ಮಾರ್ಚ್ ತಿಂಗಳಿನ ಸಿಂಹ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಭಾಗ್ಯದಲ್ಲಿರುವ ಗುರು ಗ್ರಹವು ಮಾರ್ಚ್ ತಿಂಗಳಿನಲ್ಲಿ ಬುಧಗ್ರಹವನ್ನು ಕೂಡಿಕೊಳ್ಳುತ್ತದೆ. ವಿದ್ಯಾರ್ಥಿಗಳ ಮಟ್ಟಿಗೆ ಒಳ್ಳೆಯ ಬೆಳವಣಿಗೆಯನ್ನು ತರುವಲ್ಲಿ ಈ ತಿಂಗಳು ಚೆನ್ನಾಗಿದೆ. ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಮಾರ್ಚ್ ತಿಂಗಳಿನಲ್ಲಿ ಒಳ್ಳೆಯ ಯಶಸ್ಸು ಇದೆ. ಭಾಗ್ಯದಲ್ಲಿ ಗುರು ಇರುವುದರಿಂದ ಅದೇ ಸ್ಥಾನಕ್ಕೆ ಬುಧಗ್ರಹವು ಬಂದಿದೆ. ವಿದ್ಯಾರ್ಥಿಗಳು ಒಳ್ಳೆಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಬುಧ ಗ್ರಹ ಬೇರೆ ವ್ಯಕ್ತಿಗಳ ಮಟ್ಟಿಗೆ ಕೆಲಸ ಕಾರ್ಯಗಳು ಇರಬಹುದು, ವ್ಯವಹಾರಸ್ಥರು ಇರಬಹುದು ಇಂತಹ ವ್ಯಕ್ತಿಗಳಿಗೆ ಬಹಳ ಪಾಸಿಟಿವ್ ಆಗದೇ ಇರಬಹುದು.
ನಿಮ್ಮ ನಿರೀಕ್ಷೆಯನ್ನು ತಲುಪದೇ ಇರುವ ನಿರೀಕ್ಷೆಗಳು ಈ ತಿಂಗಳು ಇರಬಹುದು. ನೀವು ಅಂದುಕೊಂಡಂತೆ ಸಾಧನೆ ಮಾಡಲು ಆಗುವುದಿಲ್ಲ. ನಿಮ್ಮ ಪ್ರಯತ್ನವು ಅಷ್ಟಾಗಿ ಇರದೇ ಇರುವುದರಿಂದ ಪ್ರತಿಫಲವು ಅಷ್ಟಾಗಿ ಸಿಗುವುದಿಲ್ಲ. ಸ್ಪಷ್ಟವಾಗಿ ಕಾಣಿಸುವುದು ಏನು ಎಂದರೆ ಶನಿ ದೃಷ್ಟಿ ನಿಮ್ಮ ರಾಶಿಯ ಮೇಲೆ ಇದೆ ಅಂತಹ ದೊಡ್ಡ ಅಪಾಯವಿಲ್ಲದಿದ್ದರೂ ಸೋಮಾರಿತನ, ಆಲಸ್ಯ, ನಿಧಾನ ಪ್ರಗತಿ ನಿಮ್ಮ ಹತ್ತಿರ ಇದೆ. ವೇಗವಾಗಿ ಹೋಗಲು ಸಮಸ್ಯೆಗಳಿವೆ ವೇಗವಾಗಿ ಹೋಗಲು ಬಿಡುತ್ತಿಲ್ಲ,
ನಿಮ್ಮ ಆಲೋಚನೆಯಲ್ಲೂ ಸ್ವಲ್ಪ ಗೊಂದಲಗಳಿವೆ. ಇಂದಿನ ಕೆಲಸವನ್ನು ನಾಳೆ ಮಾಡುವ ಎಂಬ ಆಲಸ್ಯ, ನಿಮ್ಮ ಬಗ್ಗೆಯೇ ನಿಮಗೆ ಅನುಮಾನಗಳು, ಯಾರೋ ನಿಮ್ಮ ಕಾಲನ್ನು ಎಳೆಯುವುದು, ನೀವು ಚುರುಕಾಗಿರಬೇಕು, ಕೆಲಸ ಮಾಡಬೇಕೆಂದುಕೊಂಡರೂ ಯಾರೋ ನಿಮ್ಮ ಬಗ್ಗೆ ಚಾಡಿ ಮಾಡುವುದು, ಬೇಡವಾದ ರೀತಿಯಲ್ಲಿ ಕಿವಿ ಊದುವುದು, ನಿಮ್ಮ ಫ್ರೀಡಂಗೆ ಅಡೆತಡೆಗಳನ್ನು ಸೃಷ್ಠಿ ಮಾಡುವಂತದ್ದು, ಖುಷಿಯಿಂದ, ಫ್ರೀಯಾಗಿ ಕೆಲಸ ಮಾಡಬಾರದು ಅದಕ್ಕೆ ಬೇಕಾದ ವಾತಾವರಣವನ್ನು ಹಾಳುಮಾಡುವಂತದ್ದು, ಈ ರೀತಿಯವರು ನಿಮ್ಮ ಅಕ್ಕಪಕ್ಕ ಹುಟ್ಟಿಕೊಂಡಿದ್ದಾರೆ.
ನಿಮ್ಮ ಆಫೀಸ್ ಇರಬಹುದು, ವ್ಯವಹಾರದಲ್ಲಿ, ಕೌಟುಂಬಿಕ ಜನರಲ್ಲಿ ಇರಬಹುದು, ಅವರಿಗೆಲ್ಲಾ ಸರಿಯಾದ ಏರ್ಪಾಟುಗಳನ್ನು ಸರಿಯಾಗಿ ಒಂದಲ್ಲ ಒಂದು ದಿನ ನೀವು ಮಾಡೇ ಮಾಡುತ್ತೀರಿ. ಇವತ್ತು ಸಣ್ಣ ಪುಟ್ಟ ಸಮಸ್ಯೆಗಳು ಇವೆ. ಇಂತಹ ಪರಿಸ್ಥಿತಿಯಲ್ಲಿ ನಿರೀಕ್ಷೆಗಳ ಮಟ್ಟವನ್ನು ತಲುಪಲು ಬಹಳ ಕಷ್ಟವಿದೆ. ಗುರಿಯಿಂದ ಸ್ವಲ್ಪ ಹಿಂದೆ ಉಳಿಯುವುದರಿಂದ ಅದರಿಂದ ಪ್ರತಿಫಲವು ಹಾಗೆಯೇ ಬರುತ್ತದೆ. ಭಾಗ್ಯದಲ್ಲಿ ಗುರು ಗ್ರಹವು ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಅಷ್ಟೇನೂ ತೊಂದರೆಯಾಗುವುದಿಲ್ಲ.
ಜಾತಕಗಳಲ್ಲಿ ದೋಷಗಳಿದ್ದರೇ , ಏನಾದರೂ ದೊಡ್ಡ ದೊಡ್ಡ ಕಮಿಟ್ ಮೆಂಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೇ ಕುಜ ಗ್ರಹವು ನಿಮ್ಮನ್ನು ಚುರುಕಾಗಿರುವಂತೆ ಮಾಡುತ್ತದೆ ಬಹಳ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಕುಜ ಗ್ರಹದ ಪ್ರಭಾವ ನಿಮ್ಮ ಬಹಳ ತೀಕ್ಷ್ಣವಾಗಿರುತ್ತದೆ. ಷಷ್ಟ ಭಾವದಲ್ಲಿರುವವರೆಗೂ ಕೂಡ ಅಂದರೇ 15 ಮಾರ್ಚ್ ವರೆಗೂ ಷಷ್ಟಭಾವದಲ್ಲಿದ್ದುಕೊಂಡು ನಿಮ್ಮನ್ನು ಕಾಪಾಡುವ ಶಕ್ತಿ ಆ ಗ್ರಹಕ್ಕೆ ಇದೆ. ನಿಧಾನವಾಗುವುದು,
ಅನುಮಾನಗಳಾಗುವುದು, ಯಾರೋ ನಿಮ್ಮ ದಾರಿಗೆ ಕಲ್ಲು ಹಾಕುವುದು ಇರಬಹುದು ಇದನ್ನೆಲ್ಲಾ ಮೀರಿ ನಿಮಗೆ ಬೆಳೆಯುವಂತಹ ಶಕ್ತಿ ಬರುವುದಾದರೇ ಅದಕ್ಕೆ ಕಾರಣವಾಗಿರುತ್ತದೆ ಕುಜಗ್ರಹ. ಮುಖ್ಯವಾಗಿ ಷಷ್ಟಭಾವದಲ್ಲಿ ಮಾಡುವ ಕೆಲಸ ಎಂದರೆ ಶತೃನಾಶ. ಮನೆ ತೆಗೆದುಕೊಳ್ಳಲು, ಸೈಟ್ ತೆಗೆದುಕೊಳ್ಳಲು, ನಮ್ಮ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳಲು ಇರುವಂತಹ ಅಡ್ಡಿ ಆತಂಕಗಳನ್ನು ನಿವಾರಿಸುತ್ತದೆ.
ಕೋರ್ಟ್, ಕೇಸ್, ಕಟ್ಲೆ ಕೆಲಸಗಳು ಇದ್ದರೇ, ಶತೃಗಳಿಂದ ಪೀಡೆ ಅನುಭವಿಸುತ್ತಿದ್ದರೇ 15ನೇ ತಾರೀಖಿನ ಒಳಗೆ ಬಹಳ ಒಳ್ಳೆಯ ಗುಡ್ ನ್ಯೂಸ್ ಗಳು ಬರಬೇಕು. ಜಯ ನಿಮ್ಮದಾಗುತ್ತದೆ. ಶತೃಗಳು ದೂರ ಹೋಗುತ್ತಾರೆ. ದುಡ್ಡು ಕಾಸನ್ನು ಕುಜ ಗ್ರಹ ಏರ್ಪಾಟು ಮಾಡುತ್ತದೆ. ಸ್ವತ್ತು ಮತ್ತು ಇನ್ವೆಸ್ಟ್ ಮೆಂಟ್ ವಿಚಾರದಲ್ಲಿ ಅಡೆಚಣೆಗಳು ದೂರವಾಗುತ್ತದೆ. ದಿಢೀರ್ ಹಣದ ಲಾಭ ಮತ್ತು ಅನಿರೀಕ್ಷೀತವಾಗಿ ಹಣ ಬರುತ್ತದೆ. ಈ ಎರಡು ಗ್ರಹಗಳಿಂದ ನಿಮ್ಮ ಬೆಳವಣಿಗೆ ಆಗುತ್ತದೆ.