ಸಾಮಾನ್ಯವಾಗಿ ಮನೆಯ ಅಕ್ಕಪಕ್ಕದಲ್ಲಿ ಕೆಲವು ಗಿಡ ಇರುತ್ತವೆ. ಇವುಗಳಲ್ಲಿ ಕೆಲವು ಗಿಡಗಳು ಔಷಧೀಯ ಗುಣಗಳನ್ನು ಹೊಂದಿದ್ದರೆ ಇನ್ನು ಕೆಲವು ಗಿಡಗಳು ವಿಷಕಾರಿ ಅಂಶವನ್ನು ಒಳಗೊಂಡಿರುತ್ತದೆ. ಇನ್ನು ಇಂದಿನ ನಮ್ಮ ಲೇಖನದಲ್ಲಿ ಮನೆಯ ಅಕ್ಕಪಕ್ಕ ಬೆಳೆಯುವಂತಹ ವಿಷಕಾರಿ ಅಂಶವಿರುವ ಗಿಡಗಳ ಬಗ್ಗೆ ತಿಳಿಯೋಣ ಬನ್ನಿ. ರೋಸರಿ ಪಿ ಈ ಗಿಡದ ಬೀಜಗಳು ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಇರುತ್ತದೆ. ಇವುಗಳನ್ನು ಬಳಸಿಕೊಂಡು ಆಭರಣ , ಕೈಗೆ ಕಟ್ಟಿಕೊಳ್ಳಲು ಮಾಡಿಕೊಂಡು ಬಳಸಲಾಗುತ್ತದೆ. ಇನ್ನು ಬೀಜವು ಬಹಳ ವಿಷಕಾರಿ ಅಂಶವನ್ನು ಒಳಗೊಂಡಿರುತ್ತದೆ. ಈ ಬೀಜಗಳು ನೋಡಲು ಎಷ್ಟು ಆಕರ್ಷಕವಾಗಿ ಕಾಣುತ್ತದೆಯೋ ಅಷ್ಟೆ ವಿಷಕಾರಿ ಅಂಶವನ್ನು ಒಳಗೊಂಡಿರುತ್ತದೆ. ಇನ್ನು ಈ ಬೀಜದಲ್ಲಿ ಏಬ್ರಿನ್ ಎನ್ನುವ ವಿಷದ ಅಂಶ ಇರುತ್ತದೆ. ಮನುಷ್ಯನು ಇದರ 1 ಬೀಜವನ್ನು ಸೇವಿಸಿದರೆ ಅವನ ಅಂತ್ಯವಾಗುತ್ತದೆ.
ಕಣಗಳೇ ಕಣ ವೀರ ಎಂದು ಕರೆಯಲ್ಪಡುವ ಈ ಹೂವು ಗಳು ಪಾರ್ಕ್ ಗಳಲ್ಲಿ, ರಸ್ತೆ ಬದಿಗಳಲ್ಲಿ ಕಾಣಬಹುದಾಗಿದೆ. ಈ ಗಿಡದ ಹೂವು,ಎಲೆ,ಕಾಂಡ ಪ್ರತಿಯೊಂದು ಭಾಗವು ವಿಷಕಾರಿ ಅಂಶವನ್ನು ಒಳಗೊಂಡಿರುತ್ತದೆ. ಇವುಗಳನ್ನು ತಿನ್ನುವುದರಿಂದ ಮಾತ್ರವಲ್ಲದೆ ಇವುಗಳನ್ನು ಸುಟ್ಟಾಗ ಸಬರುವ ವಾಸನೆಯನ್ನು ಕುಡಿಯುವುದರಿಂದ ಹೊಟ್ಟೆ, ಹೃದಯ, ನರಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಿನ್ಸನ್ ವೀಟ್ ಈ ಗಿಡವು ಈ ಗಿಡವು ಅನೇಕ ಕಡೆಗಳಲ್ಲಿ ಕಾಣಬಹುದು. ಇದರಲ್ಲಿ ಸಹ ವಿಷಕಾರಿ ಅಂಶವಿರುತ್ತದೆ. ಹರಳೆಣ್ಣೆ ಬೀಜ ಹರಳೆಣ್ಣೆಯ ಬೀಜವನ್ನು ಸಿಪ್ಪೆ ಸಮೇತ ಸೇವಿಸುವುದರಿಂದ ಸಾವು ಸಂಭವಿಸಬಹುದು. ಈ ಮೇಲೆ ತಿಳಿಸಿರುವ ಯಾವುದೇ ರೀತಿಯ ಗಿಡ ಗಳು ನಿಮ್ಮ ಮನೆ ಹತ್ತಿರ ಇದ್ದರೆ ಅವುಗಳಿಂದ ದೂರ ಇರಿ.ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.