ಈ ರಹಸ್ಯವನ್ನು ಯಾರಿಗೂ ಹೇಳಬೇಡಿ, ಹೇಳಿದರೇ ಯಾವುದೇ ಕಾರಣಕ್ಕೂ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ. ಲಕ್ಷ್ಮಿದೇವಿಯು ಮನೆ ಬಿಟ್ಟು ಹೋಗುತ್ತಾಳೆಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಈ ಲೇಖನದಲ್ಲಿ ಯಾರಿಗೂ ಹೇಳಬಾರದ ಗುಟ್ಟುಗಳನ್ನು ತಿಳಿಸಿಕೊಡುತ್ತೇವೆ. ಈ ಗುಟ್ಟುಗಳನ್ನು ಬೇರೆಯವರಿಗೆ ಹೇಳಿದರೇ ಹಣ ಕೈನಲ್ಲಿ ನಿಲ್ಲುವುದಿಲ್ಲ. ನಿಮ್ಮ ದಾಂಪತ್ಯ ಜೀವನವನ್ನು ಉತ್ತಮವಾಗಿರುವಂತಹ ನಿಮ್ಮ ಮನೆಯ ಶಾಂತಿ, ಸಂಮೃದ್ಧಿಯನ್ನು ಕಾಪಾಡುವಂತಹ ಗುಟ್ಟನ್ನು ತಿಳಿಸಿಕೊಡುತ್ತೇವೆ. ಅದರಲ್ಲೂ ಎರಡು ಗುಟ್ಟನ್ನು ಹೇಳಲೇಬಾರದು ಅಕಸ್ಮಾತ್ ಹೇಳಿದರೇ ಮನೆ ಸುಖೀ ಕುಟುಂಬ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ.
ಸಂಸಾರದ ಗುಟ್ಟು ವ್ಯಾದಿರಟ್ಟು ಎಂದು ಹಿರಿಯರು ಹೇಳಿರುವಂತಹ ಗಾದೆ ಮಾತಾಗಿದೆ. ಆದರೇ ಇಂದಿನ ಕಾಲದಲ್ಲಿ ಗುಟ್ಟು ಗುಟ್ಟಾಗಿಯೇ ಉಳಿಯುವುದಿಲ್ಲ. ಯಾರಾದರೂ ಸಿಕ್ಕರೇ ಹೇಳಿಬಿಡುತ್ತಾರೆ. ಮನಸ್ಸಿನಲ್ಲಿರುವ ವಿಷಯವನ್ನು ಫೋನ್ ಮಾಡಿಯಾದರೂ ಹೇಳಿಬಿಡುತ್ತಾರೆ. ಇಂದಿನ ಕಾಲದಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ಕಾಲವನ್ನು ಕಳೆಯುತ್ತಾರೆ. ತಾವು ಚೆನ್ನಾಗಿದ್ದೇವೆ, ಐಷರಾಮಿಯಾಗಿ ಜೀವನ ಮಾಡುತ್ತಿದ್ದೀವಿ ಎಂದು ತೋರಿಸಿಕೊಳ್ಳುತ್ತಿರುತ್ತಾರೆ.
ಅಷ್ಟೇ ಅಲ್ಲ ಮನೆಗೆ ದುಬಾರಿ ವಸ್ತುಗಳನ್ನು ಕೊಂಡುಕೊಂಡುಬಂದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ ಮತ್ತು ಅಕ್ಕಪಕ್ಕದವರ ಜೊತೆಯೂ ಹೇಳಿಕೊಳ್ಳುತ್ತಾರೆ. ಸಂಸಾರದ ಗುಟ್ಟು ಮೂರು ಗೋಡೆಗಳ ನಡುವೆ ಇರಬೇಕು. ಆದರೇ ಇಂದಿನ ಕಾಲದಲ್ಲಿ ಇದು ಯಾರಿಗೂ ಅನ್ವಯವಾಗುವುದಿಲ್ಲ. ಯಾರ ಯಾರ ಕೈನಲ್ಲಿ ಮೊಬೈಲ್, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುತ್ತಾರೋ ಅವರಿಗೆ ಗುಟ್ಟು ನಿಲ್ಲುವುದಿಲ್ಲ. ನಿಮ್ಮ ಮನೆಗೆ ನೀವು ಏನನ್ನಾದರೂ ತಂದರೂ ಅದನ್ನು ಖುಷಿಖುಷಿಯಾಗಿ ಕೇಳುತ್ತಾರೆ.
ಆದರೇ ಒಳಗೊಳಗೆ ಅಸೂಯೆ ಪಡುವುದಿಲ್ಲ ಎಂದು ಹೇಗೆ ಹೇಳಕ್ಕಾಗುತ್ತದೆ ಅಲ್ವಾ? ನಿಮ್ಮ ಚಿಕ್ಕಪುಟ್ಟ ಖುಷಿಯನ್ನು ಸಹಿಸಿಕೊಳ್ಳದಾ ಜನ ಬೇರೆಯವರ ಬಗ್ಗೆ ಕೊಂಕು ಮಾತನ್ನು ಹೇಳಬಹುದು. ಈ ಕಾರಣದಿಂದ ನಿಮ್ಮ ಮನೆಗೆ ಏನೇ ವಸ್ತುಗಳನ್ನು ತಂದಿದ್ದರೂ ಅದನ್ನು ಬೇರೆಯವರಿಗೆ ಹೇಳಬೇಡಿ. ಕೆಲವರು ಮುಂಚಿತವಾಗಿ ಎಲ್ಲರ ಜೊತೆ ನಮ್ಮ ಮನೆಗೆ ಕೆಲವೊಂದು ದುಬಾರಿ ವಸ್ತುಗಳನ್ನು ತರುವುದಾಗಿ ಹೇಳಿಕೊಳ್ಳುತ್ತಾರೆ ನಂತರದ ದಿನದಲ್ಲಿ ನಿಮ್ಮ ಬಳಿ ಇರುವ ದುಡ್ಡು ಖರ್ಚಾಗಿ ತರಲು ಸಾಧ್ಯವಾಗದೇ ಇರಬಹುದು ಇದಕ್ಕೆ
ಕಾರಣ ಮಹಾಲಕ್ಷ್ಮಿ ಮುನಿಸಿಗೆ ಕಾರಣವಾಗಿರಬಹುದು. ನಗುನಗುತ್ತಾ ಕೆಟ್ಟ ಕಣ್ಣು ನಿಮ್ಮ ಸಂಮೃದ್ಧಿಯ ಮೇಲೆ ಬೀಳುತ್ತದೆ. ಕೆಲವು ಹೆಣ್ಣು ಮಕ್ಕಳು ಗಂಡನ ಸಂಬಳ ಮತ್ತು ಪ್ರಮೋಷನ್ ಬಗ್ಗೆ ಮುಂಚಿತವಾಗಿ ಹೇಳಿಕೊಳ್ಳಬೇಡಿ. ಸಂಬಳ ಹೆಚ್ಚು ಇದ್ದರೇ ಅದನ್ನು ಕೇಳಿ ಅಸೂಯೆ ಪಡುವ ಜನರೇ ಹೆಚ್ಚಾಗಿರುತ್ತಾರೆ. ಕಡಿಮೆ ಇದ್ದರೇ ನಿಮ್ಮ ಮತ್ತು ನಿಮ್ಮ ಪತಿಯ ಮರ್ಯಾದೆಯನ್ನು ತೆಗೆದುಬಿಡುತ್ತಾರೆ. ಹಾಗಾಗಿ ಹಣದ ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ. ನಿಮ್ಮ ಮನೆಯ ಚಿಕ್ಕಪುಟ್ಟ ವಿಷಯಗಳನ್ನು ಹೇಳಿಕೊಳ್ಳುವುದು ನಿಮ್ಮ ಮನೆಯವರ ಸಂಬಂಧದಲ್ಲಿ ಬಿರುಕನ್ನು ತಂದುಬಿಡುತ್ತದೆ.
ಇನ್ನು ಕೆಲವರು ಅವರ ಮನೆಯಲ್ಲಿ ನಡೆಯುವ ಜಗಳವನ್ನು ಮತ್ತು ಅವರ ದಾಂಪತ್ಯದಲ್ಲಿ ನಡೆಯುವ ಮುನಿಸನ್ನು ಬೇರೆಯವರ ಮುಂದೆ ಹೇಳಿಕೊಳ್ಳುತ್ತಾರೆ. ಹೀಗೆ ಹೇಳಿಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆಂದು ಅಂದುಕೊಂಡಿರುತ್ತಾರೆ. ಅದು ಅವರ ಭ್ರಮೆ ಎಂದು ಅವರ ಕುಟುಂಬ ಹೊಡೆದಾಗ ಗೊತ್ತಾಗುತ್ತದೆ. ಮನೆಯಲ್ಲಿ ಎಷ್ಟೇ ದೊಡ್ಡ ಗಲಾಟೆಯಾದರೂ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳುವುದನ್ನು ಬಿಟ್ಟು ಬಿಡಿ.
ಅವರು ನಿಮ್ಮ ಮನೆಯ ಎಲ್ಲಾ ಪರಿಸ್ಥಿತಿಗಳನ್ನು ಎಲ್ಲಾ ಕೇಳಿಕೊಳ್ಳುತ್ತಾರೆ ಮತ್ತು ಆಡಿಕೊಳ್ಳುತ್ತಾರೆ. ಅದರಲ್ಲೂ ಗಂಡ ಹೆಂಡತಿಯ ಜಗಳ ನಿಮ್ಮ ಕೋಣೆಯಿಂದ ಆಚೆ ಬರಲೇಬಾರದು. ಆಕಸ್ಮತ್ ಹೊರಬಂದರೆ ಸಮಸ್ಯೆಗಳು ಹೆಚ್ಚಾಗುತ್ತದೆ. ಆದ್ದರಿಂದ ಮನೆಯವರ ಜೊತೆ ಕೂತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಏನಾದರೂ ವಿಶೇಷವಾದ ಅಡುಗೆ ಮಾಡಿದ್ದರೇ ಅದನ್ನು ಅಕ್ಕಪಕ್ಕದವರ ಜೊತೆ ಹೇಳಿ ಅವರ ಹೊಟ್ಟೆ ಉರಿಸಬೇಡಿ ಅದರಿಂದ ಅನ್ನಪೂರ್ಣೇಶ್ವರಿ ಮುನಿಸಿಕೊಳ್ಳುತ್ತಾಳೆ. ನಿಮಗೆ ಏನು ಇಷ್ಟ ಅದನ್ನು ಮಾಡಿ ಹೊಟ್ಟೆ ತುಂಬಾ ತಿಂದು ತೃಪ್ತಿ ಪಡಿ.
ಈ ಎರಡು ಗುಟ್ಟುಗಳನ್ನು ಎಂದೂ ರಟ್ಟು ಮಾಡಬೇಡಿ. ನೀವು ಗುರುಗಳಿಂದ ದೀಕ್ಷೆ ಪಡೆದಿದ್ದರೇ ಆ ಮಂತ್ರವನ್ನು ಗೌಪ್ಯವಾಗಿಡಿ. ನೀವು ಧ್ಯಾನ, ಮಂತ್ರವನ್ನು ಅಭ್ಯಾಸ ಮಾಡುತ್ತಿದ್ದರೇ ಅದನ್ನು ಗೌಪ್ಯವಾಗಿಡಬೇಕು ಇಲ್ಲದಿದ್ದರೇ ಅದು ಯಶಸ್ವಿಯಾಗುವುದಿಲ್ಲ. ಇವುಗಳನ್ನು ರಹಸ್ಯವಾಗಿಡುವುದರಿಂದ ಹೆಚ್ಚಿನ ಫಲವನ್ನು ಪಡೆಯಬಹುದು. ನಿಮ್ಮ ಜೀವನದಲ್ಲಿ ಅನುಭವಿಸಿರುವ ಯಾತನೆಯನ್ನು ಮತ್ತು ನಿಮ್ಮ ದೌರ್ಬಲ್ಯವನ್ನು ಯಾರೊಂದಿಗೂ ಅದನ್ನು ಹಂಚಿಕೊಳ್ಳಬಾರದು. ನೀವು ಇದನ್ನು ಇತರರ ಜೊತೆ ಹಂಚಿಕೊಳ್ಳುವುದರಿಂದ ಅವರು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಸಮಸ್ಯೆಯನ್ನು ತಂದುಹೊಡ್ಡಬಹುದು.