ಜಗತ್ತಿಗೆ ಅನ್ವಯಿಸುವ ಕೆಲವು ಸಲಹೆಗಳು

ನಮಗೆ ನೆರವಾಗಬಹುದಾದ ಮತ್ತು ಪ್ರಸ್ತುತ ಜಗತ್ತಿಗೆ ಅನ್ವಯಿಸುವ ಕೆಲವು ಸಲಹೆಗಳು ಯಾರಿಗಾದರೂ 2ಕ್ಕಿಂತಾ ಹೆಚ್ಚು ಬಾರಿ ಫೋನ್ ಕರೆ ಮಾಡಬೇಡಿ. ನಿಮ್ಮ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲವೆಂದರೆ, ಅವರಿಗೆ ಯಾವುದೋ ಅಗತ್ಯ ಕೆಲಸವಿದೆ ಎಂದು ತಿಳಿಯಿರಿ.

ಯಾರಿಂದಲಾದರೂ ಹಣ ಪಡೆದಿದ್ದರೆ ಅವರು ನೆನಪಿಸುವ ಅಥವಾ ಕೇಳುವ ಮುನ್ನ ಅವರಿಗೆ ಹಿಂತಿರುಗಿಸಿ. ಇದು ನಿಮ್ಮ ನಡತೆಯ ಸಮಗ್ರತೆಯನ್ನು ತೋರಿಸುತ್ತದೆ. ಕೆಲವರು ಹೀಗೆ ಕೊಡೆ,ಪೆನ್ನು ಮತ್ತು ಊಟದ ಡಬ್ಬಿಗಳನ್ನೂ ಹಿಂತಿರುಗಿಸದೇ ಒಯ್ಯುತ್ತಾರೆ.

ಯಾರಾದರೂ ನಿಮಗೆ ಹೋಟೆಲಿನಲ್ಲಿ ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಆಹ್ವಾನಿಸಿದ್ದರೆ ಹೋಟೆಲಿನಲ್ಲಿನ ದುಬಾರಿ ಆಹಾರಕ್ಕೆ ಆರ್ಡರ್ ಕೊಡಬೇಡಿ.

ಓಹ್, ಸರಿ ನಿಮಗಿನ್ನು ಮದುವೆಯಾಗಿಲ್ಲವೇ? ಅಥವಾ ನಿಮಗಿನ್ನು ಮಕ್ಕಳಾಗಿಲ್ಲವೆ? ಅಥವಾ ನೀವೇಕೆ ಒಂದು ಮನೆ ಖರೀದಿಸಬಾರದು? ಅಥವಾ ನೀವೇಕೆ ಒಂದು ಕಾರ್ ಖರೀದಿಸಬಾರದು? ಎಂಬಂತಹ ಪೇಚಿನ ಪ್ರಶ್ನೆಗಳನ್ನು ಕೇಳಬೇಡಿ. ದೇವರ ಸಲುವಾಗಿ ಇದು ನಿಮ್ಮ ಸಮಸ್ಯೆ ಅಲ್ಲ.

ಯಾವಾಗಲೂ ನಿಮ್ಮ ಹಿಂದೆ ಬರುತ್ತಿರುವ ವ್ಯಕ್ತಿಗಾಗಿ ಬಾಗಿಲು ತೆರೆಯಿರಿ. ಅದು ಹುಡುಗ,ಹುಡುಗಿ, ಹಿರಿಯರು, ಕಿರಿಯರು ಆಗಿದ್ದರೂ ದೊಡ್ಡ ವಿಷಯವೇನಲ್ಲ. ಸಾರ್ವಜನಿಕವಾಗಿ ಯಾರನ್ನಾದರೂ ಚೆನ್ನಾಗಿ ನಡೆಸಿಕೊಂಡರೆ ನೀವೇನೂ ಸಣ್ಣವರಾಗುವುದಿಲ್ಲ.

ನಿಮ್ಮ ಸ್ನೇಹಿತರೊಂದಿಗೆ ಆಟೋ ಅಥವಾ ಟ್ಯಾಕ್ಸಿಯಲ್ಲಿ ಹೋದಾಗ ಈ ಬಾರಿ ಅವರು ಪ್ರಯಾಣದರ ನೀಡಿದರೆ, ಮುಂದಿನ ಬಾರಿ ಮರೆಯದೇ ನೀವು ನೀಡಿ.

ಅಭಿಪ್ರಾಯ ಭೇದಗಳನ್ನು ಗೌರವಿಸಿ, ಯಾವುದು ನಿಮಗೆ 6 ಆಗಿ ಕಾಣುವುದೋ ಅದು ನಿಮ್ಮೆದುರಿನವರಿಗೆ 9 ಆಗಿ ಕಾಣುವುದು. ಅದಲ್ಲದೇ, ಎರಡನೇ ಅಭಿಪ್ರಾಯವು ಪರ್ಯಾಯವಾಗಿ ಒಳ್ಳೆಯದು.

ಯಾರಾದರೂ ಮಾತನಾಡುವಾಗ ಅಡ್ಡಿಪಡಿಸದಿರಿ. ಅವರಿಗೆ ಪೂರ್ತಿ ಮಾತನಾಡಲು ಅವಕಾಶ ಕೊಡಿ, ಎಲ್ಲವನ್ನೂ ಕೇಳಿಸಿಕೊಳ್ಳಿ. ಎಲ್ಲವನ್ನೂ ಪರಿಶೋಧಿಸಿ.

ನೀವು ಯಾರನ್ನಾದರೂ ಕೀಟಲೆ ಮಾಡಿದಾಗ ಮತ್ತು ಅವರು ಅದನ್ನು ಆನಂದಿಸುವಂತೆ ತೋರುತ್ತಿಲ್ಲವಾದರೆ, ಅದನ್ನು ನಿಲ್ಲಿಸಿ ಮತ್ತು ಅದನ್ನು ಎಂದಿಗೂ ಮಾಡಬೇಡಿ. ಇದರಿಂದ ನಿಮ್ಮ ನಡೆಗೆ ಮೆಚ್ಚುಗೆಗೆ ಒಳಗಾಗುತ್ತದೆ.

ಯಾರಾದರೂ ನಿಮಗೆ ನೆರವು ನೀಡಿದರೆ, ಧನ್ಯವಾದಗಳನ್ನು ಅರ್ಪಿಸಿ.

ಹೊಗಳಿಕೆ ಸಾರ್ವಜನಿಕವಾಗಿರಲಿ, ವಿಮರ್ಶೆ ಖಾಸಗಿಯಾಗಿರಲಿ.

ಮತ್ತೊಬ್ಬರ ಶರೀರದ ತೂಕದ ಬಗ್ಗೆ ಯಾವ ಕಾರಣಕ್ಕೂ ಟೀಕಿಸಬೇಡಿ. ಸುಮ್ಮನೆ ನೀವು ಸುಂದರವಾಗಿದ್ದೀರ ಎಂದು ಹೇಳಿ. ತೂಕ ಕಡಿಮೆ ಮಾಡಿಕೊಳ್ಳಬೇಕೆಂದಿದ್ದರೆ ಅವರೇ ಕೇಳುತ್ತಾರೆ.

ಮೊಬೈಲ್ ಫೋನಿನಲ್ಲಿ ಯಾರಾದರೂ ಫೋಟೋ ತೋರಿಸಿದರೆ, ಎಡಕ್ಕೆ ಬಲಕ್ಕೆ ಸ್ವೈಪ್ ಮಾಡಬೇಡಿ. ಮುಂದಿನದು ಏನಿದೆ ನಿಮಗೆ ಗೊತ್ತಿಲ್ಲ.

ನಿಮ್ಮ ಸಹೋದ್ಯೋಗಿಗಳು ಡಾಕ್ಟರ್ ರ ಬಳಿ ಹೋಗಬೇಕಾದರೆ ಎಂದರೆ, ಏಕೆ ಎಂದು ಪ್ರಶ್ನಿಸಬೇಡಿ. ಸುಮ್ಮನೆ ಆರೋಗ್ಯವಾಗಿದ್ದಿರಷ್ಟೇ ಎಂದು ಹೇಳಿ. ಅವರ ವೈಯಕ್ತಿಕ ಅನಾರೋಗ್ಯವನ್ನು ತಿಳಿಸುವಂತಹ ಇರುಸುಮುರುಸಿನ ಪರಿಸ್ಥಿತಿಗೆ ಅವರನ್ನು ತರಬೇಡಿ. ಅದು ನಿಮಗೆ ಹೇಳುವಂತದ್ದಿದರೆ, ನಿಮ್ಮ ಕುತೂಹಲದ ಹೊರತಾಗಿಯೂ ನಿಮಗೆ ಹೇಳುತ್ತಾರೆ.

ಅತ್ಯುನ್ನತ ಅಧಿಕಾರಿಗೆ ಕೊಡುವಷ್ಟೇ ಗೌರವವನ್ನು ಕಡಿಮೆ ದರ್ಜೆಯ ಸಿಬ್ಬಂದಿಗೂ ನೀಡಿ. ನಿಮ್ಮ ಸಿಬ್ಬಂದಿಗಳೊಂದಿಗೆ ನೀವೆಷ್ಟು ಕಠೋರವಾಗಿದ್ದೀರಿ ಎಂಬುದನ್ನು ಯಾರೂ ಗಮನಿಸುವುದಿಲ್ಲ ಆದರೆ ಅವರನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ಗಮನಿಸುತ್ತಾರೆ.

ಯಾರಾದರೂ ನಿಮ್ಮೊಂದಿಗೆ ನೇರವಾಗಿ ಮಾತನಾಡುತ್ತಿದ್ದರೆ, ಫೋನ್ ನೋಡುತ್ತಿರುವುದು ಅಸಭ್ಯತೆ.

ಯಾರಾದರೂ ನಿಮ್ಮನ್ನು ಕೇಳುವವರೆಗೆ ಸಲಹೆ ನೀಡಬೇಡಿ.

ಯಾರನ್ನಾದರೂ ತುಂಬಾ ದಿನಗಳ ನಂತರ ಭೇಟಿಯಾಗುತ್ತಿದ್ದರೆ, ಅವರಾಗೇ ಹೇಳುವವರೆಗೂ ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಮಾತನಾಡಬೇಡಿ.

ನೇರವಾಗಿ ನಿಮ್ಮ ಪಾತ್ರವಿಲ್ಲದ ಹೊರತು ಯಾವುದರಲ್ಲೂ ತಲೆ ತೂರಿಸಬೇಡಿ.ಅಂತಹವುಗಳಿಂದ ದೂರವಿರಿ. ನಿಮ್ಮ ಕೆಲಸ ನೀವು ನೋಡಿಕೊಳ್ಳಿ.

ರಸ್ತೆಯಲ್ಲಿ ಯಾರೊಂದಿಗಾದರೂ ಮಾತನಾಡುವಾಗ ಸನ್ ಗ್ಲಾಸ್ ಗಳನ್ನು ತೆಗೆಯಿರಿ.ಅದು ಗೌರವ ಸೂಚಕ. ಅದಕ್ಕಿಂತಾ ಹೆಚ್ಚಾಗಿ, ನಿಮ್ಮ ಮಾತಿನಂತೆ ಕಣ್ಣುಗಳ ಸಂಪರ್ಕವೂ ಮುಖ್ಯವಾದುದಾಗಿದೆ.

ಬಡವರ ನಡುವೆ ನಿಮ್ಮ ಸಿರಿವಂತಿಕೆ ಬಗ್ಗೆ ಮಾತನಾಡಬೇಡಿ. ಅದರಂತೆ, ಮಕ್ಕಳಿಲ್ಲದವರ ಮಧ್ಯೆ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ.

Leave a Comment