ಯಾವ ರಾಶಿಗೆ ಯಾವ ಬಣ ಅದೃಷ್ಟವನ್ನು ತರುತ್ತದೆ

0

ಯಾವ ರಾಶಿಗೆ ಯಾವ ಬಣ್ಣ ಶುಭ ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ.

ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ ಆಕರ್ಷಣೆಯನ್ನುಂಟು ಮಾಡುವಂತಹ ವಸ್ತುವಾಗಿದೆ. ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು ಅವುಗಳದ್ದೇ ಆದ ಶಕ್ತಿ ಕೂಡಾ ಇರುತ್ತದೆ.
ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ. ಅದೃಷ್ಟವನ್ನು ತರುತ್ತವೆ ಎಂಬುದನ್ನು ತಿಳಿಸಿಕೊಡುತ್ತೇವೆ.

ಮೇಷರಾಶಿ : ಈ ರಾಶಿಯವರಿಗೆ ಸದಾ ಕೆಂಪು ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ. ಕೆಂಪು ಬಣ್ಣಕ್ಕೆ ವಿಶೇಷ ಶಕ್ತಿ ಇದ್ದು ವ್ಯಕ್ತಿಯೊಳಗೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ. ಜೊತೆಗೆ ನಿಂಬೆ ಹಸಿರು ಅಥವಾ ಹಸಿರು ಬಣ್ಣ ಅಥವಾ ಬಿಳಿ ಬಣ್ಣವು ಸಹ ಇವರಿಗೆ ಒಪ್ಪಿತವಾಗುತ್ತದೆ.

ವೃಷಭರಾಶಿ: ಈ ರಾಶಿಯವರಿಗೆ ಶುಭತರುವ ಬಣ್ಣ ಹಸಿರು ಅಲ್ಲದೆ ಹಳದಿ ಬಣ್ಣವೂ ಆಗಿಬರುತ್ತದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಆದರೆ ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಿರಬಾರದು ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಒಳಿತು.

ಮಿಥುನ ರಾಶಿ: ಮಿಥುನ ರಾಶಿಯ ವ್ಯಕ್ತಿಗಳಿಗೆ ಹಳದಿ ಬಣ್ಣವು ಶುಭಕಾರಕವಾಗಿದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಹಳದಿ ಬಣ್ಣವು ಬುದ್ಧಿವಂತಿಕೆ ಮನಸ್ಸು ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ. ಹೀಗಾಗಿ ಈ ರಾಶಿಯವರು ಹಳದಿಯನ್ನು ಬಳಸಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಬಿಳಿ ಬಣ್ಣವು ಉತ್ತಮ. ಬಿಳಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣವು ಮನಸ್ಸು ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ.

ಸಿಂಹ ರಾಶಿ: ಈ ರಾಶಿಯವರಿಗೆ ಕೇಸರಿ ಬಣ್ಣವು ಉತ್ತಮ. ಕೇಸರಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ.

ಕನ್ಯಾರಾಶಿ: ಈ ರಾಶಿಯವರಿಗೆ ನೀಲಿ ಬಣ್ಣವು ಶುಭಕಾರಕವಾಗಿದೆ. ನೀಲಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಕರ.

ತುಲಾ ರಾಶಿ: ಇವರಿಗೆ ಗುಲಾಬಿ ಬಣ್ಣವು ಶುಭವನ್ನು ತರುತ್ತದೆ. ಈ ಬಣ್ಣ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ. ಅಲ್ಲದೆ ತಿಳಿ ಹಳದಿ ಬಣ್ಣವೂ ಇವರಿಗೆ ಒಳಿತನ್ನುಂಟು ಮಾಡುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಕಪ್ಪು ಬಣ್ಣವೂ ಶುಭ ತರಲಿದೆ. ಕಪ್ಪು ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.

ಧನು ರಾಶಿ: ಈ ರಾಶಿಯ ವ್ಯಕ್ತಿಗಳಿಗೆ ನೇರಳೆ ಬಣ್ಣವು ಒಳಿತನ್ನುಂಟು ಮಾಡುತ್ತದೆ. ನೇರಳೆ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಕೂಡ ಇವರಿಗೆ ಶುಭಕಾರಕವಾಗಿವೆ.

ಮಕರ ರಾಶಿ: ಮಕರ ರಾಶಿಯ ವ್ಯಕ್ತಿಗಳಿಗೆ ಕಪ್ಪು ಮತ್ತು ನೀಲಿ ಬಣ್ಣವು ಶುಭಕಾರವಾಗಿವೆ. ಕಪ್ಪು ಮತ್ತು ನೀಲಿ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.

ಕುಂಭ ರಾಶಿ: ಇವರಿಗೆ ತಿಳಿ ನೀಲಿ ಅಥವಾ ಆಕಾಶ ನೀಲಿ ಬಣ್ಣಗಳು ಬಹಳ ಉತ್ತಮ. ಇವರು ಈ ಬಣ್ಣಗಳನ್ನು ಬಳಸುವುದರಿಂದ ಹೋದ ಕಡೆಗಳಲ್ಲೆಲ್ಲ ಯಶಸ್ಸನ್ನು ಸಾಧಿಸಬಹುದು.

ಮೀನರಾಶಿ: ಮೀನ ರಾಶಿಯ ವ್ಯಕ್ತಿಗಳಿಗೆ ಹಳದಿ ಕಿತ್ತಳೆ ಹಾಗೂ ಕೇಸರಿ ಬಣ್ಣಗಳು ಶುಭವನ್ನು ತಂದುಕೊಡಲಿವೆ. ಈ ಬಣ್ಣಗಳು ನೆಮ್ಮದಿಯನ್ನು ತಂದುಕೊಡುವುದಲ್ಲದೇ ಒಳಿತನ್ನುಂಟು ಮಾಡುತ್ತದೆ.

Leave A Reply

Your email address will not be published.