ನಾವು ಈ ಲೇಖನದಲ್ಲಿ ನೀನು ಒಂಟಿಯಾಗಿ ಇದ್ದರೆ ನಿನ್ನಷ್ಟು ಅದೃಷ್ಟವಂತ ಯಾರು ಇಲ್ಲ ಎಂಬ ವಿಷಯದ ಬಗ್ಗೆ ತಿಳಿಯೋಣ . ಯಾಕೆಂದರೆ ಯಾರ ಸಹವಾಸ ಕೂಡ ಇರಲ್ಲ . ಯಾವ ನೋವು ಇರಲ್ಲ . ನೀನು ಒಂಟಿಯಾದಷ್ಟು ನಿನ್ನನು ನೋಯಿಸಿದವರು ನೆನಪಾಗುತ್ತಾರೆ. ನಿನ್ನನ್ನು ಬಿಟ್ಟು ಹೋದವರು ನೆನಪಾಗುತ್ತಾರೆ .
ಆದರೆ ಅದೆಲ್ಲವನ್ನು ಮೀರಿ ನಿಲ್ಲಬೇಕು, ಗೆಲ್ಲಬೇಕು, ಅನ್ನೋ ಛಲ ಕೂಡ ಬಂದೆ ಬರುತ್ತದೆ .ನೀನು ಎಲ್ಲವನ್ನೂ ಎಲ್ಲರನ್ನೂ ಮೀರಿ ನಿಲ್ಲಬೇಕು. ನಿನ್ನ ಗೆಲುವನ್ನು ಸಾಧಿಸುತ್ತಾ ನಿನ್ನ ಮೇಲೆ ನಂಬಿಕೆ ಇಲ್ಲದವರ ಎದೆಯನ್ನು ನಡುಗುವಂತೆ ಮಾಡಬೇಕು.
ನಿಧಾನವಾಗಿ ಗೆದ್ದರೂ ಪರವಾಗಿಲ್ಲ, ಆದರೆ ನಿನ್ನ ಗೆಲುವು ಯಾವತ್ತಿಗೂ ನಿಯತ್ತಾಗಿ ಇರಬೇಕು.ಆತ್ಮ ಬಲ ಎಂಬ ಅಸ್ತ್ರ ನಿನ್ನ ಕೈಯಲ್ಲಿ ಇದ್ದರೆ ಆಕಾಶವೇ ನಿನ್ನ ಕೈಯಲ್ಲಿ ಇರುತ್ತದೆ .ನಿನಗೆ ಸಿಕ್ಕಿರುವ ಈ ಬದುಕು ನೀನು ಬದುಕುವುದಕ್ಕೆ ಹೊರತು ಇತರರನ್ನು ಮೆಚ್ಚಿಸುವುದಕ್ಕೆ ಅಲ್ಲ.
ನಿನ್ನನ್ನು ನೋಯಿಸಿದವರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ನೀನು ಏನನ್ನು ಮಾಡಬೇಡ .ಕಾಲವೇ ಸಮಾಧಾನ ಮಾಡುತ್ತದೆ. ದೇವರು ಹೊಡೆಯುವ ಏಟು ತುಂಬಾನೇ ಭಯಂಕರವಾಗಿ ಇರುತ್ತದೆ . ನಿನ್ನ ಎಲ್ಲಾ ದುಃಖದಲ್ಲಿ ಪಾಲುದಾರನಾಗು. ನಿನ್ನ ದುಃಖಕ್ಕೆ ನೀನೆ ಸಾಹುಕಾರನಾಗು .
ನನ್ನವರು ನನ್ನವರು ಅಂತ ಹೇಳಿದವರೇ ತನ್ನ ಮನೆಗೆ ಬೆಂಕಿ ಹಚ್ಚಿಕೊಂಡಿರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ. ನಡೆಯುವ ದಾರಿಯಲ್ಲಿ ಎಚ್ಚರವಿರಲಿ . ಯಾವ ವ್ಯಕ್ತಿ ನಿನ್ನ ಮೇಲೆ ಪ್ರತಿ ಸಾರಿ ಅನುಮಾನ ಪಡುತ್ತಾನೆ. ಅಂದರೆ ಅವನಿಗೆ ನೀನು ಮೃಷ್ಟಾನ್ನ ಭೋಜನ ನೀಡಿದರು ಅವನು ಅದನ್ನು ಅನುಮಾನದಿಂದಲೇ ನೋಡುವುದು .
ಈ ಪ್ರಪಂಚದಲ್ಲಿ ಯಾರಿಗೂ ಯಾರು ಇಲ್ಲ. ನಮಗೆ ನಾವೇ ಎಲ್ಲ . ನಮಗೆ ತಿಳಿಸುವುದು ಸೋಲೇ ಹೊರತು ಗೆಲುವಲ್ಲ . ಕೋಟಿ ಕೋಟಿ ಜಾಗ ಶಾಶ್ವತ ಅಲ್ಲ . ಆದರೆ ಜೀವ ಕೊಟ್ಟು ಖರೀದಿಸುವ ಆರಡಿ ಮೂರಡಿ ಜಾಗ ಮಾತ್ರ ಶಾಶ್ವತ .
ಜೀವನದಲ್ಲಿ ಅವನಿಗೋಸ್ಕರ ಬದುಕುತ್ತೀವಿ, ಇವನಿಗೋಸ್ಕರ ಬದುಕುತ್ತೀವಿ, ಅಂತ ಹುಚ್ಚು ಹುಚ್ಚಾಗಿ ಮಾತಾಡ ಬೇಡ . ನಿನ್ನನ್ನು ನೀನು ನಂಬು ನಿನ್ನನ್ನು ನಂಬಿದವರ ನಿನ್ನ ತಂದೆ ತಾಯಿಗೋಸ್ಕರ ಬದುಕು. ಅದೇ ನಿಜವಾದ ಬದುಕು. ಅದೇ ಸಾರ್ಥಕತೆಯ ಬದುಕು. ಜೀವನದಲ್ಲಿ ಏನೇ ನಿರ್ಧಾರ ತೆಗೆದುಕೊಂಡರೂ ಯೋಚನೆ ಮಾಡಿ ನಿರ್ಧಾರ ತಗೋ .
ಆದರೆ ಇಡೀ ಜೀವನವೇ ಯೋಚನೆ ಮಾಡುವುದರಲ್ಲಿ ಕಳೆಯ ಬೇಡ . ಜೀವನದ ಅತ್ಯುತ್ತಮ ಪಾಠವನ್ನು ಯಾವಾಗಲೂ ಜೀವನದ ಅತಿ ಕೆಟ್ಟ ಪರಿಸ್ಥಿತಿಯಲ್ಲಿ ಕಲಿತೀವಿ , ಅನ್ನೋದನ್ನು ಯಾವತ್ತೂ ನಾವು ಮರಿಯಬಾರದು .