ನಮಸ್ಕಾರ ಸ್ನೇಹಿತರೆ.ಸ್ತ್ರೀಯರು ಮನೆಯ ಲಕ್ಷ್ಮಿ ಇದ್ದ ಹಾಗೆ ಒಂದು ಮನೆ ಸುಖ ನೆಮ್ಮದಿ ಇಂದ ಕೊಡಿರಬೇಕು ಎಂದರೆ ಸ್ತ್ರೀಯ ಪಾತ್ರ ಬಹಳ ಮುಖ್ಯ ಯಾಕೆಂದರೆ ಒಬ್ಬ ಸ್ತ್ರೀ ಅಮ್ಮನಾಗಿ ಮಗಳಾಗಿ,ಹೆಂಡತಿ ಯಾಗಿ ಕೊನೆಗೆ ಅಜ್ಜಿಯಾಗಿ ತನ್ನ ಕರ್ತವ್ಯ ನಿಭಾಯಿಸುತ್ತಾಳೆ. ಇಲ್ಲಿ ಸ್ತ್ರೀಯ ಕಾರ್ಯ ತುಂಬಾ ಮುಖ್ಯ ಈಕೆ ಮನೆಯ ಬೆಳಗೋ ನಂದದೀಪದ ಹಾಗೆ. ಹೀಗೆ ಮನೆಯ ಬೆಳಗೋ ಈ ಸ್ತ್ರೀ ಕೆಲವು ಕೆಲಸಗಳನ್ನು ಮಾಡ್ಲೆಬಾರದು ಎಂದು ಹೇಳಲಾಗುತ್ತೆ ಹೀಗೆ ಮಾಡಿದರೆ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶ ಮಾಡೋದಿಲ್ಲ ಎಂದು ಹೇಳಲಾಗುತ್ತೆ ಮನೆಯ ಮಗಳು ಸೊಸೆಯನ್ನು ಲಕ್ಷ್ಮಿದೇವಿಯ ರೂಪ ಎಂದೇ ಹೇಳಲಾಗುತ್ತೆ ಸ್ತ್ರೀ ತಾನು ಮಾಡುವ ಒಳ್ಳೆ ಕೆಲಸ ದಿಂದ ಒಂದು ಮನೆಯನ್ನು ಸ್ವರ್ಗ ಮಾಡಬಹುದು.
ಇಲ್ಲ ತಾನು ಮಾಡುವ ಕೆಟ್ಟ ಕೆಲಸದಿಂದ ಅಥವಾ ಆಚರಣೆ ಇಂದ ನರಕ ಕೊಡ ಮಾಡಬಹುದು ಎನ್ನುವ ಮಾತು ನಾವು ಕೇಳ್ತ ಇರ್ತೀವಿ. ನಮ್ಮ ಶಾಸ್ತ್ರ ಗಳಲ್ಲಿ ಮಗಳು ಸೊಸೆಯಂದಿರ ಕೆಲವು ಹವ್ಯಾಸ ಗಳು ಮನೆಗೆ ಸುಖವನ್ನು ತರುತ್ತವೆ. ಇನ್ನು ಕೆಲವು ಹವ್ಯಾಸಗಳು ಮನೆಗೆ ಕೆಡುಕನ್ನು ತರುತ್ತವೆ ಬನ್ನಿ ಮಹಿಳೆಯರು ಯಾವ ಏಳು ತಪ್ಪನ್ನು ಮಾಡಬಾರದು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮೊದಲು ನಮ್ಮ ಈ ಲೇಖನ ವನ್ನು ಲೈಕ್ ಮಾಡಿ ಷೇರ್ ಮಾಡಿ ಮತ್ತು ನಿಮ್ಮ ಕಾಮೆಂಟ್ಅನ್ನು ಬರೆದು ಕಳಿಸಿ.ಒಬ್ಬ ಮಹಿಳೆ ಮನೆಯಲ್ಲಿ ಇರುವ ಪೊರಕೆಗೆ ಕಾಲು ತಾಕಿಸ ಬಾರದು ಯಾವ ಮಹಿಳೆ ಪೊರಕೆಗೆ ಕಾಲು ತಕಿಸುತ್ತಾಳೋ ಅಥವಾ ಒದೆಯುತ್ತಳೋ ಆ ಮನೆಯಲ್ಲಿ ದರಿದ್ರ ಓಕ್ಕರಿಸುತ್ತದೆ ಆ ಮನೆಯಲ್ಲಿ ಲಕ್ಷ್ಮಿ ನಿಲ್ಲೋದಿಲ್ಲ ಅಂತ ಹೇಳ್ತಾರೆ.
ಹಾಗೆಯೇ ರಾತ್ರಿ ಮಲಗೋ ಮುನ್ನ ಎಂಜಲು ಪಾತ್ರೆ ಯನ್ನು ಒಲೆಯಮೇಲೆ ಇಟ್ಟು ಮಲಗುತ್ತಾರೆ. ಅವುಗಳ್ಳನ್ನು ತೊಳಿಯೋದಿಲ್ಲ ಹೀಗೆ ಮಾಡೋದ್ರಿಂದ ಮಹಾಲಕ್ಷ್ಮಿಯ ಅವಕೃಪೆಗೆ ಕಾರಣ ವಾಗುತ್ತದೆಯಂತೆ ಇದು ದರಿದ್ರತೆಯನ್ನು ಆಹ್ವಾನ ಮಾಡಿದಂತೆ ಆಗುತ್ತದೆ ಅಂತ ಹೇಳಲಾಗುತ್ತದೆ.ರಾತ್ರಿ ಮಲಗುವ ಮುನ್ನ ಗ್ಯಾಸ್ ಸ್ಟವ್ ಒಲೆಗಳ ಮೇಲೆ ಯಾವ ಮುಸುರೆ ಪಾತ್ರೆ ಗಳ್ಳನ್ನು ಇಡಬಾರದು. ಅವುಗಳನ್ನು ಕ್ಲಿನ್ ಮಾಡಿ ಇಟ್ಟು ಮಲ್ಕೊಂಡರೆ ಮಹಾಲಕ್ಷ್ಮಿಯ ಕೃಪಾಶೀರ್ವಾದ ಆಗುತ್ತದೆ ಯಂತೆ. ಹಾಗೆ ಮನೆಯ ಬಾಗಿಲನ್ನು ಕಾಲಿನಿಂದ ಒದೆಯ ಬಾರದು ಯಾವ ಮನೆಯಲ್ಲಿ ಸ್ತ್ರೀ ಬಾಗಿಲನ್ನು ಕಾಲಿನಿಂದ ತೆರೆಯುತ್ತಾಲೋ ಆ ಮನೆಯಲ್ಲಿ ಮಹಾಲಕ್ಷ್ಮಿ ಕೋಪ ಗೊಳ್ಳುತ್ತಾಳೆ.
ಈ ರೀತಿ ನಿಮ್ಮ ಮನೆಯಲ್ಲಿ ಆಗ್ತಾ ಇದ್ದರೆ ಕಂಡಿತಾ ಸರಿಮಾಡಿ ಕೊಳ್ಳಿ.ಹಾಗೆ ಯಾರು ಕೂಡ ಹೊಸ್ತಿಲ ಹತ್ತಿರ ಅಥವಾ ಹಸ್ತಿಲಮೇಲೆ ಕೂತು ಊಟ ಮಾಡಬಾರದು. ಸ್ತ್ರೀಯರು ಹೊಸ್ತಿಲ ಹತ್ತಿರ ಅಥವಾ ಹೊಸ್ತಿಲ ಮೇಲೆ ಕೂತು ಊಟ ಮಾಡಿದ್ರೆ ಅದು ದರಿದ್ರ ಮತ್ತು ಕಷ್ಟ ಗಳಿಗೆ ಎಡೆಮಾಡಿ ಕೊಟ್ಟಂತೆ. ಹಾಗೆ ಇನ್ನು ಒಂದು ಮುಖ್ಯ ಕೆಲಸ ಈ ಸಮಯದಲ್ಲಿ ಮಾಡ್ಲೆ ಬಾರದು ಅದು ಯಾವ ಕೆಲಸ ಎಂದರೆ ಸೂರ್ಯಸ್ತದ ನಂತರ ಕಸ ಗುಡಿಸ ಬಾರದು ಬೆಳಿಗ್ಗೆ ಮಾಡೋ ಕೆಲಸ ಸೂರ್ಯಸ್ತದ ಬಳಿಕ ಮನೆಯಲ್ಲಿ ದೀಪ ಹಚ್ಚಿದ ನಂತರ ಯಾವ ಮಹಿಳೆ ಕಸ ಗುಡಿಸುತ್ತಾಳೋ ಆ ಮನೆಯಲ್ಲಿ ಮಹಾಲಕ್ಷ್ಮಿ ನಿಲ್ಲೋದಿಲ್ಲವಂತೆ.ಆದ್ದರಿಂದ ಈ ಅಭ್ಯಾಸ ಬದಲಿಸ ಬೇಕು ಮನೆಯಲ್ಲಿ ದೀಪ ಬೆಳಗಿಸಿದ ನಂತರ ಕಸವನ್ನು ಗುಡಿಸ ಬಾರದು.
ಹಾಗೆ ಬೆಳಗಿನ ಜಾವ ತುಂಬಾ ಹೊತ್ತು ನಿದ್ರಿಸ ಬಾರದು ಯಾವ ಸ್ತ್ರೀ ಬೆಳಗಿನ ಜಾವಾ ತುಂಬಾ ಹೊತ್ತು ನಿದ್ರೆ ಮಾಡತ್ತಾಳೋ ಅದು ಆ ಮನೆಗೆ ಒಳ್ಳೆಯದು ಅಲ್ಲ ವಂತೆ ಸೂರ್ಯ ಉದಯವಾದ ನಂತರ ಮಲಗಿದ್ರೆ ಮಹಾಲಕ್ಷ್ಮಿಯ ಅವಕೃಪೆಗೆ ಕಾರಣ ಆಗುತ್ತೀರ ಹಾಗೆ ಬೆಳಿಗ್ಗೆ ಎದ್ದು ಮನೆಯ ಅಂಗಳ ಸ್ವಚ್ಛ ಗೊಳಿಸದೇ ಇರುವುದು. ಯಾವ ಸ್ತ್ರೀ ಬೆಳಿಗ್ಗೆ ಎದ್ದು ಕಸ ಗುಡಿಸೋದಿಲ್ವೋ ನೀರು ಹಾಕಿ ಸ್ವಚ್ಛ ಗೊಳಿಸೋದಿಲ್ವೋ ಅಂತ ಮನೆಗೆ ಮಹಾಲಕ್ಷ್ಮಿ ಪ್ರವೇಶ ಮಾಡೋದಿಲ್ಲವಂತೆ ಹಾಗಾಗಿ ಸ್ತ್ರೀ ಬೆಳಿಗ್ಗೆ ಬೇಗ ಎದ್ಧು ಅಂಗಳದ ಕಸ ಗುಡಿಸಿ ನೀರು ಹಾಕಿ ರಂಗೋಲಿ ಹಾಕಿ ಮಾತೇ ಮಹಾಲಕ್ಷ್ಮಿಯನ್ನು ಸ್ವಾಗತಿಸಾಬೇಕು. ಅಂತಾ ಮನೆಯಲ್ಲಿ ಮಹಾಲಕ್ಷ್ಮಿ ಸದಾ ವಾಸ ಇರುತಾಳಂತೆ ಆದ್ದರಿಂದ ಮಹಿಳೆಯರು ಈ ಏಳು ಕೆಲಸ ವನ್ನು ಮಾಡ್ಲೆ ಬಾರದು ಹೀಗೆ ಮಾಡಿ ಮಹಾಲಕ್ಷ್ಮಿಯ ಅವಕೃಪೆಗೆ ಒಳಗಾಗಬೇಡಿ ಇದನ್ನು ಗಮನದಲ್ಲಿ ಇಟ್ಟು ಕೆಲಸ ಮಾಡಿ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ಮತ್ತು ಮಹಾಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಓದುಗರೇ ಹೀಗೆ ಇನ್ನು ಹಲವು ವಿಷಯಗಳ ಬಗ್ಗೆ ನಾವು ಮುಂದಿನ ಬರವಣಿಗೆಯಲ್ಲಿ ತಿಳಿಸಿ ಕೊಡುತೇವೆ ನಮ್ಮ ಈ ಲೇಖನದ ಬಗ್ಗ ಕಾಮೆಂಟ್ ಮಾಡಿ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ನೀವು ನಿಮ್ಮ ಸ್ನೇಹಿತರಿಗೆ ಷೇರ್ ಮಾಡಿ ಧನ್ಯವಾದಗಳು.
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.