ಬದುಕಲು ನಿಯಮಗಳು

ನಮಸ್ಕಾರ ಸ್ನೇಹಿತರೇ ಬದುಕಲ್ಲಿ ಇರಲಿ 10 ನಿತ್ಯ ನಿಯಮಗಳು ಎಂಬ ಶೀರ್ಷಿಕೆ ಅಡಿ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಾ ಇದ್ದೇವೆ ಅವು ಯಾವುವು ಅಂತ ನೋಡೋಣ ಬನ್ನಿ ಸಮಯ ಎಲ್ಲವನ್ನು ಸರಿಪಡಿಸುತ್ತದೆ ಸಮಾಧಾನದಿಂದಿರಿ ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ ಎನ್ನುವುದು ನಿಮ್ಮ ಕಾಯಕವಾಗದಿರಲಿ

ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ ಏಕೆಂದರೆ ಅವರು ನಡೆದು ಬಂದ ದಾರಿ ಬಗ್ಗೆ ನಿಮಗೆ ಎಷ್ಟು ಗೊತ್ತಿರಲು ಸಾಧ್ಯ ಸಮಸ್ಯೆಗಳ ಬಗ್ಗೆ ಎಂದು ಯೋಚಿಸದಿರಿ ಏಕೆಂದರೆ ಅದರ ಪರಿಹಾರಕ್ಕೆ ಯೋಚಿಸಲು ಇರುವ ಸಮಯವನ್ನು ಅದು ತಿಂದು ಹಾಕುತ್ತದೆ ನಿಮ್ಮ ಸಂತೋಷವನ್ನು ನೀವೇ ಹುಡುಕಿ ಕೊಳ್ಳಬೇಕು ಬೇರೆಯವರಿಂದ ಎಂದು ಅಪೇಕ್ಷಿಸಬಾರದು

ಹಣದಿಂದ ಸಂತೋಷವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ದುಃಖವಾದಾಗ ಬೆಂಜ್ ಕಾರಲ್ಲಿ ಕೂತು ಅಳಬಹುದಷ್ಟೇ ಸಹಾಯದ ಅವಶ್ಯಕತೆ ಇರುವವರಿಗೆ ಸಹಕರಿಸಿ ಸಮಯ ಬಂದಾಗ ಸಹಾಯ ಮಾಡುತ್ತಾರೆ ಸೋಲಿನಲ್ಲಿ ಸಾದನೆಯ ಆರಂಭವಾಗುವುದು ಸೋಲದಿರುವುದು ಹೇಗೆಂದು ಸೋಲಿನಿಂದಲೇ ಕಲಿಯಬೇಕು ನೀವು ಮಾಡುವ ಕೆಲಸವನ್ನು ಆಟದಂತೆ ಆನಂದಿಸಿ ಆದರೆ ಕೆಲಸದೊಂದಿಗೆ ಎಂದು ಆಟವಾಡದಿರಿ

ಮಾತು ಮಾವಿನ ಹಣ್ಣಿನಂತಿರಲಿ ಮರದಿಂದ ಬೀಳುವ ಮೊದಲೇ ಎಚ್ಚರವಹಿಸಿ ರಸ್ತೆ ಮೇಲೆ ಕಲ್ಲಿನ ಹರಳುಗಳು ಇದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು ಆದರೆ ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದರೆ ಅತ್ಯುತ್ತಮ ರಸ್ತೆಯ ಮೇಲು ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು

ತುಳಿಯುವವರ ಮದ್ಯೆ ಬೆಳೆದು ನಿಲ್ಲಬೇಕು ಆಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು ಪ್ರಯತ್ನ ಎಂಬುದು ಒಂದು ಬೀಜದ ಹಾಗೆ ಬಿತ್ತುತ್ತಲೇ ಇರಿ ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೆ ಕೊಡುತ್ತದೆ ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ

ಏಕೆಂದರೆ ಜೀವನ ಕಲಿಯುವುದನ್ನು ನಿಲ್ಲಿಸುವುದಿಲ್ಲ ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು ಕತ್ತಲೆ ಇಲ್ಲದೆ ದೀಪದ ಮಹತ್ವ ತಿಳಿಯಲಾರದು ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment