ನಾವು ಈ ಲೇಖನದಲ್ಲಿ ನಿಜವಾದ ಪ್ರೀತಿಯ 5 ಗುರುತುಗಳು ಯಾವುದು ಎಂದು ತಿಳಿಯೋಣ . 1 . ಕಂಟ್ರೋಲ್ : – ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ಯಾವಾಗಲೂ ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ . ನಿಮ್ಮ ಮೇಲೆ ಹಕ್ಕು ಚಲಾಯಿಸುತ್ತಾರೆ . ಪ್ರತಿ ವಿಷಯದಲ್ಲೂ ನಿಮ್ಮನ್ನು ಕಂಟ್ರೋಲ್ ಮಾಡುತ್ತಾರೆ . ಆದರೆ ನಿಜವಾಗಿ ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಎಂದಿಗೂ ಪ್ರಯತ್ನ ಪಡುವುದಿಲ್ಲ . ಬದಲಿಗೆ ನೀವು ಹೇಗಿದ್ದೀರಾ ಹಾಗೆ ಇಷ್ಟ ಪಡುತ್ತಾರೆ.
2 . ಹೊಂದಾಣಿಕೆ : – ಎಲ್ಲಿ ನಿಜವಾದ ಪ್ರೀತಿ ಇರುತ್ತದೆಯೋ ಅಲ್ಲಿ ಹೊಂದಾಣಿಕೆ ಇರುತ್ತದೆ. ತ್ಯಾಗ ಇರುತ್ತದೆ , ಕಾಳಜಿ ಇರುತ್ತದೆ, ನಿಜವಾದ ಪ್ರೀತಿ ಮಾಡುವ ವ್ಯಕ್ತಿ ನಿಮ್ಮ ಖುಷಿಗೆ ಆದ್ಯತೆ ನೀಡುತ್ತಾರೆ. ಮತ್ತು ಜಗಳವಾದಾಗ ಅಹಂಕಾರ ಇರುವುದಿಲ್ಲ . ನೀವೇ ಹೋಗಿ ಕ್ಷಮೆ ಕೇಳಲಿ ಎಂದು ಬಯಸುವುದಿಲ್ಲ. ಆದರೆ ಸುಳ್ಳು ಪ್ರೀತಿ ಮಾಡುವವರು ಬೇಕಾದರೆ ಅವರೇ ಬಂದು ಕ್ಷಮೆ ಕೇಳಲಿ ಎಂದು ಬಯಸುತ್ತಾರೆ. ಅವರು ನಿಮ್ಮ ಪ್ರೀತಿಗಾಗಿ ಸೋಲಲು ತಯಾರಿರುವುದಿಲ್ಲ.
3 . ಗೌರವ : – ನಿಜವಾಗಿ ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಗೌರವಿಸುತ್ತಾರೆ. ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಆದರೆ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಗೌರವಿಸುವುದಿಲ್ಲ. ನಿಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ. ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಪ್ರಾಮುಖ್ಯತೆ ಇರುವುದಿಲ್ಲ .
4 . ಸತ್ಯ :- ಎಲ್ಲಿ ನಿಜವಾದ ಪ್ರೀತಿ ಇರುತ್ತದೆ , ಅಲ್ಲಿ ಸತ್ಯ ಇರುತ್ತದೆ. ಎಲ್ಲಿ ಸುಳ್ಳು ಪ್ರೀತಿ ಇರುತ್ತದೆ, ಅಲ್ಲಿ ಬರೀ ಸುಳ್ಳು ಇರುತ್ತದೆ . ಎಲ್ಲಿ ನಿಜವಾದ ಪ್ರೀತಿ ಇರುತ್ತದೆ, ಅಲ್ಲಿ ಒಬ್ಬರು ಪರಸ್ಪರ ಏನನ್ನು ಮರೆ ಮಾಡುವುದಿಲ್ಲ , ಮತ್ತು ಹೆಚ್ಚಿನ ವಿಷಯಗಳಲ್ಲಿ ಸತ್ಯವನ್ನು ಹೇಳುತ್ತಾರೆ.
5 . ಕಾಳಜಿ : – ಪ್ರೀತಿಯಲ್ಲಿ ಪರಸ್ಪರ ಕಾಳಜಿ ಇರುತ್ತದೆ. ತಾನು ಪ್ರೀತಿಸುವ ವ್ಯಕ್ತಿಗೆ ಏನಾದರೂ ತೊಂದರೆಯಾದರೆ ಎಂಬ ಭಯ ಇರುತ್ತದೆ . ಎಲ್ಲ ವಿಷಯದಲ್ಲಿ ನಿಮ್ಮ ಒಳಿತು ಮತ್ತು ಕೆಡಕು ಎರಡರ ಬಗ್ಗೆ ಯೋಚಿಸುತ್ತಾರೆ.
ಆದರೆ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ನಿಮ್ಮ ವಿಷಯದಲ್ಲಿ ಯಾವುದೇ ಕಾಳಜಿ ಇರುವುದಿಲ್ಲ . ಮತ್ತು ನಿಮ್ಮ ಒಳಿತಿನ ಬಗ್ಗೆಯೂ ಯೋಚಿಸುವುದಿಲ್ಲ . ಕೇವಲ ಹಾಸಿಗೆಗಾಗಿ ನಿಮ್ಮ ಜೊತೆ ಇರುತ್ತಾರೆ .
ಪ್ರೀತಿ ಎಂಬುದು ಬರೆಯಲು ಚಿಕ್ಕ ಪದವಾಗಿ ಇರಬಹುದು. ಅದನ್ನು ಪಡೆದವರು ಅದೃಷ್ಟವಂತರು. ಪ್ರೀತಿ ಎಂಬುದು ಮಾನಸಿಕ ರೋಗ ಅನ್ನುವುದಕ್ಕಿಂತ ಅದು ಒಂದು ವಿಶಾಲವಾದ ಅನುಭವ. ಪ್ರೀತಿಯಲ್ಲಿ ಗೆದ್ದರೆ ಅವರು ಉಳಿಯುತ್ತಾರೆ. ಇದ್ದರೂ ಇಲ್ಲದಂತೆ ಬದುಕುತ್ತಾರೆ . ಇನ್ನೂ ಕೆಲವರು ಪ್ರಾಣ ಕಳೆದುಕೊಳ್ಳುತ್ತಾರೆ.
ತಂದೆ ತಾಯಿ ಪ್ರೀತಿ ಕೂಡ ಮರೆಯುತ್ತಾರೆ. ಒಂದು ಹುಡುಗ ಹುಡುಗಿ ಪ್ರೀತಿ ಮಾಡುತ್ತಾ ಇದ್ದಾಗ ಇಬ್ಬರಲ್ಲಿ ಒಬ್ಬರು ಬಿಟ್ಟು ಹೋದರೆ ಪ್ರಾಣ ಕಳೆದುಕೊಳ್ಳುವುದು ಮೂರ್ಖತನ .ಹೀಗೆ ಮಾಡುವುದರ ಮುಂಚೆ ಒಮ್ಮೆ ನಿಮ್ಮ ತಂದೆ ತಾಯಿ ಬಗ್ಗೆ ಯೋಚಿಸಿ . ಪ್ರೀತಿಗಾಗಿ ಎಂದಿಗೂ ಬಿಕ್ಷೆ ಬೇಡ ಬೇಡಿ . ಪ್ರೀತಿ ತಾನಾಗೇ ಆಗುತ್ತದೆ. ಅದು ಬಿಕ್ಷೆ ಬೇಡುವ ವಿಷಯವಲ್ಲ .