ನಾವು ಈ ಲೇಖನದಲ್ಲಿ ತುಲಾ ರಾಶಿಯವರಿಗೆ ಜನವರಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನೋಡೋಣ. ತುಲಾ ರಾಶಿಯವರಿಗೆ ಈ ಮೊದಲ ತಿಂಗಳಲ್ಲಿ ಯಾವ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ತಿಳಿಯೋಣ . ಈ ತುಲಾ ರಾಶಿಯ ವ್ಯಕ್ತಿಗಳಿಗೆ ಅಂದರೆ ಹಣ ಇರುವವರಿಗೆ ಎಲ್ಲಾ ಕ್ಷೇತ್ರದಲ್ಲೂ ಹೂಡಿಕೆ ಮಾಡುವುದಕ್ಕೆ ಇವರಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅಂದರೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದ್ದ ಹಾಗೆ ನಿಮಗೂ ಕೂಡ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ.
ಆದರೆ ನೀವು ಎಚ್ಚರಿಕೆಯಿಂದ ಆ ಕೆಲಸಕ್ಕೆ ಕೈ ಹಾಕಬೇಕು. ನೀವು ತುಂಬಾ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ನೀವು ಹಣ ಕಳೆದುಕೊಳ್ಳುವ ಒಂದು ದೊಡ್ಡ ಅಪಾಯ ಇರುತ್ತದೆ. ನೀವು ಹಗಲು ರಾತ್ರಿ ಎನ್ನದೇ ತುಂಬಾ ಕಷ್ಟ ಪಟ್ಟಿ ದುಡಿದಿರುವ ಹಣ ಪೋಲಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ತುಲಾ ರಾಶಿಯವರಿಗೆ ವ್ಯಾಪಾರ ಅನ್ನೋದು ನೈಸರ್ಗಿಕವಾಗಿ ಬಂದಿದೆ ಎಂದು ಹೇಳಲಾಗಿದೆ . ಬಹಳಷ್ಟು ಜನರಿಗೆ ಇದು ನಿಜ ಆಗಿರುತ್ತೆ .
ನಿಮಗೆ ಕೇತು ವ್ಯಯದಲ್ಲಿ ಇರುತ್ತಾನೆ. ರಾಹು ಷಷ್ಟದಲ್ಲಿ ಇರುತ್ತಾನೆ. ಆದ್ದರಿಂದ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಆಗಾಗ ರಾಹು ಸ್ವಲ್ಪ ಲಾಭವನ್ನು ತಂದು ಕೊಡುತ್ತಾನೆ. ಆದರೆ ಕೇತು 12 ನೇ ಮನೆಯಲ್ಲಿ ಇರುವುದರಿಂದ ತೊಳೆಯುವ ಸಾಧ್ಯತೆ ಇದೆ. ಅಂದರೆ ರಾಹು ತರುವ ಸಾಧ್ಯತೆ ಇದ್ದರೆ , ಕೇತುವಿಗೆ ತೊಳೆಯುವ ಗುಣ ಇರುತ್ತದೆ. ಆದ್ದರಿಂದ ನಿಮಗೆ ಕೈ ಸುಟ್ಟು ಕೊಳ್ಳುವ ಸಾಧ್ಯತೆ ಮತ್ತು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಎಂದು ಹೇಳಲಾಗಿದೆ. ಸಾಕಷ್ಟು ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು .
ಯಾವುದೇ ಒಂದು ಸೈಟು ಪ್ರಾಪರ್ಟಿ ತೆಗೆದು ಕೊಳ್ಳಬೇಕಾದರೂ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ . ಜನವರಿ ತಿಂಗಳಲ್ಲಿ ಅಲ್ಲ ಇನ್ನು ಒಂದುವರೆ ವರ್ಷದವರೆಗೂ ನೀವು ಎಚ್ಚರಿಕೆಯಿಂದ ಇರಬೇಕು . ಜನವರಿ ಕೂಡ ಇದಕ್ಕೆ ಹೊರತಲ್ಲ .ಇದರಲ್ಲಿ ಒಂದು ಒಳ್ಳೆಯ ವಿಚಾರ ಎಂದರೆ , ಕುಜ ಮತ್ತು ರವಿ ತೃತೀಯಾ ಭಾಗದಲ್ಲಿ ಇದ್ದಾರೆ. ವ್ಯಾಪಾರ ಮಾಡುವವರಿಗೆ ಲಾಭ ದೊರೆಯುತ್ತದೆ .ಅಂದರೆ ಸ್ಪರ್ಧೆಯಲ್ಲಿ ವಿಕ್ರಮ ಸ್ಥಾನವನ್ನು ಪಡೆದುಕೊಳ್ಳುತ್ತದೆ . ಕುಜ ಮತ್ತು ರವಿ ಸೇರಿ ಕೊಂಡಿರುವುದರಿಂದ
ಈ ರಾಶಿಯವರಿಗೆ ವಿಪರೀತ ಧೈರ್ಯ ಕೊಡುವುದರ ಜೊತೆಗೆ ಸಾಧನೆ ಮಾಡಲು ಸಹಾಯವಾಗುತ್ತದೆ .ಬುದ್ಧಿ ಖರ್ಚು ಮಾಡಿದಷ್ಟು ಅದು ಬೆಳೆಯುತ್ತಾ ಹೋಗುತ್ತದೆ . ಹಣ ಇದ್ದರೆ ಹೂಡಿಕೆ ಮಾಡಬಹುದು .ಆದರೆ ಸಾಲ ಮಾಡಿ ಹೂಡಿಕೆ ಮಾಡುವುದರಿಂದ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ .ಇಂತಹ ಹುಚ್ಚು ಸಾಹಸಕ್ಕೆ ನಿಮ್ಮನ್ನು ತೆಗೆದುಕೊಂಡು ಹೋಗುವ ಸಾಧ್ಯತೆ ಈ ಗ್ರಹಗಳಿಗೆ ಇರುತ್ತದೆ .ಭಯ ಪಡುವುದು ಬೇಡ ರವಿ ಮತ್ತು ಕುಜ ಇರುವುದರಿಂದ ನಿಮಗೆ ಯಶಸ್ಸು ದೊರೆಯುತ್ತದೆ .
ದ್ವಿತೀಯದಲ್ಲಿರುವ ಶುಕ್ರ ಗ್ರಹ ನಿಮಗೆ ಮಾತನಾಡುವ ಶಕ್ತಿಯನ್ನು ನೀಡುತ್ತಾನೆ . ಸಮಸ್ಯೆಗಳನ್ನು ನೀವು ಮಾತಿನಿಂದಲೇ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಬಹುದು . ಅಂದರೆ ನೀವು ಬಹಳಷ್ಟು ಧನಾತ್ಮಕವಾಗಿ ಮಾತುಗಳನ್ನು ಆಡಲು ಸಹಾಯವಾಗುತ್ತದೆ .ನಿಮಗೆ ಸಣ್ಣಪುಟ್ಟ ವೇದನೆಗಳು ಇರುತ್ತದೆ . ನೀವು ಅದನ್ನು ಹೊರಗೆ ಹಾಕುವುದಿಲ್ಲ .ನೀವು ನಿಮ್ಮ ಮಾತಿನಿಂದ ಪ್ರಭಾವ ಬೀರುವುದು ಅಲ್ಲದೆ , ಜನರ ಗಮನವನ್ನು ಸೆಳೆದು ಕೊಳ್ಳಬಹುದು .ನೀವು ವ್ಯಾಪಾರಸ್ಥರಾಗಿದ್ದರೆ ,
ಆ ವಸ್ತುಗಳ ಬಗ್ಗೆ ಚೆನ್ನಾಗಿ ವಿವರಣೆಯನ್ನು ಕೊಡಲು ಸಹಾಯವಾಗುತ್ತದೆ . ಆ ಜನರು ನಿಮ್ಮ ಮಾತಿಗೆ ಆಕರ್ಷಿತರಾಗುತ್ತಾರೆ .ಅವರ ಮನ್ನಣೆ ಗಳಿಸುವಷ್ಟು ನಿಮ್ಮ ಮಾತುಗಳು ಇರುತ್ತದೆ .ನೀವು ಮಾತನಾಡುವಾಗ ಅಳೆದು ತೂಗಿ ವಿಚಾರಗಳನ್ನು ರವಾನೆ ಮಾಡುತ್ತೀರಾ .ನೀವು ಯಾವುದಕ್ಕೂ ಸಮಯವನ್ನು ತೆಗೆದುಕೊಳ್ಳುವುದಿಲ್ಲ . ಸಪ್ತಮದಲ್ಲಿ ಗುರು ಗ್ರಹ ಇರುವುದರಿಂದ ಜೀವನದಲ್ಲಿ ಖುಷಿ ಇರುತ್ತದೆ . ಷಷ್ಟದಲ್ಲಿ ರಾಹು ಇರುವುದರಿಂದ ಶತ್ರುವನ್ನು ನಾಶ ಮಾಡುತ್ತಾನೆ.
ಅಂದರೆ ಏಟಿಗೆ ಎದುರೇಟು ಕೊಡುವ ಸಾಮರ್ಥ್ಯ ಇರುತ್ತದೆ . ಯಾವುದೇ ವಿಚಾರದಲ್ಲಿ ಹಿಂದೆ ಬೀಳುವುದಿಲ್ಲ .ಪಂಚಮದಲ್ಲಿ ಶನಿ ಇರುವುದರಿಂದ ಇರುವಂತಹ ಸಮಸ್ಯೆಗಳು ಇದ್ದೇ ಇರುತ್ತದೆ . ಸುಖ ಮತ್ತು ದುಃಖ ಇವೆರಡೂ ಜೊತೆ ಜೊತೆಗೆ ಇರುತ್ತದೆ .ಪಂಚಮ ಶನಿ ಕುಂಭ ರಾಶಿಯಲ್ಲಿ ಕೂತಿರುವುದರಿಂದ ನೀವು ಸಾವಧಾನದಿಂದ ನಿಭಾಯಿಸಬೇಕು . ನಿಮ್ಮ ಮನಸ್ಸಿನ ಮೇಲೆ ನಕಾರಾತ್ಮಕ ಶಕ್ತಿಯನ್ನು ಹೇರಲು ಪ್ರಯತ್ನ ಮಾಡುತ್ತದೆ . ಪಂಚಮದಲ್ಲಿ ಶನಿ ಇರುವಾಗ ಧನಾತ್ಮಕ ವಿಚಾರಗಳು ಬರುವುದಿಲ್ಲ .
ಶನಿ ಗ್ರಹದಿಂದ ನಿಮಗೆ ಸಿಗುವುದಿಲ್ಲ .ಬೇರೆ ಗ್ರಹಗಳಿಂದ ಧನಾತ್ಮಕ ಶಕ್ತಿ ಪ್ರವಾಹದ ರೀತಿಯಲ್ಲಿ ಯಾವುದೇ ತಡೆ ಇಲ್ಲದೆ ಬರುತ್ತದೆ .ಆದರೆ ಈ ಶನಿ ಮಾತ್ರ ದುಃಖಕ್ಕೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತದೆ . ಜೀವನ ಹೇಗೆ ಅನ್ನುವ ಚಿಂತೆ ಶುರುವಾಗುತ್ತದೆ. ಸುಲಭದಲ್ಲಿ ಇದು ಬಗೆಹರಿಯುವುದಿಲ್ಲ .ಇದಕ್ಕೆ ತುಂಬಾ ತಾಳ್ಮೆ ಇರಬೇಕು . ಶಾಂತಿ -ಸಮಾಧಾನ ನೀವೇ ಬೆಳೆಸಿಕೊಳ್ಳಬೇಕು .ಅವರ ಒಳ್ಳೆಯ ಚಟುವಟಿಕೆಗಳನ್ನು ನೋಡಿ ಖುಷಿ ಪಡಬೇಕು . ಅದಕ್ಕೆ ನೀವು ತೃಪ್ತಿ ಪಡಬೇಕು . ಜನವರಿ ತಿಂಗಳಲ್ಲಿ ನಿಮಗೆ ಖುಷಿ ಅನ್ನೋದು ನಡೆಯುವುದಿಲ್ಲ .ಮುಂದಿನ ತಿಂಗಳಗಳಲ್ಲಿ ಅದು ಸಿಗುತ್ತದೆ . ಮುಂದಿನ ದಿನಗಳಲ್ಲಿ ಖುಷಿ ಬಂದೇ ಬರುತ್ತದೆ . ಧನಾತ್ಮಕವಾಗಿ ಯೋಚನೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಲಾಗಿದೆ .