ದೇವರಲ್ಲಿ ಹರಿಕೆ ಹೊತ್ತು ನೀವು ಮರೆತ್ತಿದ್ದರೆ , ಏನು ಮಾಡಬೇಕು

ನಾವು ಈ ಲೇಖನದಲ್ಲಿ ದೇವರಲ್ಲಿ ಹರಿಕೆ ಹೊತ್ತು ನೀವು ಮರೆತ್ತಿದ್ದರೆ , ಏನು ಮಾಡಬೇಕು ಎಂದು ತಿಳಿಯೋಣ . ನಮಗೆ ಕಷ್ಟಗಳು ಬಂದಾಗ ಕಷ್ಟಗಳನ್ನು ನಿವಾರಿಸಲು ದೇವಸ್ಥಾನಕ್ಕೆ ತೆರಳಿ ದೇವರಿಗೆ ಹರಿಕೆಗಳನ್ನು ಹೊರುತ್ತೇವೆ .ಅಥವಾ ಮನೆ ದೇವರಿಗೆ ಹರಕೆಯನ್ನು ಕೋರುತ್ತೇವೆ . ಕಷ್ಟಗಳನ್ನು ತೀರಿದ ನಂತರ ಹರಕೆಯನ್ನು ತಿರೀಸದೆ ಮರೆತು ಬಿಟ್ಟು ಇದರಿಂದ ಸಾಕಷ್ಟು ಕಷ್ಟಗಳು ಅನುಭವಿಸಬೇಕಾಗುತ್ತದೆ .

ನಾವು ಮಾಡುವ ಕೆಲಸಗಳಲ್ಲಿ ಅಡಚಣೆ ಉಂಟಾಗುವುದು, ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ . 1 . ನಿಮ್ಮ ಮನೆ ದೇವರಿಗೆ ಹರಿಕೆಯನ್ನು ಹೊತ್ತಿಕೊಂಡಲ್ಲಿ ಮೊದಲು ನಿಮ್ಮ ಮನೆ ದೇವರಿಗೆ ಹರಿಕೆಯನ್ನು ತೀರಿಸಿ .2 . ನೀವು ದೇವರಲ್ಲಿ ಹರಿಕೆ ಹೊರುವ ಮುನ್ನ ನಿಮಗೆ ಹರಿಕೆ ತೀರಿಸಲು ಸಾಧ್ಯ ಆಗುವುದಾದರೆ ಮಾತ್ರ ಅಂತಹುದನ್ನು ಹರಿಕೆಯನ್ನು ಮಾಡಿ ಕೊಳ್ಳಿ .

3.ನೀವು ದೇವರಲ್ಲಿ ಹರಿಕೆಯನ್ನು ಹೊತ್ತ ನಂತರ ಅದನ್ನು ಒಂದು ಪುಸ್ತಕದಲ್ಲಿ ಬರೆದು ದೇವರ ಮನೆಯಲ್ಲಿ ಇಡಿ . 4.ನೀವು ಯಾರಿಗಾದರೂ ಅನಾರೋಗ್ಯದ ಸಮಸ್ಯೆಗೆ ಹರಿಕೆಯನ್ನು ಹೊತ್ತಿದ್ದರೆ , ನೀವು ಹರಿಕೆಯನ್ನು ತೀರಿಸದೆ ಹೋದರೆ , ಅವರಿಗೆ ಪದೇ ಪದೇ ಅನಾರೋಗ್ಯದ ಸಮಸ್ಯೆ ಕಾಡುವುದು .

5.ನೀವು ಯಾವುದಾದರೂ ದೇವರುಗಳಿಗೆ ಮುಡುಪ್ಪನ್ನು ಕಟ್ಟಿ ಮರೆತ್ತಿದ್ದರೆ, ಹರಿಯುವ ನೀರಿನಲ್ಲಿ ಅಥವಾ ಬಾವಿಯಲ್ಲಿ ಅದನ್ನು ಬಿಟ್ಟು ಈ ಮುಡುಪು ಕಟ್ಟಿರುವ ದೇವರಿಗೆ ಸೇರಲಿ ಎಂದು ಕೈ ಮುಗಿದು ಪ್ರಾರ್ಥನೆಯನ್ನು ಸಲ್ಲಿಸಿ .

6.ನೀವು ಕೆಲಸ ಸಿಗಲಿ ಎಂದು ಹರಿಕೆ ಹೊತ್ತಿದ್ದರೆ , ಕೆಲಸ ಸಿಕ್ಕಿದ ನಂತರ ಹರಿಕೆ ತೀರಿಸದೆ ಹೋದರೆ , ಕೆಲಸದಲ್ಲಿ ಕಿರಿಕಿರಿ ಸಂಬಳ ಸರಿಯಾಗಿ ಕೊಡದಿರುವುದು , ಕೆಲಸದ ಯಜಮಾನನ ಕಿರುಕುಳ , ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ .

7 . ನೀವು ಮನೆ ಕಟ್ಟಲು ಏನಾದರೂ ಹರಿಕೆಯನ್ನು ಹೊಂದಿದ್ದರೆ , ಅದನ್ನು ತೀರಿಸದಿದ್ದರೆ ಮನೆಯು ಪೂರ್ಣವಾಗದೆ ಅಡಚಣೆ ಉಂಟಾಗುವುದು. ನೀವು ಮನೆಯನ್ನು ಕಟ್ಟಿದ ನಂತರವೂ ಸಹ ಮನೆಯಿಂದ ಏನಾದರೂ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ .

8 . ಒಂದು ವೇಳೆ ನಮ್ಮ ಹಿರಿಯರು ಹೊತ್ತ ಹರಿಕೆಯನ್ನು ಅವರ ಮಕ್ಕಳು ಅಥವಾ ಮೊಮ್ಮೊಕ್ಕಳು ತೀರಿಸಬಹುದಾಗಿ ಇರುತ್ತದೆ ಇದರಿಂದ ನಮ್ಮ ಹಿರಿಯರಿಗೂ ದೋಷಗಳು ಹೊರಟು ಹೋಗಿ , ನಮಗೂ ಸಹ ದೈವ ಶಾಪದಿಂದ ಮುಕ್ತಿ ದೊರೆಯುತ್ತದೆ .

9 . ನೀವು ಮುಡುಪನ್ನು ಯಾವ ದೇವರಿಗೆ ಕಟ್ಟಿರುತ್ತೀರಿ, ಎಂದು ಕೆಲವು ದಿನಗಳ ನಂತರ ಮರೆತು ಹೋಗುತ್ತೀರಿ . ಹೀಗೆ ಆಗದಿರಲು ಒಂದು ಡಬ್ಬಿಯಲ್ಲಿ ಅದನ್ನು ಇಟ್ಟು ಒಂದು ಸಣ್ಣ ಚೀಟಿಯಲ್ಲಿ ಯಾವ ದೇವರಿಗೆ ಯಾವ ಕಾರಣಕ್ಕಾಗಿ ಮುಡುಪನ್ನು ಕಟ್ಟಿರುತೀರಾ ಎಂದು ವಿವರವಾಗಿ ಬರೆದು ಡಬ್ಬಿಯಲ್ಲಿ ಇಡಿ .

ಕಷ್ಟಗಳು ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯರು ಏನಾದರೂ ಹರಿಕೆ ಹೊತ್ತಿದ್ದರೆ ಅವರು ಇಲ್ಲದಿದ್ದರೆ ನೀವು ಹೀಗೆ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ ಸಾಯಂಕಾಲ ಗೋಧೂಳಿ ಸಮಯದಲ್ಲಿ ದೇವರಲ್ಲಿ ನಿಮ್ಮ ಅಜ್ಜ ಅಜ್ಜಿ ಯಾವ ದೇವರಿಗೆ ಹರಿಕೆಯನ್ನು ಹೊತ್ತಿದ್ದಾರೋ ಅವರು ಮರೆತಿರಬಹುದು. ಆದ್ದರಿಂದ ಅವರನ್ನು ಕ್ಷಮಿಸಿ ನಮಗೆ ಕಷ್ಟಗಳು ಎದುರಾಗದಂತೆ ನಮ್ಮನ್ನು ಕಾಪಾಡಿ ಎಂದು ಪ್ರಾರ್ಥಿಸಿ ದೋಷ ನಿವಾರಣೆಯಾಗುತ್ತದೆ.

Leave a Comment