ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ರಕ್ತ ಶುದ್ಧೀಯಾಗುವುದು ಹಲವಾರು ರೋಗಗಳನ್ನು ತಡೆಗಟ್ಟುವ ವಿಧಾನ ಯಾರಿಗೆ ಅಶುದ್ಧ ರಕ್ತ ಇರುತ್ತದೊ ಅವರಿಗೆ ಚರ್ಮ ರೋಗ, ಹೃದಯ ಸಂಬಂಧಿ ಕಾಯಿಲೆ, ಹಲವಾರು ರೋಗಗಳನ್ನು ಉತ್ಪತ್ತಿ ಮಾಡುವಂತಹ ಶಕ್ತಿ ಈ ಅಶುದ್ಧಕ್ಕೆ ಇದೆ. ಹಾಗಾಗಿ ರಕ್ತ ಶುದ್ಧೀಕರಣಕ್ಕೆ ಒಂದು ನೈಸರ್ಗಿಕ ವಿಧಾನ ಯಾವುದು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಹಲವಾರು ಬಗ್ಗೆಯನ್ನು ನಾವು ತಿಳಿದುಕೊಳ್ಳಬಹುದು ವಿಶೇಷವಾಗಿ ಆಹಾರದಲ್ಲಿ ಅತಿಯಾದ ಉಪ್ಪು ಹುಳಿ ಖಾರವನ್ನು ತಿನ್ನಬಾರದು ವಿಶೇಷವಾಗಿ ಸಿಹಿ ಮತ್ತು ಕಹಿ ಮತ್ತು ಒಗರು ಇರುವಂತಹ ಆಹಾರವನ್ನು ಸೇವಿಸಬೇಕು ಉಪ್ಪು ಹೂಳಿ ಕಾರಣವನ್ನು ಸಂಪೂರ್ಣವಾಗಿ ಬಿಟ್ಟು ಬೀಸಬೇಕು ಅಂತ ಅಲ್ಲ ಆದರೆ ಅವುಗಳನ್ನು ಅತಿಯಾಗಿ ಸೇವನೆ ರೂಢಿ ಇದ್ದರೆ ಕಡಿಮೆ ಮಾಡಬೇಕು. ಹೊರಗಡೆಯ ಆಹಾರವನ್ನು ಕಡಿಮೆ ತಿನ್ನಿ ಹಾಗೂ ಕೆಮಿಕಲ್ ಆಹಾರವನ್ನು ಕಡಿಮೆ ಮಾಡಿ ಇದರಿಂದ ನಮ್ಮ ರಕ್ತ ಶುದ್ಧಿಯಾಗುತ್ತದೆ. ಸಿಹಿ, ಒಗರು, ಕಹಿ ಹೆಚ್ಚಾಗಿ ಸೇವನೆ ಮಾಡಿ, ಸಿಹಿ ಎಂದರೆ ಸಕ್ಕರೆ ಹಾಕಿಕೊಂಡು ತಿನ್ನಿ ಅಂತ ಅಲ್ಲ ನೈಸರ್ಗಿಕವಾಗಿ ಸಿಹಿ ಆಗಿರುವತಂಹದು ಹಣ್ಣುಗಳು ಅಥವಾ ಹಾಲು ತುಪ್ಪ, ಕಹಿ ಗುಣ ಇರುವಂತಹ ಹಾಗಲಕಾಯಿ, ಹಾಗೂ ಕಹಿ ಬೇವು, ಇನ್ನು ಕಹಿ ಗುಣ ಇರುವತಹ ಕೆಲವು ತರಕಾರಿ, ನೆಲ್ಲಿಕಾಯಿ ಸೇವನೆ ಮಾಡಿದರೆ ರಕ್ತ ಶುದ್ಧಿಯಾಗುತ್ತದೆ. ಈ ರೀತಿ ನಮ್ಮ ಆಹಾರದಲ್ಲಿ ಆದಷ್ಟು ಸಾತ್ವಿಕವಾದ ಮತ್ತು ಕಹಿ ಗುಣ ಹಾಗೂ ಸಿಹಿ ಗುಣ, ಒಗರು ಗುಣ ಇರುವ ಆಹಾರ ಸೇವನೆ ಮಾಡುವುದರಿಂದ ರಕ್ತ ಶುದ್ಧ ಆಗುತ್ತದೆ ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ.
ಇದಕ್ಕೆ ಒಂದು ಮನೆ ಮದ್ದು ಹೇಗೆ ಮಾಡುವುದನ್ನು ನೋಡೋಣ ಬನ್ನಿ ಇದನ್ನು ವಾರಕ್ಕೆ ಒಂದು ಬಾರಿ ತೆಗೆದುಕೊಳ್ಳಬಹುದು ಹೆಚ್ಚು ಎಂದರೆ ವಾರಕ್ಕೆ ಎರಡು ಬಾರಿ ಇದು ದೀರ್ಘಕಾಲದವರೆಗೆ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಬಳಸುವ ಸಾಮಗ್ರಿ ಬಹುತೇಕರಿಗೆ ಇದು ಸೇಫ್ ಆಗಿರುವ ವಸ್ತು, ಇದು ರಕ್ತ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ. ಮೊದಲಿಗೆ ಅಮೃತ ಬಳ್ಳಿ, ಮಂಜಿಷ್ಟ, ಬೇವಿನ ಸೊಪ್ಪು, ಅಣಲೇ ಕಾಯಿ ಈ ನಾಲ್ಕು ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ ನಾಲ್ಕು ಲೋಟ ನೀರಿಗೆ ಒಂದು ಚಮಚ ಈ ಮಿಶ್ರಣವನ್ನು ಹಾಕಿ ಇದನ್ನು ಒಂದು ಲೋಟ ಆಗುವ ವರೆಗು ಇದನ್ನು ಬತ್ತಿಸಿ.
ನಂತರ ಕುಡಿಯಿರಿ ಕಹಿ ಇರುತ್ತದೆ ಕುಡಿಯುದಕ್ಕೆ ಕಷ್ಟ ಆಗಬಹುದು ಆದರೆ ದೇಹಕ್ಕೆ ಒಳ್ಳೆಯದು. ಕೆಲವೊಬ್ಬರಿಗೆ ಉಷ್ಣ ಆಗುವ ಸಾಧ್ಯತೆ ಇರುತ್ತದೆ ಅಂಥವರು ಇದನ್ನು ಕುಡಿದ ನಂತರ ತುಪ್ಪ ಸೇವನೆ ಮಾಡಬೇಕು. ಕಷಾಯ ಬಿಸಿ ಇರುವಾಗ ತುಪ್ಪ ಹಾಕಿಕೊಂಡು ಕುಡಿಯಬಹುದು ಈ ರೀತಿ ಮಾಡುವುದರಿಂದ ಆ ರೀತಿಯಾದ dryness ದೂರವಾಗುತ್ತದೆ. ಈ ರೀತಿಯಾಗಿ ಕಷಾಯ ಕುಡಿಯುವುದರಿಂದ ನಮ್ಮ ಚರ್ಮ ಚೆನ್ನಾಗಿ ಇರುತ್ತದೆ ಹಾಗೆಯೆ ರಕ್ತ ಶುದ್ಧಿಯಾಗುತ್ತದೆ. ಯಾವುದೇ ಮನೆ ಮದ್ದು ಪ್ರಯೋಗಿಸು ಮುನ್ನ ವೈದ್ಯರ ಬಳಿ ಸಲಹೆ ಪಡೆಯುವುದು ಮುಖ್ಯ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.