ನಾವು ಈ ಲೇಖನದಲ್ಲಿ ತುಳಸಿ ಪೂಜೆ ಈ ದಿನ ತುಂಬಾ ಶ್ರೇಷ್ಠ . ಇದನ್ನು ಅರ್ಪಿಸಿದರೆ ಸಾಕು ಹಣದ ಆಕರ್ಷಣೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಲ್ಲಿ ತುಳಸಿ ಗಿಡದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ . ಮನೆ ಚೆನ್ನಾಗಿ ಅಭಿವೃದ್ಧಿ ಆಗಬೇಕು ಸಕಲ ಸಂಪತ್ತುಗಳಿಂದ ಕೂಡಿರಬೇಕು ಎಂದರೆ , ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಸಾಲದು , ಹೊರಗಡೆ ಕೂಡ ಸಕಾರಾತ್ಮಕ ಶಕ್ತಿ ಅಥವಾ ಧನಾತ್ಮಕ ಶಕ್ತಿ ಹೆಚ್ಚಾಗಿರಬೇಕು . ಒಬ್ಬ ವ್ಯಕ್ತಿ ಮನೆಯಿಂದ ಹೊರಗಡೆ ಹೋಗುವಾಗ ಅಥವಾ ಹೊರಗಡೆಯಿಂದ ಒಳಗಡೆ ಬರುವಾಗ , ಯಾವುದೇ ಒಂದು ರೀತಿಯ ನಕಾರಾತ್ಮಕ ಶಕ್ತಿ ಆತನ ಮುಖಾಂತರ ಒಳಗಡೆ ಬರಬಾರದು ಎಂದರೆ ,
ಮನೆಯ ಹೊರಗಡೆ ನಾವು ತುಳಸಿ ಗಿಡವನ್ನು ಇಡಲೇಬೇಕು . ಮತ್ತು ತುಳಸಿ ಗಿಡವನ್ನು ಪೂಜೆ ಮಾಡಬೇಕು . ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿದ್ದು, ಸುಖ ಶಾಂತಿ ನೆಲೆಸಿರಬೇಕು ಎಂದರೆ , ನಾವು ಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ . ಹಾಗೆ ನಮಗೆ ಹೊರಗಡೆಯಿಂದ ರಕ್ಷಣೆ ಕೊಡುವಂತಹ ತುಳಸಿ ಪೂಜೆಯನ್ನು ಯಾವ ರೀತಿ ಮಾಡಬೇಕು , ಯಾವ ವಾರ ತುಂಬಾ ಶ್ರೇಷ್ಠ , ಹಾಗೆ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು , ಯಾವ ರೀತಿಯಾಗಿ ಆರೈಕೆ ಮಾಡಬೇಕು,
ಎಂಬುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ . ತುಳಸಿ ಗಿಡದ ಬೆಳವಣಿಗೆ ನಮ್ಮ ಮನೆಯ ಅಭಿವೃದ್ಧಿಯನ್ನು ಸೂಚಿಸುತ್ತದೆ . ತುಳಸಿ ಗಿಡ ಮನೆಯಲ್ಲಿ ಸದಾ ಅಚ್ಚ ಹಸಿರಾಗಿ ಇದ್ದರೆ , ಆ ಮನೆಯ ಮೇಲೆ ಮಹಾಲಕ್ಷ್ಮಿ ಆಶೀರ್ವಾದ ಇದೆ ಎಂದು ಅರ್ಥ . ಅಂತಹ ಮನೆಗಳಲ್ಲಿ ಯಾವತ್ತಿಗೂ ಕೂಡ ಹಣದ ಸಮಸ್ಯೆ ಬರುವುದೇ ಇಲ್ಲ . ನಮಗೆ ಯಾವುದಾದರೂ ರೀತಿ ಸಮಸ್ಯೆ ಆಗುತ್ತದೆ ಎಂದಾಗ , ಪ್ರಕೃತಿ ನಮಗೆ ಒಂದು ರೀತಿಯ ಸೂಚನೆಯನ್ನು ಕೊಡುತ್ತದೆ . ಅದನ್ನು ನಾವು ಗಮನಿಸಬೇಕು .
ತುಳಸಿ ಗಿಡ ಸ್ವಲ್ಪ ಬಾಡಿದ ಹಾಗೆ ಆಗುತ್ತಿದೆ ಎಂದಾಗ , ಮುಂಬರುವ ದಿನಗಳಲ್ಲಿ ಯಾವುದಾದರು ಸಣ್ಣಪುಟ್ಟ ಸಮಸ್ಯೆಗಳು ಬರಬಹುದು ಎಂಬ ಎಚ್ಚರಿಕೆಯನ್ನು ನಮಗೆ ಕೊಡುತ್ತದೆ . ಹಾಗಾಗಿ ತುಳಸಿ ಗಿಡದ ಪೂಜೆ ತುಂಬಾ ಮುಖ್ಯ . ಮನೆಯಲ್ಲಿ ತುಳಸಿ ಗಿಡ ನೆಡುವುದಕ್ಕೆ ಯಾವ ಜಾಗ ಒಳ್ಳೆಯದು ಎಂದರೆ , ಉತ್ತರ ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ತುಂಬಾ ಒಳ್ಳೆಯದು ಆಗುತ್ತದೆ . ಇಲ್ಲವಾದರೆ ನಿಮ್ಮ ಮನೆಯ ಮುಖ್ಯದ್ವಾರದ ಎದುರುಗಡೆ ಇಡಬಹುದು .
ಹೊರಗಡೆ ಹೋಗುವಾಗ ಅಥವಾ ಬರುವಾಗ ತುಳಸಿಯ ದರ್ಶನವನ್ನು ಮಾಡಬಹುದು . ಮನೆಯ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಮನೆಯ ಅಭಿವೃದ್ಧಿ ಆಗುತ್ತದೆ . ಈಶಾನ್ಯ ಮೂಲೆ ಎಂದರೆ ಪೂರ್ವ ಮತ್ತು ಉತ್ತರದ ಮಧ್ಯ ಭಾಗವನ್ನು ಈಶಾನ್ಯ ದಿಕ್ಕು ಎಂದು ಕರೆಯುತ್ತಾರೆ . ಗಾಳಿ ಬೆಳಕು ಯಾವ ಜಾಗದಲ್ಲಿ ಸರಿಯಾಗಿ ಬೀಳುತ್ತದೆಯೋ ಅಂತಹ ಜಾಗದಲ್ಲಿ ತುಳಸಿ ಗಿಡ ಇಟ್ಟು ಪೂಜೆ ಮಾಡಬಹುದು . ಗುರುವಾರ ಮತ್ತು ಶುಕ್ರವಾರ ತುಳಸಿ ಗಿಡವನ್ನು ನೆಡುವುದಕ್ಕೆ ತುಂಬಾ ಒಳ್ಳೆಯ ದಿನ . ಗುರುವಾರ ತುಳಸಿ ಗಿಡ ತೆಗೆದುಕೊಂಡು ಬಂದು ಶುಕ್ರವಾರದ ದಿನ ನೆಡಬಹುದು .
ಅಥವಾ ಬುಧವಾರ ತೆಗೆದುಕೊಂಡು ಬಂದು ಗುರುವಾರ ನೆಟ್ಟು ಪೂಜೆ ಮಾಡಬಹುದು . ಏಕಾದಶಿಯ ದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು . ಹಿಂದಿನ ದಿನ ಚೆನ್ನಾಗಿ ನೀರು ಹಾಕಿರಬೇಕು ಏಕಾದಶಿಯ ದಿನದಂದು ನೀರು ಹಾಕಬಾರದು . ಮತ್ತು ತುಳಸಿಯ ಎಲೆಗಳನ್ನು ಕೂಡ ಕೀಳಬಾರದು . ಪೌರ್ಣಮಿ, ಅಮಾವಾಸ್ಯೆ , ಶುಕ್ರವಾರ, ಮಂಗಳವಾರ ಇಂತಹ ದಿನಗಳಲ್ಲಿ ತುಳಸಿ ಎಲೆಗಳನ್ನು ಕೀಳಬಾರದು . ಮತ್ತು ನೀವು ಪೂಜೆ ಮಾಡುವ ಗಿಡದಲ್ಲೂ ಕೂಡ ತುಳಸಿ ಎಲೆಯನ್ನು ಕೀಳಬಾರದು .
ನಿಮಗೆ ಪೂಜೆಗೆ ತುಳಸಿ ಎಲೆಗಳು ಬೇಕಾಗಿದ್ದರೆ ಬೇರೆ ಗಿಡದಿಂದ ಕೀಳಬೇಕು . ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ . ಅಂತಹ ಮನೆಗಳಲ್ಲಿ ಹಣದ ಹರಿವು ಹೆಚ್ಚಾಗುತ್ತದೆ . ಯಾವತ್ತಿಗೂ ಹಣದ ಸಮಸ್ಯೆ ಬರುವುದಿಲ್ಲ .ಸೂರ್ಯಾಸ್ತ ಆದ ನಂತರ ತುಳಸಿ ಗಿಡವನ್ನು ಮುಟ್ಟಬಾರದು . ಸಂಜೆಯ ವೇಳೆ ದೀಪ ಹಚ್ಚಿ ದೂರದಿಂದ ನಮಸ್ಕಾರ ಮಾಡಬೇಕು . ಆ ಸಮಯದಲ್ಲಿ ಗಿಡವನ್ನು ಮುಟ್ಟಿ ನಮಸ್ಕಾರ ಮಾಡಬಾರದು . ಸೂರ್ಯಾಸ್ತ ಆದ ನಂತರ ಬೇರೆ ಯಾವುದೇ ಗಿಡಗಳನ್ನು ಕೂಡ ಮುಟ್ಟಬಾರದು . ಮನೆಯಲ್ಲಿ ದೇವರಿಗೆ ಪ್ರತಿದಿನ ನೈವೇದ್ಯ ಇಟ್ಟು ಪೂಜೆ ಮಾಡುತ್ತೇವೆ . ಆದರೆ ತುಳಸಿ ಗಿಡಕ್ಕೆ ಯಾರು ಪ್ರತಿದಿನ ನೈವೇದ್ಯ ಮಾಡುವುದಿಲ್ಲ . ತುಪ್ಪದ ದೀಪ ಮಾತ್ರ ಹಚ್ಚಿ ಪೂಜೆ ಮಾಡುತ್ತಾರೆ .
ಗುರುವಾರ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠವಾದ ದಿನ . ಗುರುಗಳ ವಾರ ಎಂದು ಹೇಳಬಹುದು . ಗುರುವಾರ ಕೂಡ ತುಳಸಿ ಪೂಜೆಗೆ ತುಂಬಾ ಶ್ರೇಷ್ಠ ಎಂದು ಹೇಳಲಾಗಿದೆ . ತುಳಸಿಯ ಗಿಡ ಕೂಡ ಲಕ್ಷ್ಮಿಯ ಸ್ವರೂಪ . ಹಾಗಾಗಿ ಗುರುವಾರದ ದಿನ ತುಳಸಿ ಗಿಡಕ್ಕೆ ಒಂದು ಗ್ಲಾಸ್ ಹಸಿ ಹಾಲನ್ನು ಅದಕ್ಕೆ ಸ್ವಲ್ಪ ಚಿಟಿಕೆ ಅರಿಶಿಣ ಸೇರಿಸಬೇಕು . ಸ್ವಲ್ಪ ಜೇನುತುಪ್ಪ ಸೇರಿಸಿ ಇದನ್ನು ತುಳಸಿ ಗಿಡಕ್ಕೆ ನೈವೇದ್ಯ ಮಾಡಬೇಕು . ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಈ ಹಾಲನ್ನು ತುಳಸಿ ಗಿಡದ ಮುಂದೆ ನೈವೇದ್ಯಕ್ಕೆ ಇಡಬೇಕು .
ಈ ಒಂದು ಮಂತ್ರವನ್ನು ಮೂರು ಸರಿ ಜಪ ಮಾಡಬೇಕು . ಈ ಮಂತ್ರ ಈ ರೀತಿಯಾಗಿರುತ್ತದೆ ಇದನ್ನು ಸುಲಭವಾಗಿ ಉಚ್ಚಾರಣೆ ಮಾಡಬಹುದು . ಯಾವುದೇ ಮಂತ್ರವನ್ನು ಪಠಣೆ ಮಾಡುವ ಮೊದಲು ಗಣಪತಿಯ ಮಂತ್ರವನ್ನು ಹೇಳಿಕೊಳ್ಳಬೇಕು . ” ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮ ಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರೇಶು ಸರ್ವದಾ ” ಇದನ್ನು ಹೇಳಿದ ನಂತರ ಹತಾ: ತುಳಸಿ ಪೂಜಾ ಮಂತ್ರ ಎಂದು ಹೇಳಿಕೊಂಡು ಮೂರು ಸಲ ಈ ಮಂತ್ರವನ್ನು ಹೇಳಬೇಕು .
“ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯವರ್ಧಿನೀ ಆದಿ ವ್ಯಾದಿ ಹರಾ ನಿತ್ಯಂ ತುಳಸಿ ತ್ವಂ ನಮೋಸ್ತುತೇ ” ಮೂರು ಸಲ ಈ ಮಂತ್ರವನ್ನು ಹೇಳಬೇಕು . ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಹೇಳಬಹುದು . ಅಥವಾ ಸಂಜೆ ಗೋಧೂಳಿ ಸಮಯದಲ್ಲಿ ಹೇಳುವುದರಿಂದ ತುಂಬಾ ಒಳ್ಳೆಯ ಫಲವನ್ನು ಕೊಡುತ್ತದೆ . ಸಂಜೆ 5 ಗಂಟೆ 30 ನಿಮಿಷದಿಂದ ಸಂಜೆ 6 ಗಂಟೆ 30 ನಿಮಿಷದ ಒಳಗೆ ತುಳಸಿ ಮುಂದೆ ತುಪ್ಪದ ದೀಪವನ್ನು ಹಚ್ಚಿ ಹಾಲಿನ ನೈವೇದ್ಯವನ್ನು ಮಾಡಿ , ಈ ಮಂತ್ರವನ್ನು ನೀವು ಮೂರು ಸಲ ಹೇಳಬೇಕು .
ಈ ರೀತಿ ತುಳಸಿ ಗಿಡಕ್ಕೆ ಅರಿಶಿಣದ ಹಾಲನ್ನು ಅರ್ಪಣೆ ಮಾಡುವುದರಿಂದ ಗುರುಗಳ ಆಶೀರ್ವಾದ ದೊರೆಯುತ್ತದೆ . ಗುರುಗಳ ಆಶೀರ್ವಾದ ನಮಗೆ ಇದ್ದರೆ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ದೊರೆಯುತ್ತದೆ . ಹಾಗಾಗಿ ಗುರುಗಳ ಆಶೀರ್ವಾದ ಬೇಕು ಎಂದರೆ ಗುರುಬಲ ಚೆನ್ನಾಗಿರಬೇಕು ಎಂದರೆ , ತುಳಸಿ ಗಿಡಕ್ಕೆ ಈ ರೀತಿ ಅರಿಶಿಣದ ಹಾಲು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ , ಹಾಕಬೇಕು . ಜೇನುತುಪ್ಪ ಧನ ಆಕರ್ಷಣೆಯನ್ನು ಮಾಡುತ್ತದೆ . ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತಂದುಕೊಡುತ್ತದೆ .ಹಾಗಾಗಿ ಮನೆಯ ಹೊರಗಡೆ ನಮಗೆ ರಕ್ಷಣೆಯನ್ನು ಕೊಡುವಂತಹ ಈ ತುಳಸಿ ಗಿಡಕ್ಕೆ ಗುರುವಾರದ ದಿನ ಬೆಳಿಗ್ಗೆ ಅಥವಾ ಸಂಜೆ ಗೋಧೂಳಿ ಸಮಯದಲ್ಲಿ
ಈ ರೀತಿ ಪೂಜೆ ಮಾಡುವುದು , ತುಂಬಾ ಒಳ್ಳೆಯ ಫಲಗಳನ್ನು ತಂದುಕೊಡುತ್ತದೆ . ಕೆಲಸಕ್ಕೆ ಹೋಗುವವರು ಬ್ರಾಹ್ಮಿ ಮುಹೂರ್ತದಲ್ಲೂ ಕೂಡ ಮಾಡಬಹುದು . ಈ ಮಂತ್ರವನ್ನು ಹೇಳಿ ಮೂರು ಸಲ ಹಾಲನ್ನು ಅರ್ಪಣೆ ಮಾಡುವುದರಿಂದ ನಿಮಗೆ ಧನ ಲಾಭ ಆಗುತ್ತಿರುತ್ತದೆ . ಅನಾವಶ್ಯಕ ಖರ್ಚುಗಳು ಕಡಿಮೆಯಾಗಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ .
ನಿಮ್ಮ ಹಣ ಯಾರಿಗಾದರೂ ಹೊರಗಡೆ ಕೊಟ್ಟು ಸಿಕ್ಕಿ ಹಾಕಿಕೊಂಡಿದ್ದರೆ ಸಮಯಕ್ಕೆ ಸರಿಯಾಗಿ ನಿಮ್ಮ ಕೈಯಲ್ಲಿ ಹಣ ಸೇರುತ್ತಿಲ್ಲ ಎಂದರೆ, ಈ ರೀತಿ ಪೂಜೆಯನ್ನು ಮಾಡುವುದರಿಂದ , ನಿಮ್ಮ ಹಣ ನಿಮಗೆ ಸುಲಭದ ರೀತಿಯಲ್ಲಿ ನಿಮ್ಮ ಕೈ ಸೇರುತ್ತದೆ . ಹಾಗಾಗಿ ತುಳಸಿ ಗಿಡಕ್ಕೆ ಹಾಲಿನ ನೈವೇದ್ಯವನ್ನು ಮಾಡಬೇಕು . ಈ ರೀತಿ ಮಂತ್ರವನ್ನು ಪಠಣೆ ಮಾಡಿಕೊಂಡು ಹಾಲಿನ ನೈವೇದ್ಯವನ್ನು ಮಾಡುವುದರಿಂದ, ಹಣದ ಜೊತೆಗೆ ಆರೋಗ್ಯವು ಕೂಡ ದೊರೆಯುತ್ತದೆ .