ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನುಷ್ಯರು ಕಣ್ಣು ಬಿದ್ದರೆ ಮರೆವೇ ಮುರಿಯುತ್ತಂತೆ, ಜೊತೆಯಲ್ಲಿ ಇದ್ದು ಕೆಟ್ಟದ್ದಾಗಲಿ ಎಂದು ಬಯಸುವ ಜನರು ತುಂಬಾ ಇದ್ದಾರೆ. ಮಾತಲ್ಲಿ ಬಣ್ಣ ಮನಸಲ್ಲಿ ಸುಣ್ಣ ಇಟ್ಟುಕೊಂಡಿರುವ ಜನರಿದ್ದಾರೆ ಎಚ್ಚರಿಕೆ . ಇಂಥವರ ದೃಷ್ಟಿ ಬಿದ್ದಾಗ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗುತ್ತಾನೆ, ಮುಖದಲ್ಲಿ ತೇಜಸ್ಸು ಚೈತನ್ಯ ಎರಡು ಇರುವುದಿಲ್ಲ. ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ತೆಗೆಯೋದು ಅವಶ್ಯಕ.ದೃಷ್ಟಿಯಲ್ಲಿ ನಾಲ್ಕು ವಿಧವಾಗಿರುತ್ತದೆ.
1) ಕಣ್ಣಿನ ದೃಷ್ಟಿ 2) ನರದೋಷ 3) ನರ ಪೀಡೆ 4) ನರಶಾಪ
ಕಣ್ಣಿನ ದೃಷ್ಟಿ ತಗಲುವುದರಿಂದ ನಮ್ಮ ಅಭಿವೃದ್ಧಿ ದಿನೇ ದಿನೇ ಕುಂಠಿತವಾಗುತ್ತದೆ ಮತ್ತು ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೆಯೇ ಕುಟುಂಬದವರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ತಲೆನೋವು, ತಲೆ ಸುತ್ತು, ವಾಂತಿ ಮತ್ತು ಹೊಟ್ಟೆ ನೋವು ಊಟ ತಿಂಡಿ ಸರಿಯಾಗಿ ಮಾಡುವುದಿಲ್ಲ. ಮಂಕಾಗಿ ಇರುವುದು ನಿಶಕ್ತಿ ಇವೆಲ್ಲ ದೃಷ್ಟಿ ದೋಷದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು. ದೃಷ್ಟಿ ತಗಲಬಾರದು ಎಂದರೆ ನೀವು ಅಂತ ಜನರ ಮಧ್ಯೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.
ಹಣೆಯ ಮೇಲೆ ಸದಾ ಕುಂಕುಮ ಇರುವಂತೆ ನೋಡಿಕೊಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಕುಮ ಇಟ್ಟರೆ ದೃಷ್ಟಿ ತಗಲುವುದೇ ಇಲ್ಲ. ಗಂಡಸರು ಕೆಂಪು ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ನರ ದೃಷ್ಟಿ ಆಗುವುದಿಲ್ಲ. ಚಿಕ್ಕ ಮಕ್ಕಳಿಗೆ ಕಪ್ಪು ಬಣ್ಣದ ನೂಲನ್ನು ಕೈಗೆ ಮತ್ತು ಕಾಲಿಗೆ ಕಟ್ಟುವುದರಿಂದ ಕೆಟ್ಟ ದೃಷ್ಟಿ ತಗಲುವುದಿಲ್ಲ. ಕಣ್ಣಿಗೆ ಹಚ್ಚುವ ಕಾಡಿಗೆ ಕೂಡ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ.
ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಚೆನ್ನಾಗಿ ಬೆಳೆಸಿದರೆ ಹಣದಂತೆ ನೋಡಿಕೊಂಡರೆ ನರ ದೃಷ್ಟಿ ಮನೆಯ ಮೇಲೆ ಮತ್ತು ಮನೆಯಲ್ಲಿ ವಾಸಿಸುವವರ ಯಾವ ಮನುಷ್ಯ ಪ್ರಾಣಿಗೋ ಕೆಟ್ಟ ಶಕ್ತಿಯ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತದೆ. ಈಗಾಗಲೇ ದೃಷ್ಟಿ ತಗಲು ಇದ್ದರೆ ಹೀಗೆ ಮಾಡಿ ದೃಷ್ಟಿ ದೋಷ ಇರುವವರು ಅದನ್ನು ನಿವಾರಿಸಲು ಒಂದು ಹಿಡಿ ಉಪ್ಪು ಮತ್ತು ಒಂದೆರಡು ಮೆಣಸಿನಕಾಯಿ ಜೊತೆಗೆ ನಿವಾರಿಸಿ ಬೆಂಕಿಯಲ್ಲಿ ಹಾಕಬೇಕು.
ದುಷ್ಟಶಕ್ತಿಗಳ ನಿವಾರಣೆಗೆ ಒಂದು ಪಾತ್ರೆಯಲ್ಲಿ ಉಪ್ಪು ಹಾಕಿ ಕಾಲನ್ನು 10 ನಿಮಿಷಗಳ ಕಾಲ ಅದರಲ್ಲಿ ಇಟ್ಟರೆ ಕೆಟ್ಟ ಕಣ್ಣಿನ ದೃಷ್ಟಿ ನಿವಾರಣೆ ಆಗುತ್ತದೆ.
ಕೊನೆಯದಾಗಿ ಹಂಚಿನ ಕಡ್ಡಿಯಲ್ಲಿ ಒಂಬತ್ತು ಕಡ್ಡಿಗಳನ್ನು ತೆಗೆದುಕೊಂಡು 9 ಬಾರಿ ನಿವಾಲಿಸಬೇಕು ಹೇಗೆಂದರೆ ಮೇಲಿಂದ ಕೆಳಗೆ ಮೂರು ಬಾರಿ ನಿವಾಲಿಸಿ ಎಡಬದಿಯಿಂದ ಮೂರು ಬಾರಿ ನಿವಾಲಿಸಿ ಬಲಬದಿಯಿಂದ ಮೂರು ಸುತ್ತು ನಿವಾರಿಸಿ ಹೀಗೆ ಒಟ್ಟು ಒಂಬತ್ತು ಸುತ್ತು ದೃಷ್ಟಿ ನಿವಾರಿಸಿ ದೃಷ್ಟಿ ತೆಗೆಯಬೇಕು. ಮನೆಯ ಹೊರಗೆ ತೆಗೆದುಕೊಂಡು ಒಂದು ಮೂಲೆಯಲ್ಲಿ ನಿಲ್ಲಿಸಿ ಬೆಂಕಿ ಹಚ್ಚಬೇಕು ಜೋರಾಗಿ ಸದ್ದು ಮಾಡುತ್ತಾ ಸುಟ್ಟು ಹೋದರೆ ಜಾಸ್ತಿ ದೃಷ್ಟಿ ತೆಗೆದೆ ಎಂದು ಅರ್ಥ.
ಇದನ್ನು ಮನೆಯವರ ಕೈಯಿಂದ ಮಾಡಿಸುವುದಕ್ಕಿಂತ ಪಕ್ಕದ ಮನೆಗೆ ಅವರನ್ನು ಕರೆದು ಮಾಡಿಸಿದರೆ ಉತ್ತಮ, ಇದರಿಂದ ದೃಷ್ಟಿ ದೋಷ ಬೇಗ ನಿವಾರಣೆಯಾಗುತ್ತದೆ. ಸ್ನೇಹಿತರೆ ಈ ಸಂಚಿಕೆ ನಿಮಗೆ ಇಷ್ಟ ಆದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಧನ್ಯವಾದಗಳು