ನಾವು ಈ ಲೇಖನದಲ್ಲಿ ನಿಮ್ಮ ಬಳಿ ನೌಕರಿ ಇರುವುದು ವ್ಯಾಪಾರ ಇರುವುದು ನಿಮ್ಮ ಬಳಿ ಎಷ್ಟು ಹಣವಿರುತ್ತದೆ ಮದುವೆ ಯಾವಾಗ ಆಗುತ್ತದೆ ಯಾವಾಗ ಅದೃಷ್ಟ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ಮಹಿಳೆಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಅಥವಾ ಪುರುಷರಾಗಿದ್ದರೆ ಬಲಗೈಯ ಅಸ್ತರೇಖೆಯನ್ನು ನೋಡಿಕೊಳ್ಳಬೇಕು. ಪರ್ವತಗಳು ನಮ್ಮ ಬೆರಳುಗಳ ಕೆಳಭಾಗದಲ್ಲಿ ಇರುತ್ತದೆ . ಮತ್ತು ಬೆರಳಿನ ಕೆಳಗಡೆ ಇರುವಂತಹ ಪರ್ವತವನ್ನು ಗುರು ಪರ್ವತ ಎಂದು ಕರೆಯುತ್ತಾರೆ.
ಮತ್ತು ಇದನ್ನು ಬೃಹಸ್ಪತಿ ಪರ್ವತ ಎಂದು ಸಹ ಕರೆಯುತ್ತಾರೆ . ಈ ಪರ್ವತದ ಮೂಲಕ ನಿಮ್ಮ ಮದುವೆ ನಿಶ್ಚಯಿಸಿದ ಮದುವೆ ಅಥವಾ ಪ್ರೀತಿಸಿ ಮದುವೆ ಯಾಗುತ್ತಾರ ಎಂದು ತಿಳಿಯಬಹುದು. ನಿಮ್ಮ ಹೃದಯ ರೇಖೆ ಗುರು ಪರ್ವತದತ್ತ ತಲುಪಿದ್ದರೆ ಮತ್ತು ಅದರಲ್ಲಿ ಚಿಕ್ಕ ರೇಖೆ ಶನಿ ಪರ್ವತದತ್ತ ಹೋದರೆ ಇದರಿಂದ ಪ್ರೀತಿಸಿ ಮದುವೆಯಾಗುವಂತಹ ಸಂಭವಗಳು ಹೆಚ್ಚಿರುತ್ತದೆ. ಇದರಲ್ಲಿ ಈ ರೀತಿಯ ರೇಖೆ ಇದ್ದರೆ ಪ್ರತಿಶತ 80ರಷ್ಟು ಪ್ರೀತಿಸಿ ಮದುವೆ ಆಗುವ ಸಂಬಂಧ ಹೆಚ್ಚಿರುತ್ತದೆ.
ಬೇರೆಯವರಿಗಿಂತ ನೀವು ಕಡಿಮೆ ತೊಂದರೆಗಳನ್ನು ಎದುರಿಸುತ್ತೀರಾ. ಶನಿ ಪರ್ವತವು ನಮ್ಮ ಮಧ್ಯ ಬೆರಳಿನ ಕೆಳಭಾಗದಲ್ಲಿ ಇರುತ್ತದೆ. ಮಧ್ಯ ಬೆರಳಿನ ಕೊನೆಯಲ್ಲಿ ಒಂದು ರೇಖೆಯು ಶನಿ ಪರ್ವತದತ್ತ ಬಂದಿದ್ದರೆ ಅದು ಭಾಗ್ಯ ರೇಖೆ ಆಗಿರುತ್ತದೆ. ಈ ರೀತಿ ಇದ್ದರೆ ನಿಮಗೆ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಾ . ಸಲ್ಪ ಸಮಯವೂ ಕೂಡ ಹಿಡಿಯುತ್ತದೆ . ಆದರೆ ತಾಳ್ಮೆಯಿಂದ ಇರಿ . ನಿಮ್ಮ ಶ್ರಮದ ಮೇಲೆ ನಂಬಿಕೆ ಇಟ್ಟರೆ ಖಂಡಿತ ಪ್ರತಿಫಲ ದೊರೆಯುತ್ತದೆ.
ಮಧ್ಯದ ಬೆರಳಿನ ಶನಿ ಪರ್ವತದ ಹತ್ತಿರ ಉದ್ದವಾದ ರೇಖೆ ಇದ್ದರೆ ಅವರು ಯಶಸ್ಸನ್ನು ಪಡೆಯುತ್ತಾರೆ. ಸೂರ್ಯ ಪರ್ವತವು ಉಂಗುರದ ಬೆರಳು ಅಥವಾ ಅನಾಮಿಕ ಪರ್ವತ ಬೆರಳಿನ ಕೆಳಗಡೆ ಇರುತ್ತದೆ .ಈ ಬೆರಳಿನ ತುದಿಯಲ್ಲಿ ಒಂದು ಚಿಕ್ಕದಾದ ರೇಖೆ ಬಂದು ಇದು ಹೃದಯ ರೇಖೆಗೆ ಸ್ಪರ್ಶವಾಗಿರುತ್ತದೆ. ಒಂದು ವೇಳೆ ಈ ರೇಖೆಯು ಕೆಳಭಾಗಕ್ಕೆ ಹೋಗಿ ಭಾಗ್ಯ ರೇಖೆಗೆ ಪರಿಶಿಸಿದರೆ ಒಂದು ವೇಳೆ ಆ ಭಾಗ್ಯ ರೇಖೆ ಮಧ್ಯ ಬೆರಳಿನತ್ತ ಹೋಗುವ ಬದಲಿಗೆ ಅನಾಮಿಕ ಬೆರಳಿನ ಕೆಳಗಡೆ ಆ ಭಾಗ್ಯ ರೇಖೆಯು ಬಂದು ಕೂಡಿಕೊಂಡಿದ್ದರೆ ಚಿಕ್ಕ ರೇಖೆಯು ಪೂರ್ತಿಯಾಗಿ ಕೆಳಭಾಗದತ್ತ ಹೋಗಿದ್ದರೆ ಸರ್ಕಾರಿ ಕೆಲಸಗಳು ಸಿಕ್ಕುವ ಅವಕಾಶ ಹೆಚ್ಚಾಗಿರುತ್ತದೆ.
ಇಂತಹ ಜನರು ನೌಕರಿ ಮಾಡುತ್ತಲೇ ಜೀವನ ನಡೆಸುತ್ತಾರೆ. ಆದರೆ ದೊಡ್ಡದಾಗಿರುವ ಪದವಿಯನ್ನು ಸಹ ಇವರು ಪಡೆದುಕೊಳ್ಳುತ್ತಾರೆ. ಇಂತಹ ಜನರು ಸರ್ಕಾರಿ ನೌಕರಿಯನ್ನು ಪಡೆಯಬೇಕಾದರೆ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಯಾಕೆಂದರೆ ಇವರಲ್ಲಿ ಯೋಗವಿದೆ. ಹೃದಯ ರೇಖೆಯ ತನಕ ಚಿಕ್ಕ ಗೆರೆ ಇದೆ. ನಮ್ಮ ಕಿರು ಬೆರಳಿನ ಕೊನೆಯಲ್ಲಿ ಇರುವುದು ಬುಧ ಪರ್ವತವಾಗಿರುತ್ತದೆ. ಈ ಸ್ಥಾನದ ಮೂಲಕ ಮದುವೆ ಯಾವಾಗ ಆಗುತ್ತದೆ ಎಂಬುದನ್ನು ತಿಳಿಯಬಹುದು.
ಬುಧ ಪರ್ವತದ ಮಧ್ಯಭಾಗದಲ್ಲಿ ಚಿಕ್ಕ ರೇಖೆಯು ಬಂದಿದ್ದರೆ ಇವರ ಮದುವೆ 25ನೇ ವಯಸ್ಸಿನ ನಂತರ ಆಗುತ್ತದೆ. ಇಲ್ಲಿ ನೀವು ನಿರಾಶೆ ಪಡುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆಗಾರ 25ನೇ ವಯಸ್ಸಿನ ನಂತರ ಸಿಗುತ್ತದೆ ಎಂದಿದ್ದರೆ ಅವರು ಸಿಗುತ್ತಾರೆ. ಹೆಬ್ಬೆರಳಿನ ಕೊನೆಯ ಭಾಗದಲ್ಲಿ ಶುಕ್ರ ಪರ್ವತ ವಿರುತ್ತದೆ. ಹೆಬ್ಬೆಟ್ಟಿನ ಕೆಳಭಾಗದಲ್ಲಿ ಹಲವಾರು ರೇಖೆಗಳು ಇರುತ್ತದೆ. ನೇರವಾಗಿರುವ ರೇಖೆ ಗಳಿಗಿಂತ ಶುಕ್ರ ಪರ್ವತದಲ್ಲಿ ಅಡ್ಡ ರೇಖೆಗಳು ಹೆಚ್ಚಾಗಿ ಕಾಣುತ್ತದೆ. ಯಾರ ಅಂಗೈಯಲ್ಲಿ ಹೆಬ್ಬೆರಳಿನತ್ತ ಹೋಗುತ್ತ ಅಡ್ಡ ರೇಖೆಗಳು ಹೆಚ್ಚಾಗಿರುತ್ತದೆಯೋ ಅಂತವರಲ್ಲಿ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕಾಡಬಹುದು.
ಕುಟುಂಬದವರ ಜೊತೆಗಾರರ ಜೊತೆ ಸಂಬಂಧಿಕರ ಜೊತೆಯಲ್ಲಿ ಕೆಲವು ಮನಸ್ತಾಪಗಳು ಉಂಟಾಗಬಹುದು . ಇಂತಹ ಸ್ಥಿತಿಯಲ್ಲಿ ನೀವು ಎಚ್ಚರವಾಗಿರಬೇಕು. ನಿಮ್ಮನ್ನು ನೀವು ಶಾಂತವಾಗಿ ಇರಿಸಿಕೊಳ್ಳಲು ಪ್ರಯತ್ನ ಮಾಡಬೇಕು. ನಿಮ್ಮಲ್ಲಿ ಸಿಡುಕು ಸ್ವಭಾವವು ಹೆಚ್ಚಾಗಿರುತ್ತದೆ. ಒಂದು ವೇಳೆ ಈ ರೇಖೆಗಳು ಹೆಚ್ಚಾಗಿ ಮೇಲು ಭಾಗದತ್ತ ಹೋಗುತ್ತಿದ್ದರೆ , ಆರ್ಥಿಕ ಸಮಸ್ಯೆಯೂ ಕಡಿಮೆ ಇರುತ್ತದೆ. ಇವರ ಸಂಬಂಧ ತುಂಬಾ ಆಳವಾಗಿರುತ್ತದೆ . ಹಣ ಉಳಿತಾಯ ಮಾಡುವಂತಹ ಅವಕಾಶಗಳು ನಿಮಗೆ ಹೆಚ್ಚಾಗಿ ಸಿಗುತ್ತದೆ.
ಇಂಥವರ ಯೋಗ ಚೆನ್ನಾಗಿರುತ್ತದೆ . ಇನ್ನು ಚಂದ್ರ ಪರ್ವತದ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಚಂದ್ರ ರೇಖೆಯು ನಮ್ಮ ಕೈ ಹಸ್ತದ ಅಂದರೆ ಮೊಣಕೈಯ್ಯ ಕೊನೆಯಲ್ಲಿ ಇರುತ್ತದೆ. ಶನಿ ಪರ್ವತದಿಂದ ಒಂದು ರೇಖೆಯು ನಮ್ಮ ಹಸ್ತದ ಕೊನೆಗೆ ಬಂದಿರುತ್ತದೆ . ಕೆಳಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ರೇಖೆಗಳು ಸ್ಪರ್ಶವಾಗಿರುತ್ತದೆ. ಇಂತಹ ಗೆರೆ ಇರುವಂತಹ ಜನಕ್ಕೆ ವಿದೇಶಿ ಯೋಗಗಳು ತುಂಬಾ ಚೆನ್ನಾಗಿ ಕೂಡಿ ಬಂದಿರುತ್ತದೆ. ಕೇತು ಪರ್ವತವೂ ಸಾಮಾನ್ಯವಾಗಿ ಜೀವನ ರೇಖೆಯು ಹೊರಭಾಗದಲ್ಲಿ ಇರುತ್ತದೆ. ಜೀವನ ರೇಖೆಯು ಪೂರ್ತಿಯಾಗಿ ಒಳಭಾಗದಲ್ಲಿ ಇದ್ದರೆ ವಿದೇಶಕ್ಕೂ ಸಹ ಹೋಗಿ ಹಣವನ್ನು ಹೆಚ್ಚಿಗೆ ಗಳಿಸುತ್ತೀರಾ. ಭಾಗ್ಯ ರೇಖೆಯು ಶನಿ ಪರ್ವತದತ್ತ ನೇರವಾಗಿ ಹೋಗಿದ್ದರೆ ಹೃದಯ ರೇಖೆಯ ಮಧ್ಯಭಾಗದಲ್ಲಿ ಒಂದು ರೇಖೆ ಇರುತ್ತದೆ. ಇದು ತುಂಬಾ ಭಾಗ್ಯಶಾಲಿಯಾಗಿರುತ್ತದೆ.