ನಾವು ಈ ಲೇಖನದಲ್ಲಿ ಸದಾ ಯೌವ್ವನವಾಗಿ ಇರಲು ಕೆಲವೊಂದು ಟಿಪ್ಸ್ ಗಳು : – ಮನೆಯಿಂದ ಆಚೆ ಬಿಸಿಲಲ್ಲಿ ಹೋಗುತ್ತಿದ್ದರೆ, ಸೂರ್ಯ ಕಿರಣಗಳು ನೇರವಾಗಿ ನಿಮ್ಮ ಮುಖದ ಮೇಲೆ ಬೀಳುತ್ತದೆ . ಹಾಗಾಗಿ ಸನ್ ಸ್ಕ್ರೀನ್ ಗಳನ್ನು ಬಳಸಿರಿ.
2 ನಿದ್ರೆ ಸಮಯದಲ್ಲಿ ನಿಮ್ಮ ಚರ್ಮಕ್ಕೆ ಹೆಚ್ಚು ರಕ್ತ ಸಂಚಲನ ಆಗುವುದರಿಂದ , ಅತಿ ಹೆಚ್ಚು ನಿದ್ದೆ ಅಂದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದು ಒಳ್ಳೆಯದು.
3.ಕ್ಯಾರೆಟ್ ಮತ್ತು ಟೊಮ್ಯಾಟೋ ಇವೆರಡು ಚರ್ಮಕ್ಕೆ ಬಹಳ ಒಳ್ಳೆಯದು . ಹಾಗಾಗಿ ಇವುಗಳನ್ನು ಅತಿ ಹೆಚ್ಚು ಸೇವನೆ ಮಾಡಿದರೆ ನಿಮ್ಮ ಚರ್ಮವು ಯಂಗ್ ಆಗಿ ಇರುತ್ತದೆ.
ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಹಣ್ಣುಗಳು, ತರಕಾರಿ, ಸೊಪ್ಪುಗಳು ಹಾಗೂ ಮೊಳಕೆ ಕಾಳುಗಳನ್ನು ಹೆಚ್ಚು ಹೆಚ್ಚು ತಿನ್ನಬೇಕು.
ನಾವು ಪ್ರತಿನಿತ್ಯ ಡ್ರೈ ಫ್ರೂಟ್ಸ್ ಗಳ ಸೇವನೆಯನ್ನು ರೂಡಿಸಿಕೊಳ್ಳಬೇಕು. ಡ್ರೈ ಫ್ರೂಟ್ಸ್ ನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯುವುದರಿಂದ, ನಮ್ಮ ಚರ್ಮವು ಯಂಗ್ ಆಗಿರುವಂತೆ ನೋಡಿಕೊಳ್ಳುತ್ತದೆ.
ದಿನನಿತ್ಯದ ಗಡಿಬಿಡಿಯ ಜೀವನದಲ್ಲಿ ನಾವು ವ್ಯಾಯಾಮವನ್ನು ಮಾಡುವುದನ್ನು ಮರೆತಿರುತ್ತೇವೆ. ಆದರೆ ದಿನದಲ್ಲಿ 30 ರಿಂದ 40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಅಥವಾ ವಾಕಿಂಗ್ ಹೋಗುವುದು ಉತ್ತಮ.
ಪ್ರತಿನಿತ್ಯ ನಗು ನಗುತ್ತಾ ಚೆನ್ನಾಗಿದ್ದರೆ ನಿಮ್ಮ ಜೀವನವು ಖುಷಿಯಾಗಿರುತ್ತದೆ. ಹೀಗಾಗಿ ನಾವು ಯಂಗ್ ಆಗಿ ಕಾಣಲು ನಾವು ಖುಷಿ ಖುಷಿಯಾಗಿರುವುದು ಮುಖ್ಯ.
ಮುಖ್ಯವಾಗಿ ಆಹಾರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಕೊಳ್ಳಬೇಕು. ಜಂಕ್ ಫುಡ್ ಸಕ್ಕರೆಯುತ ಆಹಾರ ಬೇಕರಿ ತಿಂಡಿಗಳನ್ನು ಆದಷ್ಟು ಕಡಿಮೆ ಮಾಡಬೇಕು .
ಕೊಬ್ಬರಿ ಎಣ್ಣೆಯಿಂದ ಮುಖಕ್ಕೆ ಮಾಸಾಜ್ ಮಾಡುವುದರಿಂದ ನಿಮ್ಮ ಚರ್ಮವು ಯಂಗ್ ಆಗಿರುವಂತೆ ಇದು ನೋಡಿಕೊಳ್ಳುತ್ತದೆ . ಹಾಗೂ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ಇದು ತಡೆಯುತ್ತದೆ.
ನಿಮ್ಮ ದೇಹಕ್ಕೆ ಆಹಾರದ ಜೊತೆಗೆ ನೀರು ಕೂಡ ತುಂಬಾ ಮುಖ್ಯ ಹಾಗಾಗಿ ದಿನನಿತ್ಯ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ ಏಳರಿಂದ ಎಂಟು ಲೋಟವಾದರೂ ನೀರನ್ನು ಕುಡಿಯಬೇಕು.