ತವರು ಮನೆಯಿಂದ ಈ ವಸ್ತುಗಳನ್ನು ತರಬಾರದು

0

ತವರು ಮನೆಯಿಂದ ಗಂಡನ ಮನೆಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತರಬಾರದು, ತಂದರೇ ಕಂಟಕ ತಪ್ಪಿದ್ದಲ್ಲ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈಗಿನ ಕಾಲದಲ್ಲಿ ಮದುವೆ ಎನ್ನುವುದು ಅವರವರ ಘನತೆಯನ್ನು ತೋರಿಸುವುದು ಆಗಿದೆ. ಮದುವೆ ಮಾಡಲು ಕೋಟಿ ಕೋಟಿ ಹಣವನ್ನು ಖರ್ಚು ಮಾಡುವವರು ಇದ್ದಾರೆ. ಮದುವೆ ಮಾಡುವ ಸಂದರ್ಭದಲ್ಲಿ ಮದುಮಗನಿಗೆ ದುಬಾರಿ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಉಡುಗೊರೆ ಕೊಡುವ ಉದ್ದೇಶವೇನೆಂದರೆ ಮದುವೆಯಾಗುವ ನಮ್ಮ ಹೆಣ್ಣು ಮಗು ಚೆನ್ನಾಗಿರಬೇಕು ಎಂಬುದಾಗಿರುತ್ತದೆ.

ಆದರೇ ಕೆಲವು ಉಡುಗೊರೆಗಳನ್ನು ಅಪ್ಪಿತಪ್ಪಿಯೂ ತವರು ಮನೆಯಿಂದ ತೆಗೆದುಕೊಂಡು ಹೋಗಬಾರದು. ಈ ವಿಷಯ ಕೆಲವರಿಗೆ ಗೊತ್ತೇ ಇರುವುದಿಲ್ಲ. ನಮ್ಮ ಮಗಳಿಗೋಸ್ಕರವೆಂದು ಕೊಟ್ಟು ಬಿಡುತ್ತಾರೆ ಆದರೇ ಅದು ತಪ್ಪಾಗುತ್ತದೆ. ಆ ಹುಡುಗೊರೆಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋದರೇ ಹೊಸ ಹೊಸ ಕಂಟಕಗಳು ಶುರುವಾಗುತ್ತದೆ. ಮದುವೆಯಾದ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಯಾವ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು, ತೆಗೆದುಕೊಂಡು ಹೋದರೇ ಉಂಟಾಗುವ ಸಮಸ್ಯೆಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಹೆಣ್ಣು ಎಲ್ಲರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಇದೇ ಹೆಣ್ಣು ಮಗಳು ಗಂಡನ ಮನೆಗೆ ಹೋಗುವಾಗ ಎಲ್ಲರೂ ಖುಷಿಯನ್ನು ಪಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡುವ ಹೆಣ್ಣಿನ ಕಡೆಯವರು ತಮ್ಮ ಮಗಳಿಗೆ ಒಳ್ಳೆಯದಾಗಲಿ ಎಂದು ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಶಾಸ್ತ್ರಗಳ ಪ್ರಕಾರ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಗಳಿಗೆ ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ಕೊಡುವ ವಾಡಿಕೆ ಇದೆ. ಗಣೇಶ ಎಂದರೆ ವಿಘ್ನವಿನಾಶಕ. ಇವನು ಎಲ್ಲಿ ಇರುತ್ತಾನೋ ಅಲ್ಲೆಲ್ಲಾ ವಿಘ್ನಗಳು ನಡೆಯುವುದಿಲ್ಲವೆಂಬ ನಂಬಿಕೆ ಇದೆ.

ಆದರೇ ಗಣೇಶನ ಮೂರ್ತಿ ಮತ್ತು ಫೋಟೋವನ್ನು ಯಾವುದೇ ಕಾರಣಕ್ಕೂ ಕೊಡಲೇಬಾರದೆಂದು ಹೇಳಲಾಗಿದೆ. ನಿಮ್ಮ ಮಗಳಿಗೆ ನೀವು ಗಣೇಶನ ಮೂರ್ತಿಯನ್ನು ಕೊಟ್ಟಿದ್ದೇ ಆದರೇ ನಿಮ್ಮ ಮನೆಯ ಶುಭ ಮತ್ತು ಲಾಭವನ್ನು ತನ್ನ ಗಂಡನ ಮನೆಗೆ ತೆಗೆದುಕೊಂಡು ಹೋಗಿರುತ್ತಾಳೆಂದು ಹಿಂದೂಶಾಸ್ತ್ರದಲ್ಲಿ ಹೇಳಲಾಗಿದೆ. ಲಕ್ಷ್ಮಿ ಮತ್ತು ಗಣೇಶ ಇವರಿಬ್ಬರು ಎಲ್ಲೆಲ್ಲಿ ಇರುತ್ತಾರೋ ಅಲ್ಲಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತಂದುಕೊಡುತ್ತಾರೆ. ಇದೇ ಕಾರಣಕ್ಕೆ ಹಿಂದೂಗಳ ಮನೆಗಳಲ್ಲಿ ಗಣೇಶ ಮತ್ತು ಲಕ್ಷ್ಮಿದೇವಿಯ ಫೋಟೊಗಳು ಇರುತ್ತವೆ.

ಸಂಮೃದ್ಧಿಯನ್ನು ಕೊಡುವ ದೇವರ ಫೋಟೋಗಳನ್ನು ಬೇರೆ ಮನೆಗೆ ಹೋಗುವ ಹೆಣ್ಣು ಮಗಳ ಕೈಗೆ ಕೊಟ್ಟರೇ ಅದು ಆಕೆಯ ಜೊತೆಯಲ್ಲೇ ಹೊರಟು ಹೋಗಿ ಬಿಡುತ್ತದೆ. ಆದ್ದರಿಂದ ಲಕ್ಷ್ಮಿದೇವಿ ಮತ್ತು ಗಣೇಶನ ಫೋಟೋವನ್ನು ಕೊಡಬೇಡಿ. ಆಕಸ್ಮಾತ್ ಕೊಟ್ಟುಬಿಟ್ಟಿದ್ದರೇ, ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕು ಎಂದು ಯೋಚನೆ ಆಗಿದ್ದರೇ ಅದಕ್ಕೂ ಕೂಡ ಪರಿಹಾರವಿದೆ. ಗಂಡನ ಮನೆಗೆ ಹೋದ ಮನೆಮಗಳಿಂದ ಯಾವುದಾದರೂ ಹಬ್ಬ ಹರಿದಿನಗಳಲ್ಲಿ ಉಡುಗೊರೆಯ ರೂಪದಲ್ಲಿ ಮತ್ತೆ ಗಣಪತಿ ಹಾಗೂ ಲಕ್ಷ್ಮಿದೇವಿಯ ಮೂರ್ತಿಯನ್ನು ಪಡೆಯಬಹುದು.

ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಮೃದ್ಧಿಯ ಜೊತೆ ಹೋದ ವಿನಾಯಕ ಮತ್ತೆ ಮನೆಗೆ ಮರಳಿ ಬರುವುದಲ್ಲದೇ ಮತ್ತೆ ಮನೆಯಲ್ಲಿ ಅದೇ ವಾತಾವರಣ ಮರುಕಳಿಸುವಂತೆ ಮಾಡುತ್ತಾನೆ.
ಇನ್ನು ಕೆಲವು ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ಹೊರಡುತ್ತಿರುವ ಹೆಣ್ಣು ಮಗಳಿಗೆ ಕೊಡಬಾರದು. ಮಹಿಳೆಯರು ಗಂಡನ ಮನೆಗೆ ಚೂಪಾದ ಮತ್ತು ಅರಿತವಾದ ವಸ್ತುಗಳನ್ನು ತರಬಾರದು. ಚಾಕು, ಕತ್ತರಿ, ಸೂಜಿ ಈ ರೀತಿಯ ವಸ್ತುಗಳನ್ನು ಗಂಡನ ಮನೆಗೆ ತರುವುದರಿಂದ ಗಂಡನ ಮನೆಯಲ್ಲಿ ಜಗಳ, ಕದನಗಳು ಹೆಚ್ಚಾಗುತ್ತವೆ ಇದರಿಂದ ಗಂಡ ಹೆಂಡತಿ ದೂರವಾಗುವ ಸನ್ನಿವೇಶವೂ ಹೆಚ್ಚಾಗಬಹುದು.

ಹಾಗೆಯೇ ಎರಡು ಮನೆಯವರ ನಡುವೆ ಬಾಂಧವ್ಯ ಚೆನ್ನಾಗಿರುವುದಿಲ್ಲ. ಇಬ್ಬರ ಮನೆಯಲ್ಲೂ ಕಿರಿಕಿರಿ ಅಸೂಯೆ ಉಂಟಾಗುತ್ತದೆ. ಮದುವೆಯಾಗಿ ಹೋದ ಮೇಲೆ ಹೆಣ್ಣು ಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಹಣವನ್ನು ತರಬಾರದು. ಹೀಗೆ ತಂದರೆ ಪತಿಯ ಮನೆಯು ಸರ್ವನಾಶವಾಗುತ್ತದೆ. ತಾಯಿ ಮನೆಯಿಂದ ಗಂಡನ ಮನೆಗೆ ಅಮೂಲ್ಯವಾದ ವಸ್ತುಗಳನ್ನು ತಂದಿದ್ದೇ ಆದಲ್ಲಿ

ಆ ಮನೆಯಲ್ಲಿ ಕಲಹಗಳು ಆಗುವುದು ಹೆಚ್ಚು. ಪ್ರತಿಯೊಬ್ಬ ಹೆಣ್ಣು ಮಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ತವರು ಮನೆಯ ವಿಚಾರಗಳನ್ನು ತವರು ಮನೆಯಲ್ಲೇ ಬಿಟ್ಟು ಬರಬೇಕು ಗಂಡನ ಮನೆಯವರೆಗೂ ತರಬಾರದು. ಒಳ್ಳೆಯ ವಿಚಾರಗಳನ್ನು ಮಾತ್ರ ತವರು ಮನೆಯಿಂದ ಗಂಡನ ಮನೆಗೆ ತರಬೇಕು. ಗಂಡನ ಮನೆಯ ವಿಚಾರಗಳನ್ನು ಬೇರೆಯವರ ಮುಂದೆ ಚರ್ಚೆ ಮಾಡಬಾರದು. ಹುಟ್ಟಿದ ಮನೆ ಮತ್ತು ಗಂಡನ ಮನೆಗೆ ಒಳ್ಳೆಯ ಹೆಸರನ್ನು ತರಬೇಕು. ಗಂಡನ ಮನೆಗೆ ಹೊಂದಿಕೊಂಡು ಹೋಗಬೇಕು.

Leave A Reply

Your email address will not be published.