ಮಿಥುನ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಇದೇ ತಿಂಗಳು ಗ್ರಹಣ ಇರುವುದರಿಂದ ಮುಂದಿನ ಒಂದುವರೆ ವರ್ಷದವರೆಗೂ ಈ ಗ್ರಹಣ ನಿಮಗೆ ಅಷ್ಟು ಫಲವನ್ನು ನೀಡುವುದಿಲ್ಲ ಎಂದು ಹೇಳಬಹುದು. ಈ ತಿಂಗಳ ಕೊನೆಯಲ್ಲಿ ನಿಮಗೆ ವಿಶೇಷವಾದ ಫಲ ಸಿಗುತ್ತದೆ ಎಂದು ಹೇಳಬಹುದು. ಅಕ್ಟೋಬರ್ ಮೂರನೇ ತಾರೀಖಿನ ನಂತರ ನಿಮ್ಮ ರಾಶಿಗೆ ಕುಜನ ಪ್ರವೇಶವಾಗುತ್ತದೆ.

ಮಕ್ಕಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. 16ನೇ ತಾರೀಕು ನಂತರ ಇನ್ನಷ್ಟು ಎಚ್ಚರ ವಾಗಿರಬೇಕು. ಏಕೆಂದರೆ ರವಿ ಮತ್ತು ಬುಧ ಕೂಡ ಪ್ರವೇಶವಾಗುತ್ತಾರೆ. ಬುಧನಿಂದ ಒಳ್ಳೆಯ ಫಲಗಳು ಬರುತ್ತದೆ. ಪಂಚಮದಲ್ಲಿ ಇರುವುದರಿಂದ ರವಿ ಅಷ್ಟೊಂದು ಫಲವನ್ನು ಕೊಡುವುದು. ಈ ತಿಂಗಳಲ್ಲಿ ಕಲಹಗಳು ಹೆಚ್ಚಾಗುತ್ತದೆ ಎಂದು ಹೇಳಬಹುದು. ಆರೋಗ್ಯದ ಸಮಸ್ಯೆ ಇದ್ದರೆ ಸೂರ್ಯ ನಮಸ್ಕಾರ ಮಾಡಬೇಕು.

ಅಥವಾ ಆದಿತ್ಯ ಹೃದಯ ಸ್ತೋತ್ರವನ್ನು ಓದಬಹುದು ಅಥವಾ ಕೇಳಬಹುದು. ಧ್ಯಾನ ಮಾಡಿ ನೆಮ್ಮದಿಯನ್ನು ಹೆಚ್ಚು ಮಾಡಿಕೊಳ್ಳುವುದು. ಈ ಒಂದು ಅಕ್ಟೋಬರ್ ತಿಂಗಳಲ್ಲಿ ಎರಡು ಗ್ರಹಗಳು ನಿಮಗೆ ವಿಶೇಷ ಫಲವನ್ನು ನೀಡುತ್ತದೆ, ಅದು ಯಾವುದೆಂದರೆ ಶುಕ್ರ ಗ್ರಹ ನಿಮಗೆ ಸಮೃದ್ಧಿಯನ್ನು ತಂದುಕೊಡುತ್ತದೆ.

ಕೆಲಸ ಕಾರ್ಯಗಳಲ್ಲಿ ತೀವ್ರವಾದ ಪ್ರಗತಿ ಉಂಟಾಗುತ್ತದೆ. ಬುಧ ಗ್ರಹ ಸಹ ಸಹಾಯ ಮಾಡುತ್ತದೆ. ಸುಖ ಸ್ಥಾನದ ಅಧಿಪತಿಯಾಗಿ, ರವಿ ಮತ್ತು ಕುಜನಿಂದ ಬರುವ ಸಮಸ್ಯೆಯನ್ನು ಬುಧ ಗ್ರಹ ಬಗೆಹರಿಸಿ ಕೊಡುತ್ತಾನೆ. ಬುಧ ಗ್ರಹದಿಂದ ನಿಮಗೆ ಸಂಪತ್ತಿನ ಸಂಚಯವಾಗುತ್ತದೆ.

Leave A Reply

Your email address will not be published.