ನಾವು ಈ ಲೇಖನದಲ್ಲಿ ಮಂಗಳವಾರದ ದಿನ ರಾತ್ರಿ ಎರಡು ಲವಂಗವನ್ನು ಸುಟ್ಟು ಹಾಕುವುದರಿಂದ ಶತ್ರುಗಳು ನಿಮ್ಮ ಕಾಲು ಕೆಳಗಡೆ ಹೇಗೆ ಬರುತ್ತಾರೆ. ಎಂದು ತಿಳಿಯೋಣ . ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ನಾಶವಾಗುತ್ತದೆ . ನಿಮ್ಮ ಮೇಲೆ ಯಾವತ್ತಿಗೂ ಆಂಜನೇಯ ಸ್ವಾಮಿಯ ಆಶೀರ್ವಾದ ಇರುತ್ತದೆ . ಮಂಗಳವಾರದ ದಿನ ಮಾಡುವ ಕೆಲವೊಂದು ಮಹತ್ವಪೂರ್ಣವಾದ ಉಪಾಯವನ್ನು ಇಲ್ಲಿ ತಿಳಿಸಲಾಗಿದೆ .
ನಮ್ಮ ಸನಾತನ ಧರ್ಮದಲ್ಲಿ ಲವಂಗವನ್ನು ಅತ್ಯಂತ ಪವಿತ್ರ ವಸ್ತು ಎಂದು ತಿಳಿಯಲಾಗಿದೆ . ಪೂಜೆ ಪಾಠಗಳಲ್ಲಿ ಲವಂಗಕ್ಕೆ ವಿಶೇಷವಾದ ಮಹತ್ವ ಇದೆ .
ಲವಂಗದ ಬಳಕೆಯನ್ನು ಆಹಾರದಲ್ಲಿ ಸ್ವಾದವನ್ನು ಹೆಚ್ಚಿಗೆ ಮಾಡಲು , ಆರೋಗ್ಯ ವೃದ್ಧಿ ಮಾಡಲು ಕೂಡ ಬಳಕೆ ಮಾಡುತ್ತಾರೆ . ಇವುಗಳ ಜೊತೆಗೆ ಜ್ಯೋತಿಷ್ಯ ಉಪಾಯಗಳಲ್ಲೂ ಸಹ ಇವುಗಳನ್ನು ಬಳಸುತ್ತಾರೆ .ಲವಂಗದ ಬಳಕೆಯನ್ನು ಪೂಜೆ ಪಾಠ ಅಷ್ಟೇ ಅಲ್ಲದೆ , ತಂತ್ರ ಕ್ರಿಯೆಗಳಲ್ಲೂ ಸಹ ಬಳಸಲಾಗುತ್ತದೆ . ಏಕೆಂದರೆ ಇದನ್ನು ಶಕ್ತಿಯ ವಾಹಕ ಎಂದು ತಿಳಿಯಲಾಗಿದೆ . ತಮ್ಮ ಅದೃಷ್ಟವನ್ನು ಬದಲಾಯಿಸಲು , ಕನಸುಗಳನ್ನು ಪೂರ್ತಿಗೊಳಿಸಲು , ಇಲ್ಲಿ ಲವಂಗದ ಅಪರೂಪವಾದ ಶಕ್ತಿಶಾಲಿ ಉಪಾಯಗಳನ್ನು ಮಾಡಬಹುದು . ಈ ಲವಂಗಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರೋದಿಲ್ಲ . ಈ ಉಪಾಯವನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ .
ಲವಂಗದ ಮೊದಲನೇ ಉಪಾಯ ಮನೆಯಿಂದ ನಕಾರಾತ್ಮಕ ಕೆಟ್ಟ ಶಕ್ತಿಗಳನ್ನು ಓಡಿಸುವ ಉಪಾಯ . ಮನೆಯಲ್ಲಿ ಹೇಗೆ ಸುಖ ಶಾಂತಿ ಬರುತ್ತದೆ ಎಂದು ತಿಳಿಸಲಾಗಿದೆ . ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಆಚೆ ಓಡಿಸಬೇಕು ಎಂದರೆ , ಎಲ್ಲಕ್ಕಿಂತ ಮುಖ್ಯವಾಗಿ ನೀವು ಆಚೆ ಇರುವ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಬಾರದಂತೆ ನೋಡಿಕೊಳ್ಳಬೇಕು . ಇದಕ್ಕಾಗಿ ಲವಂಗದ ಸುಲಭವಾದ ಪ್ರಯೋಗವನ್ನು ಮಾಡಬಹುದು . ಮಂಗಳವಾರದ ದಿನ ರಾತ್ರಿ ಐದು ಲವಂಗ ಮೂರು ಕರ್ಪೂರದ ತುಂಡನ್ನು ತೆಗೆದುಕೊಳ್ಳಬೇಕು .
ಇವುಗಳ ಜೊತೆಗೆ ಮೂರು ಏಲಕ್ಕಿಯನ್ನು ತೆಗೆದುಕೊಳ್ಳಬೇಕು . ಇವುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಸುಟ್ಟು ಬಿಡಬೇಕು . ಯಾವಾಗ ಇದರಲ್ಲಿ ಅಗ್ನಿಯ ಹೊಗೆ ಆಡಲು ಶುರುವಾಗುತ್ತದೆಯೋ , ಎಲ್ಲಾ ಕೋಣೆಗಳಿಗೂ ಇದನ್ನು ಹಿಡಿದು ತಿರುಗಾಡಬೇಕು . ಯಾವಾಗ ಇದು ಪೂರ್ತಿಯಾಗಿ ಸುಟ್ಟು ಬೂದಿಯಾಗುತ್ತದೆಯೋ , ನಂತರ ಇದನ್ನು ಮುಖ್ಯ ದ್ವಾರಕ್ಕೆ ಈ ಬೂದಿಯನ್ನು ಸಿಂಪಡಿಸಬೇಕು . ಇಲ್ಲವಾದರೆ ಸ್ವಲ್ಪ ನೀರಿನಲ್ಲಿ ಈ ಬೂದಿಯನ್ನು ಹಾಕಿ ಮುಖ್ಯ ದಾರಕ್ಕೆ ಸಿಂಪಡಿಸಬಹುದು . ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ . ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ .
ಮತ್ತು ಸಕಾರಾತ್ಮಕ ಶಕ್ತಿ ಮುಖ್ಯದ್ವಾರದಲ್ಲಿ ವಾಸ ಮಾಡುತ್ತದೆ . ಯಾವತ್ತಿಗೂ ಮನೆಯಲ್ಲಿ ನೆಮ್ಮದಿಯ ವಾತಾವರಣ ಉಳಿಯುತ್ತದೆ . ನಕಾರಾತ್ಮಕತೆ ಶಾಶ್ವತವಾಗಿ ದೂರವಾಗುತ್ತದೆ . ಅತೃಪ್ತ ಆತ್ಮಗಳು ಯಾವಾಗಲೂ ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ . ಜೊತೆಗೆ ಯಾರ ಕುಂಡಲಿಯಲ್ಲಿ ರಾಹು ಕೇತುವಿನ ಸ್ಥಿತಿ ಕೆಟ್ಟದಾಗಿ ಇರುತ್ತದೆಯೋ , ಇಂಥವರು ಮಂಗಳವಾರದ ದಿನ ಲವಂಗವನ್ನು ದಾನವಾಗಿ ಕೊಡಬೇಕು . ಇದನ್ನು ಯಾರಿಗೆ ಬೇಕಾದರೂ ಕೊಡಬಹುದು .
ರಾಹು ಕೇತುವಿನ ಸ್ಥಿತಿ ಇದರಿಂದ ಚೆನ್ನಾಗಿರುತ್ತದೆ . ಒಂದು ವೇಳೆ ಯಾರಾದರೂ ದಾನ ತೆಗೆದುಕೊಳ್ಳಲಿಲ್ಲ ಎಂದರೆ , ಮಂಗಳವಾರದ ದಿನ ಇದನ್ನು ಶಿವಲಿಂಗದ ಮೇಲೆ ಅರ್ಪಿಸಬೇಕು . ಒಂದು ವೇಳೆ ಈ ಚಿಕ್ಕ ಉಪಾಯವನ್ನು ನಿರಂತರವಾಗಿ 11 ಮಂಗಳವಾರ ನೀವು ಮಾಡಿದರೆ , ರಾಹು- ಕೇತುವಿನ ದುಷ್ಪ್ರಭಾವ ನಿಂತು ಹೋಗುತ್ತದೆ . ಮನೆಯಲ್ಲಿ ಸುಖ ಶಾಂತಿಗಾಗಿ ಮಂಗಳವಾರದ ದಿನ ಲವಂಗವನ್ನು ನೆಡಬಹುದು . ಜೊತೆಗೆ ನಿಮ್ಮ ಬಳಿ ಯಾರಾದರೂ ಸಾಲವನ್ನು ಪಡೆದುಕೊಂಡಿದ್ದರೆ , ಮರಳಿ ಅವರು ವಾಪಸ್ ನಿಮಗೆ ಕೊಡುತ್ತಿಲ್ಲ ಎಂದರೆ , ಅವರ ಜೊತೆ ವಾದ ಮಾಡುವ ಬದಲಿಗೆ ,
ಲವಂಗದ ಈ ಚಿಕ್ಕ ಉಪಾಯವನ್ನು ಮಾಡಿ ನೋಡಿ . ಇದರಿಂದ ಬೇಗನೆ ಮರಳಿ ಹಣ ನಿಮಗೆ ಸಿಗುತ್ತದೆ . ಮಂಗಳವಾರದ ದಿನರಾತ್ರಿ ಕರ್ಪೂರವನ್ನು ಹಚ್ಚಬೇಕು . ಎರಡು ಲವಂಗವನ್ನು ತೆಗೆದುಕೊಳ್ಳಬೇಕು . ಆ ಕರ್ಪೂರದಲ್ಲಿ ಲವಂಗವನ್ನು ಹಾಕಿ ಸುಡಬೇಕು . ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಹವನ ಮಾಡಿರಿ . ಜೊತೆಗೆ ಆಂಜನೇಯ ಸ್ವಾಮಿಯ ಬಳಿ ಪ್ರಾರ್ಥನೆಯನ್ನು ಮಾಡಿ . ದೇವರ ಕೋಣೆಯಲ್ಲಿಯೇ ಈ ರೀತಿ ಮಾಡಬಹುದು .
ಯಾರಿಗೆ ನೀವು ಹಣವನ್ನು ಕೊಟ್ಟಿರುತ್ತೀರೋ ಅವರು ಬೇಗ ಕೊಡಲಿ ಎಂಬ ಕಾರಣಕ್ಕೆ ಹವನ ಮಾಡುವುದರಿಂದ ಮತ್ತು ಆಂಜನೇಯ ಸ್ವಾಮಿಯನ್ನು ಬೇಡಿಕೊಳ್ಳುವುದರಿಂದ ಇಲ್ಲಿ ಸ್ಮರಣೆ ಮಾಡುವಾಗ ಶತ್ರುವಿನ ಹೆಸರನ್ನು ಕೂಡ ತೆಗೆದುಕೊಳ್ಳಬೇಕು . ನೀವು ಕೊಟ್ಟಿರುವ ಹಣ ಮರಳಿ ಬೇಗ ಸಿಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು . ಒಂದು ವೇಳೆ ನಿಮ್ಮ ಯಾವುದೇ ಕಾರ್ಯಗಳು ಪೂರ್ತಿ ಆಗುತ್ತಿಲ್ಲ ಎಂದರೆ , ಇದಕ್ಕಾಗಿ ಈ ಉಪಾಯವನ್ನು ಮಾಡಬಹುದು .
ನೀವು ಯಾವುದಾದರೂ ಮುಖ್ಯವಾದ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರೆ ,ನಿಮ್ಮ ಬಾಯಿಯಲ್ಲಿ ಎರಡು ಲವಂಗವನ್ನು ಇಟ್ಟುಕೊಂಡು ಹೋಗಬೇಕು . ನೀವು ಯಾವುದಾದರೂ ಸಂದರ್ಶನಕ್ಕೆ ಹೋಗುತ್ತಿದ್ದರೆ , ಬಾಯಲ್ಲಿ ಇರುವ ಲವಂಗದ ಅವಶೇಷಗಳನ್ನು ಆಚೆ ಎಸೆಯಬೇಕು .ನಿಮ್ಮ ಇಷ್ಟ ದೇವರನ್ನ ಸ್ಮರಿಸುತ್ತಾ , ಸಂದರ್ಶನಕ್ಕಾಗಿ ಹೋಗಬೇಕು .ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ , ಮಾಡುವುದರಿಂದ ಈ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ . ಜೊತೆಗೆ ಆರ್ಥಿಕ ಸಮಸ್ಯೆ ಇರಲಿ ಹಣಕಾಸಿನ ಸಮಸ್ಯೆ ಇರಲಿ , ಯಾವುದೇ ಸಮಸ್ಯೆ ತೊಂದರೆ ಇರಲಿ , ನಿಮ್ಮ ಇಷ್ಟ ದೇವರ ಆಶೀರ್ವಾದದಿಂದ ಎಲ್ಲವೂ ಸರಿಯಾಗುತ್ತದೆ.
ಈ ಒಂದು ಕಾರ್ಯವನ್ನು ಮಾಡಬೇಕು . ಐದು ಚೆನ್ನಾಗಿರುವ ಲವಂಗವನ್ನು ತೆಗೆದುಕೊಳ್ಳಬೇಕು . ಇವುಗಳ ಮಾಲೆಯನ್ನು ರೆಡಿ ಮಾಡಬೇಕು . ಒಂದು ಕೆಂಪು ಬಣ್ಣದ ದಾರವನ್ನು ತೆಗೆದುಕೊಂಡು ಅದರಲ್ಲಿ 5 ಲವಂಗದ ಮಾಲೆಯನ್ನು ತಯಾರಿಸಬೇಕು . ಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಳ್ಳಬಹುದು . ಮಾಲೆಯನ್ನು ರೆಡಿ ಮಾಡಿದ ನಂತರ ,
ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು . ಹತ್ತಿರದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಡಬೇಕು . ಈ ರೀತಿ ಮಾಡುವುದರಿಂದ ಬೇಗನೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಆರ್ಥಿಕ ಸಮಸ್ಯೆ , ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಲು , ಈ ಉಪಾಯವನ್ನು ಮಾಡಬೇಕು . ಮನೆಯಲ್ಲಿ ವೃದ್ಧಿ ಕೂಡ ಆಗುತ್ತದೆ . ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ . ಒಂದು ವೇಳೆ ಶತ್ರುಗಳು ನಿಮಗೆ ಕಾಟ ಕೊಡುತ್ತಿದ್ದರೆ , ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟು ಮಾಡುತ್ತಿದ್ದರೆ , ಇಂತಹ ಸ್ಥಿತಿಯಲ್ಲಿ ಉಪಾಯವನ್ನು ಮಾಡಬೇಕು . ಇಲ್ಲಿ ಮಂಗಳವಾರದ ದಿನ ರಾತ್ರಿಯ ಸಮಯದಲ್ಲಿ ಲವಂಗವನ್ನು ತೆಗೆದುಕೊಳ್ಳಬೇಕು .
5 ಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಳ್ಳಬೇಕು . ನಂತರ ನಾಲ್ಕು ದಾರಿಗಳು ಕೂಡಿರುವ ಸ್ಥಳಕ್ಕೆ ಹೋಗಬೇಕು . ಪೂರ್ವ ದಿಕ್ಕಿನತ್ತ ನಿಮ್ಮ ಮುಖ ಮಾಡಿಕೊಂಡು ನಿಲ್ಲಬೇಕು .ನಾಲ್ಕು ದಿಕ್ಕುಗಳಿಗೂ ಒಂದೊಂದಾಗಿ ಲವಂಗವನ್ನು ಎಸೆಯಬೇಕು . ಆದರೆ ಶತ್ರುಗಳ ಹೆಸರನ್ನು ತೆಗೆದುಕೊಂಡು ಎಸೆಯಬೇಕು . ನಾಲ್ಕು ದಿಕ್ಕಿನಲ್ಲಿ ಎಸೆದ ನಂತರ , ಕೊನೆಯದಾಗಿ ಉಳಿದಿರುವ ಐದನೇ ಲವಂಗವನ್ನು ಆಕಾಶದತ್ತ ಎಸೆಯಬೇಕು . ಮರಳಿ ಅವುಗಳನ್ನು ತಿರುಗಿ ನೋಡದೆ ನಿಮ್ಮ ಮನೆಗೆ ಬರಬೇಕು .
ಹೀಗೆ ಮಾಡುವುದರಿಂದ ಶತ್ರುಗಳು ನಿಮ್ಮ ಕಾಲು ಕೆಳಗಡೆ ಬರುತ್ತಾರೆ . ಆಂಜನೇಯ ಸ್ವಾಮಿಯ ಕೃಪೆಯಿಂದ ಶತ್ರುಗಳು ನಿಮಗೆ ತೊಂದರೆ ಕೊಡಲು ಸಾಧ್ಯವಾಗುವುದಿಲ್ಲ . ಶತ್ರುಗಳಿಂದ ಮುಕ್ತಿ ಪಡೆಯಬೇಕು ಅಂದರೆ, ಅಥವಾ ಅವರ ಸಿಟ್ಟನ್ನು ಕಡಿಮೆ ಮಾಡಬೇಕು ಎಂದರೆ , ಇಲ್ಲಿ ಒಂದು ಚಿಕ್ಕ ಉಪಾಯವನ್ನು ಮಾಡಬೇಕು . ಎರಡು ಲವಂಗವನ್ನು ತೆಗೆದುಕೊಳ್ಳಬೇಕು .ಈ ಎರಡು ಲವಂಗವನ್ನು ಯಾವುದಾದರೂ ಭಾರವಾದ ಕಲ್ಲಿನಿಂದ ಚಚ್ಚಿ ಪುಡಿ ಮಾಡಬೇಕು . ಆ ನಂತರ ಆಂಜನೇಯ ಸ್ವಾಮಿಯ ಬಲಗಾಲಿನಲ್ಲಿ ಇರುವ ಸಿಂಧೂರವನ್ನು ಇದರಲ್ಲಿ ಮಿಶ್ರಣ ಮಾಡಬೇಕು . ಇಲ್ಲಿ ಶತ್ರುವಿನ ಹೆಸರನ್ನು ತೆಗೆದುಕೊಂಡು ,
ಇದನ್ನು ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇಟ್ಟು ಬಿಡಿ . ಇದರಿಂದ ಶತ್ರುಗಳು ಶಾಂತವಾಗುತ್ತಾರೆ . ಇಲ್ಲಿ ಶತ್ರು ಮುಕ್ತಿಗಾಗಿ ಮತ್ತೊಂದು ಉಪಾಯವನ್ನು ತಿಳಿಸಲಾಗಿದೆ . ದೊಡ್ಡದಾದ ಶತ್ರುಗಳಿಂದ ಮುಕ್ತಿ ಪಡೆಯಲು ಒಂದು ಚಿಕ್ಕ ಉಪಾಯವನ್ನು ತಿಳಿಸಲಾಗಿದೆ . ಎರಡು ಲವಂಗವನ್ನು ತೆಗೆದುಕೊಳ್ಳಬೇಕು, ಜೊತೆಗೆ ಎರಡು ತುಂಡು ಕರ್ಪೂರವನ್ನು ತೆಗೆದುಕೊಳ್ಳಬೇಕು . ಇಲ್ಲಿ ಬೇಕಾದರೆ ಏಲಕ್ಕಿಯನ್ನು ಕೂಡ ಜೊತೆಗೆ ತೆಗೆದುಕೊಳ್ಳಬಹುದು . ಇದನ್ನು ನಿಮ್ಮ ಮನೆಯ ದೇವರು ಕೋಣೆಯಲ್ಲಿ ಸುಟ್ಟು ಬಿಡಬೇಕು . ಶತ್ರುವಿನ ಹೆಸರನ್ನು ತೆಗೆದುಕೊಂಡು ಸುಡಬೇಕು . ಆ ನಂತರ ಇದರ ಬೂದಿಯನ್ನು ಮನೆಯಿಂದ ಆಚೆ ಎಸೆಯಬೇಕು . ದೊಡ್ಡದಾದ ಶತ್ರುಗಳು ಕೂಡ ನಿಮ್ಮ ಕಾಲ ಕೆಳಗಡೆ ಬರುತ್ತಾರೆ .
ಯಾವತ್ತಿಗೂ ನಿಮಗೆ ತೊಂದರೆಯನ್ನು ಕೊಡುವುದಿಲ್ಲ . ನಿಮ್ಮ ಜೀವನದಲ್ಲಿ ವೃದ್ಧಿಯಾಗುತ್ತದೆ . ಸಮಾಜದಲ್ಲಿ ನಿಮ್ಮ ಗೌರವ ಘನತೆ ಕೂಡ ಹೆಚ್ಚಾಗುತ್ತದೆ . ನೀವು ಮಾಡುವ ವ್ಯಾಪಾರದಲ್ಲಿ ಉತ್ತಮವಾದ ಲಾಭವನ್ನು ಕಾಣಬಹುದು . ಉದ್ಯೋಗ ವ್ಯಾಪಾರದಲ್ಲಿ ವೃದ್ಧಿಯಾಗಲು ನೀವು ಇಷ್ಟ ಪಡುತ್ತಿದ್ದರೆ , ಇಲ್ಲಿ ಎರಡು ಲವಂಗಗಳನ್ನು ತೆಗೆದುಕೊಳ್ಳಬೇಕು . ಅವುಗಳಿಗೆ ಸಿಂಧೂರವನ್ನು ಹಚ್ಚಿ ಆಂಜನೇಯ ಸ್ವಾಮಿಯ ಬಲಗಾಲಿನಲ್ಲಿ ಇಡಬೇಕು . ನಂತರ ಅವುಗಳನ್ನು ತೆಗೆದುಕೊಂಡು ಹಣ ಇಡುವ ಸ್ಥಳದಲ್ಲಿ ಇಡಬೇಕು . ಅಥವಾ ವ್ಯಾಪಾರ ಸ್ಥಳದಲ್ಲಿ ಇಡಬಹುದು . ವೇಗವಾಗಿ ನಿಮ್ಮ ವ್ಯಾಪಾರ ನಡೆಯಲು ಶುರುವಾಗುತ್ತದೆ :ಆಂಜನೇಯ ಸ್ವಾಮಿಯ ಕೃಪೆಯಿಂದ ಹಗಲು ರಾತ್ರಿ ಒಳ್ಳೆಯ ಲಾಭವನ್ನು ಕಾಣಬಹುದು . ವಿಶೇಷವಾಗಿ ಲವಂಗದಿಂದ ಅದ್ಭುತವಾದ ಲಾಭಗಳು ದೊರೆಯುತ್ತದೆ .