ನಮಸ್ಕಾರ ಸ್ನೇಹಿತರೇ ಕಳಸದಲ್ಲಿ ಈ ವಸ್ತುವನ್ನು ಹಾಕಿದರೆ ಸಾಕ್ಷಾತ್ ಮಹಾಲಕ್ಷ್ಮಿಯ ಅನುಗ್ರಹ ನಿಮ್ಮದಾಗುತ್ತದೆ ಎನ್ನುವ ರಹಸ್ಯ ಮಾಹಿತಿಯನ್ನು ನಾವು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಶ್ರಾವಣ ಮಾಸದಲ್ಲಿ ಮಾಡುವಂತಹ ವರಮಹಾಲಕ್ಷ್ಮಿ ಪೂಜೆಗೆ ಅದರದ್ದೇ ಆದಂತಹ ಮಹತ್ವವೇ ಇದೆ ಶಾಸ್ತ್ರಗಳಲ್ಲಿ ಲಕ್ಷ್ಮಿ ದೇವಿಗೆ ಮಾಡಲಾಗು ವಿಶೇಷ ಅಲಂಕಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ ಆದ್ದರಿಂದ ಲಕ್ಷ್ಮಿ ಮೂರ್ತಿಯನ್ನು ಅದ್ದೂರಿಯಾಗಿ ಅಲಂಕಾರ ಮಾಡಲಾಗಿರುತ್ತದೆ ಹಾಗೆ ಜನರ ನಂಬಿಕೆ ಏನೆಂದರೆ ಅಲಂಕಾರ ಪ್ರಿಯಗಳಾಗಿರುವ ಲಕ್ಷ್ಮಿ ಪ್ರಸನ್ನಳಾಗಿ
ಆ ಮನೆಯಲ್ಲಿ ನೆಲೆಸಲಿ ಲಕ್ಷ್ಮಿ ಏನಾದರೂ ಆ ದಿನ ಭಕ್ತರ ಮನೆಗೆ ಹೋಗಿ ಆಕೆಯನ್ನು ಅಲಂಕಾರ ಮಾಡಿರುವ ಪರಿಯನ್ನು ನೋಡಿದರೆ ಆಕೆಗೂ ಯಾರ ಮನೆಯಲ್ಲಿ ಮೊದಲು ನೆಲೆಸಬೇಕು ಎನ್ನುವ ಗೊಂದಲ ಮೂಡುವುದು ಗ್ಯಾರಂಟಿ ಇದಿಷ್ಟು ವರಮಹಾಲಕ್ಷ್ಮಿಯ ದಿನ ಮಾಡುವಂತಹ ಲಕ್ಷ್ಮಿಯ ಅಲಂಕಾರ ಆಯ್ತು ಹಾಗೆ ಇದೇ ಹಬ್ಬದ ದಿನ ವರಮಹಾಲಕ್ಷ್ಮಿ ಹಬ್ಬದ ವ್ರತ ಮಾಡುವಾಗ ಕಳಸವನ್ನು ಇಡಲಾಗುತ್ತದೆ ಆಕಾಶವನ್ನು ಲಕ್ಷ್ಮಿಯ ಸ್ವರೂಪ ಅಂತಲೇ ಹೇಳಲಾಗುತ್ತದೆ ಕಳಸ ಇಡುವುದಕ್ಕೆ ಕೆಲವು ವಿಧಿ ವಿಧಾನಗಳಿವೆ ಅದನ್ನು ಯಾಕೆ ಇಡುತ್ತಾರೆ ಯಾವ ರೀತಿಯಾಗಿ ಕಳಸವನ್ನು ಇಟ್ಟರೆ
ಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಎನ್ನುವ ವಿಷಯಗಳನ್ನು ಕೂಡ ಶಾಸ್ತ್ರಗಳಲ್ಲಿ ಹೇಳಲಾಗಿದೆ ಅದು ಎಷ್ಟೋ ಜನರಿಗೆ ಗೊತ್ತೇ ಇಲ್ಲ ಇದೇ ಕಳಸ ಮಹಾಲಕ್ಷ್ಮಿಯ ಅನುಗ್ರಹವನ್ನು ಕೊಡುವ ಶಕ್ತಿಯನ್ನು ಹೊಂದಿರುತ್ತದೆ ಆದ್ದರಿಂದ ನಿಮಗೆ ಈ ಸಂಚಿಕೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ಕಳಸವನ್ನು ಹೇಗೆ ಸಿದ್ಧ ಮಾಡಿಕೊಳ್ಳಬೇಕು. ಅದಕ್ಕೆ ಏನೇನು ಹಾಕಬೇಕು ಎನ್ನುವುದನ್ನು ಹೇಳುತ್ತೇವೆ ಬನ್ನಿ ಸ್ನೇಹಿತರೆ ಈ ಹಿಂದೆ ತುಂಬಾ ಸರಳವಾಗಿ ಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿತ್ತು ಮನೆಯಲ್ಲಿ ಲಕ್ಷ್ಮಿ ದೇವಿಯ ಮೂರ್ತಿಗೆ ಅಲಂಕಾರ ಮಾಡಿ ಅದರ ಮುಂದೆ ಕೂತು ಲಕ್ಷ್ಮಿ ವ್ರತದ ಪುಸ್ತಕ ಓದಿ ಮುಗಿಸಿ ಕೊನೆಯಲ್ಲಿ ಮನೆ ಮನೆಗೆ ಹೋಗಿ ಅರಿಶಿನ ಕುಂಕುಮ ಕೊಡುವುದು ತೆಗೆದುಕೊಳ್ಳುವುದು ಮಾಡಿದರೆ ಹಬ್ಬ ಮುಗಿದು ಹೋಗುತ್ತಿತ್ತು
ಆದರೆ ಇತ್ತೀಚೆಗೆ ವರಮಹಾಲಕ್ಷ್ಮಿ ಪೂಜೆಯನ್ನು ಎಲ್ಲಾ ಹಬ್ಬಗಳಿಗಿಂತ ವಿಜೃಂಭಣೆಯಿಂದ ಮಾಡಲಾಗುತ್ತದೆ ಕೆಲವರಿಗಂತೂ ಇದು ಪ್ರತಿಷ್ಠೆಯ ಹಬ್ಬ ಆಗಿರುತ್ತದೆ ಅಕ್ಕ ಪಕ್ಕದ ಮನೆಯವರಂತೂ ಈ ಹಬ್ಬವನ್ನು ಆಚರಿಸುವುದೇ ಸ್ಪರ್ಧೆ ಮಾಡಿಕೊಂಡು ಬಿಟ್ಟಿರುತ್ತಾರೆ ನೀವು ಕೂಡ ಇದೇ ರೀತಿ ಮಾಡುತ್ತಿದ್ದರೆ ಅದನ್ನು ಮೊದಲು ನಿಲ್ಲಿಸಿ ಕಾರಣ ಮಹಾಲಕ್ಷ್ಮಿ ಹಬ್ಬ ಆಡಂಬರದಿಂದ ಆಚರಿಸುವ ಹಬ್ಬ ಅಲ್ಲವೇ ಅಲ್ಲ ನಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮಹಾಲಕ್ಷ್ಮಿ ಚೆನ್ನಾಗಿ ಕಾಣಬೇಕು ಲಕ್ಷಣವಾಗಿ ಕಾಣಬೇಕು
ಇದನ್ನೆಲ್ಲಾ ಯೋಚನೆ ಮಾಡಿ ಲಕ್ಷ್ಮಿ ಅಲಂಕಾರವನ್ನು ಮಾಡಿದ್ದೆ ಆದಲ್ಲಿ ಹೀಗೆ ಮಾಡುತ್ತಾ ಇದ್ದರೆ ಅದನ್ನು ಮೊದಲು ನಿಲ್ಲಿಸಿ ಯಾಕೆ ಅಂದರೆ ನೀವು ಹಾಗೆ ಮಾಡಿದ್ದಲ್ಲಿ ಮೊದ್ಲು ನಿಲ್ಲಿಸಿ ಮಹಾಲಕ್ಷ್ಮಿಗೆ ದೃಷ್ಟಿ ಆಗುವ ಸಾಧ್ಯತೆ ಇರುತ್ತದೆ ಆಗ ಧನಲಕ್ಷ್ಮಿ ಅನುಗ್ರಹ ಸಿಗುವುದಿರಲಿ ಆಕೆಯು ನಿಮ್ಮಿಂದ ದೂರ ಸರಿದರೆ ಏನು ಮಾಡುತ್ತೀರಾ ಲಕ್ಷ್ಮಿ ಪೂಜೆಯನ್ನು ತುಂಬಾ ಸರಳವಾಗಿ ಮಾಡಿದರೆ ಉತ್ತಮ ಕೆಲವರ ಮೇಲೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ತುಂಬಾ ಇರುತ್ತದೆ ಅದಕ್ಕಾಗಿ ಅವರು ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ಪೂಜಾ ಮೂರ್ತಿ ಇನ್ನಷ್ಟು ಅಂದವಾಗಿ ಕಾಣಿಸಲಿ ಅಂತ ಅದನ್ನು ಮನೆಯಲ್ಲಿರುವ ಆಭರಣಗಳಿಂದ
ಅಲಂಕಾರ ಮಾಡುತ್ತಾರೆ ತಾವು ಮಾತ್ರ ತುಂಬಾ ಸರಳವಾಗಿ ಸೀರೆ ಉಟ್ಟು ಪೂಜೆ ಮಾಡಿ ಮುಗಿಸುತ್ತಾರೆ ನೀವು ಹೀಗೆ ಮಾಡ್ತಾ ಇದ್ದರೆ ದೇವಿ ಮಹಾಲಕ್ಷ್ಮಿಯ ಕೋಪಕ್ಕೆ ಗುರಿಯಾಗಬಹುದು ಮಹಾಲಕ್ಷ್ಮಿಯ ಮೂರ್ತಿಗೆ ಅಲಂಕಾರ ಮಾಡಬೇಕಾದರೆ ಆಭರಣ ಹಾಕಬೇಕು ನಿಜ ಹಾಗಂತ ಮನೆಯಲ್ಲಿ ಇರುವ ಆಭರಣಗಳನ್ನು ಅಲಂಕಾರಕ್ಕೆ ಬಳಸಬೇಡಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಹಾಗೂ ಮುತ್ತೈದೆಯರು ಕೂಡ ಲಕ್ಷ್ಮಿಯರು ಅವರ ಮೈ ಮೇಲು ಆಭರಣ ಇರಲೇಬೇಕು ಆದ್ದರಿಂದ ಪೂಜೆ ಮಾಡುವ ಮುನ್ನ ನೀವು ನಿಮ್ಮ ಶೃಂಗಾರ ನಿಮ್ಮ ಅಲಂಕಾರ ದತ್ತ ಗಮನ ಕೊಡಿ ಯಾವುದೇ ಪೂಜೆ
ಇರಲಿ ಬಹಳ ಶ್ರದ್ಧೆಯಿಂದ ಭಕ್ತಿಯಿಂದ ಆಚರಿಸಬೇಕು ಕೆಲವರು ಮಹಾಲಕ್ಷ್ಮಿ ಹಬ್ಬವನ್ನು ಮಾಡಬೇಕಾದರೆ ಕಳಸದ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ ಪ್ರತಿ ಪೂಜೆಯಲ್ಲಿ ಕಳಸದ ಮಹತ್ವ ತುಂಬಾನೇ ಇರುತ್ತದೆ ಅದರ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇಲ್ಲ ಕಳಸ ಇರುವ ಮುನ್ನ ಹಾಗೂ ಕಳಸದಲ್ಲಿ ಏನು ಹಾಕಬೇಕು ಎನ್ನುವುದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಇದು ಕೆಲವರಿಗೆ ಗೊತ್ತಿಲ್ಲ ಇದನ್ನು ಪಾಲಿಸಿದರೆ ಆ ಪೂಜೆಗೆ ಒಂದು ಅರ್ಥ ಬರುತ್ತದೆ ಬೇರೆ ಬೇರೆ ಪೂಜೆಗೆ ಬೇರೆ ಬೇರೆ ತರಹದ ಕಳಸ ಇಡಲಾಗುತ್ತದೆ ಇದರಲ್ಲಿ ಮಹಾಲಕ್ಷ್ಮಿಯ ಪೂಜೆಗೆ ಇಡುವಂತಹ ಕಳಸ ಬಹಳ ಮಹತ್ವವನ್ನು ಹೊಂದಿದೆ ಸಾಮಾನ್ಯವಾಗಿ
ಕಳಸವನ್ನು ನೀರು ಅಥವಾ ಅಕ್ಕಿಯನ್ನು ಹಾಕಿ ಪೂಜೆಯನ್ನು ಮಾಡುತ್ತಾರೆ ಮಹಾಲಕ್ಷ್ಮಿಯ ಹಬ್ಬದ ದಿನ ನೀವು ಇಷ್ಟನ್ನೆ ಹಾಕಿ ಇಡುತ್ತಿದ್ದೀರಾ ಹಾಗಾದರೆ ಈ ಬಾರಿಯಿಂದ ಹೀಗೆ ಮಾಡಬೇಡಿ ಬದಲಿಗೆ ನಾವು ಈಗ ಹೇಳುವಂತಹ ಈ ವಿಶೇಷ ವಸ್ತುಗಳನ್ನು ಹಾಕಿ ಇಟ್ಟುಬಿಡಿ ಆಗ ನೋಡಿ ಮಹಾಲಕ್ಷ್ಮಿ ಹೇಗೆ ನಿಮ್ಮ ಮೇಲೆ ಕೃಪಾಕಟಾಕ್ಷ ತೋರುತ್ತಾಳೆ ಅಂತ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಂಕಷ್ಟಗಳನ್ನು ದೂರ ಮಾಡುತ್ತಾಳೆ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ ಇರುವಂತೆ ಮಾಡುತ್ತಾಳೆ ಸ್ನೇಹಿತರೆ ಕಳಸ ಅಂದರೆ ತಂಬಿಗೆ ನಿಮ್ಮ ಮನೆಯಲ್ಲಿ ಚಿನ್ನದ ಅಥವಾ ಬೆಳ್ಳಿಯ ತಂಬಿಗೆ ಇದ್ದರೆ ಅದನ್ನು ಕಳಸಕ್ಕಾಗಿ ಉಪಯೋಗಿಸಿ ಅದು
ಇಲ್ಲ ಅಂದರೆ ತಾಮ್ರದ ಕಳಸವನ್ನು ಉಪಯೋಗಿಸಿ ಸಾಕು ಕೊನೆ ಪಕ್ಷ ಸ್ಟೀಲ್ ತಂಬಿಗೆ ಇದ್ದರೂ ಸಾಕು ಆದರೆ ಇದನ್ನು ಉಪಯೋಗಿಸಿರಬಾರದು ವರಮಹಾಲಕ್ಷ್ಮಿ ಹಬ್ಬದ ದಿನ ಬಹಳ ಶುಚಿಯಾಗಿ ಮನೆಯನ್ನು ಇಟ್ಟುಕೊಳ್ಳಿ ಮಹಿಳೆಯರು ಲಕ್ಷ್ಮಿ ಪೂಜೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿಉಟ್ಟುಕೊಂಡು ನಂತರ ವರಮಹಾಲಕ್ಷ್ಮಿ ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕು ಕಳಸವನ್ನು ಎಲ್ಲಿ ಇಡಬೇಕು? ಎನ್ನುವುದನ್ನು ನಿರ್ಧಾರ ಮಾಡಿ ನಂತರ ಆ ಜಾಗವನ್ನು ಸ್ವಚ್ಛ ಮಾಡಿ ನಂತರ ಆ ಜಾಗದಲ್ಲಿ ಒಂದು ಮಣೆಯನ್ನು ಇಟ್ಟು ರಂಗೋಲಿಯನ್ನು ಹಾಕಬೇಕು ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಹಾಕಿದರೆ
ಶ್ರೇಷ್ಠ ಈ ಅಕ್ಕಿಯ ರಂಗೋಲಿಯ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಬಿಡಿಸಿ ಕೊನೆಗೆ ಅದೇ ಎಲೆಯ ಮೇಲೆ ಬಾಳೆ ಎಲೆಯ ಮುಂಭಾಗವನ್ನು ಇಟ್ಟು ಅದರ ಮೇಲೆ ಒಂದು ಗ್ಲಾಸ್ ಅನ್ನು ಇಟ್ಟು ಅಕ್ಕಿಯನ್ನು ಹಾಕಿ ಅದರ ಮೇಲೆ ಕಳಸವನ್ನು ಇಡಬೇಕು ಕಳಸ ಸಿದ್ಧವಾಗ ಕೇವಲ ನೀರು ಅಥವಾ ಅಕ್ಕಿಯನ್ನು ಮಾತ್ರ ಹಾಕಬೇಡಿ ಲಕ್ಷ್ಮಿಯ ಪೂಜೆಗೆ ಇರುವಂತಹ ಕಳಸ ಆಗಿರುವುದರಿಂದ ಅದರೊಳಗೆ ಆರು ಗೋಡಂಬಿ ಆರು ಕವಡೆ ಆರು ಗೋಮತಿ ಚಕ್ರ ಆರು ಬೆಳ್ಳಿಯ ನಾಣ್ಯ ಆರು ಬಟ್ಟಲ ಅಡಿಕೆ ಹಾಗೂ ಆರು ಲವಂಗವನ್ನು ಕಳಸದಲ್ಲಿ ಇಟ್ಟುಬಿಡಿ ಇದರ ಹೊರತಾಗಿ ವಿಲ್ಯದ ಎಲೆ ಹೊಸ ಬಾಚಣಿಕೆ ಪುಟ್ಟ ಕನ್ನಡಿ ಗಾಜಿನ ಹಸಿರು ಕೆಂಪುಬಳೆಯನ್ನು ಹಾಕಿ ಇಟ್ಟುಬಿಡಿ
ಇದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಇದನ್ನು ಮಾಡುವುದರಿಂದ ನಿಮ್ಮ ಅದೃಷ್ಟ ದಿನದಿಂದ ದಿನಕ್ಕೆ ಬದಲಾಗುತ್ತದೆ ಯಾಕೆ ಆರನ್ನು ಹಾಕಬೇಕು ಅಂದರೆ ಆರು ಅಂದರೆ ಶುಕ್ರ ಶುಕ್ರ ಅಂದರೆ ಲಕ್ಷ್ಮಿ ಕಳಸದ ಒಳಗೆ ಇದನ್ನೆಲ್ಲಾ ಹಾಕಿದ ನಂತರ ಕಳಸದ ಮೇಲ್ಭಾಗದಲ್ಲಿ 5 ತೊಳೆದ ಮಾವಿನ ಎಲೆಯನ್ನು ಇಟ್ಟು ಬಾಯನ್ನು ಮುಚ್ಚಬೇಕು ಅದೇ ಕಳಸದ ಮೇಲೆ ಜುಟ್ಟು ಇರುವಂತಹ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಲಕ್ಷ್ಮೀದೇವಿಯ ಮುಖವಾಡ ಇದ್ದರೆ ಅದನ್ನು ಕಟ್ಟಿ ಅದಕ್ಕೆ ಶೃಂಗಾರ ಮಾಡಿ
ಅದು ಇಲ್ಲ ಅಂದರೆ ತೆಂಗಿನಕಾಯಿಗೆ ಅರಿಶಿಣ ಹಚ್ಚಿ ಕುಂಕುಮದಿಂದ ಕಣ್ಣು ಮೂಗು ಚಿತ್ರವನ್ನು ಬಿಡಿಸಿ ಸೀರೆಯನ್ನು ಉಡಿಸಿ ಅಲಂಕಾರ ಮಾಡಿ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಮರುದಿನ ಅದೇ ಕಳಸದ ನೀರನ್ನು ಮನೆಯ ಒಳಗಡೆ ಸಿಂಪಡಿಸಿ ಉಳಿದ ನೀರನ್ನು ಗಿಡಕ್ಕೆ ಹಾಕಿಡಿ ಹಾಗೆ ಅಕ್ಕಿಯನ್ನು ಹಾಗೂ ಡ್ರೈ ಫ್ರೂಟ್ಸ್ ಅನ್ನು ಯಾವುದಾದರೂ ಸಿಹಿ ಮಾಡಿಕೊಂಡು ತಿನ್ನಿ ಉಳಿದ ಪೂಜಾ ಸಾಮಗ್ರಿಗಳನ್ನು ದೇವರ ಕೋಣೆಯಲ್ಲಿ ಇಟ್ಟುಬಿಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು