ಇಂದಿನ ಲೇಖನದಲ್ಲಿ ಕೂದಲು ಉದುರುವಿಕೆ, ಕೂದಲು ಹೊಟ್ಟಾಗುವಿಕೆ, ನೆರೆಕೂದಲಿನ ಸಮಸ್ಯೆ, ಕೂದಲು ಅರ್ಧಕ್ಕೆ ಕಟ್ಟಾಗುವ ಸಮಸ್ಯೆ ಇತ್ಯಾದಿ ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲು ಕೂದಲು ಉದುರಲು ಕಾರಣವನ್ನು ತಿಳಿದುಕೊಳ್ಳೋಣ. ಮಾನಸಿಕ ಒತ್ತಡ, ನಿದ್ರಾಹೀನತೆ, ಹಾರ್ಮೋನ್ ವ್ಯತ್ಯಾಸ, ಥೈರಾಯ್ಡ್ ಅಸಮತೋಲನ, ಪಿಸಿಓಡಿ, ಪಿಸಿಓಎಸ್, ಫೈಬ್ರೈಯಿಡ್ ಗರ್ಭಕೋಶದಲ್ಲಿನ ಸಮಸ್ಯೆ, ಗಂಡು ಮಕ್ಕಳಲ್ಲೂ ಹಾರ್ಮೋನ್ ವ್ಯತ್ಯಾಸವಾಗಿರುತ್ತದೆ. ಇದರ ಜೊತೆಗೆ ಅಜೀರ್ಣ, ಮಲಬದ್ಧತೆ ಇದು ಕೂದಲು ಉದುರಲು ಮುಖ್ಯವಾದ ಕಾರಣವಾಗಿದೆ.
ಕರುಳಿನಲ್ಲಿ ಹೊಲಸು ತುಂಬಿಕೊಂಡಾಗ ಆ ಫಂಗಸ್ ಗಳು ರಕ್ತಸಂಚಾರದ ಮೂಲಕ ತಲೆಗೆ ಹೋಗುತ್ತದೆ. ಕೆಟ್ಟ ಬ್ಯಾಕ್ಟೇರಿಯಾ, ಫಂಗಸ್ ಗಳು ತಲೆಗೆ ಹೋದಾಗ ತಲೆಯ ಕೂದಲಿನ ರಂಧ್ರಗಳಿಗೆ ಹಾನಿ ಉಂಟುಮಾಡುತ್ತದೆ. ಕೂದಲು ಉದುರುವ ಸಮಸ್ಯೆಗೆ ತಲೆಗೆ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ಹೊಟ್ಟೆಗೆ ಔಷಧಿಯನ್ನು ತೆಗೆದುಕೊಳ್ಳಬೇಕು. ಕೂದಲಿಗೆ ಬೇಕಾಗಿರುವ ಪೌಷ್ಠಿಕಾಂಶಗಳು ಹೊಟ್ಟೆಯಿಂದ ಸಿಗುವಂತೆ ಮಾಡಬೇಕು. ತಲೆಯ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡುವ ಮನೆಮದ್ದು ಯಾವುದು
ಎಂದರೆ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್. ಬೆಳಿಗ್ಗೆ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಅನ್ನು ಕುಡಿಯುವುದರಿಂದ ತಲೆಯ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಎರಡರಿಂದ ಮೂರು ಬೆಟ್ಟದ ನೆಲ್ಲಿಕಾಯಿ ಮತ್ತು ಸ್ವಲ್ಪ ಸೈಂಧವಲವಣವನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರು ಮಾಡಿ ಸೇವನೆ ಮಾಡುವುದರಿಂದ ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ. ಸೈಂಧವ ಲವಣವನ್ನು ಆಯುರ್ವೇದದಲ್ಲಿ ಕೂದಲಿನ ಸಮಸ್ಯೆಗೆ ಒಳ್ಳೆಯ ಔಷಧಿ ಎಂದು ತಿಳಿಸಲಾಗಿದೆ.
ಬೆಟ್ಟದ ನೆಲ್ಲಿಕಾಯಿಯು ಕೇಶ ವೃದ್ಧಿ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿರುವ ಕೊಳೆಯನ್ನು ತೆಗೆಯುತ್ತದೆ. ಇದರಲ್ಲಿ ಆಂಟಿಫಂಗಲ್, ಆಂಟಿಮೈಕ್ರೋಬಿಯಲ್, ಇದರಲ್ಲಿರುವ ವಿಟಮಿನ್ ಸಿ ಅಂಶ, ಮೈಕ್ರೋನ್ಯೂಟ್ರಿಷಿಯನ್ಸ್ ಅಂಶ, ಇದರಲ್ಲಿರುವ ಮಿನರಲ್ಸ್ ಗಳು ನಮ್ಮ ಕೂದಲಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿವೆ. ಕೂದಲಿನ ಸಮಸ್ಯೆಯನ್ನ ಪರಿಹಾರ ಮಾಡಿಕೊಳ್ಳಬೇಕಾದರೇ ಮೊದಲು ಜಂಕ್ ಫುಡ್, ಬೇಕರಿ ಪದಾರ್ಥಗಳ ಸೇವನೆಯನ್ನು ಬಿಡಬೇಕು. ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು. ಒತ್ತಡ, ಕೋಪ ಇವೆಲ್ಲದರಿಂದ ಮುಕ್ತವಾಗಬೇಕು.
ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲೇ ತಯಾರು ಮಾಡಿಕೊಳ್ಳಬಹುದಾದ ತೈಲವನ್ನು ತಿಳಿಸಿಕೊಡುತ್ತೇವೆ. ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಿದರೇ ಎಷ್ಟೂ ಪ್ರಯೋಜನಕಾರಿಯಾಗಿದೆಯೋ ಅದೇ ರೀತಿ ಭೃಂಗ ಆಯುರ್ವೇದಕ ತೈಲವೆಂದು ಆಯುರ್ವೇದದಲ್ಲಿ ತಯಾರು ಮಾಡುತ್ತಾರೆ. ಭೃಂಗರಾಜ ಎಂದು ನಿಮ್ಮ ಮನೆಯ ಸುತ್ತಮುತ್ತ ಸಿಗುತ್ತದೆ ಆ ಗಿಡದ ಎಲೆಯನ್ನ ಕಾಲ್ ಕೆಜಿ ಮತ್ತು ಬೆಟ್ಟದ ನೆಲ್ಲಿಕಾಯಿಯ ಬೀಜವನ್ನು ತೆಗೆದು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ, ಅದರ ಪೇಸ್ಟ್ ಕಾಲ್ ಕೆಜಿ ಈ ಎರಡರ ಮಿಶ್ರಣವನ್ನು ಒಂದು ಬಟ್ಟೆಗೆ ಹಾಕಿ ಅದರ ರಸವನ್ನು ತೆಗೆಯಬೇಕು,
ಸುಮಾರು ಎರಡು ಮೂರು ಸಲ ಸ್ವಲ್ಪ ಸ್ವಲ್ಪ ನೀರು ಹಾಕಿ ರಸವನ್ನು ತೆಗೆದುಕೊಳ್ಳಬೇಕು. ಅದನ್ನು ಒಂದು ಕೆ.ಜಿ ಕೊಬ್ಬರಿ ಎಣ್ಣಗೆ ಹಾಕಿ ಚೆನ್ನಾಗಿ ಕುದಿಸಬೇಕು. ಸಣ್ಣ ಉರಿಯಲ್ಲಿ ಕುದಿಸಬೇಕು ನೀರಿನ ಅಂಶ ಹೋಗಿ ಔಷಧಿಯ ಸತ್ತ್ವ ಆ ಕೊಬ್ಬರಿ ಎಣ್ಣೆಯಲ್ಲಿ ಬೆರೆತಾಗ ಅದ್ಭುತವಾದ ಹೇರ್ ಆಯಿಲ್ ಆಗುತ್ತದೆ. ತಲೆಯ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು ನಂತರ ಸ್ವಲ್ಪ ಹೊತ್ತು ಬಿಟ್ಟು ಅಂಟವಾಳಕಾಯಿ, ಸೀಗೆಕಾಯಿಯನ್ನು ಬಳಸಿ ತಲೆಯ ಸ್ನಾನ ಮಾಡಬೇಕು. ಯಾವುದೇ ತರಹದ ಶ್ಯಾಂಪೂ ಅನ್ನು ಬಳಸಬಾರದು ಅವು ಕೂದಲಿನ ಬುಡಕ್ಕೆ ಹಾನಿ ಉಂಟುಮಾಡುತ್ತವೆ. ವಾರಕ್ಕೆ ಎರಡು ಬಾರಿ ಈ ಎಣ್ಣೆಯನ್ನು ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ತಲೆಯ ಸ್ನಾನ ಮಾಡುವುದರಿಂದ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.