ನಾವು ಈ ಲೇಖನದಲ್ಲಿ ಪೂಜೆ ಮಾಡುವಾಗ ಗಂಟೆಯನ್ನು ಏಕೆ ಬಾರಿಸಬೇಕು ಅದರಿಂದ ಏನು ಉಪಯೋಗಗಳಾಗುತ್ತದೆ ಮತ್ತು ಹೆಣ್ಣು ಮಕ್ಕಳು ಪೂಜೆ ಮಾಡುವಾಗ ಯಾಕೆ ಗಂಟೆ ಬಾರಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ. ನಾವು ಸಾಮಾನ್ಯವಾಗಿ ಮನೆಯಲ್ಲಿ ಚಿಕ್ಕ ಚಿಕ್ಕ ಗಂಟೆಗಳನ್ನು ಉಪಯೋಗಿಸುತ್ತಿರುತ್ತೇವೆ. ಅದರ ಎತ್ತರ 5 ಇಂಚು ಇರಬೇಕು. ಅದಕ್ಕಿಂತ ಎತ್ತರದ ಗಂಟೆ ಇಟ್ಟಿದ್ದರು ತೊಂದರೆ ಇಲ್ಲ. ಗಂಟೆಯ ಮೇಲ್ಭಾಗದ ಆಕೃತಿ ಯಾವ ರೀತಿ ಇರಬೇಕು ಎಂದರೆ ಆಂಜನೇಯ ಸ್ವಾಮಿ ಅಥವಾ ನಂದೀಶ್ವರನ ಮೂರ್ತಿ
ಇರುವಂತಹ ಗಂಟೆಯನ್ನು ಉಪಯೋಗಿಸಬಹುದು. ಇನ್ನು ಹೆಚ್ಚಿನ ಜನ ಶಂಕ ಚಕ್ರ ಇರುವಂತ ಗಂಟೆಯನ್ನು ಉಪಯೋಗಿಸುತ್ತಾರೆ. ಆದರೂ ಸಾಮಾನ್ಯವಾಗಿ ನಂದೀಶ್ವರ ಮತ್ತು ಆಂಜನೇಯ ಸ್ವಾಮಿ ಇರುವಂತಹ ಗಂಟೆಯನ್ನು ಇಟ್ಟುಕೊಂಡಿರುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಕಾರಾತ್ಮಕ ಬದಲಾವಣೆ ಬೇಕಿದ್ದರೆ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಪೂಜೆ ಮಾಡಬೇಕು. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಬೇಕಿದ್ದರೆ ಮನೆಯ ಮೂಲೆ ಮೂಲೆಯಲ್ಲೂ ಸಹ ಗಂಟೆಯನ್ನು ಬಾರಿಸಬೇಕು.
ಆ ಶಬ್ದದ ತಲ್ಲಣದಿಂದ ಮನೆಯಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ. ಬೆಳಗ್ಗೆ ಮನೆಯಲ್ಲಿ ಗಂಡಸರು ಪೂಜೆ ಮಾಡಬೇಕು ಹೆಣ್ಣು ಮಕ್ಕಳು ಮುಸ್ಸಂಜೆ ವೇಳೆಯಲ್ಲಿ ದೀಪ ಹಚ್ಚಬೇಕು. ಈ ರೀತಿ ಮಾಡುವುದರಿಂದ ಒಳ್ಳೆಯ ಧನ ಅಭಿವೃದ್ಧಿ ಉಂಟಾಗುತ್ತದೆ. ಹೆಣ್ಣು ಮಕ್ಕಳು ಬೆಳಗಿನ ಹೊತ್ತಲ್ಲಿ ತುಂಬಾ ಗಡಿಬಿಡಿಯಲ್ಲಿ ಇರುತ್ತಾರೆ. ಇದರಿಂದ ಹೆಣ್ಣು ಮಕ್ಕಳಿಗೆ ಏಕಾಗ್ರತೆಯಿಂದ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಮೊದಲು ಮನೆಯ ಕರ್ತವ್ಯಗಳನ್ನ ಜವಾಬ್ದಾರಿಗಳನ್ನು ಮುಗಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.
ಗಂಟೆಯನ್ನು ಬಾರಿಸದೆ ಪೂಜೆ ಮಾಡುವುದರಿಂದ ಪೂಜೆ ಅಪೂರ್ಣವಾಗುತ್ತದೆ. ಪೂಜೆ ಸಮಯದಲ್ಲಿ ನಾವು ಬಾರಿಸುವ ಗಂಟೆಯಿಂದ ಬರುವಂತಹ ಶಬ್ದ ಓಂಕಾರಕ್ಕೆ ಸಮಾನವಾಗಿರುತ್ತದೆ. ಯಾವ ವ್ಯಕ್ತಿ ಗಂಟೆಯನ್ನು ಬಾರಿಸುತ್ತಾ ಪೂಜೆ ಮಾಡುತ್ತಾರೆ ಆ ವ್ಯಕ್ತಿಗೂ ಓಂಕಾರವನ್ನು ಉಚ್ಚಾರಣೆ ಮಾಡಿದಂತಹ ಪುಣ್ಯ ಲಭಿಸುತ್ತದೆ. ಪುರಾಣಗಳ ಪ್ರಕಾರ ಪೂಜೆಯ ಸಮಯದಲ್ಲಿ ಗಂಟೆಯನ್ನು ಬಾರಿಸಿದರೆ ದೇವರ ಎದುರು ನಿಂತಿರುವ ಆ ವ್ಯಕ್ತಿಯ ಉಪಸ್ಥಿತಿಯನ್ನು ದೇವರಿಗೆ ಖಚಿತಪಡಿಸುತ್ತದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೇವರನ್ನು ಎಚ್ಚರಗೊಳಿಸಲು ಎಂದು ಹೇಳಲಾಗುತ್ತದೆ. ಗಂಟೆಯನ್ನು ಬಾರಿಸುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಶಬ್ದ ಪರಿಸರವನ್ನು ಕೂಡ ಶುದ್ದಿ ಮಾಡುತ್ತದೆ. ಗಂಟೆಯಿಂದ ಬರುವಂತಹ ಕಂಪನಗಳು ಆ ಪ್ರದೇಶದಲ್ಲಿ ಇರುವಂತಹ ವೈರಸ್ ಗಳು ಮತ್ತು ಬ್ಯಾಕ್ಟೀರಿಯವನ್ನು ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಉಂಟಾಗುತ್ತದೆ .
ಕೆಲವೊಂದು ಸಮಯಗಳಲ್ಲಿ ಗಂಟೆಯನ್ನು ಬಾರಿಸಬಾರದು ಅದು ಯಾವ ಸಮಯ ಎಂದರೆ ರಾತ್ರಿಯ ಸಮಯದಲ್ಲಿ ಗಂಟೆಯನ್ನು ಬಾರಿಸಬಾರದು. ಸೂರ್ಯಾಸ್ತದ ನಂತರ ಅಂದರೆ ಏಳು ಗಂಟೆಯ ಒಳಗಡೆ ಪೂಜೆ ಮಾಡಬೇಕು ಆದರೆ ಗಂಟೆಯನ್ನು ಬಾರಿಸಲು ಹೋಗಬಾರದು. ಸೂರ್ಯಾಸ್ತದ ನಂತರ ಸೃಷ್ಟಿಯಲ್ಲಿನ ಎಲ್ಲಾ ವಸ್ತುಗಳು ವಿಶ್ರಾಂತಿಗೆ ಜಾರುತ್ತದೆ. ಏಕೆಂದರೆ ಅದು ದೇವರಿಗೂ ಸಹ ವಿಶ್ರಾಂತಿಯ ಸಮಯವಾಗಿರುತ್ತದೆ. ಸೂರ್ಯಾಸ್ತದ ನಂತರ ಗಂಟೆಯನ್ನು ಬಾರಿಸಬಾರದು.
ಹೆಣ್ಣು ಮಕ್ಕಳು ಪೂಜೆ ಮಾಡುವಾಗ ಗಂಟೆಯನ್ನು ಬಾರಿಸಿದರೆ ಗರ್ಭಕೋಶಕ್ಕೆ ಹಾನಿಯಾಗುತ್ತದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಪೂಜೆ ಮಾಡಬೇಕಾದರೆ ಹೆಣ್ಣು ಮಕ್ಕಳು ಕೈಗೆ ಬಳೆಯನ್ನು ಹಾಕಿಕೊಂಡಿರಬೇಕು. ಬಲಗೈಗೆ ಕಡಿಮೆ ಬಳೆ ಹಾಕಿದರು, ಚಿಂತೆ ಇಲ್ಲ ಎಡಗೈಗೆ ಹೆಚ್ಚಿನ ಬಳೆಯನ್ನು ಹಾಕಬೇಕು . ಏಕೆಂದರೆ ಇದರಲ್ಲಿ ಎಡಗೈಯಲ್ಲಿರುವ ನರಗಳು ಗರ್ಭಕೋಶ ಮತ್ತು ಹೃದಯಕ್ಕೆ ಹೊಂದಿಕೊಂಡಿರುತ್ತವೆ. ಗಂಡು ಮಕ್ಕಳು ಸಹ ಎಡಗೈಗೆ ಕೈಗಡಿಯಾರವನ್ನು ಧರಿಸಿರಬೇಕು. ಹೆಣ್ಣು ಮಕ್ಕಳು ಮನೆಯಲ್ಲಿ ಲಕ್ಷ್ಮಿ ಸ್ವರೂಪವಾಗಿರುತ್ತಾರೆ. ಆದ್ದರಿಂದ ಅವರು ಕೈಗೆ ಬಳೆ ಮತ್ತು ಕಾಲಿಗೆ ಗೆಜ್ಜೆಯನ್ನು ಧರಿಸಿರಬೇಕು.
ಇದು ಮನೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ. ಗಂಟೆಯನ್ನು ಬಾರಿಸುವಾಗ ಓಂಕಾರ ಶಬ್ದವು ಬರುತ್ತದೆ . ಅದರ ಜೊತೆಯಲ್ಲಿ ಕೈ ಬಳೆಗಳ ಗಂಟೆ ಶಬ್ದ ಮಿಶ್ರವಾಗಬಾರದು ಎಂದು ಕೈ ಬಳೆಗಳನ್ನು ಹಿಂದಕ್ಕೆ ಗಟ್ಟಿಯಾಗಿ ತಳ್ಳಿಕೊಂಡು ಆಮೇಲೆ ಗಂಟೆಯನ್ನು ಬಾರಿಸಿ ಎಂದು ಹಿರಿಯರು ಹೇಳುತ್ತಿದ್ದರು. ಹೆಣ್ಣು ಮಕ್ಕಳು ಕೈಗೆ ಬಳೆಯನ್ನು ಹಾಕಿಕೊಂಡಿದ್ದರೆ ಗರ್ಭಕೋಶವು ಆರೋಗ್ಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಇದರಿಂದಲೇ ಮದುವೆ ಶಾಸ್ತ್ರದಲ್ಲಿ ಬಳೆ ಶಾಸ್ತ್ರವನ್ನು ಸೇರಿಸಲಾಯಿತು. ಮದುಮಗಳಿಗೆ ಕೈ ತುಂಬಾ ಬಳೆಯನ್ನು ತೋರಿಸುತ್ತಿದ್ದರು. ಅಲ್ಲಿಂದ ಅವಳ ಸಂತಾನ ಅಭಿವೃದ್ಧಿ ಕಾರ್ಯ ಶುರುವಾಗುತ್ತದೆ ಶಕ್ತಿಯುತವಾಗಿರಲಿ ಎಂದು ಕೈ ತುಂಬಾ ಬಳೆಗಳನ್ನು ತೊಡಿಸುತ್ತಿದ್ದರು. ನಮ್ಮ ಈಗಿನ ಜೀವನ ಶೈಲಿಯಲ್ಲಿ ನಾನ ಕಾರಣಗಳಿಗಾಗಿ ಚಿಕ್ಕ ವಯಸ್ಸಿನಲ್ಲೇ ಗರ್ಭಕೋಶದ ಸಮಸ್ಯೆಗಳು ಎದುರಾಗುತ್ತಿವೆ. ಗಂಟೆ ಬಾರಿಸುವುದರಿಂದ ಗರ್ಭಕೋಶದ ಸಮಸ್ಯೆ ಎದರಾಗುತ್ತದೆ ಎಂದು ಹೇಳಲು ಆಗುವುದಿಲ್ಲ.