ಶ್ರೀಕೃಷ್ಣರು ಹೇಳಿದ ಮಾತು, ಈ 5 ಸಸ್ಯ ಗಿಡಗಳು ಹಣವನ್ನು ನಾಶ ಮಾಡುತ್ತವೆ, ಬೇರು ಸಮೇತ ಕಿತ್ತು ಬಿಸಾಕಿ. ನಮಸ್ಕಾರ ಸ್ನೇಹಿತರೆ, ನಿಮ್ಮೆಲ್ಲರಿಗೂ ಸ್ವಾಗತ. ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣರು ವಾಸ್ತು ಶಾಸ್ತ್ರದ ವಿಶಿಷ್ಟವಾದ ಜ್ಞಾನವನ್ನ ಹೊಂದಿದ್ದರು. ಇವರು ಸಮಯಕ್ಕೆ ತಕ್ಕಂತೆ ಧರ್ಮರಾಜ ಯುಧಿಷ್ಟರಿಗೆ ವಾಸ್ತು ಶಾಸ್ತ್ರದ ಸಂಪೂರ್ಣವಾದ ಜ್ಞಾನವನ್ನ ಕೊಟ್ಟರು.
ಈ ಜ್ಞಾನವು ಎಲ್ಲಾ ಮನುಕುಲಕ್ಕೆ ಅತ್ಯಂತ ಮಹತ್ವಪೂರ್ಣ ಮತ್ತು ಕಲ್ಯಾಣಕಾರಿಯು ಆಗಿದೆ. ಶ್ರೀಕೃಷ್ಣರು ಐದು ಯಾವ ರೀತಿಯ ಮರ-ಗಿಡಗಳ ಬಗ್ಗೆ ತಿಳಿಸಿದ್ದಾರಂದ್ರೆ ಇವು ಮನೆಯ ಹತ್ತಿರ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನ ಸಹ ತನ್ನೊಡನೆ ತರುತ್ತವೆ. ಈ ವೃಕ್ಷಗಳು ಮನೆಯ ಮುಂದೆ ಇದ್ರೆ ಆ ಮನೆಯಲ್ಲಿ ವಾಸ ಮಾಡುತ್ತಿರುವಂತ ಜನರಿಗೆ ಯಾವತ್ತಿಗೂ ಕಷ್ಟ ದುಃಖಗಳು ಕಾಡುತ್ತವೆ.
ಯಾವತ್ತಿಗೂ ಅವರು ನಿರಾಶೆಯನ್ನೇ ಕಾಣಬೇಕಾಗುತ್ತೆ. ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರವಾಗಿ ವೃಕ್ಷಗಳು ಸಸ್ಯಗಳು ನಮ್ಮ ಮನೆಯ ಸೌಂದರ್ಯವನ್ನು ಖಂಡಿತವಾಗಿ ಹೆಚ್ಚಿಗೆ ಮಾಡುತ್ತವೆ. ಜೊತೆಗೆ ಅವು ವಾತಾವರಣವನ್ನು ಸಹ ಶುದ್ಧವಾಗಿ ಇಡುತ್ತವೆ. ವೃಕ್ಷಗಳಿಂದ ಸಕಾರಾತ್ಮಕ ಶಕ್ತಿ ಹರಿದಾಡುತ್ತದೆ. ಇದು ನಮ್ಮೆಲ್ಲರ ಜೀವನಕ್ಕಾಗಿ ತುಂಬಾನೇ ಇಂಪಾರ್ಟೆಂಟ್ ಕೂಡ ಇದೆ.
ವೃಕ್ಷಗಳು ನಕಾರಾತ್ಮಕ ಶಕ್ತಿಯನ್ನ ನಾಶ ಮಾಡಿ ವಾತಾವರಣವನ್ನ ಇನ್ನಷ್ಟು ಹೆಚ್ಚಿಗೆ ಸಕಾರಾತ್ಮಕವಾಗಿ ಇಡುವ ಕಾರ್ಯವನ್ನ ಮಾಡುತ್ತವೆ. ಮನೆಯ ಮುಂದೆ ಶುಭವೃಕ್ಷಗಳನ್ನ ಸಸ್ಯಗಳನ್ನ ಹಚ್ಚೋದ್ರಿಂದ ಮನೆಗೆ ವೃದ್ಧಿಯಾಗುತ್ತದೆ. ಜೊತೆಗೆ ಈ ಮರ ಗಿಡಗಳು ಮನೆಯ ಹಲವಾರು ಪ್ರಕಾರದ ವಾಸ್ತು ದೋಷಗಳನ್ನು ನಷ್ಟ ಮಾಡುತ್ತವೆ.
ಮನೆಯ ಅಂಗಳದಲ್ಲಿ ನಿಂತುಕೊಂಡಿರುವಂತ ವೃಕ್ಷಗಳು ದೇವರ ರೀತಿಯೇ ನಮ್ಮ ಮನೆಯ ರಕ್ಷಣೆಯನ್ನು ಮಾಡುತ್ತವೆ. ಈ ಒಂದು ಕಾರಣದಿಂದಾಗಿ ನಮ್ಮ ಪುರಾಣಗಳಲ್ಲಾಗಲಿ ಶಾಸ್ತ್ರಗಳಲ್ಲಿ ಮನೆಯ ಮುಂದೆ ಕೆಲವು ಶುಭವೃಕ್ಷಗಳನ್ನ ಹಚ್ಚಲು ಸಲಹೆ ಕೊಟ್ಟಿದ್ದಾರೆ. ಇಂದು ನಾವು ಮನೆಯ ಅಂಗಳದಲ್ಲಿ ಯಾವ ರೀತಿಯ ವೃಕ್ಷಗಳು ಸಸ್ಯಗಳು ಇರಬೇಕನ್ನೋದನ್ನ ತಿಳಿದುಕೊಳ್ಳೋಣ
ಮತ್ತು ಯಾವ ರೀತಿಯ ವೃಕ್ಷಗಳು ಇರಬಾರದು ಅನ್ನೋದನ್ನ ತಿಳಿಸಿ ಕೊಡ್ತೀವಿ. ವಿಡಿಯೋ ಮುಂದುವರಿಸುವ ಮುನ್ನ ಭಕ್ತಿಯಿಂದ ಕಮೆಂಟ್ ನಲ್ಲಿ ಜೈ ಶ್ರೀಕೃಷ್ಣ ಅಂತ ಬರೆಯಿರಿ ಹಾಗೆ ಒಂದು ಲೈಕ್ ಅನ್ನು ನೀಡಿರಿ. ಸ್ನೇಹಿತರೆ ಕೆಲವು ವೃಕ್ಷಗಳನ್ನ ನಮ್ಮ ಶಾಸ್ತ್ರಗಳಲ್ಲಿ ಶುಭ ವೃಕ್ಷಗಳು ಅಂತ ತಿಳಿಸಿದ್ದಾರೆ. ಅದೇ ಪ್ರಕಾರದಲ್ಲಿ ನಮ್ಮ ವಾಸ್ತು ಶಾಸ್ತ್ರದಲ್ಲಿ ಅಶುಭ ವೃಕ್ಷಗಳು ಮತ್ತು ಸಸ್ಯಗಳ ವರ್ಣನೆ ಸಿಗುತ್ತದೆ.
ಈ ವೃಕ್ಷಗಳು ಮನೆಯ ಅಂಗಳದಲ್ಲಿ ಇರೋದು ಅಶುಭ ಮತ್ತು ಅಮಂಗಳಕಾರಿಯಾಗುತ್ತದೆ. ಈ ವೃಕ್ಷಗಳು ಮನೆಯ ಮುಂದೆ ಇದ್ರೆ ದುಃಖ ಮತ್ತು ದರಿದ್ರತೆಯನ್ನೇ ಅನುಭವಿಸಬೇಕಾಗುತ್ತದೆ. ಈ ವೃಕ್ಷಗಳ ಸಾನಿಧ್ಯದಲ್ಲಿ ಇದ್ದರೆ ಧನ ಸಂಪತ್ತಿನ ನಾಶ ಆಗುತ್ತದೆ. ಶತ್ರುಗಳಲ್ಲಿ ವೃದ್ಧಿ ಆಗುತ್ತೆ. ಮನುಷ್ಯರು ತಮ್ಮ ಗೌರವ ಘನತೆಯನ್ನು ಸಹ ಕಳೆದುಕೊಳ್ಳುತ್ತಾರೆ.
ಹಾಗಾಗಿ ನೀವು ಸಹ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿಮ್ಮ ಮನೆಯ ಹತ್ತಿರದಲ್ಲಿ ಅಥವಾ ನಿಮ್ಮ ಮನೆಯ ಮುಂದೆ ಅಂಗಳದಲ್ಲಿ ಇಂತಹ ವೃಕ್ಷಗಳು ಅಥವಾ ಸಸ್ಯಗಳನ್ನ ಹಚ್ಚಿದ್ರೆ ತಡ ಮಾಡದೆ ಅವುಗಳನ್ನ ಕಿತ್ತು ತೆಗೆದು ಹಾಕಿರಿ. ಎಲ್ಲಕ್ಕಿಂತ ಮೊದಲಿಗಿರುವಂತ ವಿಷಯ, ಮನೆಯ ಮುಖ್ಯ ದ್ವಾರವನ್ನ ಯಾವತ್ತಿಗೂ ನೀವು ಹೂ ಮತ್ತು ಎಲೆಗಳಿಂದ ಅಲಂಕಾರ ಮಾಡಿ ಇಟ್ಟಿರ್ಬೇಕು.
ಮುಖ್ಯದ್ವಾರ ಎಷ್ಟು ಸುಂದರ ಮತ್ತು ಸ್ವಚ್ಛವಾಗಿರುತ್ತದೆಯೋ ಅಂತಹ ಮನೆಯಲ್ಲಿ ಅಷ್ಟೇ ಅಧಿಕವಾಗಿ ಸುಖ ಶಾಂತಿ ನೆಲೆಸುತ್ತದೆ. ಆದ್ರೆ ಒಂದು ಮಾತನ್ನ ನೆನಪಿಟ್ಟುಕೊಳ್ಳಿ. ಮುಖ್ಯ ದ್ವಾರದ ಮೇಲೆ ಯಾವುದೇ ಪ್ರಕಾರದ ಮರ-ಗಿಡಗಳ ನೆರಳು ಬೀಳುವಂತೆ ಇರಬಾರದು. ಇದರಿಂದ ಛಾಯಾಬೇದವು ನಿರ್ಮಾಣವಾಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಹುಟ್ಟುತ್ತವೆ.
ಇನ್ನು ಎರಡನೇದಾಗಿರುವಂತ ವಿಷಯ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಥವಾ ನೈರುತ್ಯ ದಿಕ್ಕಿನಲ್ಲಿ ಯಾವುದೇ ಪ್ರಕಾರದ ವೃಕ್ಷಗಳನ್ನು ಹಚ್ಚುವುದು ಶುಭ ಅಲ್ಲ ಅಂತ ತಿಳಿಯಲಾಗಿದೆ. ಈ ವೃಕ್ಷಗಳು ಬೇಗನೆ ಒಣಗುತ್ತವೆ. ಮತ್ತು ಅಶುಭ ಪರಿಣಾಮ ಸಿಗುತ್ತದೆ. ಇನ್ನು ಮೂರನೇದಾಗಿರುವಂತ ವಿಷಯ ಮನೆಯ ಉತ್ತರ ದಿಕ್ಕಿನಲ್ಲಿ ಪಾಮ್ ಸಸ್ಯ ಆಗ್ಲಿ ಮತ್ತು ಕನಕ್ ಚಂಪಾ ಹೆಸರಿನ ಸಸ್ಯವನ್ನು ಹಚ್ಚಿದರೆ ಧನಸಂಪತ್ತಿನಲ್ಲಿ ವೃದ್ಧಿ ಆಗುತ್ತದೆ.
ಇನ್ನು ನಾಲ್ಕನೆಯ ವಿಷಯ ಮನೆಯ ಮುಖ್ಯಸ್ಥರೇನಾದರೂ ವ್ಯಾಪಾರ ಬಿಸಿನೆಸ್ ಮಾಡ್ತಾ ಇದ್ರೆ ಅಂತವರು ತಮ್ಮ ಮನೆಯ ಸೀಮೆಯಲ್ಲಿ ಬಿಲ್ವಪತ್ರೆ ಮತ್ತು ಬೇವಿನ ಗಿಡವನ್ನು ಹಚ್ಚಿ ಅವುಗಳನ್ನ ಬೆಳೆಸಬೇಕು. ಇದರಿಂದ ಅವರ ವ್ಯಾಪಾರದಲ್ಲಿ ಅಧಿಕ ಲಾಭಗಳು ಸಿಗುತ್ತವೆ. ಇನ್ನು ಐದನೆಯ ವಿಷಯ ಮನೆಯ ಪರಿಸರದಲ್ಲಿ ಯಾವತ್ತಿಗೂ ಮೇಲ್ಭಾಗದತ್ತ ಬೆಳೆಯುವಂತಹ
ಬಳ್ಳಿಗಳು ಶುಭ ಫಲಗಳನ್ನು ಕೊಡುತ್ತವೆ. ಒಂದು ವೇಳೆ ಬಳ್ಳಿಗಳೇನಾದ್ರೂ ಮೇಲ್ಭಾಗದಿಂದ ಕೆಳಭಾಗದತ್ತ ಬೆಳೆಯಲು ಶುರು ಮಾಡಿದ್ರೆ ಇಲ್ಲಿ ಅಧೋಗತಿಯಾಗುತ್ತದೆ. ಇಲ್ಲಿ ದುಃಖ ದಾರಿದ್ರತೆಗಳು ಎದುರಾಗುತ್ತವೆ. ಒಂದ್ ವೇಳೆ ಈ ಸ್ಥಾನದಲ್ಲಿ ಏನಾದ್ರೂ ಮನಿ ಪ್ಲಾಂಟ್ ಇದ್ರೆ ಇನ್ನಷ್ಟು ಅಧಿಕ ಶುಭಫಲಗಳು ಸಿಗುತ್ತವೆ. ಇನ್ನು ಆರನೆಯ ವಿಷಯ ಬಾಳೆಗಿಡ. ಮನೆಯ ಭವನದ ಮುಂದೆ ನೆಡೋದು ಅತ್ಯಂತ ಶುಭ ಅಂತ ತಿಳಿಯಲಾಗಿದೆ. ಆದರೆ ಇದನ್ನು ಮನೆಯ ಹಿಂದೆ ಹಚ್ಚಬೇಕು.
ಒಂದು ವೇಳೆ ಇದನ್ನ ಮನೆಯ ಮುಂದೆ ಹಚ್ಚುವುದಾದರೆ ತುಳಸಿ ಗಿಡದ ಹತ್ತಿರ ಹಚ್ಚಬಹುದು. ತುಳಸಿ ಗಿಡದ ಹತ್ತಿರ ಬಾಳೆಗಿಡ ಇದ್ರೆ ಆಕಸ್ಮಿಕವಾಗಿ ಧನ ಸಂಪತ್ತಿನಲ್ಲಿ ಲಾಭಗಳು ಸಿಗುತ್ತವೆ. ಯಾಕೆಂದರೆ ಬಾಳೆ ಗಿಡದಲ್ಲಿ ಭಗವಂತನಾದ ವಿಷ್ಣು, ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇದೆ. ಹಾಗಾದ್ರೆ ಬನ್ನಿ ಸ್ನೇಹಿತರೆ ಯಾವೆ ಸಸ್ಯ ಗಿಡಗಳು ಮನೆ ಅಂಗಳದಲ್ಲಿ ನೆಡೋದು ಅಶುಭ ಆಗಿರುತ್ತದೆ ಅಂತ ತಿಳಿದುಕೊಳ್ಳೋಣ
. ಎಲ್ಲದಕ್ಕಿಂತ ಮೊದಲು ಮುಳ್ಳುಗಳು ಇರುವಂತ ಸಸ್ಯ ಗಿಡಗಳ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೆ ಯಾವತ್ತಿಗೂ ನೀವು ನಿಮ್ಮ ಮನೆಗಳಲ್ಲಿ ಕೇವಲ ಮುಳ್ಳುಗಳು ಇರುವಂತಹ ಸಸ್ಯ ಗಿಡಗಳನ್ನ ಹಚ್ಚಬಾರದು. ಯಾಕೆಂದರೆ ಈ ಮುಳ್ಳುಗಳು ಇರುವಂತಹ ಗಿಡಗಳು ಮನೆಯ ವಾಸ್ತುವನ್ನ ತನ್ನ ಪ್ರಭಾವಕ್ಕೆ ಒಳ ಮಾಡುತ್ತವೆ. ಜೊತೆಗೆ ಈ ಪ್ರಕಾರದ ಸಸ್ಯ ಗಿಡಗಳು
ಮನೆಯಲ್ಲಿರುವಂತ ಚಿಕ್ಕ ಮಕ್ಕಳಿಗೆ ತೊಂದರೆಯನ್ನು ಮಾಡಬಹುದು. ಇಲ್ಲಿ ಇವುಗಳ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಸಹ ಉತ್ಪತ್ತಿ ಮಾಡುತ್ತವೆ. ಆದ್ರೂ ಇಲ್ಲಿ ಬೇಕಾದ್ರೆ ನೀವು ಗುಲಾಬಿ ಹೂವಿನಂತ ಗಿಡಗಳನ್ನ ಹಚ್ಚಬಹುದು. ಆದ್ರೆ ಇವುಗಳನ್ನ ಮನೆಯ ಮಾಳಿಗೆ ಮೇಲೆ ಇಡೋದು ಉತ್ತಮವಾಗತ್ತೆ. ಒಂದ್ ವೇಳೆ ಧಾರ್ಮಿಕ ದೃಷ್ಟಿಯಿಂದ ನೋಡೋದಾದ್ರೆ
ಮುಳ್ಳುಗಳು ಇರುವಂತಹ ಸಸ್ಯ ಗಿಡಗಳನ್ನು ಮನೆಯಲ್ಲಿ ಹಚ್ಚುವುದರಿಂದ ಕುಟುಂಬದಲ್ಲಿ ಜಗಳಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲದೆ ಇವುಗಳ ಕಾರಣದಿಂದಾಗಿ ಮನೆಯ ವಾತಾವರಣ ಕೆಡುತ್ತದೆ. ಸ್ನೇಹಿತರೆ ಇನ್ನು ಎರಡನೇದಾಗಿರೋದು ಹಾಲಿನ ಪದಾರ್ಥ ಬರುವಂತ ಗಿಡಗಳು. ಹೌದು ಸ್ನೇಹಿತರೆ, ಯಾವತ್ತಿಗೂ ನೀವು ನಿಮ್ಮ ಮನೆಗಳಲ್ಲಿ ಇಂಥ ಗಿಡಗಳನ್ನ ಹಚ್ಚಬಾರದು.
ಇಲ್ಲಿ ಅವುಗಳನ್ನು ಕತ್ತರಿಸಿದಾಗ ಅಥವಾ ಎಲೆಗಳನ್ನು ತುಂಡು ಮಾಡಿದಾಗ ಅವುಗಳಿಂದ ಹಾಲಿನಂತ ಪದಾರ್ಥ ಆಚೆ ಬರ್ತಾ ಇರುತ್ತೆ. ಯಾಕಂದ್ರೆ ಇವುಗಳಿಂದ ಬರುವಂತಹ ಹಾಲಿನಂತ ಪದಾರ್ಥವು ಮನುಷ್ಯನ ಆರೋಗ್ಯಕ್ಕಾಗಿ ಒಳ್ಳೆಯದಾಗಿರುವುದಿಲ್ಲ. ಒಂದು ವೇಳೆ ಅಪ್ಪಿ ತಪ್ಪಿ ಯಾವುದಾದರೂ ಚಿಕ್ಕ ಮಕ್ಕಳಾಗಲಿ ದೊಡ್ಡವರು ಈ ಹಾಲಿನ ಸೇವನೆಯನ್ನ ಮಾಡಿದ್ರೆ ಇವು ನಮ್ಮ ಶರೀರದ ಒಳಗಡೆ ವಿಷವನ್ನ ಹುಟ್ಟಿಸಬಹುದು.
ಹಾಗಾಗಿ ಇಂತಹ ದುಷ್ಪ್ರಭಾವದಿಂದ ಉಳಿದುಕೊಳ್ಳಲು ನಾವು ಇಂತಹ ಸಸ್ಯ ಗಿಡಗಳಿಂದ ದೂರ ಇದ್ದಷ್ಟು ಒಳ್ಳೆಯದು. ಇಲ್ಲಿ ಧಾರ್ಮಿಕ ದೃಷ್ಟಿಯಿಂದ ನೋಡಿದ್ರು ಇಂತಹ ಸಸ್ಯಗಳನ್ನ ಮನೆಯಲ್ಲಿ ನೆಡೋದ್ರಿಂದ ಮನೆಯ ಸುಖ ಶಾಂತಿ ಹೋಗಿಬಿಡುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುತ್ತವೆ. ಇದೇ ಕ್ರಮದಲ್ಲಿ ಮೂರನೇದಾಗಿರೋದು ಒಣಗಿದ ಗಿಡಗಳಾಗಿದೆ. ಸ್ನೇಹಿತರೆ ನೀವು ನೋಡಿರ್ತೀರ,
ಮನೆಯಲ್ಲಿ ಹೂವಿನ ಪಾಟ್ ನಲ್ಲಿ ನೆಟ್ಟಿರುವಂತಹ ಹಲವಾರು ಸಸ್ಯ ಗಿಡಗಳು ಒಣಗಿ ಹೋಗಿರುತ್ತವೆ. ಇಂಥ ಸ್ಥಿತಿಯಲ್ಲಿ ಈ ಸಸ್ಯ ಗಿಡಗಳನ್ನ ಮನೆಯಿಂದ ಕಿತ್ತು ಆಚೆ ತೆಗೆದು ಹಾಕಬೇಕು. ಒಂದ್ ವೇಳೆ ನೀವೇನಾದರೂ ನಿಮ್ಮ ಮನೇಲಿ ಒಣಗಿದ ಗಿಡಗಳನ್ನ ನೋಡಿದ್ರೆ ನಿಮ್ಮ ಸ್ವಭಾವದಲ್ಲೂ ಸಹ ಪರಿವರ್ತನೆ ಕಾಣುತ್ತದೆ. ಹಾಗಾಗಿ ಮನೆಯಲ್ಲಿ ಯಾವತ್ತಿಗೂ ಒಣಗಿದ ಗಿಡಗಳನ್ನು ಇಟ್ಟುಕೊಳ್ಳಬಾರದು. ಇವುಗಳನ್ನ ತಕ್ಷಣ ಆಚೆ ತೆಗೆದಾಕಬೇಕು. ವಿಶೇಷವಾಗಿ ಒಣಗಿದಂತ ತುಳಸಿ ಗಿಡವನ್ನು ಮನೆಯಲ್ಲಿ ಯಾವತ್ತಿಗೂ ಇಟ್ಕೊಳ್ಬಾರ್ದು.
ತುಳಸಿ ಗಿಡವು ಯಾವತ್ತಿಗೂ ಹಚ್ಚ ಹಸಿರಾಗಿ ಇರಬೇಕು. ಒಣಗಿದಂತ ತುಳಸಿ ಗಿಡವು ದುರ್ಭಾಗ್ಯವನ್ನು ತೆಗೆದುಕೊಂಡು ಬರುತ್ತದೆ. ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ. ಯಾರ ಮನೆಯಲ್ಲಿರುವಂತ ತುಳಸಿ ಗಿಡ ಒಣಗಿ ಹೋಗುತ್ತದೆಯೋ ಆ ಮನೆಯಿಂದ ತಾಯಿ ಲಕ್ಷ್ಮಿ ದೇವಿ ಬಿಟ್ಟು ಹೋಗ್ತಾರೆ. ನಾಲ್ಕನೇದಾಗಿರೋದು ಬೋನ್ಸಾಯ್ ಸಸ್ಯಗಳು. ಸ್ನೇಹಿತರೆ ನಿಮಗೆ ಬೋನ್ಸಾಯ್ ಸಸ್ಯಗಳ ಅರ್ಥ ಗೊತ್ತಿಲ್ಲದೇ ಇರಬಹುದು.
ಇಲ್ಲಿ ನಾವು ನಿಮಗೆ ಹೇಳೋದಾದ್ರೆ ಈ ಸಸ್ಯಗಳು ದೊಡ್ಡ ಗಿಡದ ರೂಪ ಆಗಿರುತ್ತವೆ. ಇವುಗಳು ಬೆಳೆಯದಂತೆ ವೈಜ್ಞಾನಿಕ ರೂಪದಲ್ಲಿ ನಿಲ್ಲಿಸಿಬಿಡ್ತಾರೆ. ಹಾಗಾಗಿ ಇಲ್ಲಿರುವಂತಹ ಒಂದು ಮಾಹಿತಿ ಏನಿದೆ ಅಂದ್ರೆ ಇಂಥ ಸಸ್ಯ ಗಿಡಗಳು ನಮ್ಮ ಸುತ್ತಮುತ್ತಲು ಇರುವಂತಹ ಸಕಾರಾತ್ಮಕತೆಯನ್ನ ನಿಲ್ಲಿಸಿ ಬಿಡುತ್ತವೆ. ಹಾಗಾಗಿ ಬೋನ್ಸಾಯ್ ಸಸ್ಯಗಳನ್ನ ಮನೆಯಲ್ಲಿ ತಯಾರಿಸಬಾರದು. ಮತ್ತು ಹಚ್ಚಬಾರದು.
ಯಾಕಂದ್ರೆ ವಾಸ್ತುವಿನ ಅನುಸಾರವಾಗಿ ಇಂತಹ ಸಸ್ಯಗಳು ಮನೆಯಲ್ಲಿರುವಂತ ಜನರ ವಿಕಾಸವನ್ನು ನಿಲ್ಲಿಸಿ ಬಿಡುತ್ತವೆ. ಸ್ನೇಹಿತರೆ ಇನ್ನೂ ಜಾಲಿ ಮರದ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮೆಲ್ಲರಿಗೂ ಗೊತ್ತಿದೆ, ಇದು ತುಂಬಾನೇ ದೊಡ್ಡದಾಗಿರುವ ಮುಳ್ಳುಗಳು ಇರುವಂತ ಸಸ್ಯವಾಗಿದೆ. ಹಾಗಾಗಿ ಇದನ್ನ ಯಾರು ಸಹ ತಮ್ಮ ಮನೆಗಳಲ್ಲಿ ಹಚ್ಚೋದಿಲ್ಲ.
ಆದ್ರೂ ಸಹ ಯಾರಾದರೂ ಇದನ್ನು ಬೋನ್ಸಾಯ್ ಮಾಡಿ ಮನೆಯಲ್ಲಿ ಹಚ್ಚಲು ಪ್ರಯತ್ನ ಮಾಡ್ತಾ ಇದ್ರೆ ಈ ತಪ್ಪನ್ನ ಮಾಡಲೇಬೇಡಿ. ಯಾಕಂದ್ರೆ ಇವು ವಾಸ್ತುವಿನ ದೃಷ್ಟಿಯಿಂದ ಸರಿಯಾಗಿರೋದಿಲ್ಲ. ಇಂಥ ಸಸ್ಯ ಗಿಡಗಳು ಕೇವಲ ನಮಗೆ ನಷ್ಟವನ್ನು ಕೊಡುತ್ತವೆ. ಯಾಕಂದ್ರೆ ಇವುಗಳ ಮುಳ್ಳುಗಳು ತುಂಬಾನೇ ಹಾನಿಕರ ಆಗಿರುತ್ತವೆ. ಸ್ನೇಹಿತರೆ ಇನ್ನು ಔಡಲ ಗಿಡದ ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ ಔಡಲ ಗಿಡ ಅಥವಾ ಹರಳೆಣ್ಣೆ ಗಿಡ ನೋಡಲು ತುಂಬಾನೇ ಚೆನ್ನಾಗಿ ಕಾಣುತ್ತದೆ. ಆದರೆ ಇದನ್ನು ಜಗತ್ತಿನಲ್ಲಿ ಇರುವ ಎಲ್ಲಕ್ಕಿಂತ ಖತರ್ನಾಕ್ ಸಸ್ಯ ಅಂತ ತಿಳಿಯಲಾಗಿದೆ. ಈ ಸಸ್ಯದ ಬೀಜಗಳು ಕೇವಲ ಎರಡು ದಿನದಲ್ಲಿ ಮನುಷ್ಯನ ಪ್ರಾಣ ತೆಗೆದುಕೊಳ್ಳಬಹುದು. ಇದನ್ನ ಮನೆಯಲ್ಲಿ ಹಚ್ಚುವ ತಪ್ಪನ್ನ ನೀವು ಮಾಡಲೇಬಾರದು.
ಒಂದ್ ವೇಳೆ ನೀವೇನಾದರೂ ಇದನ್ನ ಮನೆಯಲ್ಲಿ ಹಚ್ಚಿದ್ರೆ ಚಿಕ್ಕ ಮಕ್ಕಳು ಮರೆತು ಇದರ ಬೀಜಗಳನ್ನು ನುಂಗಬಹುದು. ಈ ಗಿಡವನ್ನು ಮನೆಯಲ್ಲಷ್ಟೇ ಅಲ್ಲ ಮನೆಯ ಹತ್ತಿರದಲ್ಲು ಸಹ ಇಟ್ಕೊಳ್ಬಾರ್ದು. ಒಂದು ವೇಳೆ ಅಕ್ಕಪಕ್ಕದಲ್ಲಿ ಎಲ್ಲಾದ್ರೂ ಈ ಗಿಡ ಇದ್ರೆ ತಕ್ಷಣವೇ ಅದನ್ನ ಕಿತ್ತು ಬಿಸಾಕಿರಿ. ಸ್ನೇಹಿತರೆ ಇನ್ನು ಬಾರೆ ಹಣ್ಣಿನ ಗಿಡದ ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ ಹಣ್ಣುಗಳನ್ನು ತಿನ್ನುವ ದೃಷ್ಟಿಯಿಂದ ಈ ಗಿಡವನ್ನು ಜನರು ತಮ್ಮ ಮನೆಯ ಹತ್ತಿರ ಹಚ್ಕೋಬಿಡ್ತಾರೆ. ಆದರೆ ಇದು ತಪ್ಪು ಆಗಿದೆ. ಮಾಹಿತಿಯ ಪ್ರಕಾರ ಈ ಸಸ್ಯವನ್ನ ಮನೆಯಲ್ಲಿ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಗಳು ಬರುತ್ತವೆ. ಕೇವಲ ಇಷ್ಟೇ ಅಲ್ಲ ಒಂದು ವೇಳೆ ಧಾರ್ಮಿಕ ದೃಷ್ಟಿಯಿಂದ ನೋಡಿದ್ರೆ ಮನೇಲಿ ಬಾರೆ ಹಣ್ಣಿನ ಗಿಡ ಇದ್ರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.
ಧನಸಂಪತ್ತಿನ ಹಾನಿಯೂ ಆಗುತ್ತದೆ. ಈ ಕಾರಣದಿಂದಾಗಿ ನಾವು ಇದನ್ನ ಮನೆಯಲ್ಲಿ ಹಚ್ಚಬಾರದು. ಸ್ನೇಹಿತರೆ ಈಗ ಎಲ್ಲರೂ ಹೆಚ್ಚಾಗಿ ತಮ್ಮ ಮನೆಯಲ್ಲಿ ಹಚ್ಚಿಕೊಳ್ಳುವಂತ ಮನಿ ಪ್ಲಾಂಟ್ ಬಳ್ಳಿಯ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹಿತರೆ ನೀವು ಸಹ ನಿಮ್ಮ ಮನೆಯಲ್ಲಿ ಇಂಪ್ರೂವಾಗಲಿ ಅಂತ ಇಷ್ಟ ಪಡ್ತಾ ಇದ್ರೆ ಮನೆಯ ಮುಖ್ಯದ್ವಾರದ ಮುಂದೆ ನೀವು ಮನಿಪ್ಲಾಂಟನ್ನ ಹಚ್ಚಬೇಕು.
ಈ ರೀತಿ ಮಾಡೋದ್ರಿಂದ ನಿಮಗೆ ನೌಕರಿ ಮತ್ತು ವ್ಯಾಪಾರದಲ್ಲಿ ವೃದ್ಧಿ ಕಾಣುತ್ತದೆ. ಆದರೆ ಮನಿಪ್ಲಾಂಟ್ ಸಸ್ಯವನ್ನ ಹಚ್ಚುವಂತ ಸಮಯದಲ್ಲಿ ಈ ಒಂದು ಮಾತನ್ನು ಖಂಡಿತವಾಗಿ ನೆನಪಿಟ್ಟುಕೊಳ್ಳಿ. ಇದು ನಿಮ್ಮ ಮನೆಯ ಗೋಡೆಗಿಂತ ಹೆಚ್ಚಾಗಿ ಎತ್ತರಕ್ಕೆ ಬೆಳೆಯಬಾರದು. ಇದರಿಂದ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಮನಿಪ್ಲಾಂಟ್ ಬಳ್ಳಿಯನ್ನ ಯಾವುದೇ ಕಾರಣಕ್ಕೂ ಖರೀದಿ ಮಾಡಿ ತರಬಾರದು.
ಬದಲಿಗೆ ಬೇರೆ ಸ್ಥಾನದಿಂದ ಕದ್ದು ತಂದು ಹಚ್ಚಬೇಕು. ಆಗ ಮಾತ್ರ ಇದರ ಶುಭಫಲಗಳು ಸಿಗುತ್ತವೆ. ಬನ್ನಿ ಈಗ ಪಪ್ಪಾಳೆ ಹಣ್ಣಿನ ಗಿಡದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಯಾವತ್ತಿಗೂ ಪಪ್ಪಾಳೆ ಹಣ್ಣಿನ ಗಿಡವನ್ನು ಹಚ್ಚಬಾರದು. ಈ ಗಿಡವು ಮನೆಗಾಗಿ ಅತ್ಯಂತ ಅಶುಭ ಆಗಿರುತ್ತದೆ. ಒಂದ್ ವೇಳೆ ಈ ಸಸ್ಯ ಏನಾದ್ರೂ ತಾನಾಗೆ ಹುಟ್ಟಿಕೊಂಡರೆ ಅದನ್ನ ತಕ್ಷಣ ಕಿತ್ತು ಬಿಸಾಕಬೇಕು. ಯಾವಾಗ ಹಣ್ಣುಗಳು ಖಾಲಿಯಾಗುತ್ತವೆಯೋ ಆಗ ಇದನ್ನು ಕಿತ್ತು ಬಿಸಾಕಬೇಕು.
ಒಂದು ವೇಳೆ ಮನೆಯ ಪೂರ್ವ ದಿಕ್ಕಿನಲ್ಲಿ ಅರಳಿಮರ ಇದ್ರೆ ಮನೆಯಲ್ಲಿ ನಿರ್ದನತೆ ಬರುತ್ತದೆ. ಆಲದ ಮರ ಅಥವಾ ವಟವೃಕ್ಷ ಮನೆಯ ಪಶ್ಚಿಮ ದಿಕ್ಕಿನಲ್ಲಿ ಏನಾದರೂ ಇದ್ದರೆ ಮನೆಯಲ್ಲಿ ಶೋಕ ಚಿರಕಾಲದ ತನಕ ಇರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಏನಾದ್ರು ತುಳಸಿ ಗಿಡ ಇದ್ರೆ ಮಕ್ಕಳು ಕಷ್ಟಗಳನ್ನು ಅನುಭವಿಸುತ್ತಾರೆ. ಯಾವುದೇ ವೃಕ್ಷದ ನೆರಳು ಮನೆಯ ಮೇಲೆ ಬೀಳ್ತಾ ಇದ್ರೆ ಇದು ಮೃತ್ಯು ಸೂಚಕವಾಗಿರುತ್ತದೆ. ಹಾಗಾಗಿ ಒಣಗಿದ ವೃಕ್ಷಗಳನ್ನು ತಕ್ಷಣವೇ ತೆಗೆದು ಹಾಕಬೇಕು. ಈ ಮಾಹಿತಿ ಇಷ್ಟ ಆದ್ರೆ ಜೈ ಶ್ರೀಕೃಷ್ಣ ಅಂತ ಕಾಮೆಂಟ್ ಹಾಕಿ. ಹಾಗೆ ಎಲ್ಲರಿಗೂ ಈ ವಿಡಿಯೋವನ್ನು ಶೇರ್ ಮಾಡಿ. ಧನ್ಯವಾದಗಳು.