುಷರು ಅಥವಾ ಮಕ್ಕಳು ಶಿಸ್ತು ಪಾಲಿಸುವುದು ಕಡಿಮೆ ಹಾಗಾಗಿ ಗೃಹಿಣಿಯರೇ ಗಮನ ಕೊಡಬೇಕಾಗುತ್ತದೆ. ಕೆಲವರು ಬಚ್ಚಲು ಮನೆಗೆ ಹೋಗಿ ಬಂದರೂ ಕಾಲು ತೊಳೆಯುವುದಿಲ್ಲ. ಈ ತಪ್ಪನ್ನು ಮಾಡಲೇಬೇಡಿ ಕಾಲು ಬೇಗ ನೆಗಟಿವಿಟಿಯನ್ನು ಆಕರ್ಷಿಸುತ್ತದೆ ನೆನಪಿರಲಿ.
ನೀರಿನ ಬಕೆಟ್ ಅಥವಾ ಟಬ್ ಅನ್ನು ಯಾವಾಗಲೂ ಬಾತ್ರೂಮ್ ನಲ್ಲಿ ತುಂಬಿಸಬೇಕು. ಖಾಲಿ ಬಿಡಬಾರದು ಒಂದು ವೇಳೆ ಬಕೆಟ್ ಖಾಲಿಯಾಗಿದ್ದರೆ. ಅದನ್ನು ಯಾವಾಗಲೂ ತಲೆಕೆಳಗಾಗಿ ಇರಿಸಿ, ಇದು ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.