ಸದಾ ಆರೋಗ್ಯವಾಗಿರಲು ನಮ್ಮ ಹಿರಿಯರು ನಂಬಿಕೊಂಡು ಬಂದ ಕೆಲವೊಂದು ಮುಖ್ಯವಾದ ಸಲಹೆಗಳು. ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೆ ಅಥವಾ ನೆನಪಿನ ಶಕ್ತಿ ವೃದ್ಧಿ ಆಗಲು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ.
ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುರುಕುಗೊಳ್ಳುತ್ತದೆ.ಊಟ ಮಾಡುವಾಗ ಹೆಚ್ಚು ನೀರು ಕುಡಿಯಬಾರದು. ತಣ್ಣೀರು ಕುಡಿದ ನಂತರ ಚಹಾ ಕುಡಿಯಬಾರದು. ಬೆಳ್ಳುಳ್ಳಿ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಹೊಟ್ಟೆ ಬೊಜ್ಜು ಕರಗಿಸಬಹುದು.
ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ಲಕ್ವಾ ಹೊಡೆಯುವ ಸಾಧ್ಯತೆವಿರುತ್ತದೆ. ವಾರಕ್ಕೊಮ್ಮೆ ಉಪವಾಸ ಮಾಡುವುದರಿಂದ ಸೂಕ್ತ ರೋಗಗಳು ಬರುವುದಿಲ್ಲ. ಉಸಿರಾಟದ ತೊಂದರೆ ಇರುವವರು ಬಾರಿ ಹಣ್ಣು ತಿನ್ನಬೇಕು.
ಹಾಗಲಕಾಯಿ ನೀರನ್ನು ಕುಡಿಯುವುದರಿಂದ ಮುಖದ ಮೇಲೆ ಕಲೆಗಳು ಬರದಂತೆ ತಡೆಯುತ್ತದೆ. ಕೆಂಪು ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಮಲಗುವ ಮುನ್ನ ಒಂದು ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ನಿದ್ರೆ ಬೇಗ ಬರುತ್ತದೆ.
ಮೂಲವ್ಯಾಧಿ ರೋಗ ಇದ್ದವರು ಪಪ್ಪಾಯ ಹಣ್ಣು ಪ್ರತಿನಿತ್ಯ ತಿಂದರೆ ಉರಿ ಕಡಿಮೆಯಾಗುತ್ತದೆ. ನೀರಡಿಕೆ ಆದರೆ ಉಗುರು ಬಿಚ್ಚಗಿನ ನೀರನ್ನು ಗುಟುಕು ಗುಟಕಾಗಿ ಕುಡಿಯಬೇಕು. ನೆಲ್ಲಿಕಾಯಿ ತಿನ್ನುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
ತುಂಬಾ ತೆಳ್ಳಗೆ ಇರುವವರು ರಾಗಿ ಗಂಜಿ ಮಾಡಿ ಕುಡಿದರೆ ತೂಕವನ್ನು ಹೆಚ್ಚಿಸಬಹುದು. ರಾತ್ರಿ ಸಿಹಿ ತಿನ್ನುವುದನ್ನು ತಪ್ಪಿಸಿ ಮತ್ತು ರಾತ್ರಿಯ ವೇಳೆ ಕಡಿಮೆ ಆಹಾರವನ್ನು ಸೇವಿಸಬೇಕು. ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಅದಕ್ಕೆ ಒಂದು ಚಮಚ ಬೆಲ್ಲ ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.
ಶೀತ ಕಡಿಮೆ ಆಗದಿದ್ದರೆ ಅರಿಶಿನ ಹಾಲು ಕುಡಿಯಿರಿ. ಬೀಟ್ರೋಟ್ ರಸವನ್ನು ಕುಡಿಯುವುದರಿಂದ ರಕ್ತದ ಕಣಗಳು ಹೆಚ್ಚುತ್ತವೆ. ಹೆಚ್ಚು ಹೊತ್ತು ಮಲಗದೆ ಇರುವುದರಿಂದ ಬುದ್ದಿವಂತಿಕೆ ಕಡಿಮೆಯಾಗುತ್ತದೆ. ಅದಕ್ಕೆ ಕನಿಷ್ಠ 7 ಘಂಟೆಗಳ ಕಾಲ ನಿದ್ರೆ ಮಾಡಲೇಬೇಕು.
ದಾಳಿಂಬೆ ತಿನ್ನುವುದರಿಂದ ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಬಹುದು. ಅನ್ನಕ್ಕಿಂತ ಹೆಚ್ಚು ರೊಟ್ಟಿ ತಿನ್ನುವುದರಿಂದ ತೂಕ ಸಮತೋಲನದಲ್ಲಿರುತ್ತದೆ. ಟಮೋಟ ಕೆಚಪ್ ಬದಲಿಗೆ ಮನೆಯಲ್ಲೇ ಮಾಡಿದ ಟಮೋಟ ಚಟ್ನಿ ತಿನ್ನಿ.
ಬೆಳಗ್ಗೆ ನಿಮ್ಮ ಮುಖಕ್ಕೆ ಮೊಸರು ಹಚ್ಚಿ ಅರ್ಧ ಗಂಟೆಯ ನಂತರ ತೊಳೆದರೆ ನಿಮ್ಮ ಮುಖವು ಹೊಳೆಯುತ್ತದೆ. ಚಿನ್ನದ ತಟ್ಟೆಯಲ್ಲಿ ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ. ಬಿಕ್ಕಳಿಕೆಯನ್ನು ನಿಲ್ಲಿಸಲು ಒಂದು ಲವಂಗವನ್ನು ನೀರಿನ ಜೊತೆ ತೆಗೆದುಕೊಳ್ಳಿ.
ನಿಂಬೆರಸ ರಾತ್ರಿ ಮುಖಕ್ಕೆ ಹಚ್ಚಿ ಮಲಗಿದರೆ ಕಪ್ಪು ಕಲೆಗಳು ಮಾಯವಾಗುತ್ತವೆ. ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿದರೇ ನಿಮ್ಮ ಹಲ್ಲುಗಳು ವಸಡುಗಳು ಗಟ್ಟಿಯಾಗಿ ಹೊಳೆಯುವಂತೆ ಮಾಡುತ್ತದೆ.
ಸಿಹಿ ಮಾವು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಸೇರಿಸಿ ಅಗಿದು ತಿನ್ನುವುದರಿಂದ ಚರ್ಮ ರೋಗ ನಿವಾರಣೆಯಾಗುತ್ತದೆ.