ಈ ಲೇಖನದಲ್ಲಿ ಮೇಷ ರಾಶಿಯವರ ಗುಣ ಸ್ವಭಾವ ಮತ್ತು ಅವರ ಯೋಜನೆಗಳು ಮದುವೆಯ ವಿಚಾರದಲ್ಲಿ ಅವರ ತೀರ್ಮಾನಗಳ ಬಗ್ಗೆ ತಿಳಿದುಕೊಳ್ಳೋಣ. ಮೇಷ ರಾಶಿಯ ಸ್ತ್ರೀಯರು ಬಹಳಷ್ಟು ಪ್ರಭಾವಿಗಳಾಗಿರುತ್ತಾರೆ. ಇವರಲ್ಲಿ ಸ್ವಲ್ಪ ಅಹಂಕಾರವಿರುತ್ತದೆ . ಅಂದರೆ ಅದರ ಅರ್ಥ ಬೇರೆಯವರಿಗೆ ಕೆಟ್ಟ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಅಂದರೆ ಕಟೋರವಾಗಿರುತ್ತಾರೆ, ಸಾಹಸಿಗಳಾಗಿರುತ್ತಾರೆ. ದೃಢವಾದ ಇಚ್ಛೆ ಉಳ್ಳವರಾಗಿರುತ್ತಾರೆ. ಕೆಲವೊಂದು ಸಮಸ್ಯೆಗಳಿಗೆ ಸ್ವಯಂ ಪರಿಹಾರವನ್ನು ಕಂಡುಕೊಳ್ಳುವವರಾಗಿರುತ್ತಾರೆ.
ಯಾವುದೇ ಕೆಲಸವಿದ್ದರೂ ಸಹ ಅದನ್ನು ಸುಗಮವಾಗಿ ಮುಗಿಸಿಕೊಳ್ಳುವ ಗುಣವುಳ್ಳವರಾಗಿರುತ್ತಾರೆ. ಯಾವುದೇ ಸಮಯದಲ್ಲಿ ಕೋಪ ಬಂದರೆ ಅದನ್ನು ನಿಯಂತ್ರಿಸಿ ಕೊಳ್ಳುವಂತಹ ಶಕ್ತಿ ಸಾಮರ್ಥ್ಯ ಇವರಿಗಿರುತ್ತದೆ. ಇದು ಇವರ ಸಕಾರಾತ್ಮಕ ಶಕ್ತಿಯಾಗಿರುತ್ತದೆ. ಎಲ್ಲಾ ಬೌದ್ಧಿಕ ಕ್ಷೇತ್ರಗಳಲ್ಲಿ ಇವರು ಸಫಲರಾಗುತ್ತಾರೆ. ಇವರು ಸೌಂದರ್ಯ ಪ್ರಿಯರು ಸಹ ಆಗಿರುತ್ತಾರೆ. ಇವರು ತಮ್ಮ ಉಡುಗೆ ತೊಡುಗೆಯಲ್ಲಿಯೂ ಸಹ ಬಹಳ ನಿಸ್ಸಿಮರಾಗಿರುತ್ತಾರೆ. ಬೇರೆಯವರ ಮೇಲೆ ತುಂಬಾ ಪ್ರಭಾವ ಬೀರುತ್ತಾರೆ.
ಇವರು ಬಹಳ ಮಹತ್ವಕಾಂಶಿ ಗಳಾಗಿರುತ್ತಾರೆ. ಇವರೇ ಅದೇ ಆದಂತಹ ತತ್ವ ಆದರ್ಶ ಸಿದ್ಧಾಂತಗಳು ಇರುತ್ತದೆ . ಮತ್ತು ಆದರ್ಶವಾದಿಗಳು ಸಹ ಆಗಿರುತ್ತಾರೆ. ಪುರುಷರಿಗೆ ಸರಿಸಮನಾದಂತಹ ಶಕ್ತಿಯನ್ನು ಹೊಂದಿರುತ್ತಾರೆ, ಉತ್ಸಾಹಿಗಳಾಗಿರುತ್ತಾರೆ. ಇವರ ಉತ್ಸಾಹದ ಕಾರಣದಿಂದಾಗಿ ಕೆಲವೊಂದು ಸಾಮಾಜಿಕ ಕಾರ್ಯಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುತ್ತಾರೆ. ರಾಜಕೀಯದಲ್ಲಿಯೂ ಸಹ ಗುರುತಿಸಿಕೊಂಡಿರುತ್ತಾರೆ. ಅನ್ಯರ ಸಹಾಯಕ್ಕೆ ಇವರ ಮನಸ್ಸು ಸದಾ ತುಡಿಯುತ್ತಿರುತ್ತದೆ. ಬೇರೆಯವರ ಕಷ್ಟಕ್ಕೆ ಬೇಗ ಹೊಂದಿಕೊಳ್ಳುತ್ತಾರೆ. ಮೇಷ ರಾಶಿಯ ಸ್ತ್ರೀಯರಿಗೆ ಕೆಲವು ಮಹಿಳೆಯರಿಗೆ ವಿವಾಹದಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅವರ ವೈಯಕ್ತಿಕ ಜಾತಕದ ಪರಿಣಾಮವಾಗಿ ಕೆಲವು ಮಹಿಳೆಯರಿಗೆ ಪ್ರೀತಿ ಪ್ರೇಮದಲ್ಲಿ ಅಡಚಣೆಗಳು ಮದುವೆಯ ವಿಚಾರದಲ್ಲಿ ವಿಳಂಬಗಳು ಆಗುವ ಸಾಧ್ಯತೆ ಇರುತ್ತದೆ. ಇವರು ಯಾವತ್ತಿಗೂ ಸಹ ತಮ್ಮ ಆತ್ಮವಿಶ್ವಾಸದ ವಿರುದ್ಧವಾಗಿ ಕೆಲಸ ಮಾಡುವವರಲ್ಲ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸದಾ ಯಶಸ್ವಿಯಾಗುತ್ತಾರೆ. ಇವರು ಬೇಗನೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸ್ವಲ್ಪ ಗೊಂದಲಕ್ಕೆ ಒಳಗಾಗುತ್ತಾರೆ. ಕೆಲವು ಜನ ಮಾನಸಿಕ ದುರ್ಬಲತೆಗೆ ಒಳಗಾಗುತ್ತಾರೆ.
ಮೇಷ ರಾಶಿಯ ಸ್ತ್ರೀಯರು ಯಾವುದೇ ಪ್ರಶ್ನೆಗೂ ಸಹ ಬೇಗನೆ ಉತ್ತರ ನೀಡುತ್ತಾರೆ. ಅಂದರೆ ತಮಗೆ ತಿಳಿದಿರುವಂತಹದ್ದನ್ನು ನೇರವಾಗಿ ಮಾತನಾಡಿ ಬಿಡುತ್ತಾರೆ. ಇವರ ಮನಸ್ಸಿನಲ್ಲಿ ಮಾತಿನಲ್ಲಿ ಕಲ್ಮಶವಿರುವುದಿಲ್ಲ. ಶ್ರೀಮಂತಿಕೆಯ ಕುರಿತು ಅಹಂಕಾರವಿರುತ್ತದೆ. ಶ್ರೀಮಂತಿಕೆಯ ಬಗ್ಗೆ ವ್ಯಾಮೋಹವಿರುತ್ತದೆ. ಕುಟುಂಬದವರನ್ನು ಬೇರೆಯವರ ಜೊತೆ ಬಿಟ್ಟು ಕೊಡುವಂತಹ ಮನಸ್ಥಿತಿ ಇವರಿಗೆ ಇರುವುದಿಲ್ಲ ಅದನ್ನು ಸಮರ್ಥಿಸಿಕೊಳ್ಳುವಂತಹ ಗುಣವಿರುತ್ತದೆ. ಮದುವೆಯಾದ ಮಹಿಳೆಯರಿಗೆ ಹೇಳುವುದಾದರೆ ಪತಿಯು ನನ್ನನ್ನೇ ಪ್ರೀತಿಸಬೇಕು ನನ್ನನ್ನೇ ಹೊಗಳುತ್ತಿರಬೇಕು ಈ ರೀತಿಯ ಮನಸ್ಥಿತಿ ಇವರಿಗೆ ಇರುತ್ತದೆ.
ಇವರಿಗೆ ಇವರ ಮುಂದೆ ಅನ್ಯಸ್ತ್ರಿಯರ ಬಗ್ಗೆ ಪ್ರಶಂಸೆ ಮಾಡಬಾರದು ಎನ್ನುವ ವ್ಯಾಮೋಹವಿರುತ್ತದೆ. ಪತಿಯನ್ನು ಬೇರೆಯವರ ಮುಂದೆ ಬಿಟ್ಟು ಕೊಡುವಂತಹ ಮನಸ್ಥಿತಿಯವರಾಗಿರುವುದಿಲ್ಲ. ಮೇಷ ರಾಶಿಯ ಯುವತಿಯರಿಗೆ ಸರಳ ಸ್ವಭಾವ ಜೀವನದ ವ್ಯಕ್ತಿಯು ದೊರೆತರೆ ಬಹಳಷ್ಟು ಸಂತೋಷವಾಗಿರುತ್ತಾರೆ. ಮೇಷ ರಾಶಿಯ ಯುವತಿಯರಿಗೆ ಧನಸ್ಸು ರಾಶಿಯ ಯುವಕರು ಒಳ್ಳೆಯ ಜೋಡಿಯಾಗುತ್ತಾರೆ. ಮತ್ತು ತುಲಾ ರಾಶಿಯ ಪುರುಷರು ಕೂಡ ಬಹಳಷ್ಟು ಶಾಂತಿಯಿಂದ ಇರುತ್ತಾರೆ.
ವಾಸ್ತವ ಬಗ್ಗೆ ಮೇಷ ರಾಶಿಯ ಮಹಿಳೆಯರಿಗೆ ಮೇಷ ರಾಶಿಯ ಪುರುಷರೇ ಉತ್ತಮವಾದ ಜೀವನ ಸಂಗಾತಿಗಳಾಗಬಲ್ಲರು. ಇಬ್ಬರ ಮನಸ್ಥಿತಿಯೂ ಒಂದೇ ಆಗಿರುವುದರಿಂದ ಬಹಳ ಸಾಮ್ಯತೆಯ ಜೀವನಕ್ಕೆ ಒಳಿತಾಗುತ್ತದೆ. ಮೇಷ ರಾಶಿಯ ಸ್ತ್ರೀಯರಿಗೆ ಸ್ವಲ್ಪ ತಲೆನೋವು ಉರಿ, ರಕ್ತದ ಏರುಳಿತಗಳು ಇವು ಕಾಡುತ್ತದೆ ಇನ್ನು ಕೆಲವರಿಗೆ ವಯಸ್ಸಾದ ನಂತರ ಆರೋಗ್ಯದ ಏರುಪೇರುಗಳು ಹೆಚ್ಚಾಗುತ್ತದೆ. ಮೊಡವೆ ಮಲೇರಿಯಾ ರೋಗ ದಂತಹ ಸಮಸ್ಯೆಗಳು ಕಾಡುತ್ತವೆ. ಅಂತಹ ಹೆಚ್ಚಿಗೆ ಅನಾರೋಗ್ಯವೇನು ಕಾಡುವುದಿಲ್ಲ. ಸಾಮಾನ್ಯವಾಗಿ ಬರುವಂತಹ ಕಾಯಿಲೆಗಳಾಗಿರುತ್ತದೆ . ವಿಶ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಬೇಕಾದಂತಹ ಕೆಲವು ಆಹಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಂಸ ಮತ್ತು ಮಧ್ಯ ಸೇವನೆಯಿಂದ ದೂರವಿದ್ದರೆ ಒಳ್ಳೆಯದು.