ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಪ್ರತಿಯೊಬ್ಬ ಗೃಹಣಿಯು ಕೂಡ ಅಡುಗೆ ಮನೆಯಲ್ಲಿ ಪಾಲನೆ ಮಾಡಲೇ ಬೇಕಾದಂತಹ ಕೆಲವೊಂದಿಷ್ಟು ವಾಸ್ತು ಸಲಹೆಗಳನ್ನು ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಈ ಸಂಚಿಕೆ ನಿಮ್ಮೆಲ್ಲರಿಗೂ ಯೂಸ್ಫುಲ್ ಆಗುತ್ತದೆ ಅಂತ ಭಾವಿಸುತ್ತೇವೆ ಪ್ರತಿಯೊಂದು ಮನೆಯಲ್ಲೂ ಕೂಡ ಅಡುಗೆಮನೆ ಅನ್ನುವುದು ಎರಡನೇ ದೇವರ ಮನೆ ಇದ್ದಹಾಗೆ ಹಾಗಾಗಿ ಅಡುಗೆಮನೆಯನ್ನು ಆದಷ್ಟು ಶುಚಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ ಅಡುಗೆಮನೆ ಮುಖ್ಯವಾಗಿ ಆಗ್ನೇಯ ದಿಕ್ಕಿಗೆ ಇರಬೇಕಾಗುತ್ತದೆ ಅಗ್ನಿ ಮೂಲೆ ಅಂತ ಕರೆಯುತ್ತೇವೆ ಅಲ್ಲಿ ಕೆಲವೊಂದು ಸಾರಿ ಬಾಡಿಗೆ ಮನೆಯಲ್ಲಿ ಇರುತ್ತೇವೆ ಅಪಾರ್ಟ್ಮೆಂಟ್ ಗಳಲ್ಲಿ ಇರುತ್ತೇವೆ,
ಕ್ವಾಟ್ರಸ್ ಗಳಲ್ಲಿ ಇರುತ್ತೇವೆ ಅಂತಹ ಸಂದರ್ಭದಲ್ಲಿ ಆಗ್ನೇಯ ಮೂಲೆಯಲ್ಲಿ ಅಡುಗೆಮನೆಯನ್ನು ಕಟ್ಟಿರುವುದಿಲ್ಲ ನಾವೇ ಸ್ವಂತವಾಗಿ ಕಟ್ಟಿಸಿದರೆ ವಾಸ್ತು ಪ್ರಕಾರವಾಗಿ ಕಟ್ಟಿಸಿಕೊಳ್ಳಬಹುದು ಆದರೆ ಬಾಡಿಗೆ ಮನೆಯಲ್ಲಿ ಅಥವಾ ಅಪಾರ್ಟ್ಮೆಂಟ್ ಗಳಲ್ಲಿ ಇರುವವರಿಗೆ ಇದು ಕಷ್ಟ ಆಗುತ್ತದೆ ಅಂತಹ ಸಮಯದಲ್ಲಿ ಏನು ಮಾಡಬೇಕು ಅಂತ ಅಂದರೆ ನೀವು ಪೂರ್ವಕ್ಕೆ ಮುಖ ಮಾಡಿ ನಿಂತು ಅಡುಗೆ ಮಾಡುವ ರೀತಿ ಅಳವಡಿಸಿಕೊಂಡರೆ ಸಾಕು ಅಲ್ಲಿ ಒಂದು ಸ್ಲ್ಯಾಬ್ ಅಥವಾ ಏನಾದರೂ ಹಾಕಿಸಿಕೊಂಡು ಪೂರ್ವಕ್ಕೆ ಮುಖ ಮಾಡಿ ನಿಂತು ಅಡುಗೆ ಮಾಡುವ ರೀತಿ ಇದ್ದರೆ ಸಾಕು ಆಗ್ನೇಯ ಮೂಲೆಯಲ್ಲಿ ಇರಬೇಕು ಅನ್ನುವ ಅವಶ್ಯಕತೆ ಇಲ್ಲ
ಎರಡನೇ ಪ್ರಮುಖವಾದ ಸಲಹೆ ಏನೆಂದರೆ ನೀವು ಅಡುಗೆ ಮಾಡುವಂತಹ ಗ್ಯಾಸ್ ಸ್ಟವ್ ಇಟ್ಟಿರುತ್ತೀರಾ ಅದರ ಅಪೋಸಿಟ್ ಆಗಿ ಕುಡಿಯುವ ನೀರಿನ ವಾಟರ್ ಫಿಲ್ಟರ್ ಅಥವಾ ಅಥವಾ ಸಿಂಕ್ ಆಗಿರಬಹುದು ಅಡುಗೆಗೆ ಬಳಸುವ ನೀರು ಆಗಿರಬಹುದು ಸ್ಟೋರ್ ಮಾಡಿ ಇಟ್ಟುಕೊಳ್ಳಿ ಯಾಕೆ ಅಂದರೆ ಅಗ್ನಿಗೂ ನೀರಿಗೂ ವಿರುದ್ಧ ಹಾಗಾಗಿ ವಿರುದ್ಧ ದಿಕ್ಕಿನಲ್ಲಿ ಅಗ್ನಿ ಮತ್ತು ನೀರನ್ನು ಇಡಬೇಕಾಗುತ್ತದೆ ಹಾಗಾಗಿ ಗ್ಯಾಸ್ ಸ್ಟವ್ ನ ಅಪೋಸಿಟ್ ಆಗಿ ನೀರಿನ ಯಾವುದಾದರೂ ಒಂದು ಸೋರ್ಸ್ ಅನ್ನು ಇಡುವುದು ಒಳ್ಳೆಯದು ಅಡಿಗೆ ಮನೆಯಲ್ಲಿ ಒಂದು ಚಿಕ್ಕ ಫಾಟ್ ಅಥವಾ ಬೌಲಲ್ಲಿ ಒಂದು ಮನಿ ಪ್ಲಾಂಟ್ ಗಿಡವನ್ನು ಇಡಿ ಇದು ತುಂಬಾನೇ ಒಳ್ಳೆಯದು ಮನೆಯಲ್ಲಿ ದನಾಭಿರುದ್ಧಿಯಾಗುತ್ತದೆ
ಆಗ್ನೇಯ ಮೂಲೆಯಲ್ಲಿ ಮನಿ ಪ್ಲಾಂಟನ್ನು ಬೆಳೆಸುವುದರಿಂದ ನೀರಲ್ಲಿ ಅಥವಾ ಮಣ್ಣಲ್ಲಿ ಮನಿ ಪ್ಲಾಂಟನ್ನು ತುಂಬಾ ಸರಳವಾಗಿ ಬೆಳೆಸಿಕೊಳ್ಳಬಹುದು ಅಡಿಗೆ ಮನೆಯಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಅದರಲ್ಲೂ ಆಗ್ನೇಯ ಮೂಲೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಹಾಗೆ ಅಡುಗೆ ಮನೆಯಲ್ಲಿ ರಾತ್ರಿ ಊಟ ಎಲ್ಲಾ ಮುಗಿದ ನಂತರ ಗ್ಯಾಸ್ ಸ್ಟವ್ ಎಲ್ಲಾ ನೀಟಾಗಿ ಒರೆಸಿ ಎಂಜಲು ಪಾತ್ರೆಯನ್ನು ತೊಳೆದು ಇಡಬೇಕಾಗುತ್ತದೆ ಇದರಿಂದ ಎರಡು ಉಪಯೋಗ ಏನೆಂದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಯಾಕೆ ಅಂದರೆ ಎಂಜಲು ಪಾತ್ರೆಯನ್ನು ಹಾಗೆ ಇಟ್ಟರೆ ಜಿಲ್ಲೆ ಸೊಳ್ಳೆಗಳು ಹೆಚ್ಚಾಗುವ ಸಂಭವವಿರುತ್ತದೆ
ಹಾಗೆ ನೀಟಾಗಿ ತೊಳೆದು ಇಟ್ಟರೆ ಬೆಳಗ್ಗೆ ಎದ್ದ ತಕ್ಷಣ ಅಡಿಗೆ ಮನೆಗೆ ಹೋದ ತಕ್ಷಣ ಒಂದು ಫ್ರಶ್ ಫೀಲಿಂಗ್ ಬರುತ್ತದೆ ಯಾವುದೇ ಒಂದು ಕೆಲಸ ಮಾಡುವುದಕ್ಕೂ ಮೂಡ್ ಬರುತ್ತದೆ ಮನೆಯಲ್ಲಿ ಪ್ರತಿನಿತ್ಯ ಎಂಜಲು ಪಾತ್ರೆಯನ್ನು ಹಾಗೆ ಇಟ್ಟು ಮಲಗುವುದರಿಂದ ದಾರಿದ್ರೆ ಕೂಡ ಆವರಿಸುತ್ತದೆ ಅಂತ ಹೇಳುತ್ತಾರೆ ಹಾಗಾಗಿ ಆದಷ್ಟು ಪಾತ್ರೆಗಳ ಅಲ್ಲವನ್ನು ತೊಳೆದು ಗ್ಯಾಸ್ ಸ್ಟವ್ ಒರೆಸಿ ಇಟ್ಟು ಮಲಗುವುದಕ್ಕೆ ಪ್ರಯತ್ನಪಡಿ ಶುಕ್ರವಾರದ ದಿನ ಅಥವಾ ಮಂಗಳವಾರದ ದಿನ ಸಾಧ್ಯವಾದರೆ ಪ್ರತಿದಿನವೂ ಬೆಳಿಗ್ಗೆ ಎದ್ದು ಚಿಕ್ಕದಾಗಿ ರಂಗೋಲಿ ಹಾಕಿ ಪೂಜೆ ಮಾಡಿ ನೀವು ಅಡಿಗೆಯನ್ನು ಪ್ರಾರಂಭ ಮಾಡುವುದು ತುಂಬಾ ಒಳ್ಳೆಯದು ಹಾಗೆ ನಾವು ಮೊದಲೇ ಹೇಳಿದ ಹಾಗೆ ಅಡುಗೆಮನೆ ಅನ್ನುವುದು ಎರಡನೇ ದೇವರ ಮನೆ ಇದ್ದಹಾಗೆ ಹಾಗಾಗಿ ಶುಚಿಭೂತರಾಗಿ ಅಡುಗೆ ಮನೆಗೆ ಬರಬೇಕಾಗುತ್ತದೆ
ಎದ್ದವರೇ ಹಾಗೆ ಬಂದು ಬಿಡುವುದು ಈ ರೀತಿಯಲ್ಲ ಮಾಡಬಾರದು ಮುಖ ಕೈಕಾಲಲ್ಲ ತೊಳೆದು ಸಾಧ್ಯವಾದರೆ ಸ್ನಾನ ಮಾಡಿ ಅಡಿಗೆ ಮನೆಗೆ ಬಂದರೆ ಒಳ್ಳೆಯದು ಹಾಗೆ ಅಡಿಗೆ ಮನೆಯಲ್ಲಿ ಸಾಧ್ಯವಾದರೆ ಒಂದು ಚಿಕ್ಕ ಝೀರೋ ಕ್ಯಾಂಡಲ್ ಬಲ್ಪಾಗಲಿ ಒಂದು ಚಿಕ್ಕ ದೀಪವಾಗಲಿ ಆಗ್ನೇಯ ಮೂಲೆಯಲ್ಲಿ ಆಗ್ನೇಯ ದೀಪವನ್ನು ಹಚ್ಚಿರುವುದರಿಂದ ತುಂಬಾನೇ ಒಳ್ಳೆಯ ಪರಿಹಾರ ಸಾಧ್ಯವಾದರೆ ಅಕ್ಕಿ ಡಬ್ಬದಲ್ಲಿ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಇಡಿ ಇದರಿಂದ ನಿಮಗೆ ಯಾವತ್ತೂ ಕೂಡ ಅನ್ನದ ಅಥವಾ ಧಾನ್ಯದ ಕೊರತೆ ಆಗುವುದಿಲ್ಲ ಪೂರ್ಣೇಶ್ವರಿಯ ವಿಗ್ರಹವನ್ನು ಇಟ್ಟು ಅಡುಗೆ ಮನೆಯಲ್ಲಿ ಪೂಜೆ ಮಾಡುವುದರಿಂದ ಹಾಗೆ ಮನೆಯಲ್ಲಿ ಉಪ್ಪು ಅರಿಶಿಣ ಲಕ್ಷ್ಮಿಯ ಸ್ವರೂಪ
ಹಾಗಾಗಿ ಇವುಗಳನ್ನು ಖಾಲಿಯಾಗುವುದಕ್ಕೆ ಬಿಡಬೇಡಿ ಖಾಲಿ ಆಗುತ್ತಾ ಇದೆ ಅನ್ನುವಾಗಲೇ ತರಿಸಿ ಇಟ್ಟುಕೊಳ್ಳಿ ಖಾಲಿ ಆಗುತ್ತಾ ಇದೆ ಅಂತ ಹೇಳಬಾರದು ಹೆಚ್ಚಿದೆ ಅಥವಾ ಇನ್ನೇನು ಸ್ವಲ್ಪ ಇದೆ ತಂದು ಇಡಬೇಕು ಅಂತ ಹೇಳಬೇಕು ಕೊನೆಯದಾಗಿ ಸ್ನಾನ ಮಾಡಿದಾಗ ಅಥವಾ ಬೇರೆ ಸಂದರ್ಭದಲ್ಲಿ ಇರಬಹುದು ಗೃಹಿಣಿಯರು ಕೂದಲನ್ನು ಬಿಟ್ಟುಕೊಂಡು ಅಡುಗೆ ಮನೆಗೆ ಪ್ರವೇಶ ಮಾಡುವುದು ಕೂಡ ಅಷ್ಟು ಒಳ್ಳೆಯದಲ್ಲ ಅದೇ ರೀತಿ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಕೂತು ಕಣ್ಣೀರನ್ನು ಹಾಕಬಾರದು ಇದರಿಂದ ಆ ಮನೆಗೆ ಒಳ್ಳೆಯದಾಗುವುದಿಲ್ಲ ಅಂತ ಹೇಳುತ್ತಾರೆ ಹಾಗೆ ಹೆಣ್ಣುಮಕ್ಕಳು ಅಥವಾ ಗೃಹಿಣಿಯರು ಮುಟ್ಟಾದ ಸಂದರ್ಭದಲ್ಲಿ ಬರಿ ಕೈಯಲ್ಲಿ ಉಪ್ಪು ಅಕ್ಕಿಯನ್ನು ಮುಟ್ಟುವುದು ತಪ್ಪು ಹಾಗಾಗಿ ಒಂದು ಸ್ಪೂನ್ ಒಂದು ಗ್ಲಾಸ್ ಈ ರೀತಿ ಹಿಡಿದುಕೊಂಡು ಅದನ್ನು ಯೂಸ್ ಮಾಡಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು