ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ವಿಶೇಷವಾದ ಸೂಚನೆ ನಿಮ್ಮ ಮಗಳ ಮೇಲೆ ಎಷ್ಟೇ ಪ್ರೀತಿ ಇರಲಿ, ಗೌರವವಿರಲಿ, ಕಾಳಜಿ ಇರಲಿ ಅದರಲ್ಲಿ ಏನು ತಪ್ಪಿಲ್ಲ ಆದರೆ ನೀವೇ ಹೇಳಿ ನೀವು ಅವಳ ಜೊತೆ ಜೀವನ ಪರ್ಯಂತ ಇರೋಕೆ ಆಗುತ್ತಾ? ಅದರಿಂದ ಅವಳಿಗೆ ಈಗಿಂದಲೇ ಸ್ವತಂತ್ರವಾಗಿ ಬೆಳೆಸಿ ಸಣ್ಣ ಪುಟ್ಟ ಮನೆ ಕೆಲಸವನ್ನು ಈಗಲೇ ರೂಢಿ ಮಾಡಿಸಿ.ನೀವು ಈ ನನ್ನ ಮಾತನ್ನು ತಪ್ಪುತಿಳುವಳಿಕೆಯನ್ನು ಮಾಡಿಕೊಂಡು ಬರೀ ಹೆಣ್ಣು ಮಕ್ಕಳು ಏಕೆ ಮನೆ ಕೆಲಸ ಮಾಡಬೇಕು ಅಂತ ನೀವು ಯೋಚಿಸುತ್ತಿರಬಹುದು ಆದರೆ ಒಂದು ನೆನಪು ಇಟ್ಟುಕೊಳ್ಳಿ ಸಮಯ ಕಾಲ ಒಂದೇ ತರಹ ಇರುವುದಿಲ್ಲ.
ಎಷ್ಟೋ ಜನ ಹುಡುಗರು ಕುಕ್ಕಿಂಗ್ ಅಲ್ಲಿ ಎಕ್ಸ್ ಪರ್ಟ್ ಇದ್ದಾರೆ ನಮ್ಮ ಭಾರತದಲ್ಲಿ ಹುಡುಗಿಯರಿಗಿಂತ ಹುಡುಗರೇ ಹೋಟೆಲ್ ಮ್ಯಾನೆಜ್ ಮೆಂಟ್ ಕೋರ್ಸ್ ಮಾಡುತ್ತಾ ಇರುವುದು. ಅದಕ್ಕಾಗಿ ಯಾವುದೇ ಕೆಲಸ ಚಿಕ್ಕದಾಗಿ ಭಾವಿಸಬಾರದು.ಅದರಿಂದ ನಿಮ್ಮ ಮಗಳಿಗೂ ಕೂಡ ಸಣ್ಣ ಪುಟ್ಟ ಕೆಲಸ ಹೇಳಿಕೊಡುವುದರಿಂದ ನಾಳೆ ಅವಳು ಸ್ವತಂತ್ರವಾಗಿ ಯಾವುದೇ ಕೆಲಸ ಮಾಡಬಹುದು. ಅಮ್ಮ ನನಗೆ ಅಡುಗೆ ಮಾಡುವುದನ್ನು ಹೇಳಿ ಕೊಟ್ಟಿದ್ದು ಒಳ್ಳೆಯದೇ ಆಯ್ತು ಅಂತ ಹೊಗಳಬಹುದು.
ನಿಮ್ಮ ಮಗಳಿಂದ ಏನಾದರೂ ತಪ್ಪುಗಳು ಆದರೆ ಅವಳಿಗೆ ತನ್ನ ತಪ್ಪುಗಳನ್ನು ತಿಳಿಸಿ ಹೇಳಿ ಏಕೆಂದರೆ ನಾಳೆ ಗಂಡನ ಮನೆಯಲ್ಲಿ ಏನಾದರೂ ತಪ್ಪು ನಡೆದರೇಮ ಅವಳು ಹಿರಿಯರನ್ನು ಗೌರವಿಸದೆ ವಾದ ಮಾಡಬಹುದು.
ನಿಮ್ಮ ಮಗಳನ್ನು ಮಗಳಾಗಿ ಇಟ್ಟುಕೊಳ್ಳುವುದು ಅಷ್ಟೇ ನಿಮ್ಮ ಜವಾಬ್ದಾರಿ ಆಗಬಾರದು, ನಿಮ್ಮ ಮಗಳನ್ನು ನಂಬರ್ ಒನ್ ಸೊಸೆ ಮಾಡುವ ಕರ್ತವ್ಯ ಕೂಡ ನಿಮ್ಮದಾಗಿರಬೇಕು. ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿ ಮಾಡದಿದ್ದರೆ
ನಿಮ್ಮ ಮಗಳಿಗೆ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಳ್ಳದಿದ್ದರೆ ಮಗಳ ಜೊತೆಗೆ ನೀವು ಈ ಶಿಕ್ಷೆಯಲ್ಲಿ ಭಾಗಿಗಳಾಗಿ ಜೀವನಪೂರ್ತಿ ಪಶ್ಚಾತಾಪ ಪಡಬೇಕಾಗುತ್ತದೆ. ಪ್ರತಿಯೊಬ್ಬರೂ ಸುಂದರ, ಸೌಮ್ಯ, ಸುಸಂಸ್ಕೃತ ಮತ್ತು ಸರ್ವಗುಣ ಸಂಪನ್ನ ಹೊಂದಿರುವ ಸೊಸೆಯನ್ನು ಬಯಸುತ್ತಾರೆ. ಆದರೆ ನಾವೇ ನಮ್ಮ ಹೆಣ್ಣು ಮಕ್ಕಳಲ್ಲಿ ಅಂತಹ ಮೌಲ್ಯಗಳು ಮತ್ತು ಗುಣಗಳನ್ನು ಕೊಡದೇ ಇದ್ದಾಗ ನಮಗೆ ಅಂತಹ ಒಳ್ಳೆಯ ಸೊಸೆ ಹೇಗೆ ಅಂತ ಸಿಗಲು ಸಾಧ್ಯ?
ವೃದ್ದಾಶ್ರಮದಲ್ಲಿರುವ
ತಂದೆ ತಾಯಿಯನ್ನು ನೋಡಿ ಎಲ್ಲರೂ ಗಂಡು ಮಕ್ಕಳನ್ನು ದೂಷಿಸುತ್ತಾರೆ ಆದೆ ಅವರನ್ನು ಅಲ್ಲಿಗೆ ಕಳುಹಿಸುವುದರಲ್ಲಿ ಯಾರದೋ ಮಗಳ ಕೈವಾಡ ಕೂಡ ಇರಬಹುದು ಎಂಬುದನ್ನು ಅವರು ಮರೆತು ಬಿಡುತ್ತಾರೆ. ಇಲ್ಲದಿದ್ದರೆ ಗಂಡುಮಕ್ಕಳು ಮದುವೆಗೂ ಮುನ್ನವೇ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲಿಲ್ಲ? ಮದುವೆಯ ನಂತರವೇ ಏಕೆ? ಯಾರೋ ಒಬ್ಬ ಬ್ರಹ್ಮಚಾರಿ ಮಗನೂ ತನ್ನ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದನ್ನು ಇಲ್ಲಿಯವರೆಗೂ ಯಾರು ಕೂಡ ಎಂದಿಗೂ ಕೇಳಿಲ್ಲ.
ನನ್ನ ಈ ಮಾತುಗಳು ಕಹಿ ಇರಬಹುದು. ಆದರೇ ಒಂದು ಸರ್ವೆಯ ಪ್ರಕಾರ ಇವು ಶೇ100ಕ್ಕೆ ಶೇ 75ರಷ್ಟು ಸತ್ಯ.