ನಮಸ್ಕಾರ ಸ್ನೇಹಿತರೆ ಮನೆಯ ಮುಖ್ಯ ದ್ವಾರದ ಹತ್ತಿರ ಇರಬೇಕಾದ ಮಂಗಳಕರ ವಸ್ತುಗಳು ಮನೆಗೆ ಮಂಗಳವನ್ನುಂಟು ಮಾಡುವ ಹಾಗೂ ಕೆಟ್ಟ ದೃಷ್ಟಿ ಮತ್ತು ದುಷ್ಟ ಶಕ್ತಿಗಳ ಪ್ರಭಾವ ತಡೆಯಲು ಇರಬೇಕಾದ ಮುಖ್ಯ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ 01. ಮೊದಲಿಗೆ ಮುಖ್ಯ ದ್ವಾರದ ಹೊಸ್ತಿಲಿಗೆ ಅರಿಶಿನ ಕುಂಕುಮ ಹಚ್ಚಿ ರಂಗೋಲಿ ಬಿಡುವುದು
ತುಂಬಾ ವಿಶೇಷ ಮತ್ತು ವೈಜ್ಞಾನಿಕವಾಗಿಯೂ ಒಳ್ಳೆಯದು ಇದರಿಂದ ಆ ಮನೆಗೆ ಯಾವುದೇ ನೆಗೆಟಿವ್ ಎನರ್ಜಿ ಪ್ರವೇಶ ಮಾಡುವುದಿಲ್ಲ 02. ಮನೆಯ ಬಾಗಿಲಿಗೆ ಮಾವಿನ ತೆರಳಿರು ತೋರಣ ಕಟ್ಟುವುದು ಮನೆಗೆ ತುಂಬಾ ಮಂಗಳಕರ 03. ಮನೆಯ ಮುಖ್ಯದ್ವಾರದ ಹತ್ತಿರ ಓಂ ಅಥವಾ ಸ್ವಸ್ತಿಕ್ ಚಿನ್ಹೆ ಇರುವುದು ಕೂಡ ಒಳ್ಳೆಯದು ಇಲ್ಲವೆಂದರೆ ಅರಿಶಿನದಿಂದ ಬರೆಯುವುದು
ಕೂಡ ಮಂಗಳಕರ 04. ಹೂವಿನ ಪಕಳೆಗಳನ್ನು ಹಾಕಿದ ಪಾಟನ್ನು ಮುಖ್ಯ ದ್ವಾರದ ಬಳಿ ಅಥವಾ ಮನೆಯ ದ್ವಾರದ ಬಳಿ ಇಡಿ ನಿಮ್ಮ ಮನೆ ಹಾಗೂ ನಿಮ್ಮ ಕುಟುಂಬದ ಸದಸ್ಯರನ್ನು ಆರೋಗ್ಯವಾಗಿ ಇಡಲು ಇದು ಸಹಾಯ ಮಾಡುತ್ತದೆ 05. ಕುದುರೆಗಳಿಗೆ ಬಳಸಿ ತೆಗೆದಿರುವಂತಹ ಲಾಳವನ್ನು ಮುಖ್ಯ ದ್ವಾರದ ಹತ್ತಿರ ಹಾಕುವುದು ತುಂಬಾ ಒಳ್ಳೆಯದು 06. ಮುಖ್ಯದ್ವಾರದ ಹತ್ತಿರ
ಮರದಿಂದ ಅಥವಾ ಮಣ್ಣಿನಿಂದ ಮಾಡಿದ ಆನೆಯ ಮೂರ್ತಿಗಳನ್ನು ಇಡುವುದು ಅಥವಾ ಆನೆಯ ಕಣ್ಣಿನ ಚಿತ್ರ ಹಾಕುವುದು ಒಳ್ಳೆಯದು 07. ಮುಖ್ಯ ದ್ವಾರದ ಸಮೀಪದಲ್ಲಿ ಶೌಚಾಲಯಗಳು ಇರಬಾರದು 08. ಶೂ ರಾಕ್ ಗಳು ಇರಬಾರದು ಇದು ಅನುಕೂಲವಾದರೂ ಇಂತಹ ಹವ್ಯಾಸವನ್ನು ದೂರವಿಡಬೇಕು 09. ಮನೆಯ ಮುಂದೆ ಬಿಳಿ ಎಕ್ಕದ ಗಿಡ ದಾಳಿಂಬೆ ಗಿಡ ಇದ್ದರೆ
ಮಂಗಳಕರ 10 ಮನೆಯ ಮುಂದೆ ತುಳಸಿ ಕಟ್ಟೆ ಇರಬೇಕು ಪ್ರತಿದಿನ ಮುಂಜಾನೆ ಸ್ವಚ್ಛ ಮಾಡಿ ನಂತರ ತುಳಸಿಗೆ ನೀರು ಅರ್ಪಿಸಿ ಸ್ನಾನದ ನಂತರ ಪೂಜೆಯನ್ನು ಮಾಡಿದರೆ ಆ ಮನೆಯಲ್ಲಿ ನಕಾರಾತ್ಮಕತೆ ದೂರವಾಗಿ ಒಳ್ಳೆಯದಾಗುತ್ತದೆ 11. ಹಾಗೆ ಮನೆಯಲ್ಲಿ ಪ್ರವೇಶಿಸುವ ಮುಂಚೆ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ನಮ್ಮ ಹಿರಿಯರು ಹೇಳಿಕೊಟ್ಟಿರುವ
ಒಳ್ಳೆಯ ಅಭ್ಯಾಸ ಮತ್ತು ಡೋರ್ ಮ್ಯಾಟ್ ಗಳನ್ನು ಹಾಕಿಡಿ ಇದರಿಂದ ದುಷ್ಟ ಶಕ್ತಿಗಳು ಮತ್ತು ಕೊಳೆ ಮನೆ ಪ್ರವೇಶಿಸುವುದಿಲ್ಲ ಜನರು ಕಾಲು ತೊಳೆದು ಬರುವಾಗ ತಮ್ಮ ಕಾಲುಗಳನ್ನು ಸ್ವಚ್ಛಗೊಳಿಸಿ ಬರಲು ಹೇಳಿ 12. ಮುಖ್ಯದ್ವಾರದ ಹತ್ತಿರ ಸಂಜೆಯ ವೇಳೆ ಒಂದು ದೀಪವನ್ನು ಹಚ್ಚಿಟ್ಟರೆ ಒಳ್ಳೆಯದು ಸ್ನೇಹಿತರೆ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು