ನಮಸ್ಕಾರ ಸ್ನೇಹಿತರೆ ಭೂಮಿಗೆ ಹೇಗೆ ಮ್ಯಾಗ್ನೆಟಿಕ್ ಪವರ್ ಇರುತ್ತದೆಯೋ ದೇಹಕ್ಕೂ ಹಾಗೆ ತನ್ನದೇ ಆದಂತಹ ಶಕ್ತಿ ಇರುತ್ತದೆ ನಾವು ರಾತ್ರಿ ಮಲಗಿದಾಗ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ ಬೆಳಿಗ್ಗೆ ಎದ್ದ ತಕ್ಷಣ ಒಂತರಾ ಹಿತಕರವಾದ ಸಂವೇದನೆ ಆಗುತ್ತಿರುತ್ತದೆ ನಮ್ಮ ದೇಹಸ್ಥಿತಿ ತುಂಬಾ ಆರೋಗ್ಯವಾಗಿದೆ ನಾವು ನಿರಾಳವಾಗಿದ್ದೇವೆ ಅನುವ ಬಾವ ಭಾಸವಾಗುತ್ತದೆ ಇದು ನಾವು ತಲೆಯೊಡ್ಡಿ ಮಲಗುವ ದಿಕ್ಕಿನ ಮೇಲೆ ನಿಶ್ಚಯವಾಗಿರುತ್ತದೆ ಹಾಗಾದರೆ ಯಾವ ದಿಕ್ಕಿನಲ್ಲಿ ಮಲಗಿದರೆ ಏನೆಲ್ಲ ಲಾಭ ಇದೆ ಯಾವ ದಿಕ್ಕಿನಲ್ಲಿ ಮಲಗಿದರೆ ಏನಲ್ಲ ಅನಿಷ್ಟ ಹೇಗೆ ಇರುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಈ ಲೇಖನದ ಮೂಲಕ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ವೇದಗಳ ಪ್ರಕಾರ ಒಟ್ಟು 10 ದಿಕ್ಕುಗಳು ಇದರಲ್ಲಿ ಮೇಲಿನ ದಿಕ್ಕು ಮತ್ತು ಕೆಳಗಿನ ದಿಕ್ಕು ಎರಡು ಸೇರಿಕೊಂಡಿವೆ ಆಕಾಶ ಮತ್ತು ಪಾತಾಳ ಎರಡು ದಿಕ್ಕುಗಳು ಎಂದು ಪರಿಗಣಿಸಲಾಗುತ್ತದೆ ಆದರೆ ವಾಸ್ತುಶಾಸ್ತ್ರದ ಪ್ರಕಾರ ವಾಸ್ತುವಿನಲ್ಲಿ ಕೇವಲ ಎಂಟು ದಿಕ್ಕುಗಳು ಮಾತ್ರ ಇದೆ ಅಷ್ಟ ದಿಕ್ಕುಗಳಲ್ಲಿ ಪ್ರತಿಯೊಂದು ದಿಕ್ಕುಗಳಿಗೂ ದೇವರುಗಳಿವೆ ಆಯಾ ಗ್ರಹಗಳು ಆಯಾ ದಿಕ್ಕನ್ನು ಪ್ರತಿನಿಧಿಸುತ್ತವೆ
ಈ ಅಷ್ಟ ದಿಕ್ಕುಗಳಲ್ಲಿ ಯಾವುದೇ ಒಂದು ದಿಕ್ಕು ದೋಷ ವಾಗಿದ್ದರೆ ಅದು ನಮಗೆ ಕೆಟ್ಟ ಫಲಿತಾಂಶವನ್ನು ಕೊಡುತ್ತದೆ ಎಲ್ಲಾ ಕೆಲಸಗಳಿಗೂ ಅಷ್ಟ ದಿಕ್ಕುಗಳನ್ನು ನೋಡುವುದಿಲ್ಲ ಪ್ರಮುಖವಾಗಿ ನಾಲ್ಕು ದಿಕ್ಕುಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಪೂರ್ವ-ಪಶ್ಚಿಮ ಉತ್ತರ-ದಕ್ಷಿಣ ಪೂರ್ವಕ್ಕೆ ತಲೆಯಿಟ್ಟು ಮಲಗಿದರೆ ಧನ ಪ್ರಾಪ್ತಿಯಾಗುತ್ತದೆ ದಕ್ಷಿಣಕ್ಕೆ ತಲೆ ಇಟ್ಟು ಮಲಗಿದರೆ ಆಯಸ್ಸು ವೃದ್ಧಿಯಾಗುತ್ತದೆ ಪಶ್ಚಿಮಕ್ಕೆ ತಲೆಯಿಟ್ಟು ಮಲಗಿದರೆ ಪ್ರಬಲವಾದ ಚಿಂತೆಗಳು ಸದಾ ನಮ್ಮನ್ನು ಕಾಡುತ್ತವೆ ಉತ್ತರಕ್ಕೆ ತಲೆಯಿಟ್ಟು ಮಲಗಿದರೆ ಒಂದೇ ಒಂದು ರೂಪಾಯಿ ಜೇಬಲ್ಲಿ ನಿಲ್ಲುವುದಿಲ್ಲ ಸಾವು ಅನ್ನುವುದು ನಮ್ಮನ್ನು ಹುಡುಕಿಕೊಂಡು ಬರುತ್ತಿದೆ ಅನ್ನುವ ಹಾಗೆ ಭಾಸವಾಗಿ ಬಿಡುತ್ತದೆ ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು ಸೂರ್ಯನಿಂದ ಆರೋಗ್ಯವನ್ನು ಬಯಸಿ ಎನ್ನುವುದು ಸ್ಮೃತಿ ವಾಕ್ಯ ಸೂರ್ಯನು ಐಶ್ವರ್ಯಕ್ಕೆ ಆರೋಗ್ಯಕ್ಕೆ ಪ್ರಧಾನ ದೇವತೆ
ಹೀಗಾಗಿ ಪೂರ್ವಕ್ಕೆ ತಲೆಯಿಟ್ಟು ಮಲಗಿದರೆ ಐಶ್ವರ್ಯ ಆಯಸ್ಸು ಆರೋಗ್ಯ ಪ್ರಾಪ್ತಿಯಾಗುತ್ತದೆ ದಕ್ಷಿಣ ಪಿತೃದೇವತೆಗಳು ದಿಕ್ಕು ದಕ್ಷಿಣಾಮೂರ್ತಿ ಮತ್ತು ಯಮನ ದಿಕ್ಕು ಅಂತ ಹಿಂದೂ ಪುರಾಣಗಳಲ್ಲಿ ಹೇಳಿದ್ದಾರೆ ಯಾರು ದಕ್ಷಿಣಕ್ಕೆ ತಲೆಯಿಟ್ಟು ಮಲಗುತ್ತಾರೆ ಅಂಥವರ ಆಯಸ್ಸು ವೃದ್ಧಿಯಾಗುತ್ತದೆ ಪಶ್ಚಿಮಕ್ಕೆ ತಲೆಯಿಟ್ಟು ಮಲಗಿದರೆ ನಮ್ಮೊಳಗೆ ಸದಾ ಚಿಂತೆಗಳು ತುಂಬಿರುತ್ತವೆ ಕುಂತಲ್ಲಿ ನಿಂತಲ್ಲಿ ಚಿಂತೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ ಸೂರ್ಯ ಉದಯಿಸುವುದು ಪೂರ್ವದಲ್ಲಿ ಇದಕ್ಕೆ ವಿರುದ್ಧವಾದುದು ಪಶ್ಚಿಮ ಹೀಗಾಗಿ ಈ ದಿಕ್ಕಿಗೆ ಕಾಲಿಟ್ಟು ಮಲಗಿದ್ದಾರೆ ಸೂರ್ಯನನ್ನು ಒದ್ದಂತೆ ಭಾಸವಾಗುತ್ತದೆ ಹೀಗಾಗಿ ಪಶ್ಚಿಮಕ್ಕೆ ತಲೆ ಹಾಕಿ ಮಲಗಬಾರದು ಅಂತ ನಮ್ಮ ಹಿರೀಕರು ಹೇಳಿದ್ದಾರೆ
ಕೊನೆಯ ದಿಕ್ಕು ಉತ್ತರ ದಿಕ್ಕು ಈ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಹಾಕಿ ಮಲಗಬಾರದು ಈ ದಿಕ್ಕಿಗೆ ತಲೆ ಹಾಕಿ ಮಲಗುವವರು ಕಡಿಮೆ ಯಾಕೆ ಮಲಗಬಾರದು ಎನ್ನುವುದನ್ನು ಕೆಲವರು ಕೆಲವು ಕಟುಸತ್ಯವನ್ನು ಹೇಳುತ್ತಾರೆ ಯಾರು ಈ ದಿಕ್ಕಿಗೆ ತಲೆಯಿಟ್ಟು ಮಲಗುತ್ತಾರೆ ಅಂಥವರು ದೆವ್ವ ಭೂತವನ್ನು ಆಹ್ವಾನಿಸಿದಂತಾಗುತ್ತದೆ ಮೇಲಿಂದ ಮೇಲೆ ಕೆಟ್ಟದ್ದು ಆಗುತ್ತಲೇ ಇರುತ್ತದೆ ಅಂತ ಹೇಳುತ್ತಾರೆ ಆದರೆ ವೈಜ್ಞಾನಿಕವಾಗಿ ಇರುವಂತ ಸತ್ಯವೇ ಬೇರೆ ಮೊದಲೇ ಹೇಳಿರುವಂತೆ ಭೂಮಿ ಹಾಗೂ ಮನುಷ್ಯನ ದೇಹದ ನಡುವೆ ಕಾಂತಿ ಶಕ್ತಿ ಇರುತ್ತದೆ ಯಾವಾಗ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುತ್ತಾರೆ ಆಗ ನಮ್ಮ ದೇಹದಲ್ಲಿ ಇರುವ ಕಾಂತಿ ಶಕ್ತಿಯು ಸಮತೋಲ ತೆಯನ್ನು ಕಳೆದುಕೊಳ್ಳುತ್ತದೆ
ಇದರಿಂದಾಗಿ ರಕ್ತದ ಒತ್ತಡ ಹೃದಯರೋಗ ಕಾಡಲು ಶುರುವಾಗುತ್ತದೆ ಹಾಗಾಗಿ ಈ ಕಾಂತಕ್ಷೇತ್ರವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರು ಮುಖ್ಯವಾಗಿರುತ್ತದೆ ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿವ ರಕ್ತದಲ್ಲಿ ಕೊಬ್ಬಿನ ಅಂಶ ಇರುತ್ತದೆ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಮತಕ್ಷೇತ್ರದಿಂದ ಆಕರ್ಷಣೆ ಆಗುವ ಕಬ್ಬಿಣ ಅಂಶ ನಮ್ಮ ತಲೆಯಲ್ಲಿ ಶೇಖರಣೆಯಾಗುವ ಸಾಧ್ಯತೆ ಇರುತ್ತದೆ ಇದರಿಂದಾಗಿ ತಲೆನೋವು ಪ್ರಜ್ಞಾಹೀನತೆ ಮೆದುಳಿನ ಕ್ಷಮತೆ ಕಡಿಮೆಯಾಗಲು ಶುರುವಾಗಬಹುದು ಉತ್ತರ ದಿಕ್ಕಿನಲ್ಲಿ ಮಲಗಿದರೆ ದುಃಸ್ವಪ್ನಗಳು ತಾಂಡವವಾಡುತ್ತದೆ ಯಾರು ಈ ದಿಕ್ಕಿನಲ್ಲಿ ತಲೆ ಇಟ್ಟು ಮರುಗುತ್ತಾರೆ ರಕ್ತದ ಒತ್ತಡವನ್ನು ಆಹ್ವಾನ ಮಾಡಿಕೊಳ್ಳಲು ಅವರು ಅವರೇ ಕಾರಣರಾಗುತ್ತಾರೆ
ಮನಸ್ಸು ಸಹ ನಿಯಂತ್ರಣವನ್ನು ಕಳೆದುಕೊಂಡುಬಿಡುತ್ತದೆ ಪುರಾಣಗಳ ಪ್ರಕಾರ ಹೇಳುವುದಾದರೆ ಉತ್ತರ ದಿಕ್ಕು ಶ್ರೇಯಸ್ಸಲ್ಲ ದಿಕ್ಕು ಈ ದಿಕ್ಕಿನಲ್ಲಿ ಮಲಗುವುದರಿಂದ ಸದಾ ಕೆಟ್ಟ ಯೋಚನೆಗಳು ಓಡುತ್ತವೆ ಕೆಟ್ಟ ಘಟನೆಗಳು ಸಹ ಸದಾ ಜರುಗುತ್ತಿರುತ್ತವೆ ಯಾರು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುತ್ತಾರೆ ಅಂತವರಿಗೆ ಧನಹಾನಿ ಮಾನಹಾನಿ ಆರೋಗ್ಯ ಹಾನಿ ಮತ್ತು ಪ್ರಾಣ ಹಾನಿಯಾಗುವ ಸಂಭವವಿರುತ್ತದೆ ಹಾಗಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಎಂದು ಧಾರ್ಮಿಕವಾಗಿಯೂ ವೈಜ್ಞಾನಿಕವಾಗಿಯೂ ಹೇಳಲಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು